ಕೋವಿಡ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಶಿಕ್ಷಣದ ಜೊತೆಗೆ, 10 ಲಕ್ಷ ಹಣ

Saturday, May 29th, 2021
PMModi

ನವದೆಹಲಿ: ಮೋದಿ ಸರ್ಕಾರ ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎರಡನೇ ವರ್ಷ ಪೂರ್ಣಗೊಳಿಸುತ್ತಿರುವ ನಡುವೆ ಮೇ.29 ರಂದು ಮಹತ್ವದ ಘೋಷಣೆ ಪ್ರಕಟಿಸಿದೆ. ಮಕ್ಕಳು 18 ವರ್ಷದವರಾಗುತ್ತಿದ್ದಂತೆಯೇ 10 ಲಕ್ಷ ಹಣ ದೊರೆಯಲಿದ್ದು ಶಿಕ್ಷಣವೂ ದೊರೆಯಲಿದೆ. ಕೋವಿಡ್-19 ನಿಂದ ಅನಾಥರಾದ ಮಕ್ಕಳಿಗಾಗಿ ಯೋಜನೆ ರೂಪಿಸುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಕ್ಕಳಿಗಾಗಿ ಪಿಎಂ-ಕೇರ್ಸ್ ಯೋಜನೆಯಡಿ ನೆರವು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಯೋಜನೆಯ ಬಗ್ಗೆ ಪ್ರಧಾನಿಗಳ ಕಚೇರಿ […]

ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಮಾಸಿಕ ಮೂರುವರೆ ಸಾವಿರ ಸಹಾಯ ಧನ

Saturday, May 29th, 2021
CM

ಬೆಂಗಳೂರು  : ಮಹತ್ವದ ಸುದ್ದಿಗೋಷ್ಟಿ ನಡೆಸಿದ ಸಿಎಂ ಯಡಿಯೂರಪ್ಪ ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಮಾಸಿಕ ಮೂರುವರೆ ಸಾವಿರ ಸಹಾಯ ಧನ ನೀಡೋದಾಗಿ ಘೋಷಿಸಿದ್ದಾರೆ. ಶನಿವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಕೊರೊನಾ ಸೋಂಕಿನಿಂದ ತಂದೆ-ತಾಯಿ ಇಬ್ಬರೂ ಮೃತಪಟ್ಟ ಅನಾಥ ಮಕ್ಕಳಿಗೆ ಈ ಸಹಾಯ ಧನ ತಲುಪಲಿದೆ ಎಂದಿದ್ದಾರೆ. ಈ ಅನಾಥ ಮಕ್ಕಳನ್ನು ನೋಡಿಕೊಳ್ಳುವ ಸಂಬಂಧಿಕರು ಇರದಿದ್ದಲ್ಲಿ ನೋಂದಾಯಿತ ಪಾಲನಾ ಸಂಸ್ಥೆಗಳಿಗೆ ದಾಖಲಿಸಲಾಗುವುದು. ಹಾಗೂ ಈ ಸಹಾಯಧನ ಈ ಸಂಸ್ಥೆಗಳಿಗೆ ತಲುಪಲಿದೆ ಎಂದು […]