ಮಂಗಳೂರು ವಿವಿ ಗಣೇಶೋತ್ಸದಲ್ಲಿ ವಿವಾದ, ಕಾಂಗ್ರೆಸ್ ನಾಯಕರು ಉತ್ತರಿಸಬೇಕು : ವೇದವ್ಯಾಸ ಕಾಮತ್

Sunday, September 10th, 2023
ವೇದವ್ಯಾಸ ಕಾಮತ್

ಮಂಗಳೂರು : ಮಂಗಳೂರು ವಿವಿ ಯಲ್ಲಿ ಸುಮಾರು 40 ವರ್ಷಗಳಿಂದ ಶ್ರದ್ಧೆ ಮತ್ತು ಭಕ್ತಿಯಿಂದ ಗಣೇಶೋತ್ಸವ ನಡೆಯುತ್ತಾ ಬಂದಿದೆ. ಇಷ್ಟು ಸುದೀರ್ಘ ವರ್ಷಗಳ ಕಾಲ ನಿರ್ವಿಘ್ನವಾಗಿ ನಡೆದುಕೊಂಡು ಬರುತ್ತಿದ್ದ ಗಣೇಶೋತ್ಸವಕ್ಕೆ ಇಲ್ಲದಿದ್ದ ವಿರೋಧ ಇದ್ದಕ್ಕಿದ್ದ ಹಾಗೆ ಉಂಟಾಗಿದ್ದು ಹೇಗೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ. ಈ ಬಾರಿ ಗಣೇಶೋತ್ಸವ ನಿಲ್ಲಲಿದೆ ಎಂಬ ಮಾಹಿತಿ ಸಿಕ್ಕ ಕೂಡಲೇ ಶಾಸಕ ವೇದವ್ಯಾಸ ಕಾಮತ್ ಅವರು ವಿಶ್ವವಿದ್ಯಾನಿಲಯದ ಕುಲಪತಿಯವರ ಬಳಿ ಗಣೇಶೋತ್ಸವದ ಆಚರಣೆಗೆ ಯಾವುದೇ ಅಡ್ಡಿ ಆತಂಕ ಆಗದಂತೆ ಮನವಿ […]

ಪತ್ರಕರ್ತರಿಗೆ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ ವಿತರಣೆ

Wednesday, September 8th, 2021
Kits

ಮಂಗಳೂರು : ಕಾರ್ಮಿಕ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರ ಕಿಟ್ ಬುಧವಾರ ಪತ್ರಿಕಾ ಭವನದಲ್ಲಿ ಶಾಸಕರಾದ ವೇದವ್ಯಾಸ ಕಾಮತ್ ಹಾಗು ಡಾ.ವೈ.ಭರತ್ ಶೆಟ್ಟಿ ವಿತರಿಸಿದರು. ಕರೊನಾ ಲಾಕ್‌ಡೌನ್ ಸಮಸ್ಯೆಯಿಂದ ಪತ್ರಕರ್ತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ನೀಡಿದ ಆಹಾರ ಕಿಟ್ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು. ಕರೊನಾದಿಂದಾಗಿ ಎಲ್ಲ ಕ್ಷೇತ್ರವೂ ಮುಗ್ಗರಿಸಿದ್ದು, ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಿಂದ ನೆರೆ, […]

ಬಡವರ್ಗಕ್ಕೆ ಆರ್ಥಿಕ ನೆರವು ನೀಡುವ ಮುಂಚೂಣಿ ಸಂಘಟನೆ ಬಿರುವೆರ್ ಕುಡ್ಲ

Tuesday, December 1st, 2020
ಬಡವರ್ಗಕ್ಕೆ ಆರ್ಥಿಕ ನೆರವು ನೀಡುವ ಮುಂಚೂಣಿ ಸಂಘಟನೆ ಬಿರುವೆರ್ ಕುಡ್ಲ

ಮಂಗಳೂರು : ಕಳೆದ ಆರು ವರ್ಷಗಳಲ್ಲಿ ಜಾತಿ ಬೇದವಿಲ್ಲದೆ ನೂರಾರು ಕುಟುಂಬಗಳಿಗೆ 1.80 ಕೋಟಿಗೂ ಮಿಕ್ಕಿ ಆರ್ಥಿಕ  ನೆರವು ನೀಡುವ ಮೂಲಕ ಅಲ್ಪಾವಧಿಯಲ್ಲಿ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆ ಮುಂಚೂಣಿಯಲ್ಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಮಂಗಳೂರಿನಲ್ಲಿ ಸಂಘಟನೆ ವತಿಯಿಂದ ಮೂರು ಕುಟುಂಬಗಳಿಗೆ ಆರ್ಥಿಕ  ನೆರವು ವಿತರಿಸಿ ಮಾತನಾಡಿದರು. ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ಅನಾರೋಗ್ಯ ಪೀಡಿತರಿಗೆ, ಮಕ್ಕಳ ಶಿಕ್ಷಣಕ್ಕಾಗಿ, ಅಂಗವಿಕಲರಿಗೆ ಸಲಕರಣೆ ಸಹಿತ ಹಲವು ಸೌಲಭ್ಯವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಹಿತ ಎಲ್ಲಾ […]

ಕೋವಿಡ್ ಜಾಗೃತಿ ಜಾಥಾ ವಾಹನಕ್ಕೆ ಚಾಲನೆ

Saturday, November 14th, 2020
Covid Jatha

ಮಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೋವಿಡ್ ಜಾಗೃತಿ ಜಾಥಾ ವಾಹನಕ್ಕೆ ಮಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, “ಕೋವಿಡ್ ಹರಡದಂತೆ ಮುಂಜಾಗೃತೆ ಕುರಿತ ಸರಕಾರದ ಸೂಚನೆಗಳನ್ನ ನಾವು ಅನುಸರಿಸಬೇಕಿದೆ. ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಜಾಗೃತಿ ಜಾಥಾ ವಾಹನದಿಂದ ಸಾಧ್ಯವಾಗಲಿ” ಎಂದರು. ಬೃಹತ್ ಎಲ್ಇಡಿ ಪರದೆ ಹೊಂದಿರುವ ಜಾಗೃತಿ ಜಾಥಾ ವಾಹನವು ಮಂಗಳೂರು ಮಹಾನಗರ ಪಾಲಿಕೆ […]

ಶೀಘ್ರದಲ್ಲಿ ತುಳುವನ್ನು ಅಧಿಕೃತ ಭಾಷೆಯಾಗಿ ಮನ್ನಣೆ ಮಾಡುವಲ್ಲಿ ಪ್ರಯತ್ನ : ವೇದವ್ಯಾಸ ಕಾಮತ್‌

Thursday, May 21st, 2020
tulu-academy

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೇರಳ ತುಳು ಅಕಾಡೆಮಿಗಳಿಂದ ಅಧಿಕೃತವೆಂದು ಅಂಗೀಕೃತವಾದ ತುಳು ಲಿಪಿ ಪರಿಚಯದ ಪರಿಷ್ಕೃತ ಮುದ್ರಣದ ತುಳು ಲಿಪಿ ತಜ್ಞ ಶ್ರೀಯುತ ಡಾ. ರಾಧಕೃಷ್ಣ ಬೆಳ್ಳೂರು ಲಿಖಿತ ’ತುಳು ಲಿಪಿ’ ಪುಸ್ತಕವನ್ನು ಮೇ 19, ಶನಿವಾರದಂದು ಅಕಾಡೆಮಿ ಸಿರಿಚಾವಡಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್‌ರವರು ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆಗೊಳಿಸಿರುವ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್‌ರವರು ’ತುಳು ಲಿಪಿ’ ಪುಸ್ತಕ ಬಿಡುಗಡೆಗೊಳಿಸಿಡಿಸಿರುವ ಬಗ್ಗೆ ಸಂತಸ ವ್ಯಕ್ತ […]

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸನಾತನ ಸಂಸ್ಥೆಯ ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನಕ್ಕೆ ಶಾಸಕರಾದ ವೇದವ್ಯಾಸ ಕಾಮತ್ ಭೇಟಿ

Monday, February 24th, 2020
sanatana

ಮಂಗಳೂರು : ಮಹಾಶಿವರಾತ್ರಿಯ ಪ್ರಯುಕ್ತ ಸನಾತನ ಸಂಸ್ಥೆಯ ವತಿಯಿಂದ ಮಂಗಳೂರು ಸಹಿತ ಪುತ್ತೂರು, ಸುಳ್ಯ, ಉಜಿರೆ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ ಮತ್ತು ವಿತರಣೆ ಮಳಿಗೆಯನ್ನು ಹಮ್ಮಿಕೊಳ್ಳಲಾಯಿತು. ಮಂಗಳೂರಿನ ಸುಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಶಾಸಕರಾದ ಶ್ರೀ. ವೇದವ್ಯಾಸ ಕಾಮತ್ ಇವರು ಭೇಟಿ ನೀಡಿದರು. ಗ್ರಂಥ ಪ್ರದರ್ಶನಿಯನ್ನು ವೀಕ್ಷಿಸಿದ ಶ್ರೀ. ವೇದವ್ಯಾಸ ಕಾಮತ್ ಇವರು ಅಧ್ಯಾತ್ಮ ಪ್ರಸಾರ ಮಾಡಲು ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು. ಈ ಗ್ರಂಥ ಪ್ರದರ್ಶನಿಗೆ ಅನೇಕ ಜಿಜ್ಞಾಸುಗಳು ಭೇಟಿ […]

ಮಂಗಳೂರು : ಪ್ರತಿ ಗ್ರಾಮದ ವಿಶೇಷತೆಯ ಮಾಹಿತಿ ಕ್ರೋಢೀಕರಣಕ್ಕೆ ಕ್ರಮ; ಸಚಿವ ಸಿ.ಟಿ.ರವಿ

Monday, September 30th, 2019
CT Ravi

ಮಂಗಳೂರು : ರಾಜ್ಯದ ಪ್ರತಿ ಗ್ರಾಮದ ಇತಿಹಾಸ, ಭೌಗೋಳಿಕ, ಸಾಂಸ್ಕೃತಿಕ, ಜಾನಪದ ಹೀಗೆ ವಿವಿಧ ಅಂಶಗಳನ್ನೊಳಗೊಂಡಂತೆ ಗ್ರಾಮದ ವಿಶೇಷತೆಯ ಮಾಹಿತಿಯನ್ನು ಕ್ರೋಢೀಕರಿಸಿ ಅವುಗಳನ್ನು ವಿಕಿಪೀಡಿಯಾ ಮಾದರಿಯಲ್ಲಿ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ಅವರು ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, 2020ರ ಡಿಸೆಂಬರ್ ನೊಳಗೆ ಸರ್ಕಾರ ಈ ಪರಿಕಲ್ಪನೆಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದ್ದು, ಇದ್ಕಕಾಗಿ ಪ್ರತಿ ಗ್ರಾಮದ ಮಾಹಿತಿಯನ್ನು […]

ಆವರಣ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳ ಮೃತ್ಯು : ಮಕ್ಕಳ ಕುಟುಂಬಕ್ಕೆ11 ಲಕ್ಷ ರೂ. ಪರಿಹಾರ ವಿತರಣೆ

Monday, September 9th, 2019
vedha-vyasa

ಮಂಗಳೂರು : ನಗರದ ಪಡೀಲ್ ಕೊಡೆಕಲ್ ಸಮೀಪದ ಶಿವನಗರ ಎಂಬಲ್ಲಿ ಮನೆಯ ಆವರಣ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದ ಘಟನೆ ಭಾನುವಾರ ನಡೆದಿದ್ದು, ಮೃತ ಮಕ್ಕಳ ಕುಟುಂಬಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಇಂದು 11 ಲಕ್ಷ ರೂಪಾಯಿಗಳ ಚೆಕ್ ಅನ್ನು ವಿತರಣೆ ಮಾಡಿದರು. ರಾಜ್ಯ ಸರ್ಕಾರದಿಂದ ನೀಡುವ 10 ಲಕ್ಷ ರೂ. ಮತ್ತು ಸೇವಾಂಜಿಲಿ ಚಾರಿಟೇಬಲ್ ಟ್ರಸ್ಟ್  ಇದರಿಂದ ನೀಡಲಾಗುವ 1 ಲಕ್ಷ ರೂ ಹೀಗೆ ಒಟ್ಟು 11 ಲಕ್ಷ […]

ನೇತ್ರಾವತಿ ಸೇತುವೆಗೆ ಸಿಸಿಟಿವಿ ಕ್ಯಾಮೆರಾ : ವೇದವ್ಯಾಸ ಕಾಮತ್

Friday, August 2nd, 2019
cctv

ಮಂಗಳೂರು :  ನೇತ್ರಾವತಿ ಸೇತುವೆ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಯವರೊಂದಿಗೆ ಚರ್ಚಿಸಲಾಗುವು ದೆಂದು ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಬಳಿಕ ಮಂಗಳೂರು- ಉಳ್ಳಾಲ ರಸ್ತೆಯಲ್ಲಿನ ನೇತ್ರಾವತಿ ಸೇತುವೆ ಹೆಚ್ಚು ಸುದ್ದಿಯಲ್ಲಿದೆ. “ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು ನೆಲೆಯಾಗುತ್ತಿದೆ. ಸಿಸಿ ಟಿವಿಗಳನ್ನು ಅಳವಡಿಸಿದರೆ ಸೇತುವೆ ಮೇಲೆ ನಡೆದ ದುರ್ಘಟನೆಗಳನ್ನು ತಕ್ಷಣ ಪರಿಶೀಲಿಸಲು ಅನುಕೂಲವಾಗುತ್ತದೆ. ಸಿಸಿಟಿವಿ […]

ದ.ಕ ಜಿಲ್ಲೆಯ ಕಾಂಗ್ರೆಸ್ ನಾಯಕರು ಲೋಕಸಭಾ ಸದಸ್ಯನಾಗಬೇಕೆಂದು ಪಾದಯಾತ್ರೆ ಮಾಡುತ್ತಿದ್ದಾರೆ : ಕಾಮತ್

Wednesday, January 30th, 2019
Vedavyas

ಮಂಗಳೂರು: ಲೋಕಸಭಾ ಸದಸ್ಯನಾಗಬೇಕೆಂದು ದ.ಕ ಜಿಲ್ಲೆಯ ಕಾಂಗ್ರೆಸ್ ನಾಯಕರು  ಪಾದಯಾತ್ರೆ ಮಾಡುತ್ತಿದ್ದಾರೆ . ಪಂಪ್ ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆಗೆ ನಡೆಸುತ್ತಿರುವ ಪಾದಯಾತ್ರೆ ಬಹಳ ಹಾಸ್ಯಾಸ್ಪದವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ದೂರಿದರು. ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ  ಮಾತನಾಡಿದ ಅವರು, ಇದಕ್ಕೆ ಕಾರಣೀಕರ್ತರು ಕಾಂಗ್ರೆಸ್ನವರು. ಆದರೆ ಗೂಬೆ ಕೂರಿಸುವುದು ಸಂಸದ ನಳಿನ್ ಕುಮಾರ್ ಮೇಲೆ  ಅಂದು ಸಂಸದರು ಎನ್.ಎಚ್ ಬಗ್ಗೆ ಮೀಟಿಂಗ್ ಕರೆದಾಗ ಜೆ.ಆರ್.ಲೋಬೋ‌ ಹಾಗೂ ಇನ್ನಿತರ ಶಾಸಕರು ಬಾರದೆ, ನಾಲ್ಕೂವರೆ […]