Blog Archive

ಜೆಪ್ಪು ಬಪ್ಪಾಲ್ ಪರಿಸರ ಜನರು ಬದುಕಲು ಅಸಹನೀಯ :ವೇದವ್ಯಾಸ ಕಾಮತ್

Thursday, November 2nd, 2017
jeppu-bappal

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಜೆಪ್ಪು-ಬಪ್ಪಾಲ್ ಎನ್ನುವ ವಾರ‍್ಡಿನಲ್ಲಿರುವ ಜನರು ಅದೇಗೆ ದಿನ ಕಳೆಯುತ್ತಾರೋ ಎನ್ನುವುದು ದೇವರಿಗೆ ಗೊತ್ತು. ಒಂದು ಕ್ಷಣ ಅಲ್ಲಿರುವ ವಠಾರದಲ್ಲಿರುವ ಮನೆಗಳನ್ನು ಭೇಟಿ ಮಾಡಿದರೆ ಅವರು ಅನುಭವಿಸುವ ಕಷ್ಟ ಗೊತ್ತಾಗುತ್ತದೆ. ಒಳಚರಂಡಿಗಳು ಗಬ್ಬೆದು ಜನ ಮೂಗಿಗೆ ಕೈ ಹಿಡಿದು ದಿನ ದೂಡುವಂತಹ ಪರಿಸ್ಥಿತಿ ಇದೆ. ಪಾಲಿಕೆಯ ಹಿರಿಯ ಕಾರ‍್ಪೋರೇಟರ್ ಅಪ್ಪಿಯವರು ಪ್ರತಿನಿಧಿಸುವ ವಾರ‍್ಡಿನ ಒಳಚರಂಡಿ ಪರಿಸ್ಥಿತಿಯ ಬಗ್ಗೆ ಅಲ್ಲಿನ ಸ್ಥಳೀಯರು ಪಾಲಿಕೆಯ ಕಮೀಷನರ್ ಅವರಿಗೆ ದೂರು ನೀಡಲು ನಿರ‍್ಧರಿಸಿದ್ದಾರೆ. ಯಾಕೆಂದರೆ ಅಲ್ಲಿರುವ […]

ಸಿದ್ಧರಾಮಯ್ಯನವರಿಗೆ ಬಿಜೆಪಿ ಬೈಕ್ ರ‌್ಯಾಲಿಯಲ್ಲಿ ಭಯ ಮೂಡಲು ಕಾರಣವಾದರೂ ಏನು ?

Monday, September 4th, 2017
VV kamath

ಮಂಗಳೂರು  : ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದಾಗ ರಾಜ್ಯ ಸರ್ಕಾರಕ್ಕೆ ಬೇಡವಾಗಿದ್ದ ಶಾಂತಿ ಈಗ ಬಿಜೆಪಿ ಯುವ ಮೋರ್ಚಾ ಬೈಕ್ ರ‌್ಯಾಲಿ ಮಾಡಬೇಕೆನ್ನುವಾಗ ಧಿಡೀರನೇ ಬೇಕಾಯಿತೇ? ಅಷ್ಟಕ್ಕೂ ಈ ರ‌್ಯಾಲಿ ರಾಜ್ಯಾದ್ಯಂತ ಶಾಂತಿ ಸ್ಥಾಪನೆಗಾಗಿಯೇ ನಡೆಸಲ್ಪಡುತ್ತಿರುವುದರಿಂದ ಸಿದ್ಧರಾಮಯ್ಯನವರಿಗೆ ಇದರಲ್ಲಿ ಅಶಾಂತಿಯ ಭಯ ಮೂಡಲು ಕಾರಣವೇನು? ಎಂದು ಮಂಗಳೂರು ಚಲೋ ಬೈಕ್ ರ‌್ಯಾಲಿ ತಡೆಯಲು ಇನ್ನಿಲ್ಲದಂತೆ ಯತ್ನಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯವರ ವಿರುದ್ಧ ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್ ಅವರು […]

ಕುದ್ಮುಲ್ ರಂಗರಾಯರ ಬದುಕೇ ನಮಗೆ ಪ್ರೇರಣೆ- ವೇದವ್ಯಾಸ ಕಾಮತ್

Thursday, June 29th, 2017
DVK

ಮಂಗಳೂರು :  ದಲಿತನೊಬ್ಬ ಉನ್ನತ ವಿದ್ಯಾಭ್ಯಾಸ ಪಡೆದು, ಉತ್ತಮ ಕೆಲಸ ಗಿಟ್ಟಿಸಿಕೊಂಡು, ಅವನು ಕಾರಿನಲ್ಲಿ ಹೋಗುವಾಗ ಆ ಕಾರಿನಿಂದ ಎದ್ದ ಧೂಳು ತನ್ನ ಹಣೆಗೆ ತಾಗಿದರೆ ಅಂದು ತನ್ನ ಜನ್ಮ ಸಾರ‍್ಥಕ ಎಂದು ಹೇಳಿದ ಕುದ್ಮುಲ್ ರಂಗರಾಯರ ತತ್ವಾದರ‍್ಶಗಳು ನಮಗೆ ಎಂದಿಗೂ ಪ್ರೇರಣೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಅವರು ಗುರುವಾರ ಕುದ್ಮುಲ್ ರಂಗರಾಯರ 158 ನೇ ಜನ್ಮದಿನಾಚರಣೆಯಂದು ಮಂಗಳೂರಿನ ನಂದಿಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸ್ಮಾರಕಕ್ಕೆ ಹೂಗುಚ್ಚ […]

ಮೇಯರ್ ಅವೈಜ್ಞಾನಿಕ ಯೋಜನೆಯಿಂದ ಜನರು ಸಂಕಟ ಅನುಭವಿಸುವಂತಾಗಿತ್ತು- ವೇದವ್ಯಾಸ ಕಾಮತ್

Friday, May 19th, 2017
Vedavyasa

ಮಂಗಳೂರು : ಜನರಿಗೆ ನೀರು ಕೊಡದೆ ಸತಾಯಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಈಗ ನೀರನ್ನು ಸಮುದ್ರಕ್ಕೆ ಬಿಡುವ ಮೂಲಕ ಜನರ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಮಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವಾಗ ನೀರು ಮೂರು ದಿನಕ್ಕೊಮ್ಮೆ ಬಿಡುತ್ತೇವೆ ಎಂದು ಮೇಯರ್ ಕವಿತಾ ಸನಿಲ್ ಅವರು ನೀರಿಗೆ ರೇಶನಿಂಗ್ ವ್ಯವಸ್ಥೆ ಮಾಡಿದ್ದರು. ಆಗ ಬಿಜೆಪಿಯ ನಿಯೋಗ ಸ್ವತ: ತುಂಬೆ ವೆಂಟೆಂಡ್ […]