Blog Archive

ಮಲೆನಾಡಿಗೂ ಕಾಲಿಟ್ಟಿತೇ ಡೆಡ್ಲಿ ವೈರಸ್‌‌‌ ನಿಫಾ?

Thursday, May 24th, 2018
shivamogga

ಶಿವಮೊಗ್ಗ: ಜಿಲ್ಲೆಯ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಶಂಕಿತ ನಿಫಾ ವೈರಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಮಿಥುನ್ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪೂನಾದ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು,ಮೂರು ದಿನದಲ್ಲಿ ರಕ್ತದ ಪರೀಕ್ಷೆ ವರದಿ ಬರಲಿದೆ. ಬಳಿಕವಷ್ಟೇ ಮಿಥುನ್‌ಗೆ ನಿಫಾ ವೈರಸ್ ಇದೆಯೇ ಎಂಬುದು ಗೊತ್ತಾಗಲಿದೆ. ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಆರೋಗ್ಯ ಇಲಾಖೆ ಆಧಿಕಾರಿಗಳು ದೌಡಾಯಿಸಿದ್ದು, ಮಾಹಿತಿ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ‌ ನಿಫಾ ಸಂಬಂಧ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಿಫಾ ವೈರಸ್ ಬಗ್ಗೆ ಸಾಗರ ವೈಧ್ಯಾಧಿಕಾರಿ ಪ್ರಕಾಶ್ […]

ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಭರ್ಜರಿ ಗೆಲುವು

Tuesday, May 15th, 2018
k-s-ishwarappa

ಶಿವಮೊಗ್ಗ : ಕಳೆದ ಬಾರಿ… ಅಂದ್ರೆ 2013 ರ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಕೆ.ಎಸ್.ಈಶ್ವರಪ್ಪ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಗೆಲುವಿನ ನಗೆ ಬೀರಿದ್ದಾರೆ. ಹಾಲಿ ಶಾಸಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಸನ್ನ ಕುಮಾರ್ ವಿರುದ್ಧ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕೆಜೆಪಿ ನಡುವಿನ ಮತ […]

ಪ್ರಮಾಣವಚನ ಸ್ವೀಕರಿಸಿದ ಬಳಿಕ ರೈತರ ಸಾಲಮನ್ನಾ: ಬಿಎಸ್‌ವೈ

Wednesday, May 2nd, 2018
yedeyurappa

ಶಿವಮೊಗ್ಗ: ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ನಿರ್ಧಾರವಾಗಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‌‌ಗಳಲ್ಲಿನ ಬೆಳೆ ಸಾಲಮನ್ನಾ ಮಾಡುತ್ತೇನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. ಪ್ರೆಸ್ ಟ್ರಸ್ಟ್‌ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೀರಾವರಿಗೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಲಿದ್ದು, 1 ಲಕ್ಷ ಕೋಟಿ ರೂ. ಹಣ ನಿಗದಿ ಮಾಡುತ್ತೇವೆ ಎಂದರು. ಬಿಜೆಪಿ ಪ್ರಣಾಳಿಕೆಯನ್ನು ಮೇ4 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು. ಪ್ರಣಾಳಿಕೆ ಬಿಡುಗಡೆಯಾದ ಮೇಲೆ ಕನಿಷ್ಠ ಶೇ.3 ರಷ್ಟು ಬಿಜೆಪಿ […]

ಶಿವಮೊಗ್ಗದಲ್ಲಿ ಬಿಎಸ್‌ವೈ ಆಪ್ತರಿಗೆ ಬಿಜೆಪಿ ಮಣೆ: ಸಾಗರದಿಂದ ಹರತಾಳು ಸ್ಪರ್ಧೆ

Monday, April 16th, 2018
shivmogga

ಶಿವಮೊಗ್ಗ: ಬಹುನಿರೀಕ್ಷಿತ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತರಿಗೆ ಟಿಕೆಟ್ ನೀಡಲಾಗಿದೆ. ಕಳೆದ ಆರು ತಿಂಗಳುಗಳಿಂದ ಸಾಗರ ವಿಧಾನಸಭಾ ಕ್ಷೇತ್ರ ಸಾಕಷ್ಟು ಗೊಂದಲ ಗಲಾಟೆಗಳಿಗೆ ಸಾಕ್ಷಿಯಾಗಿತ್ತು. ಅತ್ಯಾಚಾರ ಪ್ರಕರಣದಲ್ಲಿ ಆರೋಪಮುಕ್ತರಾಗಿ ಬಂದ ಮಾಜಿ ಸಚಿವ ಹಾಲಪ್ಪ ಸಾಗರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದರು. ಇದರಿಂದ ಕಳೆದ ನಾಲ್ಕುವರೆ ವರ್ಷದಿಂದಲೂ ನಾನೇ ಅಭ್ಯರ್ಥಿ ಎಂದು ಪಕ್ಷ ಸಂಘಟನೆ ಮಾಡಿದ್ದ ಮಾಜಿ ಶಾಸಕ ಗೋಪಾಲಕೃಷ್ಣ ರೊಚ್ಚಿಗೆದ್ದು ನೇರಾನೇರ ಆರೋಪಗಳನ್ನು […]

ಶಿವಮೊಗ್ಗದಲ್ಲಿ ನಡೆದ ದೊಡ್ಮನೆ ಮದುವೆ: ಸಂಭ್ರಮ ಸಡಗರದಲ್ಲಿ ರಾಜ್ ಕುಟುಂಬ

Monday, March 26th, 2018
rajkumar

ಶಿವಮೊಗ್ಗ: ವರನಟ ಡಾ. ರಾಜ್‌‌‌‌‌‌‌‌‌‌ಕುಮಾರ್ ಕುಟುಂಬದಲ್ಲಿ ಮತ್ತೊಂದು ಮದುವೆಯ ಸಂಭ್ರಮ ಸಡಗರಕ್ಕೆ ಶಿವಮೊಗ್ಗ ಇಂದು ಸಾಕ್ಷಿಯಾಯ್ತು. ಡಾ. ರಾಜ್‌‌‌‌‌‌‌‌‌‌ಕುಮಾರ್ ಪುತ್ರಿ ಲಕ್ಷ್ಮಿ ಅವರ ಪುತ್ರ ಷಣ್ಮುಖ (ಶಾನ್ ) ಸಾಗರದ ಖ್ಯಾತ ವಕೀಲ ಬರೂರು ನಾಗರಾಜ್ ಮಗಳು ಸಿಂಧು ಅವರ ವಿವಾಹ ಶಿವಮೊಗ್ಗದ ನವಿಲೆಯ ಸರ್ಜಿ ಇಂಟರ್‌‌‌‌‌‌‌‌‌‌‌‌ನ್ಯಾಷನಲ್ ಕನ್ವೆನ್ಷನ್ ಹಾಲ್‌‌‌ನಲ್ಲಿ ನಡೆಯಿತು. ಈ ಶುಭ ಸಮಾರಂಭಕ್ಕೆ ಡಾ. ರಾಜ್‌‌‌‌‌‌‌‌‌‌ಕುಮಾರ್ ಇಡೀ ಕುಟುಂಬವೇ ಆಗಮಿಸಿತ್ತು. ನಟ ಶಿವರಾಜ್‌‌‌‌ಕುಮಾರ್, ಪುನೀತ್ ರಾಜ್‌‌‌‌‌‌ಕುಮಾರ್, ರಾಘವೇಂದ್ರ ರಾಜ್‌‌‌‌‌‌‌‌‌‌‌‌‌‌‌‌‌‌ಕುಮಾರ್, ವಿಜಯ್ ರಾಘವೇಂದ್ರ, ರಾಮ್ ಕುಮಾರ್ […]

ರೈತರ ಸಮಸ್ಯೆಗಳನ್ನು ಅವಲೋಕನ ಮಾಡಲು ಸೆ.25ರಂದು ಶಿವಮೊಗ್ಗದಲ್ಲಿ ಸಭೆ

Thursday, August 22nd, 2013
Nagaraja shetty

ಮಂಗಳೂರು :  ರಾಜ್ಯದಲ್ಲಿ ನಿರಂತರವಾಗಿ  ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೃಷಿಗೆ ಮದ್ದು ಸಿಂಪಡಿಸಲು ಸಾಧ್ಯವಾಗದೇ ಇದ್ದು ಸುಮಾರು ೫೦% ರಷ್ಟು ಕೊಳೆರೋಗ ತಗುಲಿದ್ದು, ಬೆಳೆದ ಅಡಿಕೆಗಳು ಉದುರಿ ಹೊಗಿವೆ. ಕೃಷಿಕರ ಪರಿಸ್ಥಿತಿ ಚಿಂತಾಜನಕವಾಗಿದ್ದು ಕೋಟಿಗಟ್ಟಲೆ ನಷ್ಟ ಅನುಭವಿಸಿದ್ದಾರೆ. ರೈತರ ನಷ್ಟಕ್ಕೆ ಸರಕಾರದ ಸಹಕಾರ ಅಗತ್ಯವಾಗಿದೆ ಎಂದು ಬಿಜೆಪಿ ಚುನಾವಣೆ ಸಮಿತಿ ಅಧ್ಯಕ್ಷ ನಾಗರಾಜ್ ಶೆಟ್ಟಿ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಮಾಜಿ ಮುಖ್ಯ ಮಂತ್ರಿ ಸದಾನಂದ ಗೌಡ, ಈಶ್ವರಪ್ಪ, ಹಾಗೂ […]