ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಅರುಣ್ ಕುಮಾರ್ ಅಧಿಕಾರ ಸ್ವೀಕಾರ

Wednesday, March 6th, 2024
ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಅರುಣ್ ಕುಮಾರ್ ಅಧಿಕಾರ ಸ್ವೀಕಾರ

ಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಮಂಗಳಾದೇವಿಯ ಐತಾಳ ಮನೆತನದ ಅರುಣ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೀ ಮಂಗಳಾದೇವಿ ದೇವಸ್ಥಾನವು ನಾಲ್ವರು ಅನುವಂಶಿಕ ಮೊಕ್ತೇಸರರಿಂದ ಆಡಳಿತ ನಿರ್ವಹಣೆಯಾಗುತ್ತಿದ್ದು, ಖಾಲಿ ಇದ್ದ ಅನುವಂಶಿಕ ಮೊಕ್ತೇಸರ ಹುದ್ದೆಗೆ ಐತಾಳ ಮನೆತನದ ಹರೀಶ್ ಕುಮಾರ್ ಐತಾಳ್ ಹಾಗೂ ಅರುಣ್ ಕುಮಾರ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿತ್ತು. ದೇವಳದಲ್ಲಿ ಈಗಾಗಲೇ ರಘುರಾಮ ಉಪಾಧ್ಯಾಯ ಅವರು ಅನುವಂಶಿಕ ಮೊಕ್ತೇಸರರಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ದೇವಳದ ಅನುವಂಶಿಕ ಮೊಕ್ತೇಸರರ […]

ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮನಾಥ ಹೆಗ್ಡೆ ಸಂತಾಪ ಸೂಚಕ ಸಭೆ

Monday, January 29th, 2024
Ramanatha-Hegde

ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ಪಳ್ಳಿ ರಮನಾಥ ಹೆಗ್ಡೆ ಅವರ ನಿಧನಕ್ಕೆ ದೇವಸ್ಥಾನದ ವತಿಯಿಂದ ಸಂತಾಪ ಸೂಚಕ ಸಭೆಯು ಸೋಮವಾರ ಕ್ಷೇತ್ರದ ಕಲಾಮಂಟಪದಲ್ಲಿ ನಡೆಯಿತು. ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಪಳ್ಳಿ ರಮನಾಥ ಹೆಗ್ಡೆ ಅವರು, ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 31ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ನಗರದ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸ್ಥಳೀಯ ಕಾರ್ಪೋರೇಟರ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು […]

ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ನಿಧನ

Tuesday, January 16th, 2024
Ramanatha-Hegde

ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ. ರಮಾನಾಥ ಹೆಗ್ಡೆ (72) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 31ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ನಗರದ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಅಂತಿಮ ದರ್ಶನ ಜ.17ರಂದು ಮಂಗಳಾದೇವಿ ದೇವಸ್ಥಾನ ಸಮೀಪದ ಸ್ವಗೃಹದಲ್ಲಿ ಬೆಳಗ್ಗೆ 8.00 ರಿಂದ 11.00 ವರೆಗೆ ನಡೆಯಲಿದೆ. 11.30ಕ್ಕೆ ನಂದಿಗುಡ್ಡೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಮೃತರು ಪತ್ನಿ, ಪುತ್ರ […]

ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರರ ಮನೆಗೆ ಮುಸುಕುಧಾರಿಗಳಿಂದ ದಾಳಿ

Tuesday, October 4th, 2016
vasudev-asranna-home

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಾಸುದೇವ ಅಸ್ರಣ್ಣ ಅವರ ಮನೆಗೆ ಸೋಮವಾರ ತಡರಾತ್ರಿ ಎಂಟು ಮಂದಿ ಮುಸುಕುಧಾರಿಗಳ ತಂಡ ನುಗ್ಗಿ ಸುಮಾರು 55 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿ ಪರಾರಿಯಾದ ಘಟನೆ ನಡೆದಿದೆ. ಕಟೀಲು ದೇವಸ್ಥಾನದಲ್ಲಿ ರಾತ್ರಿ ಹುಲಿವೇಷಗಳ ವಿಶೇಷ ಪೂಜೆ ಹಾಗೂ ಕುಣಿತವಿದ್ದ ಕಾರಣ ರಾತ್ರಿ 12.10 ಕ್ಕೆ ವಾಸುದೇವ ಅಸ್ರಣ್ಣ ದೇವಸ್ಥಾನದ ಪಕ್ಕವೇ ಇರುವ ಮನೆಗೆ ದುಷ್ಕರ್ಮಿಗಳು ಬಂದಿದ್ದಾರೆ. ಮನೆಯಲ್ಲಿ ತಾಯಿ, ಪತ್ನಿ, ಸೊಸೆ, ಮಗಳು, ಅವರ ಮಕ್ಕಳು ಇದ್ದರು […]

ಆಡಳಿತ ವಿವಾದದಲ್ಲಿ ನಿರಾಭರಣೆಯಾದ ಮಾರಿಯಮ್ಮ

Tuesday, February 12th, 2013
Urva Mariyamma

ಮಂಗಳೂರು : ಭಕ್ತರು ನೀಡಿದ ನೂರಾರು ಕೆ.ಜಿ.ಯ ಚಿನ್ನದ ಆಭರಣಗಳಿದ್ದರೂ ಅದನ್ನು ತೊಡುವ ಅವಕಾಶ ಇಲ್ಲದೆ ಉರ್ವ ಮಾರಿ ಯಮ್ಮ ಹೂವಿನ ಅಲಂಕಾರದಿಂದ ನಿತ್ಯ ಸೇವೆ ಪಡೆಯುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ತನ್ನ ಮೇಲಿನ ನಂಬಿಕೆಯನ್ನು ಉಳಿಸಿ ಕೊಳ್ಳಲಾಗದೆ ಅಧಿಕಾರ ಕಳೆದುಕೊಂಡಿರುವ ಇಲ್ಲಿನ ಹಿಂದಿನ ಆಡಳಿತ ಮೊಕ್ತೇಸರರ ಮೊಂಡು ವಾದದಿಂದಾಗಿ ಉರ್ವ ಮಾರಿಯಮ್ಮ ನಿರಾಭರಣೆಯಾಗಿ ಪೂಜೆ ಪಡೆಯುತ್ತಿದ್ದಾಳೆ. ಈ ಬಗ್ಗೆ ದೇವಿ ಬಳಿಯೇ ಭಕ್ತರು ದೂರು ನೀಡಿದಾಗ ನನ್ನ ಆಭರಣವನ್ನು ನನಗೆ ಬೇಕೆಂದಾಗ ನಾನೇ ತರಿಸಿಕೊಂಡು […]