ಬಿಜೆಪಿ ಸರ್ಕಾರದ ಅವಧಿಯ ರೂ.75.00 ಕೋಟಿಗೂ ಅಧಿಕ ಮೊತ್ತದ ಬಾಕಿ ಅನುದಾನ ತಡೆದ ಕಾಂಗ್ರೆಸ್ : ವಿ ಸುನಿಲ್‌ ಕುಮಾರ್

Tuesday, August 13th, 2024
sunil-kumar

ಕಾರ್ಕಳ : ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯ 2022-23ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ನೀಡಿ ಬಿಡುಗಡೆ ಮಾಡಿದ್ದ ಸುಮಾರು ರೂ.75.00 ಕೋಟಿಗೂ ಅಧಿಕ ಮೊತ್ತದ ಅನುದಾನವನ್ನು ಈಗಿನ ಕಾಂಗ್ರೆಸ್‌ ಸರ್ಕಾರ ತಡೆ ಹಿಡಿದಿದ್ದು, ತಡೆ ಹಿಡಿದಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕಾರ್ಕಳ ಶಾಸಕರು ಹಾಗೂ ಮಾಜಿ ಸಚಿವರಾದ ವಿ ಸುನಿಲ್‌ ಕುಮಾರ್‌ರವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ. ಗ್ರಾಮೀಣಾಭಿವೃದ್ಧಿ […]

ಪದವು ಪೂರ್ವ ವಾರ್ಡಿನ ಅಭಿವೃದ್ಧಿ ಕಾಮಗಾರಿಗಳಿಗೆ 84.52 ಲಕ್ಷ : ಶಾಸಕ ವೇದವ್ಯಾಸ್

Friday, December 6th, 2019
vedhavyas

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೇಸ್ ಆಡಳಿತಾವಧಿ ಕೊನೆಗೊಂಡ ನಂತರ ಸಾರ್ವಜನಿಕರ ಬೇಡಿಕೆಯ ಮೇರೆಗೆ ವಿವಿಧ ಅನುದಾನಗಳನ್ನು ಜೋಡಿಸಿ 13 ಕಾಮಗಾರಿಗಳಿಗೆ 84.52 ಲಕ್ಷ ಅನುದಾನ ಬಿಡುಗಡೆಗೊಳಿಸಿರುವುದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ 5 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು, ಅದರಲ್ಲಿ ಕುಲಶೇಖರ ಚೌಕಿ ಬೈತುರ್ಲಿ ಬಳಿ ಕಾಲು ಸಂಕ ನಿರ್ಮಾಣವಾಗಲಿದೆ. ಮಳೆಹಾನಿ ಅನುದಾನದಡಿ 15 ಲಕ್ಷ ಬಿಡುಗಡೆಯಾಗಿದ್ದು, ಬೈತುರ್ಲಿ ಚೌಕಿ ಬಳಿ ಚರಂಡಿ ದುರಸ್ತಿ ಕಾಮಗಾರಿಗೆ […]

ಶಾಸಕ ವೇದವ್ಯಾಸ್ ಕಾಮತ್ ಸೂಚನೆಯ ಮೇರೆಗೆ 5.65 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ

Wednesday, October 16th, 2019
kamath

ಮಂಗಳೂರು : ನಗರದ ಯೆಯ್ಯಾಡಿ ಕೈಗಾರಿಕಾ ವಲಯದಲ್ಲಿ 5.65 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರ ಸೂಚನೆಯ ಮೇರೆಗೆ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಗುದ್ದಲಿಪೂಜೆ ನೆರವೇರಿಸಿದರು. ಗುದ್ದಲಿಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಸ್ಥಳೀಯರು, ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿ ಆಗಬೇಕಿರುವ ಅಭಿವೃದ್ಧಿಯ ಕುರಿತು ಶಾಸಕ ವೇದವ್ಯಾಸ್ ಕಾಮತ್ ಅವರ ಬಳಿ ಬೇಡಿಕೆಯಿಟ್ಟಿದ್ದೆವು. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೊಳಿಸಿದರೆ ಕೈಗಾರಿಕಾ ವಲಯದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. […]

ಮೀನು ಮಾರುಕಟ್ಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

Wednesday, October 11th, 2017
fish market

ಮಂಗಳೂರು:ಮೇಯರ್ ಕವಿತಾ ಸನಿಲ್  ನಗರದ ಸ್ಟೇಟ್ ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು  ಮಂಗಳವಾರ ಉದ್ಘಾಟಿಸಿದರು. ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿದ ತಾತ್ಕಾಲಿಕ ಮೀನು ಮಾರುಕಟ್ಟೆಯ ಮೇಲ್ಚಾವಣೆ ಕುಸಿದು ಮಳೆಗಾಲದಲ್ಲಿ ಧಾರಾಕಾರ ಮಳೆ ಮಾರುಕಟ್ಟೆಯ ಒಳಗೆ ಸುರಿಯುತ್ತಿದ್ದು, ಇದರಿಂದ ಮೀನು ಮಾರಾಟಗಾರಿಗೆ ಹಾಗೂ ಗ್ರಾಹಕರಿಗೆ ತುಂಬಾ ಸಮಸ್ಯೆಯಾಗಿತ್ತು. ನೆಲಕ್ಕೆ ಹಾಸಲಾದ ಕಲ್ಲ ಚಪ್ಪಡಿಗಳು ಅಲ್ಲಿಲ್ಲಿ ಕಿತ್ತು ಹೋಗಿ ಒಳಗಡೆ ರಾಡಿ ತುಂಬಿತ್ತು. ಈ ಕುರಿತು ಮೀನು ಮಾರಾಟಗಾರರು ಹಲವು ಬಾರಿ ಮಂಗಳೂರು […]

2.31 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀ ಜೆ.ಆರ್ ಲೋಬೊರವರಿಂದ ಚಾಲನೆ.

Thursday, October 23rd, 2014
Soutth Mla

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು 2.31ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವುದರ ಮೂಲಕ ಈ ವರ್ಷದ ದೀಪಾವಳಿ ಹಬ್ಬವನ್ನು ಆಚರಿಸಿದರು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು, ಕೊಡಿಯಾಲ್ ಬೈಲ್, ಶಕ್ತಿನಗರ, ಅತ್ತಾವರ, ಮರೋಳಿ, ಅಳಪೆ ಉತ್ತರ ಮುಂತಾದ ವಾರ್ಡ್‌ಗಳಲ್ಲಿ ಅಭಿವೃದ್ಧಿಯ ವಿವಿಧ ಕಾಮಗಾರಿಗಳನ್ನು ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಶಂಕುಸ್ಥಾಪನೆ ಮಾಡಿದರು. ಜಪ್ಪಿನಮೊಗರು ಕಲ್ಲತಡಮೆ ರಸ್ತೆ ಅಭಿವೃದ್ಧಿಗೆ 40 ಲಕ್ಷ, ಕೊಡಿಯಾಲ್ ಬೈಲ್ ವಿವೇಕ್ ನಗರದಲ್ಲಿ […]