Blog Archive

ಜಾಮೀನು ರಹಿತ ವಾರೆಂಟ್.. ಸಂಕಷ್ಟದಲ್ಲಿ ಈಶ್ವರಪ್ಪ

Monday, October 29th, 2018
ishwarappa

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪಗೆ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. 2011ರ ಜನವರಿ‌ 22 ಯಡಿಯೂರಪ್ಪ ಖುರ್ಚಿಯಿಂದ ಇಳಿದಾಗ ರಾಜಕೀಯ ಪಕ್ಷಗಳು ಬಂದ್ಗೆ ಕರೆ ನೀಡಬಾರದು ಎಂದು ಕೋರ್ಟ್ ತೀರ್ಪು ನೀಡಿತ್ತು. ಇದರ ನಡುವೆಯೂ ಈಶ್ವರಪ್ಪ ಬಂದ್ಗೆ ಕರೆ ಮಾಡಿದ್ದರು. ಈ ಕಾರಣದಿಂದ ಬಂದ್ ವೇಳೆ ಸುಮಾರು 5 ಕೋಟಿ ನಷ್ಟವುಂಟಾಗಿತ್ತು. ಘಟನೆ ಹಿನ್ನೆಲೆ ಬಂದ್ ಪ್ರಶ್ನೆ‌ ಮಾಡಿ ವಕೀಲ ಧರ್ಮಪಾಲ್ ಖಾಸಗಿ ದೂರು ಸಲ್ಲಿಸಿದ್ದರು. ಸರ್ಕಾರದ ಬೊಕ್ಕಸಕ್ಕೆ ನಷ್ಟ […]

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್​​ಗೆ ಶರಣಾಗಿದೆ: ಯಡಿಯೂರಪ್ಪ

Friday, October 19th, 2018
yedyurappa

ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿರುವುದು ಮೈತ್ರಿಯಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ಗೆ ಶರಣಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಶಿವಮೊಗ್ಗ, ಬಳ್ಳಾರಿಯಲ್ಲಿ ಬಿಜೆಪಿಗೆ ಯಾವುದೇ ಪ್ರಾಬ್ಲಂ ಇಲ್ಲ. ರಾಮನಗರ ಮತ್ತು ಮಂಡ್ಯದಲ್ಲಿ ಫೈಟ್ ಇದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಚುನಾವಣಾ ರಾಜಕೀಯ ನಿವೃತ್ತಿಯು ಅವರ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಬಿಎಸ್ವೈ ತಿಳಿಸಿದರು.

ಸರ್ಕಾರ ಬೀಳಿಸಲು ಯಡಿಯೂರಪ್ಪ ಪದೇ ಪದೇ ವಿಫಲರಾಗುತ್ತಿದ್ದಾರೆ: ಐವನ್ ಡಿಸೋಜ

Saturday, September 29th, 2018
ivan-desouza

ಮಂಗಳೂರು: ಬಿಜೆಪಿಯೊಳಗಿನ ಭಿನ್ನಮತ ಮತ್ತು ಸರ್ಕಾರ ಬೀಳಿಸಲು ಯಡಿಯೂರಪ್ಪ ಪದೇ ಪದೇ ವಿಫಲರಾಗುತ್ತಿರುವುದರಿಂದ ಅವರು ಪಾಪ ಪಾಂಡು ಆಗಿದ್ದಾರೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಬಿಜೆಪಿ‌ ನಾಲ್ಕು ಬಾರಿ ವಿಫಲವಾಗಿದೆ. ಅವರು ಸರ್ಕಾರ ನಡೆಸಲು ಅನುವು ಮಾಡದೆ ಸಮ್ಮಿಶ್ರ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಲಕ್ಷಣವಲ್ಲ. ಅಲ್ಲದೆ ಬಿಜೆಪಿಯೊಳಗಿನ ಭಿನ್ನಾಭಿಪ್ರಾಯದಿಂದ ಯಡಿಯೂರಪ್ಪ ಅವರು ಪಾಪ ಪಾಂಡು ಆಗಿದ್ದು, […]

ರಾಹುಲ್ ಗಾಂಧಿ ಕೂಡಲೇ ದೇಶದ ಜನತೆಯ ಕ್ಷಮೆ ಯಾಚಿಸಬೇಕು: ಶೋಭಾ ಕರಂದ್ಲಾಜೆ

Friday, September 21st, 2018
shobha-karandlaje

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳ್ಳ ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಲೇ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ಕಳ್ಳ ಎಂದು ಕರೆದಿರುವುದು ಕಾಂಗ್ರೆಸ್ ‌ಪಕ್ಷಕ್ಕೆ ಶೋಭೆ ತರುವುದಿಲ್ಲ. ಈ ಹಿಂದಿನ ಯಾವ ಕಾಂಗ್ರೆಸ್ ಅಧ್ಯಕ್ಷರು ಈ ರೀತಿ ನಡೆದುಕೊಂಡಿರಲಿಲ್ಲ. ಆದ್ರೆ ರಾಹುಲ್ ಗಾಂಧಿ ಬಚ್ಚಾ ರೀತಿ ವರ್ತಿಸಿ […]

