Blog Archive

ಕಾಂಗ್ರೆಸ್ ದೇಶದ್ರೋಹಿ ಸಂಘಟನೆಯೊಂದಿಗೆ ಹೊಂದಾಣಿಕೆಗೆ ಮುಂದಾಗಿದೆ’

Friday, December 22nd, 2017
congrss

ಮಂಗಳೂರು: ಏಕಾಂಗಿಯಾಗಿ ಚುನಾವಣೆ ಎದುರಿಸಲಾಗದೆ ಕಾಂಗ್ರೆಸ್ ದೇಶದ್ರೋಹಿ ಸಂಘಟನೆಗಳಾದ ಎಸ್‌ಡಿಪಿಐ, ಪಿಎಫ್ಐ ಜತೆ ಹೊಂದಾಣಿಕೆಗೆ ಮುಂದಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಆರೋಪಿಸಿದೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಶತಾಯಗತಾಯ ಅಧಿಕಾರಕ್ಕೆ ಬರಬೇಕೆನ್ನುವ ಉದ್ದೇಶದಿಂದ ಕಾಂಗ್ರೆಸ್ ತಾನು ಯಾವ ಮಟ್ಟಕ್ಕೂ ಇಳಿಯಲು ಸಿದ್ಧ ಎಂಬುದುದನ್ನು ತೋರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಅವರು ಎಸ್‌ಡಿಪಿಐ ಮತ್ತು ಪಿಎಫ್ಐ ಜತೆಯಲ್ಲಿ ಮಾತುಕತೆ ಮಾಡಿರುವುದನ್ನು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಬಿತ್ತರಿಸಿದೆ ಎಂದರು. ಎಸ್‌ಡಿಪಿಐ ಮತ್ತು […]

ಬಿಜೆಪಿ ಭಿನ್ನಮತ: ವಿಜಯೋತ್ಸವಕ್ಕೂ ಎರಡು ಬಣ

Wednesday, December 20th, 2017
bjp-election

ಮಂಗಳೂರು: ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಮೂಲ್ಕಿಯ ಅಂಗಾರಗುಡ್ಡೆ ಎಂಬಲ್ಲಿ ಕಳೆದ ಕೆಲ ತಿಂಗಳಿನಿಂದ ಬಿಜೆಪಿಯ ಎರಡು ಬಣಗಳ ನಡುವಿನ ಭಿನ್ನಮತ ಪರಾಕಾಷ್ಠೆಗೇರಿದೆ. ಗುಜರಾತ್-ಹಿಮಾಚಲ ಪ್ರದೇಶ ಚುನಾವಣೆಯ ಗೆಲುವನ್ನೂ ಪ್ರತ್ಯೇಕವಾಗಿ ಆಚರಿಸಿಕೊಂಡಿದ್ದಾರೆ. ಚುನಾವಣೆಯ ಮತ ಎಣಿಕೆ ಮುಗಿಯುವ ಮುನ್ನವೇ ಒಂದು ಬಣ ಕಿಲ್ಪಾಡಿ ಪಂಚಾಯತಿ ಮಾಜಿ ಆಧ್ಯಕ್ಷರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದ್ದರೆ ಇನ್ನೊಂದು ಬಣ ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯ ಜೀವನ್‌ ಶೆಟ್ಟಿ ನೇತೃತ್ವದಲ್ಲಿ ಅಂಗರಗುಡ್ಡೆಯಲ್ಲಿ ವಿಜಯೋತ್ಸವ ಆಚರಿಸಿ ಬಿಜೆಪಿ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯೂ […]

ಕರ್ನಾಟಕದಲ್ಲಿ ಕಾಂಗ್ರೆಸ್ ಅಂತ್ಯ ಸನ್ನಿಹಿತ: ಯಡಿಯೂರಪ್ಪ

Tuesday, December 19th, 2017
bjp-karnataka

ಕೊಪ್ಪಳ: ಕಾಂಗ್ರೆಸ್ ಮುಕ್ತ ಭಾರತದ ಕನಸು ದೂರವಿಲ್ಲ. ಈಗಾಗಲೇ ಗುಜರಾತ್ ಮತ್ತು ಹಿಮಾಚಲದ ಜನತೆ ವಿಕಾಸಕ್ಕೆ ಜನಾದೇಶ ನೀಡುವ ಮೂಲಕ ಬಿಜೆಪಿಯನ್ನು ಬೆಂಬಲಿಸಿದ್ದಾರೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್ ಅಂತ್ಯ ಸನ್ನಿಹಿತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಕುಕನೂರಿನಲ್ಲಿಂದು ಪರಿವರ್ತನಾ ಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಶಿವಕುಮಾರ್ ಉದಾಸಿ, ರಾಜು ಗೌಡ ಮುಂತಾದವರು ಸಮಾವೇಶದಲ್ಲಿ […]

ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ

Monday, December 18th, 2017
modi

ಮಂಗಳೂರು: ಕಡಲ ನಗರಿ ಮಂಗಳೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ .ಲಕ್ಷದ್ವೀಪಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಇಂದು ಮಂಗಳೂರಿನಲ್ಲಿಯೇ ತಂಗಲಿದ್ದಾರೆ. ಗುಜರಾತ್ ಹಾಗು ಹಿಮಾಚಲ ಪ್ರದೇಶ ಚುನಾವಣೆಯ ಗೆಲುವಿನ ವಿಜಯೋತ್ಸವದ ನಡುವೆ ಇಂದು ಪ್ರಧಾನಿ ಮೋದಿ ಮಂಗಳೂರಿನಲ್ಲಿ ತಂಗುವ ಹಿನ್ನೆಲೆಯಲ್ಲಿ ಕರಾವಳಿಯ ಕೇಸರಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಡಿ. 18ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು […]

ಅಭಿವೃದ್ಧಿಗೆ ಜನರು ನೀಡಿದ ಉಡುಗೊರೆ… ಕರ್ನಾಟಕ ಚುನಾವಣೆ ಗೆಲ್ಲುವುದೇ ನಮ್ಮ ಗುರಿ: ಶಾ

Monday, December 18th, 2017
amit-shah

ನವದೆಹಲಿ: ಬಹು ನಿರೀಕ್ಷಿತ ಗುಜರಾತ್‌‌-ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ದಾಖಲಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌‌ ಶಾ ಎರಡೂ ರಾಜ್ಯದ ಜನರಿಗೆ ಧನ್ಯವಾದ ಹೇಳಿದ್ದಾರೆ. ನವದೆಹಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಇದು ವಂಶವಾದ, ಜಾತೀವಾದದ ವಿರುದ್ಧದ ಗೆಲುವು. ದೇಶದ ಜನರು ಅಭಿವೃದ್ಧಿಗೆ ಮಣೆ ಹಾಕಿದ್ದಾರೆ. ಬಿಜೆಪಿ ಗೆಲುವು ಪ್ರಜಾಸತ್ತಾತ್ಮಕ ಗೆಲುವು. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಜಯಭೇರಿ: ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯೆ

Monday, December 18th, 2017
devegouda

ಬೆಂಗಳೂರು: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಬಿಜೆಪಿಯನ್ನು ಅಭಿನಂದಿಸಿದ್ದಾರೆ. ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ದೇವೇಗೌಡ್ರು, ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ ಹದಿನಾಲ್ಕು ಚುನಾವಣೆಯನ್ನು ನೋಡಿದ್ದೇನೆ. ಆದರೆ ಗುಜರಾತ್ ಚುನಾವಣೆಯಷ್ಟು ಕೀಳು ಮಟ್ಟದ ಪ್ರಚಾರವನ್ನು ಇದುವರೆಗೂ ನೋಡಿರಲಿಲ್ಲ ಎಂದು ಗೌಡ್ರು ವಿಷಾದ ವ್ಯಕ್ತ ಪಡಿಸಿದ್ದಾರೆ. ಕರ್ನಾಟಕದ ಸ್ಥಿತಿಯೇ ಬೇರೆ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯೇ ಬೇರೆ, ಈ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ […]

ಗುಜರಾತ್ ಚುನಾವಣೆ ಫಲಿತಾಂಶದಿಂದ ದೇಶದಲ್ಲಿ ರಾಜಕೀಯ ಬದಲಾವಣೆ: ಯು.ಟಿ. ಖಾದರ್

Monday, December 18th, 2017
u-t-kader

ಮಂಗಳೂರು: ಗುಜರಾತ್ ಚುನಾವಣೆ ಫಲಿತಾಂಶದಿಂದ ದೇಶದಲ್ಲಿ ರಾಜಕೀಯ ಬದಲಾವಣೆಯ ಬಿರುಗಾಳಿ ಬೀಸಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಸತ್ಯಮೇವ ಜಯತೆ ಎಂಬಂತೆ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬುದನ್ನು ಗುಜರಾತ್ ಫಲಿತಾಂಶ ತೋರಿಸಿ ಕೊಟ್ಟಿದೆ. 22 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದರೂ, 30ಕ್ಕೂ ಅಧಿಕ ಸಾರ್ವಜನಿಕ ರ್ಯಾಲಿ ನಡೆಸಿದರೂ ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚು ಸ್ಥಾನವನ್ನು ಪಡೆಯುವುದನ್ನು ಬಿಜೆಪಿಗೆ ತಪ್ಪಿಸಲಾಗಲಿಲ್ಲ. ಜನ ಯಾವುದೇ ತಂತ್ರಗಾರಿಕೆಗೆ ಮಾರು ಹೋಗಿ ಮತ ಹಾಕುವುದಿಲ್ಲ ಎಂಬುದು ಸಾಬೀತಾಗಿದೆ. […]

