ಪಡೀಲ್ ಅಂಡರ್ ಪಾಸ್‌ ನ ಗೋಡೆಗೆ ಬೈಕ್ ಢಿಕ್ಕಿ ಹೊಡೆದು ಓರ್ವ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

Thursday, September 14th, 2023
Bike-Accident

ಮಂಗಳೂರು : ನಗರದ ಪಡೀಲ್ ಅಂಡರ್ ಪಾಸ್‌ ನಲ್ಲಿ ಗುರುವಾರ ನಡೆದ ರಸ್ತೆ ಅಫಘಾತದಲ್ಲಿ ಯುವಕನೊಬ್ಬ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟ ಯುವಕನನ್ನು ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ ಭುವನ್ ರಾಜ್ (18) ಎಂದು ಗುರುತಿಸಲಾಗಿದೆ. ಗಾಡ್ವಿನ್ (19) ಮತ್ತು ಆಶಿತ್ 17) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್‌ನಲ್ಲಿ ಮೂರು ಮಂದಿ ಸವಾರಿ ಮಾಡಿದ್ದು, ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಿಸಿದ ಪರಿಣಾಮ ಅಂಡರ್‌ಪಾಸ್‌ನ ಗೋಡೆಗೆ ಬೈಕ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಉಡುಪಿ ಸಂತೆಕಟ್ಟೆ ಬಳಿ ಭೀಕರ ಅಫಘಾತ, ಎರಡು ಬಲಿ

Saturday, July 14th, 2018
Santekatte accident

ಉಡುಪಿ : ಹುಂಡೈ ವೆರ‍್ನಾ ಕಾರು ಮತ್ತು ಟಾಟಾ 407 ಟೆಂಪೋಗಳ ನಡುವೆ ಉಡುಪಿ ಸಂತೆಕಟ್ಟೆ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಫಘಾತದಲ್ಲಿ  ಕಾರು ಚಾಲಕ ಮತ್ತು ಟೆಂಪೋಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬ್ರಹ್ಮಾವರ ಕಡೆಯಿಂದ ಉಡುಪಿಗೆ ಬರುತ್ತಿದ್ದ ಟೆಂಪೋ KA 20 6958 ಮತ್ತು ಉಡುಪಿಯಿಂದ ಸಂತೆಕಟ್ಟೆ ಕಡೆ ವಿರುದ್ದ ದಿಕ್ಕಿನಿಂದ ಹೋಗುತ್ತಿದ್ದ KA 12 Z 1523 ನಂಬರಿನ  ಕಾರಿಗೆ ಟೆಂಪೋ ಅತೀ ವೇಗದಿಂದ ಡಿಕ್ಕಿ ಹೊಡೆದ ಪರಿಣಾಮ ಎರಡು ವಾಹನಗಳ ಚಾಲಕರು ಕೊನೆಯುಸಿರೆಳೆದಿದ್ದಾರೆ. ಕಾರು […]

ಪಂಪ್‌ವೆಲ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಫಘಾತ ಪಾದಾಚಾರಿ ಸಹಿತ ಇಬ್ಬರು ಧಾರುಣ ಸಾವು, ಒರ್ವ ಗ್ಂಬೀರ

Sunday, February 24th, 2013
ಪಂಪ್‌ವೆಲ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಫಘಾತ ಪಾದಾಚಾರಿ ಸಹಿತ ಇಬ್ಬರು ಧಾರುಣ ಸಾವು, ಒರ್ವ ಗ್ಂಬೀರ

ಮಂಗಳೂರು : ನಗರದ ಪಂಪ್‌ವೆಲ್‌ ಬಳಿ ಶನಿವಾರ ಸಂಜೆ ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಹಲವು ವಾಹನಗಳು ಜಖಂ ಘಟನೆ  ಸಂಭವಿಸಿದೆ. ಮಂಗಳೂರಿನಿಂದ ಹಾಸನಕ್ಕೆ ಪಂಪ್‌ವೆಲ್‌ ಮಾರ್ಗವಾಗಿ ಹೊರಟ್ಟಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ನ ಚಾಲಕ  ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಮುಂದಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಾಗ ಬೈಕ್ ಸವಾರ ಸ್ಥಳದಲ್ಲೆ ಮೃತ ಪಟ್ಟ, ನಿಯಂತ್ರಣ ಕಳೆದುಕೊಂಡ ಚಾಲಕ ಪಕ್ಕದಲ್ಲೇ ಇದ್ದ ಹಲವು ವಾಹನಗಳಿಗೆ ಹಾಗೂ ಪಾದಾಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಮೃತ […]