ಹಂಪನಕಟ್ಟೆ ಬಳಿ ಅಶ್ವತ್ಥ ಮರದ ರೆಂಬೆ ತುಂಡಾಗಿ ಮಹಿಳೆಗೆ ಗಾಯ

Monday, January 28th, 2019
bus

ಮಂಗಳೂರು : ಹಂಪನಕಟ್ಟೆ ಐಡಿಯಲ್  ಐಸ್ ಕ್ರೀಮ್ ಬಳಿ ಇರುವ  ಅಶ್ವತ್ಥ ಮರದಿಂದ ಭಾರೀ ಗಾತ್ರದ ರೆಂಬೆ ಬಸ್ಸಿನ ಮೇಲೆ  ತುಂಡಾಗಿ ಬಿದ್ದ ಘಟನೆ ಸೋಮವಾರ ಮಂಗಳೂರಿನಲ್ಲಿ ನಡೆದಿದೆ. ನಗರದ ಜನನಿಬಿಡ ಹಂಪನಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು,  ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಪ್ರತಿದಿನ ನೂರಾರು ಮಂದಿ ಬಸ್ಸಿಗಾಗಿ ಕಾಯುವ ಜಾಗ, ನಗರದ ಜನನಿಬಿಡ ಹಂಪನಕಟ್ಟೆಯಲ್ಲಿ ಘಟನೆ ನಡೆದಿದ್ದು, ಅಲ್ಲೇ ಇದ್ದ ಅಶ್ವತ್ಥ ಮರದಿಂದ ಭಾರೀ ಗಾತ್ರದ ರೆಂಬೆ ಏಕಾಏಕಿ ಮುರಿದು ಬಿದ್ದಿದೆ. ಮಂಗಳೂರಿನಿಂದ […]

ಮಂಗಳಾದೇವಿ ದೇವಸ್ಥಾನದಲ್ಲಿ ಅಶ್ವತ್ಥ ಮರ ಉರುಳಿ ನಾಲ್ವರಿಗೆ ಗಾಯ

Friday, June 8th, 2018
Mangaladevi Temple

ಮಂಗಳೂರು; ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಸಂಜೆ ಪೂಜೆಯ ವೇಳೆಗೆ ದೇವಸ್ಥಾನದ ಎದುರಿಗೆ ಇದ್ದ ಅಶ್ವತ್ಥ ಮರ ಉರುಳಿಬಿದ್ದು ನಾಲ್ವರಿಗೆ ಗಾಯವಾದ ಘಟನೆ ನಡೆದಿದೆ. ದೇವಸ್ಥಾನದ ಮುಂಭಾಗದಲ್ಲಿರುವ ನಾಗನಕಟ್ಟೆಯ ಲ್ಲಿರುವ ಅಶ್ವಥ ಮರ ದೇವಸ್ಥಾನ ದ ಪ್ರವೇಶ ದ್ವಾರಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು ಓರ್ವನ ಸ್ಥಿತಿ ಗಂಭೀರವಾಗಿ ದೆ ಎಂದು ತಿಳಿದು ಬಂದಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಬಿದ್ದ ಮರ ತೆರವು ಕಾರ್ಯಚರಣೆ ಮಾಡುತ್ತಿದ್ದಾರೆ.