Blog Archive

ಭಾನುವಾರ ರಾತ್ರಿ 9 ಗಂಟೆಗೆ ಲೋಕಕಲ್ಯಾಣಕ್ಕಾಗಿ ಧರ್ಮಸ್ಥಳದಲ್ಲಿ ವಿಶೇಷ ಪ್ರಾರ್ಥನೆ

Sunday, April 5th, 2020
Heggade

ಧರ್ಮಸ್ಥಳ : ಕೊರೊನಾ ನಿರ್ಮೂಲನೆಯೊಂದಿಗೆ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಇಂದು, ಭಾನುವಾರ ರಾತ್ರಿ 9 ಗಂಟೆಗೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜ್ಯೋತಿ ಬೆಳಗಿಸಿ ವಿಶೇಷ ಪ್ರಾರ್ಥನೆ ಮಾಡುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಕೊರೊನಾ ನಿರ್ಮೂಲನೆಗಾಗಿ ನಾವೆಲ್ಲ ವಿಶ್ವದ ಎಲ್ಲಾ ಜನರೊಂದಿಗೆ ಏಕತೆ, ಸಂಘಟನೆ ಮತ್ತು ಪ್ರಜ್ಞೆಯೊಂದಿಗೆ ಹೋರಾಟ ನಡೆಸುತ್ತಿದ್ದೇವೆ. ಪ್ರಧಾನಿಯವರ ಸಲಹೆಯಂತೆ ಎಲ್ಲರೂ ಭಾನುವಾರ ರಾತ್ರಿ 9 ಗಂಟೆಗೆ ತಮ್ಮ ಮನೆಯಲ್ಲಿ ಜ್ಯೋತಿ ಬೆಳಗಿಸಿ ಕೊರೊನಾ ನಿರ್ಮೂಲನೆಯೊಂದಿಗೆ ವಿಶ್ವದ ಎಲ್ಲಾ […]

ಧರ್ಮಸ್ಥಳದಲ್ಲಿ ಲೋಕಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮ

Tuesday, March 24th, 2020
Homa

ಧರ್ಮಸ್ಥಳ : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಕಲ್ಯಾಣಾರ್ಥವಾಗಿ ವ್ಯಾದಿಹರ ಶಾಂತಿ ಹೋಮವನ್ನು ಲೋಕದಾದ್ಯಂತ ಮಾನವ ಕುಲದ ಜೀವನಕ್ಕೆ ತೊಂದರೆ ಮಾಡುವಕೊರೋನ ಸಂಬಂಧಿತಕೆಟ್ಟ ಕ್ರಿಮಿಗಳನ್ನು ದೂರಮಾಡಲು ಭಗವಾನ್ ಮಹಾವಿಷ್ಣುವನ್ನು ಪ್ರಾರ್ಥಿಸಿ ನೆರವೇರಿಸಲಾಯಿತು. ಅಷ್ಟು ಋಷಿಗಳು ಹಿಂದೆ ಕ್ರಿಮಿ ರೂಪದ ಮಹಾಮಾರಿಯನ್ನು ತಮ್ಮ ತಪೋ ಮಹಿಮೆಯಿಂದ ದೂರ ಮಾಡಿ ನಾಶವಾಗುವ ಹಂತದಲ್ಲಿರುವ ಈ ಲೋಕದ ಜೀವರಾಶಿಯನ್ನು ರಕ್ಷಿಸಲು ಶಾಸ್ತ್ರದಲ್ಲಿಉಲ್ಲೇಖವಾಗಿದೆ. ನಮ್ಮನ್ನು ಅಂತಹ ಮಹಾಮಾರಿಯಿಂದ ರಕ್ಷಿಸಿರಿ ಎಂಬುದಾಗಿ ಪ್ರಾರ್ಥಿಸುತ್ತಿದ್ದರು. ಆ ಮಂತ್ರವನ್ನು ಸಹಸ್ರ ಬಾರಿ ಪಠಿಸಿ ತಿಲ ಮತ್ತು ತುಪ್ಪವನ್ನು ಸಮರ್ಪಿಸಿ ನೆರವೇರಿಸಲಾಯಿತು. […]