ಗುಜರಾತ್ ಚುನಾವಣಾ ಫಲಿತಾಂಶ ನನಗೆ ನಿರಾಸೆ ತಂದಿಲ್ಲ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

Monday, December 18th, 2017
rahul-gandhi

ಹೊಸದಿಲ್ಲಿ: ” ಗುಜರಾತ್ ಚುನಾವಣಾ ಫಲಿತಾಂಶ ನನಗೆ ನಿರಾಸೆ ತಂದಿಲ್ಲ. ಫಲಿತಾಂಶ ತೃಪ್ತಿ ತಂದಿದೆ” ಎಂದು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು. ಎಐಸಿಸಿ ಕಚೇರಿಯಲ್ಲಿ ಗುಜರಾತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಗುಜರಾತ್ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದ ರಾಹುಲ್ ಗಾಂಧಿ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಮೊದಲ ಚುನಾವಣಾ ಫಲಿತಾಂಶ ಹೊರಬಂದಿದೆ. ಚುನಾವಣೆ ನಡೆಯುವ ಹೊತ್ತಿಗೆ ಅವರು ಎಐಸಿಸಿ ಉಪಾಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಕಾಂಗ್ರೆಸ್ […]

ಕಾಂಗ್ರೆಸ್ ಹಿಂದೆಹಿಂದೆ, ಬಿಜೆಪಿ ಮುಂದೆಮುಂದೆ

Monday, December 18th, 2017
himachala

ಅಹ್ಮದಾಬಾದ್: ಈ ವರ್ಷದ ಕಟ್ಟಕಡೆಯ ಚುನಾವಣೆ ರಿಯಾಲಿಟಿ ಶೋಗೆ ಗುಜರಾತ್ ಅಣಿಯಾಗಿದೆ. ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ತಿಳಿಯಲು ಕ್ಷಣಗಣನೆ ಆರಂಭವಾಗಿದೆ. 22 ವರ್ಷಗಳ ಕಾಲ ಆಡಳಿತ ನಡೆಸಿರುವ ಭಾರತೀಯ ಜನತಾ ಪಕ್ಷ ಪ್ರಥಮ ಬಾರಿಗೆ ಕಾಂಗ್ರೆಸ್ಸಿನಿಂದ ಭಾರೀ ತುರುಸಿನ ಸ್ಪರ್ಧೆಯನ್ನು ಈ ಬಾರಿ ಎದುರಿಸಿದೆ. ತಕ್ಕಡಿ ಯಾವುದೇ ಬದಿಗೂ ತೂಗಬಹುದು ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. LIVE : ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ 9.56 : ಬಿಜೆಪಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ರಾಜಕೋಟ್ ಪಶ್ಚಿಮ […]

ಪರಿವರ್ತನಾ ರ‍್ಯಾಲಿ:ರಾಜಧಾನಿಯಲ್ಲಿ ಶಕ್ತಿ ಪ್ರದರ್ಶಿಸಿದ ಬಿಜೆಪಿ ನಾಯಕರು

Monday, December 11th, 2017
bjp-rally

ಬೆಂಗಳೂರು: ರಾಜ್ಯದಲ್ಲೂ ಅಚ್ಛೇ ದಿನ್‌ ಸಮೀಪಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಸರಕಾರದ ದುರಾಡಳಿತ ಅಂತ್ಯಗೊಳ್ಳುತ್ತಿದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ರಾಜ್ಯ ಬಿಜೆಪಿ ಮುಖಂಡರು ಗುಡುಗಿದರು. ‘ಪರಿವರ್ತನಾ ಯಾತ್ರೆ’ಯ 39ನೇ ದಿನವಾದ ಭಾನುವಾರ ನಗರದಲ್ಲಿ ಬೃಹತ್‌ ಸಮಾವೇಶ ನಡೆಯಿತು. ಯಾತ್ರೆ ಉದ್ಘಾಟನಾ ದಿನದ ವೈಫಲ್ಯಕ್ಕೆ ಉತ್ತರ ಎಂಬಂತೆ ನಡೆದ ಸಮಾವೇಶದಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ”ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಎಸಿಬಿ, ಸಿಐಡಿ ದುರುಪಯೋಗ ಮಾಡಿಕೊಂಡು ಭ್ರಷ್ಟರಿಗೆ […]