Blog Archive

ಅಧಿಕೃತವಾಗಿ ‘ಕೈ’ ಹಿಡಿದ ನೈಸ್‌‌‌ ಮುಖ್ಯಸ್ಥ, ಶಾಸಕ ಅಶೋಕ್‌ ಖೇಣಿ

Monday, March 5th, 2018
congress

ಬೆಂಗಳೂರು: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪಕ್ಷದ ಧ್ವಜ ಹಾಗೂ ಶಾಲು ಸ್ವೀಕರಿಸುವ ಮೂಲಕ ಕಾಂಗ್ರೆಸ್ ಸೇರ್ಪಡೆಯಾದರು. ಖೇಣಿ ಸೇರ್ಪಡೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಶಾಸಕ ಹಾಗೂ ಮಿತ್ರರಾದ ಅಶೋಕ್ ಖೇಣಿ ಯಾವುದೇ ಷರತ್ತಿಲ್ಲದೆ, ಪಕ್ಷದ ನಾಯಕತ್ವ ಹಾಗೂ ತತ್ವ […]

ಸರ್ಕಾರಿ ಕಾರ್ಯಕ್ರಮ ದುರ್ಬಳಕೆ ಆರೋಪ: ಕೇಸ್‌ ದಾಖಲಿಸಲು ಅನುಮತಿಗೆ ಮನವಿ

Friday, March 2nd, 2018
government

ಮಂಗಳೂರು: ಸರ್ಕಾರಿ ಸಮಾರಂಭ ಹಮ್ಮಿಕೊಂಡು ರಾಜಕೀಯ ಉದ್ದೇಶಕ್ಕೆ ಬಳಸುವ ರಾಜಕೀಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಶಶಿಧರ ಶೆಟ್ಟಿ ರಾಜ್ಯಪಾಲರನ್ನು ವಿನಂತಿಸಿ, ದಾಖಲೆ ಪತ್ರಗಳನ್ನು ನೀಡಿದ್ದಾರೆ. ಕಳೆದ ವರ್ಷ ಅ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸರ್ಕಾರಿ ಸಮಾರಂಭ ಹಮ್ಮಿಕೊಂಡು ಆ ಸಮಾರಂಭವನ್ನು ಪಕ್ಷದ ಉದ್ದೇಶಕ್ಕೆ ಬಳಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಆರ್‌ಪಿಸಿ ಸೆಕ್ಷನ್ 197ರ ಅಡಿಯಲ್ಲಿ ಸ್ವಯಂ ಆಗಿ ಕೇಸು ದಾಖಲಿಸಬೇಕು. […]

ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲದಂತೆ ಕ್ರಮ : ಡಿ.ಕೆ.ಶಿವಕುಮಾರ್

Wednesday, February 7th, 2018
D-K-Shivkumar

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಅಭಾವ ತಲೆದೋರದಂತೆ ಮಾಡಿಕೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನ ಪರಿಷತ್‍ನಲ್ಲಿ ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಮೋಟಮ್ಮ ಅವರ ಪರವಾಗಿ ಐವನ್ ಡಿಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈತರಿಗೆ ಕೈಗಾರಿಕೆಗಳಿಗೆ ಸೇರಿದಂತೆ ಯಾರಿಗೂ ಯಾವುದೇ ಕಾರಣಕ್ಕೂ ವಿದ್ಯುತ್ ಅಭಾವ ತಲೆದೋರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರಸ್ತುತ ರಾಜ್ಯದಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಪ್ರಮಾಣ 10 ಸಾವಿರ ಮೆಗಾ ವ್ಯಾಟ್‍ಗಳಾಗಿದ್ದು, ಕಳೆದ ಜನವರಿ ತಿಂಗಳಲ್ಲಿ […]

ಸಚಿವ ರಮಾನಾಥ್ ರೈ ಮತ್ತು ಮುಖ್ಯಮಂತ್ರಿ ಈ ಇಬ್ಬರಿಗೂ ಶನಿ ಹಿಡಿದಿರಬೇಕು : ಪೂಜಾರಿ

Sunday, August 13th, 2017
Poojary

ಮಂಗಳೂರು: ಕಲ್ಲಡ್ಕ ಶಾಲೆಗಳಿಗೆ ಅನ್ನದಾನದ ಅನುದಾನ ಕಡಿತಗೊಳಿಸಿದ್ದು ತಪ್ಪು. ಮಕ್ಕಳ ಊಟವನ್ನು ಸರ್ಕಾರ ಕಸಿದುಕೊಂಡಿದೆ. ಸಚಿವ ರಮಾನಾಥ್ ರೈ ಮತ್ತು ಮುಖ್ಯಮಂತ್ರಿ ಈ ಇಬ್ಬರಿಗೂ ಶನಿ ಹಿಡಿದಿರಬೇಕು! ರೈ ಮಾಡಿದ ತಪ್ಪನ್ನು ದೇವರೂ ಸಹ ಕ್ಷಮಿಸೋದಿಲ್ಲ. ಸಚಿವ ರೈ ಸಿಎಂ ಕಾಲು ಹಿಡಿದು ಕ್ಷಮಾಪಣೆ ಕೇಳಲಿ. ಅನುದಾನದ ನಿಷೇಧದ ಆದೇಶವನ್ನು ಹಿಂಪಡೆಯಬೇಕು. ಶಾಲೆಯಲ್ಲಿ ಅನ್ನದಾನವನ್ನು ಮುಂದುವರೆಸಬೇಕೆಂದು ಪೂಜಾರಿ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ   ಪೂಜಾರಿ. ಸಿಎಂ ಸಿದ್ದರಾಮಯ್ಯಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನಿಡೋಕೆ ಸಮಯ ಸಿಗುತ್ತಿಲ್ಲ. ರಾಜ್ಯದ […]

ಡಿ.ಕೆ.ಶಿವಕುಮಾರ್ ಮೇಲೆ ಐ.ಟಿ. ದಾಳಿ ಕೇಂದ್ರ ಸರ್ಕಾರದ ಹೀನ ಕೆಲಸ : ಪೂಜಾರಿ

Wednesday, August 2nd, 2017
BJ poojary

ಮಂಗಳೂರು: ರಾಜ್ಯ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ, ಕಚೇರಿ, ಮತ್ತು ಸಂಭಂದಿಕರ ಮೇಲೆ ನಡೆದಿರುವ ಐ.ಟಿ. ದಾಳಿ ಕೇಂದ್ರ ಸರ್ಕಾರದ ಹೀನ ಕೆಲಸ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಮಾಜಿ ಸಂಸದ  ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಐಟಿ ಇಲಾಖೆ ಯಾವ ಪಕ್ಷ, ವ್ಯಕ್ತಿಗೆ ಸೇರಿದ ಇಲಾಖೆ ಅಲ್ಲ. 39 ಕಡೆ ಸಿಆರ್‌ಪಿಎಫ್ ಜೊತೆ ದಾಳಿ ನಡೆಸಿದೆ. ಅದನ್ನು ತಮ್ಮಿಚ್ಛೆಯಂತೆ ಬಳಸುತ್ತಿರುವುದು ಸರಿಯಲ್ಲ, ಇದರಿಂದ ಸಿಆರ್‌ಪಿಎಫ್ ಮಾನ ಮರ್ಯಾದೆ ಕೂಡ ಹಾಳಾಗಿದೆ ಎಂದರು. […]

ಡಿ.ಕೆ. ಶಿವಕುಮಾರ್ 224ನೇ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ

Thursday, June 13th, 2013
DK Shivakumar

ಬೆಂಗಳೂರು:  ಇಂದು ಸ್ಪೀಕರ್ ಕಚೇರಿಯಲ್ಲಿ 224ನೇ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಶಿವಕುಮಾರ್ ಅವರಿಗೆ ಬೆಳಗ್ಗೆ 10ಗಂಟೆಯ ಸುಮಾರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ವಿಧಾನಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ತಮಗೆ ಸಚಿವ ಸ್ಥಾನ ತಪ್ಪಿಸಲು, ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು ಹಾಗು ಮಾಧ್ಯಮಗಳು ಸಂಚು ರೂಪಿಸಿದ್ದವು ಎಂದು ಆರೋಪಿಸಿದರು. ಅಲ್ಲದೆ ಮೊದಲ ಹಂತದಲ್ಲಿ ಸಚಿವ ಸ್ಥಾನ ತಪ್ಪಿಸುವುದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ ಎಂದರು. ಇನ್ನು ಡಿಕೆಶಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ […]