ಅಣ್ಣ ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯ

Tuesday, March 22nd, 2022
Thomas

ಕಾಸರಗೋಡು : ಅಣ್ಣ ತಮ್ಮಂದಿರ ಜಗಳ ಕೊಲೆಯಲ್ಲಿ ಅಂತ್ಯಗೊಂಡಗೊಂಡ ಘಟನೆ  ಪೆರ್ಲ ಸಮೀಪದ ಶೇಣಿ ಉಪ್ಪಳಿಗೆಯಲ್ಲಿ  ಮಾ.21ರ ಸೋಮವಾರ ರಾತ್ರಿ ನಡೆದಿದೆ. ಉಪ್ಪಳಿಗೆಯ ಥೋಮಸ್ ಡಿಸೋಜ ( 45) ಕೊಲೆಗೀಡಾದವರು. ಈತನ ಸಹೋದರ ರಾಜೇಶ್ ( 37) ಕೃತ್ಯ ನಡೆಸಿದ್ದಾನೆ. ರಾತ್ರಿ ಹತ್ತು ಗಂಟೆ ಸುಮಾರಿಗೆ ಇಬ್ಬರ ನಡುವಿನ ಜಗಳವನ್ನು ತಡೆಯಲು ಬಂದ ಥೋಮಸ್ ನ ಸಂಬಂಧಿಕ ವಿಲ್ಫ್ರೆಡ್ ಗೂ ಗಾಯಗಳಾಗಿವೆ. ಜಗಳ ವಿಕೋಪಕ್ಕೆ ತಿರುಗಿ ರಾಜೇಶ್ ನು ಥೋಮಸ್ ನನ್ನು ಇರಿದಿದ್ದು , ಬೊಬ್ಬೆ ಕೇಳಿ […]

ಪೆರ್ಲರ ‘ಅಮೃತ ಹಂಚುವ ಕೆಲಸ’ ಕೃತಿ ಬಿಡುಗಡೆ

Monday, September 21st, 2020
Perla

ಮಂಗಳೂರು :  ಸಾಹಿತಿ ಡಾ.ವಸಂತಕುಮಾರ್ ಪೆರ್ಲ ‘ಅಮೃತ ಹಂಚುವ ಕೆಲಸ’ ಚಿಂತನ ಮತ್ತು ಸಂಸ್ಕೃತಿ ಸಂಕಥನಗಳನ್ನೊಳಗೊಂಡ ಕೃತಿ ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಂಡಿತು. ಭೂಮಿಗೀತ ಸಾಹಿತ್ಯಿಕ-ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕೃತಿ ಬಿಡುಗಡೆಗೊಳಿಸಿ, ಸಾಹಿತ್ಯಾಸಕ್ತರು ಕೃತಿಗಳನ್ನು ಖರೀದಿಸಿ ಓದಿದಾಗ, ಲೇಖಕನಿಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಕೃತಿ ಪರಿಚಯ ಮಾಡಿದ ಡಾ.ವಸಂತಕುಮಾರ್ ಪೆರ್ಲ, ಇಂದಿನ ತಲೆಮಾರಿನಲ್ಲಿ ಮರೆಯಾಗುತ್ತಿರುವ ಭಾಷೆ, ಆಚರಣೆ ಮತ್ತು ಜೀವನ ಕ್ರಮಗಳ ಕುರಿತಾದ ಹಲವು […]

ಕಾಣಿಕೆ ಡಬ್ಬಿ ಪ್ರಕರಣ : ನೈಜ ಆರೋಪಿಗಳ ಪತ್ತೆಗಾಗಿ ವಿಶೇಷ ಪ್ರಾರ್ಥನೆ

Monday, May 16th, 2016
Temple Hundi

ಪೆರ್ಲ: ಪೆರ್ಲದಿಂದ ಬಜಕ್ಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ತೆರಳುವ ದಾರಿಯಲ್ಲಿರುವ ಕಾಣಿಕೆ ಡಬ್ಬಿ ಸಹಿತವಿರುವ ಶಿವಲಿಂಗಕ್ಕೆ ಕಿಡಿಗೇಡಿಗಳು ಹಸಿರು ಬಣ್ಣ ಬಳಿದಿರುವುದಲ್ಲದೆ ಅದು ಬಿಜೆಪಿ ಕಾರ್ಯಕರ್ತರು ಮಾಡಿದ ಕೃತ್ಯವೆಂದೂ, ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿರುವುದಾಗಿಯೂ ಅಂತರ್ಜಾಲದಲ್ಲಿ ಸುಳ್ಳು ಪ್ರಚಾರ ಹಬ್ಬಿಸಿದವರ ವಿರುಧ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನೈಜ ಆರೋಪಿಗಳ ಪತ್ತೆಗಾಗಿ ಆದಿತ್ಯವಾರ ವಿಶೇಷ ಪ್ರಾರ್ಥನೆ ನಡೆಯಿತು. ಈ ಆರೋಪ ಮತ್ತು ಕಿಡಿಗೇಡಿಗಳ ಕೃತ್ಯವನ್ನು ಜಾಗೃತ ಹಿಂದೂ ಬಾಂಧವರು ಪೆರ್ಲ ಘಟಕ ಖಂಡಿಸಿದೆ. ಪೆರ್ಲ ಪೇಟೆಯಲ್ಲಿ ಬಜಕೂಡ್ಲು ಶ್ರೀ ಮಹಾಲಿಂಶ್ವರ […]

ಬಹುಮುಖ ಪ್ರತಿಭಾನ್ವಿತ ಪೆರ್ಲದ ಸನ್ನಿಧಿ ಟಿ.ರೈಗೆ ಪ್ರಧಾನಿಯಿಂದ ಶುಭಾಶಯ ಪತ್ರ

Thursday, April 14th, 2016
Sannidi Rai

ಪೆರ್ಲ : ಲಲಿತ ಕಲೆ, ಸಾಹಿತ್ಯ, ಸಂಗೀತಗಳಲ್ಲಿ ಬಹುಮುಖ ಪ್ರತಿಭೆಯಾಗಿ ಬೆಳೆದು ಬರುತ್ತಿರುವ ಪೆರ್ಲದ ಸನ್ನಿಧಿ ಟಿ.ರೈ ಎಂಬ ಹನ್ನೊಂದರ ಹರೆಯದ ಪುಟಾಣಿಗೆ ಭಾರತದ ಶ್ರೇಷ್ಠ ಪ್ರಧಾನಿಗಳಲ್ಲಿ ಒರ್ವರಾದ ನರೇಂದ್ರ ಮೋದಿ ನೇರಾ ಶುಭಾಶಯಪತ್ರ ಕಳುಹಿಸುವ ಮೂಲಕ ತನ್ನ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಎಳೆಯ ಪ್ರತಿಭೆಗಳತ್ತಲೂ ತನ್ನ ಪ್ರೀತಿ,ಕಾಳಜಿಯನ್ನು ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ. ಎಣ್ಮಕಜೆ ಗ್ರಾ.ಪಂ.ನ ಹಳ್ಳಿ ಪ್ರದೇಶವಾದ ಪೆರ್ಲಕ್ಕೂ ಪ್ರಧಾನ ಮಂತ್ರಿ ಕಾರ್ಯಲಯದ ಡೆಲ್ಲಿಗೂ ಪತ್ರ ಮುಖೇನ ಅವಿನಭಾವ ಸಂಬಂಧವೇರ್ಪಡಿಸುವಲ್ಲಿ ಬದಿಯಡ್ಕ ಚಿನ್ಮಯ ಶಾಲೆಯ ೬ನೇ […]

ಧರ್ಮಸ್ಥಳದಲ್ಲಿ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ

Friday, August 14th, 2015
Rud Shed

ಉಜಿರೆ : ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿಯಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್‌ಸೆಟ್ ಸಂಸ್ಥೆಗಳ) ಸೇವೆ ಮತ್ತು ಸಾಧನೆ ಶ್ಲಾಘನೀಯವಾಗಿದೆ ಎಂದು ಕೆನರಾ ಬ್ಯಾಂಕ್‌ನ ಆಡಳಿತ ನಿರ್ದೇಶಕ ಪಿ.ಎಸ್. ರಾವತ್ ಹೇಳಿದರು. ಧರ್ಮಸ್ಥಳದಲ್ಲ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ಗುರುವಾರ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. […]