ಬ್ರಹ್ಮಯೋಗಾನಂದ ಸ್ವಾಮೀಜಿ ಧರ್ಮಸ್ಥಳ ಭೇಟಿ

Tuesday, March 17th, 2020
ಬ್ರಹ್ಮಯೋಗಾನಂದ ಸ್ವಾಮೀಜಿ ಧರ್ಮಸ್ಥಳ ಭೇಟಿ

ಧರ್ಮಸ್ಥಳ : ಚೆನ್ನೈನಲ್ಲಿ ಯೋಗ ಶಾಂತಿಗುರು ಕುಲದ ಸ್ಥಾಪಕರಾದ ಬ್ರಹ್ಮಯೋಗಾನಂದ ಸ್ವಾಮೀಜಿ ಸೋಮವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಿತ್ಯವೂಧರ್ಮದ ಅನುಷ್ಠಾನವೇ ನಮ್ಮಕರ್ತವ್ಯವಾಗಿದ್ದು, ಪ್ರಚಾರಕ್ಕಿಂತಆಚಾರ ಮತ್ತು ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅವರು ಹೇಳುತ್ತಾರೆ. ಸುಭ್ರದ್ರ ಭಾರತ ನಿರ್ಮಾಣಕ್ಕಾಗಿ ಶ್ರೀರಾಮ ಮತ್ತು ಲಕ್ಷ್ಮೀ ಮೂರ್ತಿಯೊಂದಿಗೆ ಸ್ವಾಮೀಜಿ ಈಗಾಗಲೆ ದೇಶದೆಲ್ಲೆಡೆ ಸಾವಿರಕ್ಕೂ ಮಿಕ್ಕಿ ತೀರ್ಥಕ್ಷೇತ್ರಗಳಿಗೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಶೃಂಗೇರಿ, ಮಂಗಳೂರು, ಕನ್ಯಾಕುಮಾರಿ ಮೂಲಕ ತಮ್ಮ ಕಾಂಚೀಪುರಂ ಆಶ್ರಮಕ್ಕೆ ಹೋಗುವುದಾಗಿ […]

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಸರಕು ಸಾಗಾಟದ ಘನ ವಾಹನ ಕೊಡುಗೆ

Saturday, March 14th, 2020
ujire

ಉಜಿರೆ : ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ಶನಿವಾರ ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ಸರಕು ಸಾಗಾಟದ ಘನ ವಾಹನವನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರಎಂ.ಎಸ್. ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು. ಹೆಗ್ಗಡೆಯವರ ನಿವಾಸ ಬೀಡಿನಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ದಧರ್ಮಾಧಿಕಾರಿ […]

ಏಕ್ ಭಾರತ್, ಶ್ರೇಷ್ಠ ಭಾರತ್: ಧರ್ಮಸ್ಥಳದಲ್ಲಿ ಭಾರತೀಯ ಲೋಕ ಉತ್ಸವ

Tuesday, March 10th, 2020
Bharatiya loka utsava

ಉಜಿರೆ: ಧರ್ಮ ಮತ್ತು ಸಂಸ್ಕೃತಿಯಲ್ಲಿ ವಿವಿಧತೆಯಲಿ ಏಕತೆಯನ್ನು ಸಾಧಿಸಿರುವುದು ಭಾರತದ ವೈಶಿಷ್ಟ್ಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದ ತಂಜಾವೂರಿನ ದಕ್ಷಿಣ ವಲಯ ಸಂಸ್ಕೃತಿ ಕೇಂದ್ರದ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಭಾರತೀಯ ಲೋಕ ಉತ್ಸವ, ಧರ್ಮಸ್ಥಳ – ೨೦೨೦ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ದೀಪ ಬೆಳಗಿಸಿ, ಡೋಲು ಬಾರಿಸಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯೊಂದಿಗೆ ಉದ್ಘಾಟನಾ ಭಾಷಣವನ್ನು […]

ಧರ್ಮಸ್ಥಳ : ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಬೀಳ್ಕೊಡುಗೆ ಸಮಾರಂಭ

Tuesday, March 10th, 2020
dharmastala

ಧರ್ಮಸ್ಥಳ : 2019-20 ನೇ ಸಾಲಿನ ಎಸ್.ಎಸ್.ಎಲ್.ಸಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಎಸ್.ಡಿ.ಎಂ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 06-03-2020ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ತರಗತಿಯ ಎಲ್ಲಾ ವಿದ್ಯಾರ್ಥಿಗಳು, ಮುಖ್ಯ ಶಿಕ್ಷಕಿಯಾದ ಪರಿಮಳ ಎಂ.ವಿ, ಶಿಕ್ಷಕ ವೃಂದ ಹಾಜರಿದ್ದು, ಶಾಲಾ ಸಂಚಾಲಕರಾದ ಶ್ರೀ ಅನಂತಪದ್ಮನಾಭ ಭಟ್‌ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅವರು ಈ ಸಂದರ್ಭದಲ್ಲಿ ಮಾತನಾಡಿ ತನ್ನ ನೆನಪುಗಳನ್ನು ಮೆಲುಕು ಹಾಕಿದರು. ಹಾಗು ಪಬ್ಲಿಕ್ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ […]

ಏಪ್ರಿಲ್ 29ರಂದು ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

Friday, March 6th, 2020
uchita-samuhuka-vivaha

ಉಜಿರೆ : ಧರ್ಮಸ್ಥಳದಲ್ಲಿ ಇದೇ ಏಪ್ರಿಲ್ 29ರಂದು ಬುಧವಾರ ಸಂಜೆ ಗಂಟೆ 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 49ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ. ವಧುವಿಗೆ ಸೀರೆ, ರವಿಕೆಕಣ ಮತ್ತು ಮಂಗಲ ಸೂತ್ರ ಹಾಗೂ ವರನಿಗೆ ಧೋತಿ, ಶಾಲು ನೀಡಲಾಗುವುದು. ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಇಚ್ಛಿಸುವವರು ಏಪ್ರಿಲ್ 25 ರೊಳಗೆ ಸೂಕ್ತ ದಾಖಲೆ ಪತ್ರಗಳೊಂದಿಗೆ ಹೆಸರು ನೋಂದಾಯಿಸಲುಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 08256 – 2666 44  

ಕುಣಿಗಲ್ ಸಮೀಪ ಭೀಕರ ರಸ್ತೆ ಅಪಘಾತ : 13 ಮಂದಿ ಮೃತ್ಯು

Friday, March 6th, 2020
kunigal

ತುಮಕೂರು : ಕುಣಿಗಲ್ ಸಮೀಪ ಬ್ಯಾಲಕೆರೆ ಬಳಿ ಭೀಕರವಾದ ಅಫಘಾತ ಸಂಭವಿಸಿದ್ದು ಒಂದು ವರ್ಷದ ಮಗು ಸೇರಿದಂತೆ ಸುಮಾರು 13 ಜನ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪಲ್ಟಿಯಾದ ಕಾರಿಗೆ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಕಾರು ಡಿಕ್ಕಿಯಾಗಿದೆ. ಪರಿಣಾಮ ಎರಡೂ ಕಾರುಗಳಲ್ಲಿದ್ದ 13 ಮಂದಿ ದುರಂತ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ […]

ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಧರ್ಮಸ್ಥಳ ಭೇಟಿ

Monday, March 2nd, 2020
ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಧರ್ಮಸ್ಥಳ ಭೇಟಿ

ಉಜಿರೆ : ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಶುಕ್ರವಾರ ಸಂಜೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಮಾತುಕತೆ ನಡೆಸಿದರು. ಶಾಸಕ ಹರೀಶ್ ಪೂಂಜ ಮತ್ತು ಹೆಗ್ಗಡೆಯವರ ಸಹೋದರ ಡಿ. ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಬಳಿಕ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ ಮಂಗಳೂರಿಗೆ ಪ್ರಯಾಣ ಮುಂದುವರಿಸಿದರು.  

ಧರ್ಮಸ್ಥಳ : ಬಸದಿಯಲ್ಲಿ ವಾರ್ಷಿಕೋತ್ಸವ

Friday, February 28th, 2020
basadi

ಉಜಿರೆ : ಹೇಮಾವತಿ ವಿ. ಹೆಗ್ಗಡೆಯವರು ಮೃತ್ಯುಂಜಯ ಆರಾಧನೆಗೆ ಚಾಲನೆ ನೀಡಿದರು. ಧರ್ಮಸ್ಥಳದಲ್ಲಿರುವ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಬ್ರಹಚ್ಛಾಂತಿಯಂತ್ರಾರಾಧನೆ ಮತ್ತು ಸಾಮೂಹಿಕ ಮೃತ್ಯುಂಜಯ ಆರಾಧನೆ ನಡೆಯಿತು. ಇಂದು ಕಾರ್ಕಳ ಸ್ವಾಮೀಜಿ ಧರ್ಮಸ್ಥಳಕ್ಕೆ: ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಶುಕ್ರವಾರ ಧರ್ಮಸ್ಥಳಕ್ಕೆ ಆಗಮಿಸಲಿದ್ದು ಬಸದಿಯಲ್ಲಿ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾವಹಿಸಿ ಮಂಗಳ ಪ್ರವಚನ ನೀಡುವರು. ಸಂಜೆ ಗಂಟೆ5.30 ರಿಂದ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಶ್ರೀ ಚಂದ್ರನಾಥ […]