ಆಟೋ ರಿಕ್ಷಾ – ಕಾರಿನ ನಡುವೆ ಅಪಘಾತ, ಆಟೋ ಚಾಲಕ ಸಾವು

Friday, August 27th, 2021
Manila

ಬಂಟ್ವಾಳ : ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿರುವ ಘಟನೆ ವಿಟ್ಲ ಪುಣಚ ಗ್ರಾಮದ ಮಾಣಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಇಲ್ಲಿನ ಪರಿಯಾಲ್ತಡ್ಕ ನಿವಾಸಿ ಅಶ್ರಫ್ ಅಪಘಾತದಲ್ಲಿ ಮೃತಪಟ್ಟ ರಿಕ್ಷಾ ಚಾಲಕ. ಗಂಭೀರ ಗಾಯಗೊಂಡಿದ್ದ ಅಶ್ರಫ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಎರಡು ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಾರು ರಸ್ತೆ […]

ಆಟೋ ರಿಕ್ಷಾದಲ್ಲಿ ಬಂದಿದ್ದ ಆ ವ್ಯಕ್ತಿ ಟಿಕೆಟ್ ಕೌಂಟರ್ ಬಳಿ ಬಾಂಬ್ ಇಟ್ಟು ವಿಮಾನದಲ್ಲಿ ಪರಾರಿಯಾದನೇ !

Monday, January 20th, 2020
Airport Bomb

ಮಂಗಳೂರು : ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಬಾಂಬ್ ಇದ್ದ ಲ್ಯಾಪ್‍ಟಾಪ್ ಬ್ಯಾಗ್ ಇರಿಸಿ ಬೆಳಿಗ್ಗೆ 9ರ ಸುಮಾರಿಗೆ ನಾಪತ್ತೆಯಾಗಿದ್ದ. ಅನಾಥವಾಗಿ ಬಿದ್ದಿದ್ದ ಆ ಲ್ಯಾಪ್‍ಟಾಪ್ ಬ್ಯಾಗ್ ಗಮನಿಸಿದ ಪ್ರಯಾಣಿಕರು ಏರ್ ಪೋರ್ಟ್ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದರು.  ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ಮಾಹಿತಿ ಮೇರೆಗೆ ಬೆಳಗ್ಗೆ 11.00 ಗೆ ಸ್ಥಳಕ್ಕೆ ಆಗಮಿಸಿದ  ಬಾಂಬ್ ಸ್ಕ್ವಾಡ್  ಬ್ಯಾಗ್ ಸ್ಕ್ಯಾನ್ ಮಾಡಿ ಸಜೀವ ಬಾಂಬ್ ಎಂದು ಗುರುತಿಸಿತ್ತು. ಬಳಿಕ ಬೆಳಗ್ಗೆ 11.10 ಕ್ಕೆ ಬಾಂಬ್ ಇದ್ದ ಬ್ಯಾಗನ್ನು ಪ್ರತಿರೋಧಕ ವಾಹನಕ್ಕೆ  ಇರಿಸಿ ಕೆಂಜಾರು ಗದ್ದೆ ಗೆ ಕೊಂಡೊಯ್ಯಲಾಯಿತು. ಬಾಂಬ್ ನಿಷ್ಕ್ರಿಯ ಪಡೆ […]

ವಿಟ್ಲ : ಕೆಟ್ಟು ನಿಂತಿದ್ದ ಲಾರಿ ಇದ್ದಕ್ಕಿದಂತೆ ಚಲಿಸಿ ರಿಕ್ಷಾಕ್ಕೆ ಡಿಕ್ಕಿ; ಅಪಾಯದಿಂದ ಪಾರಾದ ಮೆಕ್ಯಾನಿಕ್

Thursday, January 9th, 2020
lorry

ವಿಟ್ಲ : ಕೆಟ್ಟು ನಿಂತಿದ್ದ ಲಾರಿ ಇದ್ದಕ್ಕಿದ್ದ ಹಾಗೇ ಚಲಿಸಿ ಎದುರಿಗೆ ನಿಂತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಸಮೀಪದ ಸೂರಿಕುಮೇರಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಆಟೋ ರಿಕ್ಷಾದಲ್ಲಿ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಲಿಲ್ಲ. ಅಲ್ಲದೆ, ಲಾರಿ ರಿಪೇರಿ ಮಾಡುತ್ತಿದ್ದ ಮೆಕ್ಯಾನಿಕ್ ಸಹ ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ ಲಾರಿ ಕೆಟ್ಟು ಹೋದ ಕಾರಣ ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಲಾಗಿತ್ತು. ಇಂದು ಬೆಳಿಗ್ಗೆ ಆಟೋ ರಿಕ್ಷಾದಲ್ಲಿ ಬಂದ ಮೆಕ್ಯಾನಿಕ್ ಲಾರಿ ಮುಂಭಾಗದಲ್ಲಿ […]

