ಅಯೋಧ್ಯೆ ತೀರ್ಪು : ಮುಸ್ಲಿಮರೊಂದಿಗೆ ಸಂಭ್ರಮ ಆಚರಿಸಿದ ಶಾಸಕ ಎಸ್.​​ಎ ರಾಮ್​ದಾಸ್

Wednesday, November 13th, 2019
Mysuru

ಮೈಸೂರು : ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಮುಸ್ಲಿಂ ಬಾಂಧವರೊಂದಿಗೆ ಸಂಭ್ರಮಾಚರಣೆ ಮಾಡಿದ್ದಾರೆ. ರಾಮದಾಸ್ ಕಚೇರಿ ಮುಂಭಾಗದಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆ ಮಾಡಿ ಮುಸ್ಲಿಂ ಬಾಂಧವರೊಂದಿಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಶಾಸಕ ರಾಮ್ದಾಸ್ ಸುಮಾರು 450 ವರ್ಷಗಳಷ್ಟು ಹಳೆಯ ವಿವಾದಕ್ಕೆ ಸುಪ್ರೀಂಕೋರ್ಟ್ನಿಂದ ಐತಿಹಾಸಿಕ ತೀರ್ಪು ಬಂದಿದೆ. ಭಾರತ ದೇಶದಲ್ಲಿ ಇತಿಹಾಸ ಬರೆಯುವಂತಹ ತೀರ್ಪನ್ನು ಕೋರ್ಟ್ ಕೊಟ್ಟಿದೆ. ಲಾಲ್ ಕೃಷ್ಣ ಅಡ್ವಾಣಿ ಅವರ ಹುಟ್ಟು […]

ಅಯೋಧ್ಯೆ ತೀರ್ಪು : ದೆಹಲಿಯಲ್ಲಿ ನಡೆದ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಪಾಲ್ಘೊಂಡ ಪೇಜಾವರ ಶ್ರೀ

Monday, November 11th, 2019
Sri-Pejawar

ಉಡುಪಿ : ಸುಪ್ರೀಂಕೋರ್ಟ್ ಶನಿವಾರದಂದು ಅಯೋಧ್ಯೆ ಕುರಿತ ತೀರ್ಪು ನೀಡಿದ ಹಿನ್ನೆಲೆ ಭಾನುವಾರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂದೂ ಸಂತರು, ಮುಸ್ಲಿಂ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಉಡುಪಿಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಪಾಲ್ಗೊಂಡರು. ಧಾನಮಂತ್ರಿಗಳ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಅಯೋಧ್ಯೆ ಕುರಿತು ತೀರ್ಪು ಬರುವುದಕ್ಕೂ ಮುನ್ನ ಹಾಗೂ ತೀರ್ಪು ಬಂದ ಬಳಿಯ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶದಿಂದ ಪ್ರಮುಖ ಸಂತರು, ವಿಶ್ವ ಹಿಂದೂ ಪರಿಷತ್ ಮುಖಂಡರ […]

ಅಯೋಧ್ಯೆ ತೀರ್ಪು : ಮಂಗಳೂರಿನಲ್ಲಿ ಸಾವಿರ ಪೊಲೀಸರ ನಿಯೋಜನೆ; ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ

Saturday, November 9th, 2019
Harsha

ಮಂಗಳೂರು : ಅಯೋಧ್ಯೆ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ನ.09ರಂದು ಪ್ರಕಟಿಸಲಿದ್ದು, ಮಂಗಳೂರಿನಲ್ಲಿ ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ. ನಗರದಾದ್ಯಂತ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಂತರ್ ರಾಜ್ಯ ಗಡಿಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ ಎಂದರು. ಬಂದೋಬಸ್ತ್‌ನಲ್ಲಿ ಇಬ್ಬರು ಡಿಸಿಪಿಗಳು, 15 ಇನ್‌ಸ್ಪೆಕ್ಟರ್‌ಗಳು, 40 ಪಿಎಸ್‌ಐಗಳು, 100 ಎಎಸ್‌ಐ, 5 ಕೆಎಸ್‌ಆರ್‌ಪಿ ತುಕಡಿ, ಒಂದು ಕೇಂದ್ರೀಯ ಅರೆಸೇನಾ ಪಡೆ, ಒಂದು […]

ಅಯೋಧ್ಯೆ ತೀರ್ಪು : ಪ್ರಕಟಣೆಗೂ ಮುನ್ನ ಪೊಲೀಸರು ಅಲರ್ಟ್

Friday, November 8th, 2019
mangaluru-alert

ಮಂಗಳೂರು : ಅಯೋಧ್ಯೆ ತೀರ್ಪು ಯಾರ ಪರ ಬಂದರೂ ಅದನ್ನು ಸ್ವಾಗತಿಸುತ್ತೇವೆ ಎಂದು ಹಿಂದೂ-ಮುಸ್ಲಿಂ ಮುಖಂಡರು ಪೊಲೀಸ್ ಇಲಾಖೆಗೆ ಮಾತು ಕೊಟ್ಟಿದ್ದಾರೆ. ಕೆಲ ದಿನಗಳಲ್ಲೇ ಅಯೋಧ್ಯೆ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದು ಶಾಂತಿ ಕದಡುವ ಪರಿಸ್ಥಿತಿ ಬರಬಾರದೆಂದು ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಕರೆದಿದ್ದ ಶಾಂತಿ ಸಭೆಯಲ್ಲಿ ವಿವಿಧ ಧರ್ಮಗಳ ಮುಖಂಡರುಗಳು, ಸಾಮಾಜಿಕ ಕಾರ್ಯಕರ್ತರು, ಸಮಾಜದ ಗಣ್ಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ಅವರು ತೀರ್ಪು ಏನೇ […]