Blog Archive

ಕೊರೋನಾ ತಡೆಗೆ ಸರ್ಕಾರದ ನಡೆ : ಒಂದು ವಾರದ ಮಟ್ಟಿಗೆ ಮಾಲ್​, ಥಿಯೇಟರ್​, ಮದುವೆ ಸಭೆಗಳಿಗೆ ನಿಷೇಧ

Friday, March 13th, 2020
bsy

ಬೆಂಗಳೂರು : ಮಹಾಮಾರಿ ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜನಸಂದಣಿ ಸೇರುವ ಮಾಲ್ ಹಾಗೂ ಥಿಯೇಟರ್ಗಳನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಕೊರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಅತಿ ಶೀಘ್ರದಲ್ಲಿ ಹರಡುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ವದೆಲ್ಲೆಡೆ ಆತಂಕ ಮೂಡಿಸಿರುವ ಮಾರಣಾಂತಿಕ ಕೊರೋನಾಗೆ ರಾಜ್ಯದಲ್ಲಿ ಈಗಾಗಲೇ 6 ಜನ ಸೋಂಕಿತರಾಗಿದ್ದು, ಕಲಬುರ್ಗಿ ವೃದ್ಧ ಸಾವನ್ನಪ್ಪುವ ಮೂಲಕ ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. […]

ವಿಧವೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಚಿನ್ನದ ಸರ ದೋಚಿದ ವ್ಯಕ್ತಿ

Friday, November 22nd, 2019
shadi

ಮೈಸೂರು : ವಿಧವೆಯೋರ್ವರಿಗೆ ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ವಿವಾಹವಾಗುವುದಾಗಿ ನಂಬಿಸಿ ಮಹಿಳೆಯ ಬಳಿ ಇದ್ದ 80ಸಾವಿರ ರೂ.ಮೌಲ್ಯದ ಮಾಂಗಲ್ಯ ಸರವನ್ನು ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಪತಿಯನ್ನು ಕಳೆದುಕೊಂಡ ಮಹಿಳೆಯೋರ್ವರು ಮರು ಮದುವೆಯಾಗಲು ಇಚ್ಛಿಸಿದ್ದು, ಅಂತರ್ಜಾಲದ ಶಾದಿ ಡಾಟ್ ಕಾಮ್ ಮೂಲಕ ವರಾನ್ವೇಷಣೆಗಾಗಿ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದನ್ನು ವೀಕ್ಷಿಸಿದ ವಿನೀತ್ ರಾಜ್ ಎಂಬಾತ ಮಹಿಳೆಯನ್ನು ಮೊಬೈಲ್ ಮೂಲಕ ಪರಿಚಯ ಮಾಡಿಕೊಂಡು ತಾನು ಚೆನ್ನೈ ನಗರದಲ್ಲಿ ವ್ಯಾಪಾರ ಮಾಡುತ್ತಿದ್ದು ನನ್ನ ಹೆಂಡತಿ ತೀರಿ ಹೋಗಿ […]

ಮದುವೆಯ ಸಹಾಯರ್ಥವಾಗಿ ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು

Wednesday, June 11th, 2014
Kammaje yuvaka Mandala

ಬಂಟ್ವಾಳ: ಕಾಮಾಜೆಯ ಶಾಂತ ಅವರ ಮಗಳು ಶುಭಾ ಅವರ ಮಗಳ ಮದುವೆಯ ಸಹಾಯರ್ಥವಾಗಿ ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು ನೀಡಲಾಯಿತು. ಸಂಘದ ಅಧ್ಯಕ್ಷ ಬಾಸ್ಕರ್ ಟೈಲರ್, ಉಪಾಧ್ಯಕ್ಷ ವಿನೋದ್ ಕಾಮಾಜೆ , ಕಾರ್ಯದರ್ಶಿ ಉಮೇಶ್ ಕುಲಾಲ್ ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು. ನವೂದಯ ಯುವಕ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ಬಾಸ್ಕರ್ ಟೈಲರ್ ಕಾಮಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿನೋದ್ ಕಾಮಾಜೆ, ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಮೈರಾನ್ಪಾದೆ, ಜತೆ ಕಾರ್ಯದರ್ಶಿಗಳಾಗಿ ರತೀಶ್ ಭಂಡಾರಿ […]

ಮದುವೆಗೆ ಬಂದಿದ್ದ ಯುವಕ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವು

Monday, September 9th, 2013
Praveen

ಬಂಟ್ವಾಳ : ಸಜಿಪ ಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ ಸ್ನೇಹಿತನ ಮದುವೆಗೆಂದು ಬಂದಿದ್ದ ಯುವಕನೋರ್ವ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ರವಿವಾರ ಬೆಳಗ್ಗೆ ನಡೆದಿದೆ. ರವಿವಾರ ಕಟೀಲಿನಲ್ಲಿ  ತನ್ನ ಸ್ನೆಹಿತ ಹರೀಶ್ ಎಂಬವರ ಮದುವೆಗೆ ಬಂದಿದ್ದ ಕಡೇಶ್ವಾಲ್ಯ ಗ್ರಾಮದ ಪ್ರವೀಣ್ ಕುಲಾಲ್(20) ನೀರುಪಾಲಾದ ದುರ್ದೈವಿ.  ಈತನೊಂದಿಗೆ ನದಿಗೆ ಸ್ನಾನಕ್ಕೆ ಇಳಿದಿದ್ದ ಕಿರಣ್ ಅಮ್ಟೂರು, ಅಜಯ್ ಹೊನ್ನಾವರ ಹಾಗೂ ಕಮಲಾಕ್ಷ ಶಾಂತಿಗುಡ್ಡೆ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. […]

ಕುಡುಕ ಗಂಡನ ಬಿಟ್ಟು, ಮಗಳಿಗಾಗಿ ಒಳ್ಳೆಯ ತಂದೆಯನ್ನು ಮದುವೆಯಾದ ಯುವತಿ

Friday, July 19th, 2013
Missing married woman

ವಿಟ್ಲ :  ವಿಟ್ಲಮುಡ್ನೂರು ಗ್ರಾಮದ ಹಲಸಿನಕಟ್ಟೆಯ ವಿಹಾಹಿತ ಯುವತಿ ನಳಿನಿ(23) ಮಂಗಳವಾರ ತನ್ನ ಮೂರು ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿದ್ದರು.  ಗುರುವಾರ ನಳಿನಿ ತನ್ನ ಸಂಬಂಧಿ ಯುವಕನನ್ನು ವಿವಾಹವಾಗಿ ಠಾಣೆಗೆ ಹಾಜರಾಗಿದ್ದಾಳೆ. ನಳಿನಿ ಮಂಗಳವಾರ ನೇರವಾಗಿ ಮನೆಬಿಟ್ಟು ತನ್ನ ಸಂಬಂಧಿ ಫರ್ನೀಚರ್ ಅಂಗಡಿ ಉದ್ಯೋಗಿ ಜಗದೀಶನ ಜತೆ  ಧರ್ಮಸ್ಥಳಕ್ಕೆ ತೆರಳಿ ಅಲ್ಲಿ ವಿವಾಹವಾಗಿದ್ದಾರೆ. ಅಲ್ಲಿಂದ ಠಾಣೆಗೆ ಬಂದು ಆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾರೆ. ತನ್ನ ಮಗಳ ಭವಿಷ್ಯಕ್ಕಾಗಿ ನಾನು ಬೇರೆ ವಿವಾಹವಾಗಿದ್ದೇನೆ. ತನ್ನ ಗಂಡ ರಾಜೇಶ್ ವಿಪರೀತ ಮದ್ಯ ಸೇವಿಸುತ್ತಿದ್ದು, ನನ್ನ […]

ಮದುವೆಯಾದ ಮಾತ್ರಕ್ಕೆ ಹೆಣ್ಣಿಗೆ ಭದ್ರತೆಯಿಲ್ಲ : ಮಧು ಭೂಷಣ್

Thursday, March 3rd, 2011
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಂಗಳೂರು: ಮಹಿಳಾ ಸಂಘಗಳ ಜಾಲ, ಮಂಗಳೂರು ಇದರ ಆಶ್ರಯದಲ್ಲಿ ಇಂದು 101ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.. ಇದರ ಅಂಗವಾಗಿ ಇಂದು ಬೆಳಿಗ್ಗೆ 9.30 ಕ್ಕೆ ಜ್ಯೋತಿ ಸರ್ಕಲ್ ನಲ್ಲಿ ಜಾಥಾವನ್ನು ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಶ್ರೀಮತಿ ಮೀನಾ ಕೊರಗ, ವಾಮಂಜೂರು, ಮಂಗಳೂರು, ಸ್ವಚ್ಛತಾ ಕಾರ್ಮಿಕರು, ಶ್ರೀಮತಿ ವಿಜಯಲಕ್ಷ್ಮೀ ಪೂಜಾರ್ತಿ, ಶ್ರಮಿಕ ರೈತ ಮಹಿಳೆ, ನೀರುಮಾರ್ಗ, ಡಾ| ರತಿ ರಾವ್, ಸಮತಾ ವೇದಿಕೆ, ಮೈಸೂರು, ಶ್ರೀಮತಿ ಮರಿಯಮ್ಮ ಥಾಮಸ್, ಕಾರ್ಪೋರೇಟರ್ ಮಂಗಳೂರು, ಶ್ರೀಮತಿ ಶಹನಾಜ್ ಎಂ, ಸಂಪಾದಕರು, […]

ಮಾನವ ಹಕ್ಕುಗಳ ರಕ್ಷಣೆಗೆ ಸರಕಾದಿಂದ ಸರಿಯಾದ ಬೆಂಬಲ ಇಲ್ಲ : ಎಸ್. ಆರ್ ನಾಯಕ್

Saturday, November 20th, 2010
ಎಸ್. ಆರ್ ನಾಯಕ್

ಮಂಗಳೂರು: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್. ಆರ್ ನಾಯಕ್ ಇಂದು ಜಿಲ್ಲಾಧಿಕಾರಿ ಕಛೇರಿಯ ನ್ಯಾಯಾಲಯದಲ್ಲಿ ದೂರುದಾರರ ಅಹವಾಲುಗಳನ್ನು ಸ್ವೀಕರಿಸಿದರು. ಬಲತ್ಕಾರದ ಮದುವೆ, ಭೂ ಹಗರಣ ಹಾಗೂ ಉದ್ಯೋಗದ ಸಮಸ್ಯೆಯ ಮೂರು ಅರ್ಜಿಗಳನ್ನು ಎಸ್.ಆರ್ ನಾಯಕ್ ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನಾಯಕ್ ನಾನು ಬೆಂಗಳೂರಿನಿಂದ ಇಲ್ಲಿಯವರೆಗೆ ಬಂದು ಕೇವಲ ಮೂರು ಅರ್ಜಿಗಳನ್ನು ಮಾತ್ರ ಸ್ವೀಕರಿಸುವುದು, ದ.ಕ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ, ಸುವ್ಯವಸ್ಥಿತವಾಗಿರುವುದನ್ನು ಸೂಚಿಸುತ್ತಿದೆ ಎಂದರು. 2007 ರಲ್ಲಿ ಸ್ಥಾಪನೆಯಾದ ಮಾನವ ಹಕ್ಕುಗಳ ಆಯೋಗ ಸವಲತ್ತುಗಳಿಲ್ಲದೆ ದೂರುದಾರರ […]