ಹೊಟ್ಟೆಯ ಹಸಿವನ್ನು ಆಹಾರ ನೀಗಿಸಿದರೆ – ಜ್ಞಾನದ ಹಸಿವನ್ನು ಭಜನೆ ನೀಗಿಸುವುದು – ಕಲ್ಕೂರ

Sunday, November 28th, 2021
Kalkura

ಮಂಗಳೂರು  : ನಾವು ತಿನ್ನುವ ಆಹಾರ ನಮ್ಮ ಹಸಿವನ್ನು ನೀಗಿಸಿದರೆ, ಭಜನಾ ಸಂಕೀರ್ತನೆಯು ಜ್ಞಾನದ ಹಸಿವನ್ನು ನೀಗಿಸುವುದು. ಕೊರೋನಾ ತಡೆಗಟ್ಟುವಲ್ಲಿ ಮುಖಗವಸು ರಕ್ಷಣೆ ನೀಡಿದಂತೆ ವಿಕೃತ ಮನಸ್ಸಿನಿಂದ ರಕ್ಷಿಸಿಕೊಳ್ಳಲು ‘ಭಜನಾ ಸಂಕೀರ್ತನೆ’ಯೂ ಒಂದು ಸಾತ್ವಿಕವಾದ ರಕ್ಷಾ ಕವಚವಿದ್ದಂತೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ಕದ್ರಿ ಕಂಬಳ, ಮಲ್ಲಿಕಾ ಬಡಾವಣೆಯ, ಮಂಜುಪ್ರಾಸಾದ, ವಾದಿರಾಜ ಮಂಟಪದ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ನಗರದ […]

ಅಂಗವಿಕಲರನ್ನು ಗುರುತಿಸಿ ಕಿಟ್ ನೀಡಿದ ಐವನ್ ಡಿ ಸೋಜ

Friday, April 17th, 2020
Ivan-d-souza

ಮಂಗಳೂರು : ಲಾಕ್ ಡೌನ್ ಆಗಿದಂದಿನಿಂದ ನೊಂದವರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜ ಇಂದು ಮಂಗಳೂರಿನಲ್ಲಿ ಅಂಗವಿಕಲರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದರು. ಐವನ್ ಡಿ ಸೋಜ ಅವರು ಬಿಕ್ಷುಕರ ಆದಿಯಾಗಿ, ಬಿದಿಬದಿ ವ್ಯಾಪಾರಿಗಳು, ರಿಕ್ಷಾಚಾಲಕರು, ಟೆಂಪೋ ಮಾಲಕರು ಮೊದಲಾದವರಿಗೆ ತನ್ನ ಸಹಾಯವನ್ನು ಮಾಡಿದ್ದಾರೆ.

ಸ್ನೇಹ ಕಲಾ ವೃಂದ ಪಾಂಡೇಶ್ವರ ವತಿಯಿಂದ ಮೇಯರ್ ಮುಖಾಂತರ ಸ್ಥಳೀಯ ನಾಗರಿಕರಿಗೆ ಅಗತ್ಯ ವಸ್ತುಗಳ ವಿತರಣೆ

Sunday, April 12th, 2020
sneha kalavrunda

ಮಂಗಳೂರು  :  ಸ್ನೇಹ ಕಲಾ ವೃಂದ ಪಾಂಡೇಶ್ವರ ಇದರ ವತಿಯಿಂದ ಸ್ನೇಹ ಕಲಾ ವೃಂದ ದ ಅಧ್ಯಕ್ಷ ರಾದ ಸಿಂಚನ ಎರೆಂಜರ್ಸ್ ಮಾಲಕರಾದ  ಸದಾಶಿವ ಕುಲಾಲ್ ಅವರು ಪಾಂಡೇಶ್ವರದ ನೂರು ನಾಗರಿಕರಿಗೆ ಅಕ್ಕಿ, ಸಕ್ಕರೆ, ಚಾಹುಡಿ, ತೊಗರಿಬೇಳೆ, ಸಾಬೂನು ಮೊದಲಾದ ಅಗತ್ಯ ದಿನಸಿ  ವಸ್ತುಗಳ ಆಹಾರದ ಕಿಟ್ ಅನ್ನು ಮೇಯರ್ ದಿವಾಕರ್ ಪಾಂಡೇಶ್ವರ ಅವರ ಮುಖಾಂತರ ವಿತರಿಸಿದರು. ಇದೇ ಸಂದರ್ಭ ಕೊರೊನಾ ಫಂಡಿಗೆ ಸದಾಶಿವ ಕುಲಾಲ್ ಅವರು ಐದು ಸಾವಿರ ರೂಪಾಯಿಯ ಚೆಕ್ ನೀಡಿದರು. ಕೊರೊನ ಮಹಾ ಮಾರಿಗೆ ಇಡೀ ದೇಶವೇ ತಲ್ಲಣಗೊಂಡಿದೆ. ಸಾವಿರಾರು ಮಂದಿ ಕೂಲಿ ಕಾರ್ಮಿಕರು […]