ಭ್ರಷ್ಟಾಚಾರ ಹಗರಣಗಳನ್ನು ಮಾಡುವುದರಲ್ಲಿ ನೀವು ಯಾರಿಗೆ ಕಡಿಮೆ ಇದ್ದೀರಿ: ಸಿಎಂ‌ಗೆ ಬಿಎಸ್​ವೈ ಪ್ರಶ್ನೆ

Tuesday, September 18th, 2018
yedyurappa

ಬೆಂಗಳೂರು: ಇಸ್ಪೀಟು ಆಡೋರು, ಜೂಜುಕೋರರು ಅಂತಾ ಆರೋಪ ಮಾಡಿರುವ ನೀವು ಯಾರಿಗೆ ಕಮ್ಮಿ ಇದ್ದೀರಾ‌ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಹೇಗೋ ಮುಖ್ಯಮಂತ್ರಿ ಆಗಿದ್ದೇನೆ ಎಂದು ದರ್ಪದಿಂದ ನಡದುಕೊಳ್ಳುತ್ತೀರಿ. ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದೀರಿ. ಭ್ರಷ್ಟಾಚಾರ ಹಗರಣಗಳನ್ನು ಮಾಡುವುದರಲ್ಲಿ ನೀವು ಯಾರಿಗೆ ಕಡಿಮೆ ಇದ್ದೀರಿ ಎಂದು ಬಿಎಸ್ವೈ ಪ್ರಶ್ನಿಸಿದ್ದಾರೆ. ರೇವಣ್ಣ ವಿರುದ್ದ ಭೂ ಕಬಳಿಕೆ ಆರೋಪ ಮಾಡಿರುವುದು […]

ತಂದೆ-ಮಕ್ಕಳಿಗೆ ಹತಾಶ ಭಾವನೆ ಕಾಡ್ತಿದೆ: ಶಾಸಕ ಎಂ.ಪಿ. ರೇಣುಕಾಚಾರ್ಯ

Saturday, September 15th, 2018
renukacharya

ಬೆಂಗಳೂರು: ನಿನ್ನೆ ಸಿಎಂ ಬಹಳ ಹಗುರವಾಗಿ ಮಾತಾಡಿದ್ದಾರೆ. ತಂದೆ-ಮಕ್ಕಳಿಗೆ ಹತಾಶ ಭಾವನೆ ಕಾಡ್ತಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಕಿಂಗ್ ಪಿನ್ಗಳ ಕುರಿತಾಗಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ ಸಂಬಂಧ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ಮಾತನಾಡಿದ ರೇಣುಕಾಚಾರ್ಯ, ‘ಹೆಚ್ ಡಿ. ರೇವಣ್ಣ, ಹೆಚ್.ಡಿ. ಕುಮಾರಸ್ವಾಮಿ 2006ರ ಘಟನೆ ಮರೆತು ಬಿಟ್ಟಿರುವಂತಿದೆ’ ಯಡಿಯೂರಪ್ಪ ಯಾವತ್ತೂ ಬೇರೆ ಪಕ್ಷಗಳ ಬಗ್ಗೆ ಹಗುರವಾಗಿ ಮಾತಾಡಿಲ್ಲ. ಕುಮಾರಸ್ವಾಮಿ ಸುತ್ತಮುತ್ತ ಇರುವವರು ರೌಡಿಗಳು, ಕಿಂಗ್ಪಿನ್ಗಳು ಎಂದು ಆರೋಪಿಸಿದರು. ಗೋವಾದಲ್ಲಿ ಕ್ಯಾಸಿನೋ […]

ಕರ್ನಾಟಕದ ಕಾವೇರಿ ನದಿಗೆ ವಾಜಪೇಯಿ ಚಿತಾಭಸ್ಮವನ್ನು ವಿಸರ್ಜಿಸಿದ ಯಡಿಯೂರಪ್ಪ

Thursday, August 23rd, 2018
Vajapeyee

ಮಂಡ್ಯ : ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯು ಅವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅನಂತಕುಮಾರ್, ಆರ್. ಅಶೋಕ್ ಇನ್ನೂ ಮೊದಲಾದವರು ಗುರುವಾರ ಶ್ರೀರಂಗಪಟ್ಟಣದಲ್ಲಿನ ಕಾವೇರಿ ತೀರದಲ್ಲಿ ನೆರೆದಿದ್ದು ಸಕಲ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಶ್ರೀರಂಗಪಟ್ಟಣ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಮುಂದಾಳತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು. ಇದಕ್ಕೆ ಮುನ್ನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚಿತಾಭಸ್ಮವಿದ್ದ ಕಳಶದ ಮೆರವಣಿಗೆ ನಡೆದಿದೆ. ಮಾರ್ಗದ ನಡುವೆ ನಿಡಘಟ್ಟ, ಮದ್ದೂರು, […]

ಕುತ್ಯಾರು ಆನೆಗುಂದಿ ಮಠಕ್ಕೆ ಯಡಿಯೂರಪ್ಪ ಕುಟುಂಬ ಆಗಮನ..!

