ಆಟೋ ರಿಕ್ಷಾ ಬಾಡಿಗೆ ದರ ಪರಿಷ್ಕರಣೆ, ವಿರೋಧ

Tuesday, May 12th, 2020
Auto

ಮಂಗಳೂರು :  ಲಾಕ್ ಡೌನ್ ನಡುವೆ ಬಸ್ ಅಥವಾ ಪರ್ಯಾಯ  ಟ್ಯಾಕ್ಸಿ ವಾಹನಗಳ ವ್ಯವಸ್ಥೆ ಇಲ್ಲದಾಗಲೇ ಆಟೋ ಬೆಲೆ  ಏರಿಕೆ ಮಾಡಿರುವುದು ಸಮಂಜಸವಲ್ಲ ಎಂದು ವಾಹನ ಬಳಕೆದಾರರ ಸದಸ್ಯರೊಬ್ಬರು ವಿರೋಧ ಪಡಿಸಿದ್ದಾರೆ. ಒಂದೆಡೆ ಲಾಕ್ ಡೌನ್ ನಿಂದ ಜನರಿಗೆ ಆದಾಯವಿಲ್ಲ, ಜನ ಬರೀ ಗಾಲಲ್ಲೇ ನಡೆದುಕೊಂಡು ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಕಡಿಮೆ ಮಾಡಬೇಕೆ ಹೊರತು, ಜಾಸ್ತಿ ಮಾಡಿರುವ ಆರ್.ಟಿ.ಓ. ನಿರ್ಧಾರ ಸರಿಯಿಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯ ಸರಕಾರವು ಆಟೋ ವಾಲಾ ಗಳಿಗೆ ತಿಂಗಳಿಗೆ 5 ಸಾವಿರ ರೂಪಾಯಿ ಪ್ಯಾಕೇಜನ್ನು ನೀಡಿದೆ, ಎಂದು ಅವರು ತಿಳಿಸಿದರು. […]

ಬಸ್ಸುಗಳಲ್ಲಿ ಹಿರಿಯ ನಾಗರೀಕರಿಗೆ ಅನುಕೂಲ ಕಲ್ಪಿಸಲು ಕ್ರಮ ಆರ್.ಟಿ.ಓ

Wednesday, July 10th, 2013
RTO Adalath

ಮಂಗಳೂರು : ನಗರ ಸಾರಿಗೆ ಹಾಗೂ ಸರ್ವಿಸ್  ಬಸ್ಸುಗಳಲ್ಲಿ ಹಿರಿಯ ನಾಗರೀಕರನ್ನು ಗೌರವದಿಂದ ಕಾಣುವ ಪರಿಸರನ್ನುಂಟು ಮಾಡುವುದು ಹಾಗೂ ಅವರಿಗೆ ಮೀಸಲಾದ ಸ್ಥಳಗಳಲ್ಲಿ ಇತರೆ ಜನರು ಕುಳಿತಿದ್ದರೆ ಅವರು ಬಂದ ಕೂಡಲೇ ತೆರವು ಮಾಡಿ ಅವರಿಗೆ ಅನುವು ಮಾಡಿಕೊಡಲು ಸಾರ್ವಜನಿಕರಲ್ಲಿ ಹಾಗೂ ಶಾಲಾ ಕಾಲೇಜು ಮಕ್ಕಳಲ್ಲಿ ಅರಿವು ಮೂಡಿಸಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಅವರಿಂದು ತಮ್ಮ ಕಚೇರಿಯಲ್ಲಿ ನಡೆದ ಸಾರಿಗೆ ಅದಾಲತ್ ಸಭೆಯಲ್ಲಿ ಈ ವಿಷಯ ತಿಳಿಸಿದರು. ಹಸನಬ್ಬ ಎನ್ನುವವರು ರಸ್ತೆಯ ಇಕ್ಕೆಡೆಗಳಲ್ಲಿನ ಕಾಲುದಾರಿಯನ್ನು […]