Blog Archive

ರಾಜ್ಯದಿಂದ ಲೆಕ್ಕ ಕೇಳಲು ನರೇಂದ್ರ ಮೋದಿ ಚಕ್ರವರ್ತಿಯಲ್ಲ: ರಮಾನಾಥ ರೈ

Monday, March 26th, 2018
ramanath-rai

ಮಂಗಳೂರು: ರಾಜ್ಯ ಸರಕಾರದಿಂದ ಲೆಕ್ಕ ಕೇಳಲು ನರೇಂದ್ರ ಮೋದಿ ಚಕ್ರವರ್ತಿಯಲ್ಲ. ಲೆಕ್ಕ ಕೊಡೋಕೆ ನಾವೇನು ಸಾಮಂತ ರಾಜರುಗಳಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳೂರಿನಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೆಕ್ಕ ಕೊಡುವ ಪದ್ಧತಿ ಇಲ್ಲ ಎಂದು ತಿಳಿಸಿದರು. ರೈ ಚಕ್ರವರ್ತಿಗೆ ಸಾಮಂತರಸರು ಮಾತ್ರ ಲೆಕ್ಕ ಕೊಡಬೇಕಷ್ಟೆ. ಪ್ರಧಾನಿ ನರೇಂದ್ರ ಮೋದಿ ದೇಶದ ಚಕ್ರವರ್ತಿಯಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಮಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಜನಾಶೀರ್ವಾದ […]

ಟ್ಟಿಟ್ಟರ್‌ನಲ್ಲಿ ಸ್ವತಃ ಮೋದಿ ಅವರೇ ಫಾಲೋ ಮಾಡುತ್ತಿರುವ ಯುವಕ ಅರೆಸ್ಟ್‌!

Thursday, March 15th, 2018
narendra-modi

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಬಗ್ಗೆ ಫೇಸ್‌ಬುಕ್‌‌ನಲ್ಲಿ ಪೋಸ್ಟ್‌ ಮಾಡಿದ ಯುವಕನೋರ್ವನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಅನುಪಮ್‌ ಪಾಂಡೆ ಎಂಬಾತನೇ ಬಂಧಿತ ಯುವಕ. ಸಂಸದೀಯ ಕ್ಷೇತ್ರ ವಾರಣಾಸಿಗೆ ತೆರಳಿದಾಗ ಪ್ರಧಾನಿ ಮೋದಿ ಅವರ ‘minute-to-minute programme’ ಬಗ್ಗೆ ಅನುಪಮ್‌ ಪಾಂಡೆ ಫೇಸ್‌ಬುಕ್‌‌ನಲ್ಲಿ ಪೋಸ್ಟ್‌ ಮಾಡಿದ್ದ ಎನ್ನಲಾಗಿದೆ. ಇದನ್ನು ಖಂಡಿಸಿ ಪ್ರಧಾನಿ ಮೋದಿ ಅವರಿಗೆ ಭದ್ರತೆ ಒದಗಿಸುವ ಎಸ್‌‌ಪಿಜಿ (Special Protection Group) ಉತ್ತರ ಪ್ರದೇಶ ಸರ್ಕಾರಕ್ಕೆ ದೂರು ನೀಡಿತ್ತು. ಎಸ್‌‌ಪಿಜಿಯ ದೂರಿನ ಮೇರೆಗೆ […]

ಸುರಕ್ಷಾ ಯಾತ್ರೆ ಬಳಿಕ ಟಿಕೆಟ್‌ ಆಕಾಂಕ್ಷಿಗಳ ಮನವೊಲಿಕೆ

Saturday, March 3rd, 2018
bjp-rally

ಮಂಗಳೂರು: ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಪಕ್ಷದ ಬಹಳಷ್ಟು ಟಿಕೆಟ್‌ ಆಕಾಂಕ್ಷಿಗಳಿರುವ ಕಾರಣ “ಸುರಕ್ಷಾ ಯಾತ್ರೆ’ ಮುಗಿದ ಕೂಡಲೇ ಎಲ್ಲ ಆಕಾಂಕ್ಷಿಗಳನ್ನು ಕರೆದು ಮನವೊಲಿಸುವ ಕಾರ್ಯ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿರುವ ಕಾರಣ ಪಕ್ಷದೊಳಗೆ ಈಗ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳಿರುವುದು ಸಹಜ. ಇದನ್ನು ನಾವು ಸ್ವಾಗತಿಸುತ್ತೇವೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರನ್ನಷ್ಟೇ ಅಧಿಕೃತ ಅಭ್ಯರ್ಥಿಯನ್ನಾಗಿ […]

ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ

Tuesday, February 27th, 2018
pratap-simha

ಮೈಸೂರು: ಸಂಸದ ಪ್ರತಾಪ ಸಿಂಹ ವಿರುದ್ಧ ಬಹುಭಾಷಾ ಕಲಾವಿದ, ನಟ ಪ್ರಕಾಶ್ ರೈ ಇಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆಯೇ ನಗರಕ್ಕೆ ಆಗಮಿಸಿದ್ದ ನಟ ರೈ, ಆಪ್ತರು, ವಕೀಲರು ಹಾಗೂ ಪ್ರಗತಿಪರ ಚಿಂತಕರ ಜತೆ ಸಮಾಲೋಚನೆ ನಡೆಸಿದ್ದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಪ್ರತಾಪ ಸಿಂಹ, ಟ್ವೀಟರ್, ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ್ದಲ್ಲದೆ ಟ್ರೋಲ್ ಗೂಂಡಾಗಿರಿ ನಡೆಸಿದ್ದಾರೆ ಎಂಬುದು ಪ್ರಕಾಶ್ ರೈ ಆರೋಪ. ಕೆಲ ದಿನಗಳ ಹಿಂದೆ […]

ಯೋಗಕ್ಕಿದೆ ಇಂದು ವಿಶ್ವವ್ಯಾಪಿ ಗೌರವ: ನಳಿನ್ ಕುಮಾರ್‍ ಕಟೀಲ್

Monday, February 26th, 2018
nalin-kumar

ಮಂಗಳೂರು: ಯೋಗಕ್ಕೆ ಇಂದು ಭಾರತವಲ್ಲದೇ ವಿಶ್ವದ ಬೇರೆ ಬೇರೆ ದೇಶಗಳಲ್ಲೂ ವಿಶೇಷ ಗೌರವ ಲಭಿಸಿದೆ ಎಂದು ಸಂಸದ ನಳಿನ್ ಕುಮಾರ್‍ ಕಟೀಲ್‍ ಹೇಳಿದರು. ಮಂಗಳೂರಿನಲ್ಲಿ ಕೆ.ನಾರಾಯಣ ಶೆಟ್ಟಿ ಸಂಸ್ಮರಣಾ ಸಮಿತಿ ಮತ್ತು ಪತಂಜಲಿ ಯೋಗಶಿಕ್ಷಣ ಪ್ರತಿಷ್ಠಾನ (ರಿ) ಅಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಫರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಲ್ಲೂ ಅತೀ ಹೆಚ್ಚು ಜನರು ತಮ್ಮ ದೈನಂದಿನ ಚಟುವಟಿಕೆಯಾಗಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುತ್ತಿರುವುದು ವಿಶೇಷ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಪರಂಪರೆಯನ್ನು […]

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಶತಸಿದ್ಧ: ಬಿ.ಎಸ್. ಯಡಿಯೂರಪ್ಪ ವಿಶ್ವಾಸ

Tuesday, February 20th, 2018
yedeyorappa

ಮಂಗಳೂರು: ಪರಿವರ್ತನಾ ಯಾತ್ರೆಯ ಮೂಲಕ‌ ರಾಜ್ಯದ‌ ಉದ್ದಗಲಕ್ಕೆ ಪ್ರವಾಸ ಮಾಡಿದ್ದೇನೆ. ಆಯಾ ಭಾಗದ ಜ್ವಲಂತ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಸ್ಥಳೀಯ ಜನರ ಆಶಯಗಳನ್ನು‌ ಆಲಿಸಿದ್ದೇನೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು. ಬಂಟ್ವಾಳದಲ್ಲಿ‌ ನವಶಕ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು. ವಿಧಾನಸಭಾ ಕ್ಷೇತ್ರದ ಬೂತ್ ಗಳನ್ನು ಬಲಪಡಿಸಬೇಕು. ಬೂತ್ ಮಟ್ಟದಲ್ಲಿ ಶೇ 60ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಗಬೇಕು.‌‌ ಕಾಂಗ್ರೆಸ್ ನವರು‌ ಎಷ್ಟೇ ಪ್ರಬಲರಾಗಿದ್ದರೂ ತಲೆ ಕೆಡಿಸಿಕೊಳ್ಳಬೇಡಿ. ಬೂತ್ ಗಳನ್ನು ಬಲಪಡಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಕರ್ನಾಟಕ‌‌ದಲ್ಲಿ ಮಾತ್ರ ಅಧಿಕಾರದಲ್ಲಿದೆ.‌ ಮೂರುವರೆ ವರ್ಷದಲ್ಲಿ […]

ಪಕೋಡ ಮಾರಿ ಜೀವನ ಕಟ್ಟಿಕೊಂಡ ರಾಜೇಶ್ ಬಾಳಿಗ

Thursday, February 8th, 2018
dakshina-kannada

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಪಕೋಡಾ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಮೋದಿ ಅವರ ಪಕೋಡಾ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆಗಳು ಕಾವು ಪಡೆದುಕೊಳ್ಳುತ್ತಿದೆ. ಇನ್ನೊಂದೆಡೆ ಮೋದಿ ಅವರ ಹೇಳಿಕೆ ವಿರೋಧಿಸಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೀದಿಗಿಳಿದು ಪಕೋಡಾ ಪ್ರತಿಭಟನೆ ನಡೆಸುತ್ತಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕ ದಲ್ಲಿ ಮೋದಿ ಅವರ ಪಕೋಡಾ ಹೇಳಿಕೆ ರಾಜಕೀಯ ಮುಖಂಡರ ವಾಗ್ವಾದಕ್ಕೆ ವೇದಿಕೆ ಯಾಗುತ್ತಿದೆ. ರಾಜಕೀಯ ಪಕ್ಷಗಳ ಈ ಪಕೋಡಾ ಜಟಾಪಟಿ, ಪಕೋಡಾ ಮಾರಾಟಗಾರರನ್ನು ಕೆರಳಿಸಿದೆ. […]

ಪ್ರಶ್ನೆಗಳಿಗೆ ಉತ್ತರಿಸಿ, ಆರೋಪಗಳು ಬೇಡ: ಪ್ರಧಾನಿಗೆ ರಾಹುಲ್ ತಿರುಗೇಟು

Wednesday, February 7th, 2018
rahul-gandhi

ನವದೆಹಲಿ: “ಪ್ರಶ್ನೆಗಳಿಗೆ ಉತ್ತರ ನೀಡಿ. ನಿಮ್ಮ ಆರೋಪಗಳು ಬೇಕಾಗಿಲ್ಲ,” ಎಂದು ಲೋಕಸಭೆಯಲ್ಲಿ ದೀರ್ಘ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಫೆಲ್ ಡೀಲ್, ರೈತರು ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ರಾಹುಲ್ ಆಗ್ರಹಿಸಿದರು. ರಾಹುಲ್ ಗಂಭೀರ ಆರೋಪ “ನಾನು ವಿರೋಧ ಪಕ್ಷದ ನಾಯಕ ಅಲ್ಲ, ಪ್ರಧಾನಿ ಎಂಬುದನ್ನು ಅವರು ಮರೆತಂತೆ ಕಾಣಿಸುತ್ತಿದೆ,” ಎಂದು ವರದಿಗಾರರಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದರು. “ಪ್ರಧಾನಿಗೆ […]

ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕರು

Monday, February 5th, 2018
ramalinga-reddy

ಬೆಂಗಳೂರು : ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮೊದಲು ಅಪರಾಧ ಪ್ರಕರಣಗಳ ಸಭೆ ಮಾಡಲಿ ಆನಂತರ ಕರ್ನಾಟಕದ ವಿರುದ್ಧ ಮಾತನಾಡಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಅಪರಾಧಗಳ ರಾಜ್ಯ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಅವರು 13 ವರ್ಷ ಗುಜರಾತ್‍ನಲ್ಲಿ ಮುಖ್ಯಮಂತ್ರಿಯಾಗಿದ್ದರು. ಗೋಧ್ರಾ ದುರಂತದಲ್ಲಿ ಕರಸೇವಕರು ಸುಟ್ಟು ಕರಕಲಾದರು. ಆಗ ಮೋದಿ ಅವರಿಗೆ ಜವಾಬ್ದಾರಿ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಗುಜರಾತ್‍ನಲ್ಲಿ […]

ರಾಜ್ಯದಲ್ಲಿ ಮಾಫಿಯಾಗಳ ನಂಗಾನಾಚ್‌

Monday, February 5th, 2018
karnataka

ಬೆಂಗಳೂರು: ಕರ್ನಾಟಕದಲ್ಲಿ ಆಡಳಿತದಲ್ಲಿರುವುದು 10 ಪರ್ಸೆಂಟ್‌ ಕಮಿಷನ್‌ ಸರ್ಕಾರವಾಗಿದ್ದು ಇದರ ಪತನಕ್ಕೆ ಕೌಂಟ್‌ಡೌನ್‌ ಶುರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಎಲ್ಲಾ ದಿಕ್ಕುಗಳಿಂದಲೂ ವಾಗ್ಧಾಳಿ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ಎಲ್ಲವೂ ಕಮಿಷನ್‌ ಆಧಾರದ ಮೇಲೆಯೇ ನಡೆಯುತ್ತದೆ. 10 ಪರ್ಸೆಂಟ್‌ ಇಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಮತ್ತು ಆಗಲು […]