Wednesday, July 25th, 2018
yedyurappa

ಉಡುಪಿ: ಉಡುಪಿ ಸಮೀಪದ ಕುತ್ಯಾರು ಆನೆಗುಂದಿ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಕುಟುಂಬ ಸಮೇತರಾಗಿ ಆಗಮಿಸಿದ್ದು, ಇಲ್ಲಿ ಮಹಾರುದ್ರಯಾಗ ಹಾಗೂ ಶತಚಂಡಿಕಾಯಾಗ ಕೈಗೊಂಡಿದ್ದಾರೆ. ಶನಿವಾರದಂದು ಮಠದಲ್ಲಿ ತಂಗಿದ್ದ ಯಡಿಯೂರಪ್ಪ ಅವರು ಭಾನುವಾರ ಹಾಗೂ ಸೋಮವಾರದಂದು ನಡೆದ ಯಾಗದಲ್ಲಿ ಭಾಗಿಯಾಗಿದ್ದರು. ಮತ್ತೆ ಸಿ.ಎಂ ಪಟ್ಟ ದೊರಕಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ದೇವರಮೊರೆ ಹೋಗಿದ್ದಾರೆಯೇ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮೂಡುತ್ತಿದೆ. ಪುತ್ತೂರಿನ ಪುರೋಹಿತರಾದ ಶ್ರೀಕೃಷ್ಣ ಉಪಾಧ್ಯಾಯ ಮತ್ತು ಸುಳ್ಯ ಮೂಲದ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.

ಮತ್ತೆ ರಾಜ್ಯ ಪ್ರವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಿದ್ಧತೆ..!

Friday, July 13th, 2018
yedyurappa

ಬೆಂಗಳೂರು: ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೆ ರಾಜ್ಯ ಪ್ರವಾಸಕ್ಕೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿ ಸರ್ಕಾರದ ವಿರುದ್ಧ ಆಂದೋಲನ ನಡೆಸಲಿದ್ದಾರೆ ಎನ್ನುವ ಮಾಹಿತಿ ಬಿಜೆಪಿ ಆಪ್ತ ಮೂಲಗಳಿಂದ ಸಿಕ್ಕಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಎರಡು ಬಾರಿ ರಾಜ್ಯ ಸುತ್ತಿದ್ದ ಬಿಜೆಪಿ ಯಡಿಯೂರಪ್ಪ ಇದೀಗ ಮತ್ತೆ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ. ಸಾಲಮನ್ನಾ ವಿಚಾರ ಸೇರಿದಂತೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸದ‌ ಮೈತ್ರಿ ಸರ್ಕಾರದ ವಿರುದ್ಧ ಜನರ […]

ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ: ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಗರಂ

Tuesday, June 5th, 2018
eshwarappa

ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ. ಶಿವಮೊಗ್ಗದ ಹಿಡಿತ ಸಾಧಿಸುವ ಸಲುವಾಗಿಯೇ ಈ ಬಾರಿಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆ.ಎಸ್.ಈಶ್ವರಪ್ಪ ಮತ್ತೊಮ್ಮೆ ಸಿಡಿದು ನಿಂತಿದ್ದಾರೆ. ಹೌದು, ರಾಜ್ಯ ಬಿಜೆಪಿಯಲ್ಲಿ ತಲೆದೂರುವ ಭಿನ್ನಮತದ ಮೂಲ ಹುಡುಕಿಕೊಂಡು ಹೊರಟರೆ ಅದು ತಲುಪುವುದು ಶಿವಮೊಗ್ಗಕ್ಕೆ. ಒಂದಲ್ಲ ಒಂದು ಕಾರಣದಿಂದ ಶಿವಮೊಗ್ಗ ನಾಯಕರಿಂದಲೇ ಭಿನ್ನಮತೀಯ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿರುತ್ತದೆ, ಈಗಲೂ ಹಾಗೆಯೇ ಆಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಶಿವಮೊಗ್ಗ ಟಿಕೆಟ್ ಈಶ್ವರಪ್ಪ ಕೈತಪ್ಪಲಿದೆ ಎನ್ನುವ ಮಾತುಗಳು […]