ಆಟೋ ಚಾಲಕನಿಂದ ಮಹಿಳೆಯ ಮಾನಭಂಗಕ್ಕೆ ಯತ್ನ

Wednesday, March 30th, 2022
Auto Rikshaw

ಪುತ್ತೂರು :  ತನ್ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯಮೇಲೆ ಆಟೋ ಚಾಲಕನೊಬ್ಬ ಮಾನಭಂಗಕ್ಕೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕುಪಿನೋಪಿನಡ್ಕ ನಿವಾಸಿ ಮಹಮ್ಮದ್ ಸಫ್ಘಾನ್ ಮಾನಭಂಗಕ್ಕೆ ಯತ್ನಿಸಿದ ಆಟೋ ಚಾಲಕ. ಮಹಿಳೆಯೊಬ್ಬರನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾನೆ. ದರ್ಬೆ ಹರ್ಷ ಇಲೆಕ್ಟ್ರಾನಿಕ್ಸ್ ಬಳಿ ತಲುಪುತ್ತಿದ್ದಂತೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು,  ಜೀವ ಬೆದರಿಕೆಯೊಡ್ಡಿದ್ದಾನೆ. ಈ ಘಟನೆ ಕುರಿತು ನೊಂದ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಟೋ ರಿಕ್ಷಾ – ಕಾರಿನ ನಡುವೆ ಅಪಘಾತ, ಆಟೋ ಚಾಲಕ ಸಾವು

Friday, August 27th, 2021
Manila

ಬಂಟ್ವಾಳ : ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿರುವ ಘಟನೆ ವಿಟ್ಲ ಪುಣಚ ಗ್ರಾಮದ ಮಾಣಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಇಲ್ಲಿನ ಪರಿಯಾಲ್ತಡ್ಕ ನಿವಾಸಿ ಅಶ್ರಫ್ ಅಪಘಾತದಲ್ಲಿ ಮೃತಪಟ್ಟ ರಿಕ್ಷಾ ಚಾಲಕ. ಗಂಭೀರ ಗಾಯಗೊಂಡಿದ್ದ ಅಶ್ರಫ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಎರಡು ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಾರು ರಸ್ತೆ […]

ವಿವಿ ಕಾಲೇಜು:  ಜಿಲ್ಲಾಧಿಕಾರಿಗಳಿಂದ ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ

Saturday, June 19th, 2021
Vaccination

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ ಕ್ರಾಸ್‌ ಘಟಕ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇವುಗಳ ಜಂಟಿ ಸಹಯೋಗದಲ್ಲಿ ಬಸ್‌ ಸಿಬ್ಬಂದಿ ಮತ್ತು ಆಟೋ ಚಾಲಕರಿಗಾಗಿ ಕೊವಿಡ್‌- 19 ಲಸಿಕಾ ಅಭಿಯಾನವನ್ನು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮತ್ತು ಬ್ಯಾಂಕ್‌ ಆಫ್‌ ಬರೋಡಾದ ಪ್ರಧಾನ ವ್ಯವಸ್ಥಾಪಕಿ ಮತ್ತು ವಲಯ ಮುಖ್ಯಸ್ಥೆ ಗಾಯತ್ರಿ ಆರ್‌ ಕಾರ್ಯಕ್ರಮ ಉದ್ಘಾಟಿಸಿದರು. ಗಣ್ಯರನ್ನು ಸ್ವಾಗತಿಸಿದ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿಯ […]

ಮದುವೆಯಾಗುವುದಾಗಿ ನಂಬಿಸಿ ಎದುರು ಮನೆ ಹುಡುಗಿಯನ್ನು ಗರ್ಭಿಣಿ ಮಾಡಿದ ಆಟೋ ಚಾಲಕ

Thursday, June 10th, 2021
Rape

ಮಂಡ್ಯ: ಆಟೋ ಚಾಲಕ ನೊಬ್ಬ  ಎದುರು ಮನೆಯ 15 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ  ಬಲಾತ್ಕಾರದಿಂದ ಗರ್ಭಿಣಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕೆಆರ್‍ಪೇಟೆಯ ಗ್ರಾಮದಲ್ಲಿ ನಡೆದಿದೆ. ಕೆಆರ್‍ಪೇಟೆಯ ಗ್ರಾಮವೊಂದರ ನಿವಾಸಿ ಲಕ್ಷ್ಮಣ ಎಂಬಾತನೇ ಬಾಲಕಿಯನ್ನು ಅತ್ಯಾಚಾರ ಮಾಡಿರುವ ಯುವಕ. ಲಕ್ಷ್ಮಣ ಆಟೋ ಚಾಲಕನಾಗಿದ್ದು, ಎದುರು ಮನೆಯ ಬಾಲಕಿಯನ್ನು ಪ್ರೇಮಿಸುವಂತೆ ಕೇಳಿಕೊಂಡಿದ್ದಾನೆ. ಹಲವು ದಿನಗಳ ಬಳಿಕ ಬಾಲಕಿ ಪ್ರೀತಿಸುವುದಾಗಿ ಒಪ್ಪಿಗೆ ಸೂಚಿಸುತ್ತಾಳೆ. ಇದಾದ ಬಳಿಕ ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ […]

ಯುವತಿಗೆ ಹಾಡಹಗಲೇ ನಡುರಸ್ತೆಯಲ್ಲಿ ತಲವಾರಿನಿಂದ ಇರಿದ ಆಟೋ ಚಾಲಕ

Tuesday, December 22nd, 2020
Asha

ಹುಬ್ಬಳ್ಳಿ: ಆಟೋರಿಕ್ಷಾ ಚಾಲಕ  ಹುಚ್ಚುಪ್ರೇಮಿಯೊಬ್ಬ ಯುವತಿಗೆ ಹಾಡಹಗಲೇ ನಡುರಸ್ತೆಯಲ್ಲಿ ತಲವಾರಿನಿಂದ ಮನಬಂದಂತೆ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ಬೆಳಗ್ಗೆ ಇಲ್ಲಿನ ದೇಶಪಾಂಡೆ ನಗರದಲ್ಲಿ ನಡೆದಿದೆ. ಕುಂದಗೋಳ ತಾಲೂಕ ರಾಮಾಪೂರ ಗ್ರಾಮದ ಆಟೋರಿಕ್ಷಾ ಚಾಲಕ ಇಸ್ಮಾಯಿಲ್ ಕೆ. ಕುಂಕುರ ಹಲ್ಲೆ ಮಾಡಿದ ಆರೋಪಿ. ಇಲ್ಲಿನ ದುರ್ಗದ ಬಯಲಿನ ಜುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆಶಾ ಡಿ. ಅಗಸರ ಹಲ್ಲೆಗೊಳಗಾಗಿದ್ದಾಳೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೋನಾ ಸೋಂಕು ತಗುಲಿದ್ದ ಆಟೋ ಚಾಲಕ ಹಲಸಿನ ಹಣ್ಣು ಬಿದ್ದು ಸಾವು

Friday, June 26th, 2020
Robin

ಕಾಸರಗೋಡು : ಹಲಸಿನಕಾಯಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಟೋ ಚಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಕೋಡೋ ಬೇಳೂರಿನಲ್ಲಿ ನಡೆದಿದೆ. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ವ್ಯಕ್ತಿಯನ್ನು ರೋಬಿನ್ 44,  ಎಂದು ಗುರುತಿಸಲಾಗಿದೆ . ಮೇ 19ರಂದು ಮನೆ ಹಿತ್ತಲಿನಲ್ಲಿ ಹಲಸಿನ ಕಾಯಿ ಕೊಯ್ಯುತ್ತಿದ್ದಾಗ ಹಲಸಿನಕಾಯಿಯೊಂದು ರೋಬಿನ್ ದೇಹದ ಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಬೆನ್ನುಮೂಳೆ ಮುರಿದಿತ್ತು. ಗಂಭೀರ ಗಾಯಗೊಂಡಿದ್ದ ರೋಬಿನ್ ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಕ್ರಿಯೆ ನಡೆಸುವ ಮೊದಲು […]

ಮಂಗಳೂರು : ಶಂಕಿತ ಎಚ್1 ಎನ್1 ಜ್ವರಕ್ಕೆ ಕಡಬದ ಆಟೋ ಚಾಲಕ ಮೃತ್ಯು

Wednesday, March 4th, 2020
kushalappa

ಮಂಗಳೂರು : ಕಡಬದ ಆಟೋ ಚಾಲಕ ಕಲ್ಪುರೆ ನಿವಾಸಿ ಕುಶಾಲಪ್ಪ ಗೌಡ ಶಂಕಿತ ಎಚ್1 ಎನ್1 ಜ್ವರದಿಂದಾಗಿ, ನಿನ್ನೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ಖಾಸಗಿ ಬಸ್‌ ಚಾಲಕರಾಗಿದ್ದ ಇವರು ಕೆಲ ಸಮಯದಿಂದ ಕಡಬದಲ್ಲಿ ಆಟೋ ಚಾಲಕರಾಗಿಯೂ ದುಡಿಯುತ್ತಿದ್ದರು. 20 ದಿನಗಳಿಂದ ಜ್ವರ ಪೀಡಿತರಾಗಿದ್ದ ಅವರು ಮೊದಲು ಕಡಬದಲ್ಲಿ ನಂತರ ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ವಾರದ ಹಿಂದೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಬಳಿಕ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ […]

ಭಟ್ಕಳ : ಆಟೋ ರಿಕ್ಷಾದಲ್ಲಿ ಸಿಕ್ಕ ಒಡವೆ ಬ್ಯಾಗ್ ಹಿಂತಿರುಗಿಸಿದ ಆಟೋ ಚಾಲಕ

Tuesday, October 15th, 2019
auto-riksha

ಭಟ್ಕಳ : ತನ್ನ ಆಟೋ ರಿಕ್ಷಾದಲ್ಲಿ ಸಿಕ್ಕ ಮಹಿಳೆಯೋರ್ವರ ಪರ್ಸನ್ನು ಠಾಣೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನನ್ನು ಭಟ್ಕಳ ಉಪ ವಿಭಾಗದ ಎಎಸ್‍ಪಿ ನಿಖಿಲ ಬಿ. ಸನ್ಮಾನಿಸಿ ಚಾಲಕನ‌ ಕಾರ್ಯವನ್ನು ಶ್ಲಾಘಿಸಿದರು. ಇತ್ತೀಚಿನ ದಿನಗಳಲ್ಲಿ ಆಟೋ ಚಾಲಕರೆಂದರೆ ಮೂಗು ಮುರಿಯುವ ಸಾರ್ವಜನಿಕರಿಗೆ ಇಲ್ಲೊಬ್ಬ ಆಟೋ ಚಾಲಕ ಸಾರ್ವಜನಿಕರಿಂದಲೇ ಶಹಬ್ಬಾಸ್ಗಿರಿ ಪಡೆದುಕೊಂಡಿದ್ದಾನೆ. ಆಟೋ ಚಾಲಕ ಅಣ್ಣಪ್ಪ ಗೊಂಡ ಎಂಬಾತ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಲ್ಲಿನ ನಿಶಾತ ಆಸ್ಪತ್ರೆಯಿಂದ ಇಬ್ಬರು ಮಹಿಳೆಯರು, ಒಬ್ಬ ಪುರುಷನನ್ನು ಇಲ್ಲಿನ […]

ಬೆಳ್ತಂಗಡಿ : ನೆರೆ ಸಂತ್ರಸ್ತರಿಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದ ಆಟೋ ಚಾಲಕ

Tuesday, August 13th, 2019
Auto driver

ಬೆಳ್ತಂಗಡಿ  : ಆಟೋ ಚಾಲಕರೊಬ್ಬರು ನೆರೆ ಸಂತ್ರಸ್ತರಿಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಬೆಳ್ತಂಗಡಿಯ ಆಟೋ ಚಾಲಕ ನೆರೆ ಸಂತ್ರಸ್ತರಿಗೆ ಬರೋಬ್ಬರಿ 1 ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹೊನ್ನಪ್ಪ ಗೌಡ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ನೆರ ಸಂತ್ರಸ್ತರಿಗೆ ನೆರವಾಗಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ಮನವಿಗೆ ಸ್ಪಂದಿಸಿದ ಆಟೋ ಚಾಲಕ ಹೊನಪ್ಪ ಗೌಡ ಅವರು […]