ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ

Monday, December 2nd, 2019
Kudupu shashti

ಮಂಗಳೂರು :  ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಹಾಗೂ  ಬ್ರಹ್ಮರಥೋತ್ಸವವು  ಸೋಮವಾರ ವಿಜೃಂಭಣೆಯಿಂದ ನೆರವೇರಿತು. ದೇವರ ಬಲಿ ಉತ್ಸವ ನಡೆದ ಬಳಿಕ ರಥೋತ್ಸವ, ನಾಗಬನದಲ್ಲಿ ತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕಗಳು ನಡೆದವು. ಚಂಪಾಷಷ್ಠಿಯಂದು ಹಗಲು ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅನಂತಪದ್ಮನಾಭ, ನಾಗದೇವರು ಹಾಗೂ ಸುಬ್ರಹ್ಮಣ್ಯ ದೇವರು ಮೂವರು ಕೂಡಾ ಒಟ್ಟಾಗಿ ನೆಲೆಸಿರುವ ಅಪರೂಪದ ಕ್ಷೇತ್ರ ಇದಾಗಿದೆ. ದೇವಳ ದಕ್ಷಿಣಕ್ಕೆ ಪವಿತ್ರ ಭದ್ರಾ ಸರಸ್ವತಿ ಕೆರೆ. ಪೂರ್ವಭಾಗದಲ್ಲಿ 500ಕ್ಕೂ ಹೆಚ್ಚಿನ ನಾಗಶಿಲೆಗಳಿರುವ ನಾಗಬನವಿದೆ. ಕರಾವಳಿಯ […]

ದೇವರಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಪ್ರತಿಫಲ ಸಿಗುತ್ತದೆ : ವೀರಪ್ಪ ಮೊಯಿಲಿ

Friday, February 23rd, 2018
kudupu

ಮಂಗಳೂರು: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಳೆದ ಐದು ವರ್ಷಗಳಿಂದ ಪರಿಶ್ರಮದಿಂದ ನಡೆಯುತ್ತಾ ಬಂದಿದೆ. ದ.ಕ. ಉಡುಪಿಯಲ್ಲಿರುವ ಬಹಳಷ್ಟು ಹಳೇ ದೇವಸ್ಥಾನಗಳು ಪುನರುತ್ಥಾನವಾಗುತ್ತಿದೆ. ಕುಡುಪು ದೇವಸ್ಥಾನದಲ್ಲಿ ಉತ್ತಮ ಮನಸ್ಸಿನಿಂದ ಬಂದು ಪ್ರಾರ್ಥನೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಮನುಷ್ಯನಲ್ಲಿ ಶ್ರದ್ಧೆ, ಭಕ್ತಿ , ವಿಶ್ವಾಸ ಮುಖ್ಯ. ದೈಹಿಕ ಶುದ್ಧಿ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಶೂನ್ಯತೆಯಲ್ಲಿರುವ ಮನಸು ತುಂಬುತ್ತವೆ. ಇದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ದೇವಸ್ಥಾನಕ್ಕೆ ಉತ್ತಮ ಸಂಸ್ಕೃತಿ ಇದೆ. ಇದನ್ನು ಉತ್ತಮ […]

ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಉತ್ಸವ

Wednesday, December 7th, 2016
car-festival-in-kudupu

ಕುಡುಪು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರಗಳಲ್ಲಿ ಒಂದಾಗಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಸಹಿತ ನಗರದ ಆಸುಪಾಸಿನ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಷಷ್ಠಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಪ್ಪಿನಮೊಗರು ಕಡೆಕಾರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಮೂಡಬಿದಿರೆ ಸಮೀಪದ ಕಡಂದಲೆ ಸುಬ್ರಹ್ಮಣ್ಯ ದೇವಸ್ಥಾನ, ಹಳೆಯಂಗಡಿ ಸಮೀಪದ ತೋಕೂರು ಸುಬ್ರಹ್ಮಣ್ಯ ದೇವಸ್ಥಾನ, ಕಿಲ್ಪಾಡಿ ಕುಮಾರಮಂಗಲ ದೇವಸ್ಥಾನ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಷಷ್ಠಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರಗಿದವು. ಕುಡುಪು ದೇವಸ್ಥಾನದಲ್ಲಿ ಷಷ್ಠಿ ಬ್ರಹ್ಮರಥೋತ್ಸವ ಸೋಮವಾರ […]

ಕರಾವಳಿ ಜಿಲ್ಲೆಯಾದ್ಯಂತ ಭಕ್ತಾದಿಗಳಿಂದ ಸಂಭ್ರಮೋಲ್ಲಾಸದ ನಾಗರಮಂಚಮಿ ಆಚರಣೆ

Monday, August 12th, 2013
Nagara panchami Kudupu Temple

ಮಂಗಳೂರು : ಸನಾತನ ಸಂಸ್ಕೃತಿಯಂತೆ ನಾಗರಮಂಚಮಿ ಹಬ್ಬವು ಅತ್ಯಂತ ಪ್ರಾಚೀನ ಹಾಗೂ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ನಾಗರಪಂಚಮಿಯು ಮನೆ ಮನೆಗಳಲ್ಲಿ, ಪ್ರಕೃತಿಯ ಮಡಿಲ ಬನಗಳಲ್ಲಿ, ದೇವಾಲಯಗಳಲ್ಲಿ ಆಚರಿಸುವ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ತಿಂಗಳಿನ ಉಜ್ವಲ ಪಕ್ಷದ ಐದನೆಯ ದಿನವು ನಾಗರಪಂಚಮಿಯ ದಿನವಾಗಿದೆ. ಈ ಹಬ್ಬವನ್ನು ನಾಡಿನ ಜನರು ಭಕ್ತಿಯಿಂದ ಆಚರಿಸುತ್ತಾರೆ. ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಜನರು ಸರ್ಪದೇವರಾದ ಶ್ರೀ ಸುಬ್ರಹ್ಮಣ್ಯನನ್ನು ಪೂಜಿಸುತ್ತಾರೆ. ನಾಗರಪಂಚಮಿಯ ದಿನದಂದು ಭಕ್ತಾಧಿಗಳಿಲ್ಲರೂ ಬೆಳಿಗ್ಗೆ ಎದ್ದು ನಾಗನಗುಡಿಗೆ ಹೋಗಿ ಸಿಯಾಳಭಿಷೇಕ […]