Blog Archive

ಮಂಗಳೂರಿನ ಪುರಭವನದಲ್ಲಿ ಗಾಂಧಿ ಜಯಂತಿ ಆಚರಣೆ

Wednesday, October 2nd, 2019
Purabhavana

ಮಂಗಳೂರು : ಮಂಗಳೂರಿನ ಪುರಭವನದ ಗಾಂಧಿಪಾರ್ಕ್ನಲ್ಲಿ ದ.ಕ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿದ್ದರು. ಮಹಾತ್ಮ ಗಾಂಧೀಜಿಯವರು ಬಿಟ್ಟು ಹೋದ ಆದರ್ಶಗಳ ಜೊತೆಗೆ ಹೆಜ್ಜೆ ಇಡೋಣ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮಂಗಳೂರಿನ ಪುರಭವನದ ಗಾಂಧಿಪಾರ್ಕ್ನಲ್ಲಿ ದ.ಕ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಾಣೆ ಮಾಡಿ ಮಾತನಾಡಿದರು. ಕಾರ್ಯಕ್ರಮಕ್ಕೆ ಮುನ್ನ ಬಲ್ಮಠದಿಂದ ಗಾಂಧಿ ಪಾರ್ಕ್ ವರೆಗೆ ಭಾರತ ಸೇವಾದಳದ […]

ವಿಟಿಯುವಿನ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Wednesday, September 25th, 2019
vtu

ಮಂಗಳೂರು  : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ನ 2015 ನೇ ಸ್ಕೀಮಿನ ಅಡಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇರುವ‌ ನಿಯಮದಿಂದ ಪದೇ ಪದೇ ಆಗುತ್ತಿರುವ ತೊಂದರೆಯ ಬಗ್ಗೆ‌ ಹಾಗು ಮೊದಲನೆಯ ವರ್ಷದ ಒಂದು ವಿಷಯ ಇದ್ದರೆ ಆ ವಿದ್ಯಾರ್ಥಿ ನಾಲ್ಕನೆ ವರ್ಷಕ್ಕೆ ಹೋಗಲು ಅನರ್ಹನೆಂಬ ನಿಯಮವನ್ನು ಬದಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳು  ಮನವಿ ಮಾಡಿದರು. ಮುಖಂಡರಾದ ಅಕ್ಷಯ್ ಆಳ್ವ, ಚರಣ್ ರಾಜ್, ಸಾಕ್ಷತ್ ಶೆಟ್ಟಿ, […]

ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಇಂದು ಮಂಗಳೂರಿಗೆ ಆಗಮನ

Thursday, August 29th, 2019
nalin-kumar

ಮಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಂಗಳವಾರ ಬೆಂಗಳೂರಿ ನಲ್ಲಿ ಅಧಿಕಾರ ಸ್ವೀಕರಿಸಿದ ಅನಂತರ ನಳಿನ್‌ ಕುಮಾರ್‌ ಕಟೀಲು ಅವರು ಇದೇ ಮೊದಲ ಬಾರಿಗೆ ಆ.29ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅವರನ್ನು ಸ್ವಾಗತಿಸಲು ದ.ಕ. ಬಿಜೆಪಿ ಸರ್ವ ಸಿದ್ಧತೆ ನಡೆಸಿದೆ. ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ನಳಿನ್‌ ಕುಮಾರ್‌ ಕಟೀಲು ಅವರನ್ನು ದ.ಕ. ಜಿಲ್ಲಾ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸ್ವಾಗತಿಸಿ ವಾಹನಗಳ ಮೆರವಣಿಗೆ ಮೂಲಕ ನಗರಕ್ಕೆ ಕರೆತರಲಿದ್ದಾರೆ. ಸುಮಾರು 500ರಷ್ಟು ವಾಹನಗಳು ಮೆರವಣಿಗೆಯಲ್ಲಿ […]

ಎರಡೂ ಕ್ಷೇತ್ರಕ್ಕೂ ಒಬ್ಬರೇ ಸಚಿವ : ಕರಾವಳಿಯ ಮೀನುಗಾರರ ವಲಯದಲ್ಲಿ ಹರ್ಷ

Wednesday, August 28th, 2019
srinivas-poojari

ಮಂಗಳೂರು : ರಾಜ್ಯದಲ್ಲಿ ರಚನೆಯಾಗಿರುವ ನೂತನ ಸಚಿವ ಸಂಪುಟದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮೀನುಗಾರಿಕಾ ಮತ್ತು ಬಂದರು ಖಾತೆ ಹಂಚಿಕೆಯಾಗಿರುವುದಕ್ಕೆ ಕರಾವಳಿಯ ಮೀನುಗಾರರ ವಲಯ ಹರ್ಷ ವ್ಯಕ್ತಪಡಿಸಿದೆ. ಮೀನುಗಾರಿಕೆ, ಬಂದರು ಎರಡೂ ಕ್ಷೇತ್ರಗಳು ಒಂದಕ್ಕೊಂದು ಪೂರಕವಾಗಿದ್ದು, ಈ ಹಿಂದೆ ಹಲವು ಬಾರಿ ಎರಡು ಕ್ಷೇತ್ರಗಳನ್ನು ಪ್ರತ್ಯೇಕಿಸಿ ಬೇರೆ ಬೇರೆ ಸಚಿವರಿಗೆ ನೀಡಲಾಗಿತ್ತು. ಆದರೆ ಈ ಬಾರಿ ಎರಡು ಕ್ಷೇತ್ರಗಳನ್ನು ಒಬ್ಬರಿಗೇ ನೀಡಿರುವುದು ಮೀನುಗಾರರಲ್ಲಿ ಸಂತಸ ತಂದಿದೆ. ಮೀನುಗಾರರ ಬಗ್ಗೆ ಕಾಳಜಿ ಇರುವ ವ್ಯಕ್ತಿಗೆ ಆ ಹುದ್ದೆ […]

ಉಡುಪಿ SPಅನ್ನು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಿದರೆ ಸಹಿಸುವುದಿಲ್ಲ: ಕೋಟ ಶ್ರೀನಿವಾಸ ಪೂಜಾರಿ

Wednesday, October 3rd, 2018
srinivas-poojary

ಉಡುಪಿ: ಸುಸೂತ್ರ ಆಡಳಿತಕ್ಕೆ ನಮ್ಮ ಸಹಕಾರವಿದೆ. ಆದರೆ ಉಡುಪಿ ಜಿಲ್ಲಾ ಎಸ್ಪಿಯವರನ್ನು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಿದರೆ ಅಹಿಸೋದಿಲ್ಲ..ಇದು ಎಚ್ಚರಿಕೆ ಎಂದು ಸರಕಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ ಟ್ವೀಟ್ ಇದು. ಕೆಲ ದಿನಗಳ ಹಿಂದೆ ನಡೆದ ಭಾರತ್ ಬಂದ್ ವೇಳೆ ಉಡುಪಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆ ವಾಗ್ವಾದ ನಡೆದಿತ್ತು. ಆ ಬಳಿಕ ಪೊಲೀಸ್ ವರಿಷ್ಟಾಧಿಕಾರಿಗಳ ಕಛೆರಿ ಎದುರು ಇತ್ತಂಡದವರು ಜಮಾಯಿಸಿದ್ದರು. ಈ ವಾಗ್ವಾದ ವಿಕೋಪಕ್ಕೆ ತಿರುಗಿ […]

ಹಿಂದೂಗಳಿಗೆ ಅಭದ್ರತೆ: ಮಟ್ಟಾರು

Saturday, January 6th, 2018
Rathnakar-hegde

ಉಡುಪಿ: ಹಿಂದೂಗಳಿಗೆ ಕರ್ನಾಟಕದಲ್ಲಿ ಅಭದ್ರತೆ ಕಾಡುತ್ತಿದೆ. ಉಡುಪಿ, ದ.ಕ., ಉ.ಕ. ಜಿಲ್ಲೆಗಳಲ್ಲಿ ಕ್ಷೋಭೆ ಆವರಿಸಿದೆ. ಲವ್‌ ಜೆಹಾದ್‌ ಮೂಲಕ ಹಿಂದೂ ಯುವತಿ ಯ ರನ್ನೂ ದಾರಿ ತಪ್ಪಿಸುವ ಕಾರ್ಯವಾಗುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಂಗಳೂರಿನಲ್ಲಿ ಶಾಸಕ ಮೊದಿನ್‌ ಬಾವಾ ಅವರು ಆರೋಪಿಯ ಭಾವ ಕಾಪು ಬಿಜೆಪಿ ಕಾರ್ಯಕರ್ತನೆಂದು ಹೇಳಿದ್ದಾರೆ. ಇದು ಶುದ್ಧ ಸುಳ್ಳು. ಆರೋಪ ಕೇಳಿಬಂದಾಗ ಸ್ವತಃ ಪರಿಶೀಲಿಸಿದಾಗ ಕಾಪುವಿನಲ್ಲಿ ಅಂತಹ ಕಾರ್ಯ ಕರ್ತನೇ ಬಿಜೆಪಿಯಲ್ಲಿ ಇಲ್ಲವೆನ್ನುವ ಸತ್ಯ ಗೊತ್ತಾಗಿದೆ. ಬಾವಾ […]

ಧಮಃ ಮತ್ತು ರಾಜಕಾರಣ- ನಾಳೆಗಳ ನಿರ್ಮಾಣ

Saturday, November 19th, 2016
Kota-poojary

ಮೂಡುಬಿದಿರೆ: ‘ಕರ್ನಾಟಕ ನಾಳೆಗಳ ನಿರ್ಮಾಣ’ ಮುಖ್ಯ ಪರಿಕಲ್ಪನೆಯಡಿಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ‘ಧರ್ಮ ಮತ್ತು ರಾಜಕಾರಣ: ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ವೀರೇಶಾನಂದ ಸರಸ್ವತೀ ಸ್ವಾಮೀಜಿ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಮ್ಮ ವಿಚಾರಗಳನ್ನು ಮಂಡಿಸಿದರು. ಧರ್ಮ- ನಾಳೆಗಳ ನಿರ್ಮಾಣ ‘ಜಪ-ತಪ, ಹೋಮ ಹವನ, ಪೂಜೆ ಪುನಸ್ಕಾರಗಳು ಮಾತ್ರವೇ ಧರ್ಮವಲ್ಲ; ಇವು ಧಾರ್ಮಿಕ ಆಚರಣೆಗಳು. ನಿಜವಾದ ಧರ್ಮವೆಂದರೆ ಒಬ್ಬ ವ್ಯಕ್ತಿ ಪ್ರಾಮಾಣಿಕತೆ, ನಿಸ್ವಾರ್ಥಪರತೆ, ಸಾತ್ವಿಕತೆ, ವೃತ್ತಿಗೌರವವನ್ನು ಹೊಂದಿರುವುದೇ ಆಗಿದೆ. ನಮ್ಮಲ್ಲಿ ಸ್ವಾಮೀಜಿಗಳು, ಸಂನ್ಯಾಸಿಗಳು ಮಾತ್ರವೇ ಧರ್ಮವನ್ನು […]

ಕಾರ್ಯಕರ್ತರಿಗೆ ಅಭಿನಂದನೆ – ಕೋಟ ಶ್ರೀನಿವಾಸ ಪೂಜಾರಿ

Wednesday, December 30th, 2015
kota

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣೆಯ ಫಲಿತಾಂಶದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಜಗನ್ನಾಥರಾವ್ ಜೋಷಿ ಸೌಧದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಭಿನಂದನಾ ಸಭೆ ಜರುಗಿತು. ಈ ಸಭೆಯಲ್ಲಿ ಎಲ್ಲಾ ಕಾರ್ಯಕರ್ತರು ಮತ್ತು ಮತದಾರರಿಗೆ ಕೋಟ ಶ್ರೀನಿವಾಸ ಪೂಜಾರಿಯವರು ಅಭಿನಂದನೆ ಸಲ್ಲಿಸಿದರು. ಜಿಲ್ಲಾಧ್ಯಕ್ಷರಾದ ಕೆ.ಪ್ರತಾಪ್‌ಸಿಂಹ ನಾಯಕ್, ಜಿಲ್ಲಾ ಪ್ರಭಾರಿ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಕ್ಯಾ|ಗಣೇಶ್ ಕಾರ್ಣಿಕ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಮಾಜಿ ವಿ.ಪ.ಸದಸ್ಯ ಕೆ.ಮೋನಪ್ಪ […]

ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

Monday, December 7th, 2015
Kota Poojary

ಮಂಗಳೂರು : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸದಸ್ಯ, ಮಾಜಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಚುನಾವಣಾ ಅಧಿಕಾರಿಗಳಾದ ದ.ಕ.ಜಿಲ್ಲಾಧಿಕಾರಿಯವರಿಗೆ ತನ್ನ ನಾಮಪತ್ರವನ್ನು ಸಲ್ಲಿಸಿದರು. ಪಕ್ಷದ ಕೋಡಿಯಾಲಬೈಲ್ ಕಛೇರಿಯಲ್ಲಿ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭೆ ಮತ್ತು ವಿಧಾನಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕರುಗಳಾದ ಶ್ರೀ ಸುನೀಲ್ ಕುಮಾರ್, ಕ್ಯಾ|ಗಣೇಶ್ ಕಾರ್ಣಿಕ್, ಶಾಸಕ ಎಸ್.ಅಂಗಾರ, ಜಿಲ್ಲಾಧ್ಯಕ್ಷರುಗಳಾದ ಕೆ.ಪ್ರತಾಪಸಿಂಹ ನಾಯಕ್, ತಿಂಗಳೆ […]

ಉಡುಪಿಯಲ್ಲಿ ಡಾ| ವಿ.ಎಸ್‌. ಆಚಾರ್ಯ ರ ಸ್ಮರಣಾರ್ಥ ಪ್ರತಿಮೆ ಅನಾವರಣ

Friday, February 15th, 2013
VS Acharya

ಉಡುಪಿ : ಉಡುಪಿ ನಗರಸಭೆ ಕಚೇರಿ ಮತ್ತು ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಬಳಿ  ಸ್ಥಾಪಿಸಲಾದ ಡಾ| ವಿ.ಎಸ್‌. ಆಚಾರ್ಯ ರ ಪ್ರತಿಮೆಗಳನ್ನು ಫೆಬ್ರವರಿ  14 ಶುಕ್ರವಾರದಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅನಾವರಣಗೊಳಿಸಿದರು. ಹಾಗು ಈ ಸಂದರ್ಭ  ಉಡುಪಿ ಜಿಲ್ಲಾ ಪಂಚಾಯತಿ  ಸಭಾಂಗಣಕ್ಕೆ ಡಾ| ಆಚಾರ್ಯ ಅವರ ಹೆಸರನ್ನಿಡಲಾಯಿತು. ಅನಂತರ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ‘ದಿ| ಡಾ| ವಿ.ಎಸ್‌. ಆಚಾರ್ಯ ಅವರು ಈ ಶತಮಾನ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಓರ್ವರು. ಅವರ […]