ಕುಂಭಾಸಿ : ಆಟೋ ರಿಕ್ಷಾ ಪಲ್ಟಿ; ಮಹಿಳೆಗೆ ಗಾಯ, ಮಾನವೀಯತೆ ಮೆರೆದ ಸಚಿವ ಬಿ ಶ್ರೀರಾಮುಲು

Saturday, September 28th, 2019
awto-riksha

ತೆಕ್ಕಟ್ಟೆ : ಕುಂಭಾಶಿಯಲ್ಲಿ ಅಪಘಾತಕ್ಕೀಡಾದ ಮಹಿಳೆಯನ್ನು ಸ್ವತ ಆರೋಗ್ಯ ಸಚಿವ ಶ್ರೀರಾಮುಲು ಅವರು ತನ್ನ ವಾಹನದಲ್ಲಿ ಕರೆದುಕೊಂಡು ಆಸ್ಪತ್ರೆ ಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕುಂಭಾಶಿ ರಸ್ತೆಯಲ್ಲಿ ಬೈಕ್ ಸವಾರರೋರ್ವರು ಲಾರಿ ಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದರು. ಇದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಪಲ್ಟಿಯಾಯಿತು. ಕುಂದಾಪುರ ಕಡೆಗೆ ಕಾರ್ಯಕ್ರಮಕ್ಕೆಂದು ಆಗಮಿಸುತ್ತಿದ್ದ ಅರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಮಹಿಳೆಯನ್ನು ಕಂಡು ತಮ್ಮ ಕಾರಿನಲ್ಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು […]

ಶ್ರೀಕರ ಪ್ರಭು ಅವರಿಗೆ ಗೆಲ್ಲುವ ಸಾಧ್ಯತೆಯನ್ನುಇಮ್ಮಡಿಗೊಳಿಸಿದ ಮತದಾರ

Friday, May 4th, 2018
Srikara Prabhu

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭುರವರು ಇಂದು ನಗರದ ಲೇಡಿ ಹಿಲ್, ಉರ್ವಾ ಮಾರ್ಕೆಟ್, ಉರ್ವಾ ಸ್ಟೋರ್, ಕೊಟ್ಟಾರ ಪರಿಸರದಲ್ಲಿ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ನಾಗರೀಕ ಬಂದುಗಳಲ್ಲಿ ಪಾದಯಾತ್ರೆಯ ಮೂಲಕ ತಮ್ಮ ಚುನಾವಣಾ ಚಿಹ್ನೆ ‘ಆಟೋ ರಿಕ್ಷಾ’ ಮಾದರಿ ಪ್ರದರ್ಶಿಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮತದಾರ ಬಾಂದವರಿಂದ ಶ್ರೀಕರ ಪ್ರಭು ಅವರ ಬಗ್ಗೆ ಬಾರಿ ಒಲವು ವ್ಯಕ್ತವಾಗಿದ್ದು, ಇದು ಅವರು ಮುಂಬರುವ ಚುನಾವಣೆಯನ್ನು ಗೆಲ್ಲುವ ಸಾಧ್ಯತೆಯನ್ನು ಇಮ್ಮಡಿಗೊಳಿಸಿದೆ. ಈ […]

ಶ್ರೀಕರ್ ಪ್ರಭು ಅವರಿಗೆ “ಆಟೋ ರಿಕ್ಷಾ” ಚಿಹ್ನೆ

Monday, April 30th, 2018
srikara prabhu

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ಚುನಾವಣಾ ಚಿಹ್ನೆಯಾಗಿ “ಆಟೋ ರಿಕ್ಷಾ” ಆರಿಸಿದ್ದು, ಇದೊಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಚಿಹ್ನೆಯಾಗಿದ್ದು ಈ ಮೂಲಕ ಶ್ರೀಕರ್ ಪ್ರಭು ಅವರು ಭಾರಿ ಮತಗಳ ಅಂತರಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದರೆ. ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಯುವ ಮುಂದಾಳು, ಸಾಮಾಜಿಕ ನಾಯಕ ಆರ್ ಶ್ರೀಕರ್ ಪ್ರಭು ಅವರು ಚುನಾವಣಾ ಚಿಹ್ನೆಯಾಗಿ “ಆಟೋ ರಿಕ್ಷಾ” […]

ಆಟೋ ರಿಕ್ಷಾ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಹೋದರರಿಬ್ಬರ ಸಾವು

Tuesday, October 4th, 2016
accident

ಕಾರ್ಕಳ: ಆಟೋ ರಿಕ್ಷಾ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಹೋದರರಿಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹೆಬ್ರಿಯಲ್ಲಿ ನಡೆದಿದೆ. ಶಿವಪುರ ಕಾಚಿಲ ನಿವಾಸಿ, ರಿಕ್ಷಾ ಚಾಲಕ ಗುರುಪ್ರಸಾದ್ ಹಾಗೂ ವಸಂತ್ ದುರ್ಘಟನೆಯಲ್ಲಿ ಮೃತಪಟ್ಟ ಸಹೋದರರು. ಶಿವಪುರದಿಂದ ಹೆಬ್ರಿ ಕಡೆಗೆ ತೆರಳುತ್ತಿದ್ದ ರಿಕ್ಷಾ, ಮಿನಿ ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಗುರುಪ್ರಸಾದ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಗುರುಪ್ರಸಾದ್ ಅಣ್ಣ ವಸಂತ್‌ಗೂ ಗಂಭೀರ […]

ತಲೆಮರೆಸಿಕೊಂಡ ಗಾಂಜಾ ಪ್ರಕರಣದ ಆರೋಪಿ ಬಂಧನ

Saturday, July 30th, 2016
Ambachu

ಮಂಜೇಶ್ವರ: ಪೊಲೀಸರ ಕಾರ್ಯಾಚರಣೆಯ ಸಂದಭದಲ್ಲಿ ಗಾಂಜಾ ಹಾಗೂ ಆಟೋ ರಿಕ್ಷಾ ಉಪೇಕ್ಷಿಸಿ ಪರಾರಿಯಾಗಿದ್ದ ಆರೋಪಿ ಮಳ್ಳಂಗೈ ನಿವಾಸಿ ಅಬ್ಬಾಸ್ ಯಾನೆ ಅಂಬಾಚು(42) ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಜೂನ್ 4 ರಂದು ಉಪ್ಪಳ ಬಳಿಯ ಪತ್ವಾಡಿಯಲ್ಲಿ ಅಬ್ಬಾಸ್ ಯಾನೆ ಅಂಬಾಚು ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸಂದಭದಲ್ಲಿ ಗಾಂಜಾ ಹಾಗು ಆಟೋ ರಿಕ್ಷಾ ಉಪೇಕ್ಷಿಸಿ ಪರಾರಿಯಾಗಿದ್ದ. ರಿಕ್ಷಾದಿಂದ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.

ಕರಾವಳಿಯಲ್ಲಿ ಓಡಲು ಸಿದ್ಧವಾಗಿದೆ ಕೊಂಚಾಡಿಯ ‘ರಿಕ್ಷಾ ಡ್ರೈವರ್’

Saturday, September 21st, 2013
Rikshw driver Tulu Movie

ಮಂಗಳೂರು : ನಮ್ಮ ದೇಶದಲ್ಲಿ ಪ್ರತ್ಯೇಕವಾಗಿ ನಮ್ಮ ತುಳುನಾಡಿನಲ್ಲಿ ಸಂಚಾರ (ಸಾರಿಗೆ) ವ್ಯವಸ್ಥೆಯಡಿ ಯಾವ ಸಂದರ್ಭಗಳಲ್ಲೂ, ಯವ ಸಮಯಗಳಲ್ಲೂ ಸಿಗುವ ಒಂದೇ ಒಂದು ಸೌಕರ್ಯ ಅಂದರೆ ಅದು “ಆಟೋ ರಿಕ್ಷಾ”. ದಿನವಿಡೀ ಹಗಲು-ರಾತ್ರಿ, ಬಿಸಿಲು-ಮಳೆ ಎನ್ನದೆ ದುಡಿದು ದಾರಿಯುದ್ದಕ್ಕೂ ಸಾರ್ವಜನಿಕರಿಗೆ ರಕ್ಷಣೆಯಾಗಿ ನಿಲ್ಲುವುದು ಇದೇ ರಿಕ್ಷಾ ಡ್ರೈವರ್ ಗಳು. “ರಿಕ್ಷಾ ಡ್ರೈವರ್ ” ಶೀರ್ಷಿಕೆ ಯಲ್ಲೇ ಇದು ಸಾಮಾನ್ಯ ರಿಕ್ಷಾ ಡ್ರೈವರ್ ನ ಬದುಕಿನ ಕಥೆಯೆಂದು ಪ್ರತಿಯೊಬ್ಬರಲ್ಲೂ ಮೂಡಿಬರುವ ಭಾವನೆ . ಹೌದು ,ಈ ಚಿತ್ರ ಕೂಡ […]