Blog Archive

ಆಳ್ವಾಸ್ ಬಿ.ಎಡ್ ಕಾಲೇಜಿನಲ್ಲಿ ಆರಂಭೋತ್ಸವ-ಪ್ರತಿಭಾ ಪ್ರದರ್ಶನ

Wednesday, May 2nd, 2018
talents-day

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೊದಲ ವರ್ಷದ ಬಿ.ಎಡ್. ಕೋರ್ಸ್‍ನ ಆರಂಭೋತ್ಸವ ಹಾಗೂವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹ ಆಡಳಿತಾಧಿಕಾರಿಅಭಿನಂದನ್ ಶೆಟ್ಟಿ ಸಮಾಜದಲ್ಲಿ ಶಿಕ್ಷಕರ ಪಾತ್ರ, ಗುಣ, ಅರ್ಹತೆಗಳು ಮತ್ತು ಪ್ರಸ್ತುತ ಸಮಾಜದಲ್ಲಿ ಶಿಕ್ಷಕರಿಗೆ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಶಂಕರ್ ಮೂರ್ತಿ ಹೆಚ್.ಕೆ ಶಿಕ್ಷಕರಿಗೆ ಎರಡು ವರ್ಷದ ತರಬೇತಿಯ ಅವಶ್ಯಕತೆ ಮತ್ತು ವೃತ್ತಿ ಸಾಮರ್ಥ್ಯಗಳ ಬಗ್ಗೆ ಮಾತನಾಡಿದರು. ಅಕ್ಷತಾ ಸ್ವಾಗತಿಸಿದರು. ಸುಪ್ರೀತಾ ವಂದಿಸಿದರು. ಕಾರ್ಯಕ್ರಮವನ್ನು […]

ರಾಜ್ಯಮಟ್ಟದ ಬಾಲ್‍ ಬ್ಯಾಡ್ಮಿಂಟನ್‌ ಟೂರ್ನಿ: ಆಳ್ವಾಸ್‍ಗೆ ಪ್ರಶಸ್ತಿ

Wednesday, April 4th, 2018
badmiton

ಮೂಡುಬಿದಿರೆ: ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಆಹ್ವಾನಿತ ಪುರುಷರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡುಬಿದಿರೆ ಆಳ್ವಾಸ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಹಾಸನ ಫ್ರೆಂಡ್ಸ್ ಹಾಗೂ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಹಯೋಗದೊಂದಿಗೆ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಬನಶಂಕರಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ನೇರ ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿತು. ಸೂಪರ್ ಲೀಗ್‍ನ ಉಳಿದ ಪಂದ್ಯಗಳಲ್ಲಿ ಆಳ್ವಾಸ್ ಆತಿಥೇಯ ಹಾಸನ ಫ್ರೆಂಡ್ಸ್ ಹಾಗೂ ಕೋಲಾರ ತಂಡಗಳನ್ನು ಸೋಲಿಸಿತು. ಆಳ್ವಾಸ್‍ನ ಕಿರಣ್ ಕುಮಾರ್ ಟೂರ್ನಿಯ […]

ಖೋ-ಖೋ.. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಪ್ರಶಸ್ತಿ

Wednesday, April 4th, 2018
alwas-college

ಮೂಡುಬಿದಿರೆ: ಗದಗದ ಎಸ್‍ಕೆಎಸ್‍ವಿಎಂಸಿಇಟಿ ಕಾಲೇಜಿನಲ್ಲಿ ಜರುಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ( ಬೆಂಗಳೂರು ಹೊರತುಪಡಿಸಿ) ಖೋ ಖೋ ಪಂದ್ಯಾಟದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಆಳ್ವಾಸ್‍ನಲ್ಲಿ “ಶಾಜ್ಬೂ ಚರೋಬಾ” ಹಬ್ಬ ಆಚರಣೆ

Monday, April 2nd, 2018
college

ಮಂಗಳೂರು: ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣ ಪರಿಹಾರ ಸೂಚಿಸುತ್ತದೆ. ಉತ್ತಮ ಶಿಕ್ಷಣ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಬುನಾದಿ ಎಂದು ಮಣಿಪುರದ ಶಿಕ್ಷಣ ಸಚಿವ ರಾಧೆಶ್ಯಾಮ್ ಅಭಿಪ್ರಾಯಪಟ್ಟರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಭಾನುವಾರ ಜರುಗಿದ “ಶಾಜ್ಬೂ ಚರೋಬಾ” ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು,ಶಿಕ್ಷಣಕ್ಕೂ, ಸಾಕ್ಷರತೆಗೂ ಅಗಾಧ ವ್ಯತ್ಯಾಸವಿದೆ. ಸಾಕ್ಷರತೆ ಶಿಕ್ಷಣದ ಒಂದು ಸಣ್ಣ ಭಾಗವಷ್ಟೆ. ವಿದ್ಯಾಭ್ಯಾಸ ನಿಶ್ಚಿತ ಗುರಿ ಹೊಂದಿರುವುದು ಅಗತ್ಯ” ಎಂದು ಕಿವಿಮಾತು ಹೇಳಿದರು. ಮಣಿಪುರ ಈಗಿನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. ಮೂಲಭೂತ […]

ಆಳ್ವಾಸ್ ತುಳು ರಂಗ್-ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

Saturday, March 31st, 2018
alwas-tulu

ಮೂಡುಬಿದಿರೆ: ಭಾಷೆ ನಾಶವಾಗುತ್ತದೆ ಎಂಬುದು ಭ್ರಮೆ. ಮನೆಯಲ್ಲಿ, ಒಡನಾಡಿಗಳಲ್ಲಿ ತುಳುವಿನಲ್ಲೇ ಮಾತನಾಡುವ ಮನೋಭಾವ ಬೆಳೆಸಬೇಕು. ತುಳುವಿನಲ್ಲಿ ಮಾತನಾಡಿದಾಗ ಮಾತ್ರ ನಮ್ಮಲ್ಲಿ ಆಪ್ತತೆ ಮೂಡುತ್ತದೆ. ಮನೆಯ ಹಿರಿಯರ ಅಂತರಂಗಕ್ಕೆ ಹತ್ತಿರವಾಗುತ್ತೇವೆ. ಬಳಸಿದರೆ ಭಾಷೆ ಉಳಿಯುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ನುಡಿದರು. ಮೂಡುಬಿದಿರೆ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಸ್ಪರ್ಧೆ ಮತ್ತು ಪ್ರದರ್ಶನ ಮೇಳ ಆಳ್ವಾಸ್ ತುಳು ರಂಗ್ 2018 ಅನ್ನು ಸೇರಿಗೆ ಭತ್ತ ತುಂಬಿಸುವ ಮೂಲಕ ಉದ್ಘಾಟಿಸಿ […]

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ವಾರ್ಡನ್ ಮತ್ತು ಸಿಬಂದಿಯಿಂದ ಹಲ್ಲೆ

Monday, March 19th, 2018
Assault

ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಸುಮಾರು 20ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಮೇಲೆ  ಹಾಸ್ಟೆಲ್‌ನಲ್ಲಿದ್ದ  ಕಾಲೇಜು ಸಿಬಂದಿ ಸೇರಿ ಯದ್ವಾತದ್ವಾ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಲೇಜಿನ ಪುಷ್ಪಗಿರಿ ಹಾಸ್ಟೆಲ್‌ನಲ್ಲಿ ಶನಿವಾರ  ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಿಬಂದಿ ಕೃತ್ಯ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಸೇರಿ ಹಾಸ್ಟೆಲ್‌ನಲ್ಲೇ ಸಂಭ್ರಮಾಚರಣೆ ನಡೆಸುತ್ತಿದ್ದರು. ಆದರೆ,‌ ಇದಕ್ಕೆ ವಾರ್ಡನ್ ಮತ್ತು ಸಿಬಂದಿ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ […]

ಪೆರಾಡಿಯಲ್ಲಿ ಆಳ್ವಾಸ್ ‘ಸೌಖ್ಯ’ ಕೇಂದ್ರ ಉದ್ಘಾಟನೆ

Thursday, March 15th, 2018
alwas-soukya

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆ, ಶಾರದಾಂಭ ಭಜನಾ ಮಂಡಳಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ `ಸೌಖ್ಯ.. ಸ್ವಾಸ್ಥ್ಯದೆಡೆಗೆ ನಮ್ಮ ನಡಿಗೆ’- ಆಳ್ವಾಸ್ ಆರೋಗ್ಯಕೇಂದ್ರ ಹಾಗು ಆಪ್ತ ಸಮಾಲೋಚನಾ ಕೇಂದ್ರದ ಉಧ್ಘಾಟನಾ ಸಮಾರಂಭವನ್ನು, ಪೆರಾಡಿಯ ಶಾರದಾಂಭ ಭಜನಾ ಮಂದಿರದಲ್ಲಿ ಭಾನುವಾರ ಆಯೋಜಿಸಲಾಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಇಂತಹಾ ಆಪ್ತ ಸಮಾಲೋಚನಾ ಕೇಂದ್ರ ಕಾರ್ಯಗತಗೊಳಿಸುತ್ತಿರುವುದು ಉತ್ತಮ ನಡೆ. ಗ್ರಾಮೀಣ ಪ್ರದೇಶದ ಜನರಿಗೆ ಇದು ಇದು ಪ್ರಯೋಜನಕಾರಿಯಾಗುತ್ತದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ […]

ಆಳ್ವಾಸ್ ಕ್ರಿಕೆಟ್ ತಂಡಕ್ಕೆ ಲೆಸ್ಲಿ ಡಿಸೋಜ ಮೆಮೊರಿಯಲ್ ಟ್ರೋಫಿ

Monday, March 12th, 2018
Alvas-Cricket-Winner

ಮೂಡುಬಿದಿರೆ: ಮ0ಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಇವರ ಜ0ಟಿ ಆಶ್ರಯದಲ್ಲಿ ಆಯೋಜಿಸಿರುವ 2017-18 ನೇ ಸಾಲಿನ ಪುರುಷರ ಉಡುಪಿ eóÉೂಮ್ ಅ0ತರ್ ಕಾಲೇಜು ಕ್ರಿಕೆಟ್ ಪ0ದ್ಯಾಟದಲ್ಲಿ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಗಳಿಸಿದೆ. ಎಸ್.ಎಮ್.ಎಸ್ ಕಾಲೇಜ್ ಬ್ರಹ್ಮಾವರ ದ್ವಿತೀಯ ಸ್ಥಾನವನ್ನು ಪಡೆದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಳ್ವಾಸ್ ತಂಡವು 50 ಒವೆರ್‍ಗಳಲ್ಲಿ 8 ವಿಕೆಟಗಳಲ್ಲಿ 287 ರನ್ನ್ ಗಳಿಸಿತು. ಆಳ್ವಾಸ್ ಪರ ಮನೋಜ್ ಎಮ್ 120, ಪವನ್ ಜೆ ಗೊಕಲೆ […]

ಆಳ್ವಾಸ್ ಸಂಸ್ಥೆಗೆ ಕ್ರೀಡಾಪೋಷಕ್, ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ

Thursday, March 8th, 2018
moodbidre

ಮೂಡುಬಿದಿರೆ: ಕರ್ನಾಟಕ ರಾಜ್ಯ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಸಾಧಕರಿಗೆ ಪುರಸ್ಕಾರ ಸಮಾರಂಭದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಕ್ರೀಡಾಪೋಪಕ ಪ್ರಶಸ್ತಿ ಲಭಿಸಿದ್ದು, ಸಂಸ್ಥೆಯ ಎರಡು ಕ್ರೀಡಾಪಟುಗಳು ಏಕಲವ್ಯ ಹಾಗೂ ಮೂರು ಕ್ರೀಡಾಪಟುಗಳು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾಗಿರುವುದು ನಮ್ಮ ಸಂಸ್ಥೆಯ ಹೆಮ್ಮೆ ಉಂಟುಮಾಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರರಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 1984ರಲ್ಲಿ ಏಕಲವ್ಯ ಕ್ರೀಡಾಸಂಸ್ಥೆಯನ್ನು ಸ್ಥಾಪಿಸಿ, ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ […]

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ: ಆಳ್ವಾಸ್‌ಗೆ 116 ರ‍್ಯಾಂಕ್ ಗಳು

Friday, March 2nd, 2018
rank-student

ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಇದರ 2017ನೆ ಸಾಲಿನ ರ‍್ಯಾಂಕ್ ಪಟ್ಟಿ ಬಿಡುಗಡೆಗೊಂಡಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳು ಒಟ್ಟು 116 ರ‍್ಯಾಂಕ್ ಪಡೆದುಕೊಂಡು ವಿಶಿಷ್ಟ ಸಾಧನೆಯನ್ನು ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಆಳ್ವಾಸ್ ಆಯುರ್ವೇದ ಪದವಿಯಲ್ಲಿ 52 ರ‍್ಯಾಂಕ್, ಆಳ್ವಾಸ್ ಹೋಮಿಯೋಪತಿ ಕಾಲೇಜಿಗೆ 39 ರ‍್ಯಾಂಕ್, ಆಳ್ವಾಸ್ ಆಯುರ್ವೇದ ಮೆಡಿಕಲ್ ಸ್ನಾತಕೋತ್ತರ ವಿಭಾಗಕ್ಕೆ 10 ರ‍್ಯಾಂಕ್, ಆಳ್ವಾಸ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿಗೆ […]