ಕೊರೋನಾ ಮಹಾಮಾರಿ ಜಾಗತಿಕವಾಗಿ ಬಲಿ ಪಡೆದದ್ದು 39, 800 ಮಂದಿ ಅಮಾಯಕರನ್ನು

Tuesday, March 31st, 2020
corona world

ನವದೆಹಲಿ: ಚೀನಾ ದಿಂದ ಉಗಮವಾದ ಮಹಾಮಾರಿ ಕೊರೋನಾ ಇದೀಗ ಜಗತ್ತನ್ನೇ ತಲ್ಲಣಗೊಳಿಸಿದ್ದು ಸೋಂಕಿತರ ಸಂಖ್ಯೆ 8 ಲಕ್ಷ ದಾಟಿದ್ದು ಅದಾಗಲೇ 39, 800 ಮಂದಿ ಬಲಿಯಾಗಿದ್ದಾರೆ. ಅಮೆರಿಕಾ, ಇಟಲಿಯಲ್ಲಿ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದರೆ ಸ್ಪೇನ್ ಸನಿಹದಲ್ಲಿದೆ. ಅಮೆರಿಕದಲ್ಲಿ 1,64,400 ಮಂದಿ ಸೋಂಕಿನಿಂದ ಬಳಲುತ್ತಿದ್ದು 3,173 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 1,02,000 ಸೋಂಕಿತರಿದ್ದು ಸಾವಿನ ಸಂಖ್ಯೆ ಮಾತ್ರ 11 ಸಾವಿರ ಗಡಿ ದಾಟಿದೆ. ಇನ್ನು ಸ್ಪೇನ್ ನಲ್ಲೂ ಸಾವಿನ ಸಂಖ್ಯೆ ಏರಿಕೆಯಾಗುತ್ತದೆ. ಇಂದು ಒಂದೇ ದಿನ 473 ಮಂದಿ […]

ಮಹಾಮಾರಿ ಕೊರೋನಾ ವೈರಸ್​ಗೆ ಇಟಲಿಯಲ್ಲಿ ಒಂದೇ ದಿನಕ್ಕೆ 500 ಸಾವು

Thursday, March 19th, 2020
itali

ಇಟಲಿ : ಮಹಾಮಾರಿ ಕೊರೋನಾ ವೈರಸ್ ಇಟಲಿ ದೇಶದಲ್ಲಿ ಅಟ್ಟಹಾಸ ಮುಂದುವರಿಸಿದೆ. ಬುಧವಾರ ಒಂದೇ ದಿನ ಇಟಲಿಯಲ್ಲಿ ಬರೋಬ್ಬರಿ 475 ಜನರು ಈ ವೈರಸ್ಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3,000 ಗಡಿ ತಲುಪಿದೆ. ಜನವರಿ ಅಂತ್ಯಕ್ಕೆ ಕೊರೋನಾ ವೈರಸ್ ಚೀನಾದಲ್ಲಿ ತನ್ನ ಪ್ರಭಾವ ಬೀರಲು ಆರಂಭಿಸಿತ್ತು. ಮೊದಲು 30 ಜನರು ಮೃತಪಟ್ಟಿದ್ದರು. ಈ ಸಂಖ್ಯೆ ಈಗ 3,245ಕ್ಕೆ ಏರಿಕೆ ಆಗಿದೆ. ನಂತರ ಈ ವೈರಸ್ ಇಟಲಿಗೂ ಹಬ್ಬಿದ್ದು, ಈ ಮಹಾಮಾರಿ ವೈರಸ್ನಿಂದ ದಿನೇ ದಿನೇ […]

ಇಟಲಿಯಿಂದ ಆಗಮಿಸಿದ್ದ ಕೇರಳದ 3 ವರ್ಷದ ಮಗುವಿಗೆ ಕೊರೊನಾ ಸೋಂಕು

Monday, March 9th, 2020
coronavirus

ಕೊಚ್ಚಿನ್ : ರವಿವಾರವಷ್ಟೇ ಕೇರಳದಲ್ಲಿ ಐವರಿಗೆ ತಗುಲಿದ್ದ ಕೊರೊನಾ ಸೋಂಕು ಇಂದು ಮತ್ತೊಂದು ಮಗುವಿಗೆ ತಾಗಿದೆ. ಇಟಲಿಗೆ ಹೋಗಿ ಬಂದಿದ್ದ ಕೇರಳದ ಮೂರು ವರ್ಷದ ಮಗುವಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಮವಾರ ಈ ಹೊಸ ದೃಢಪಡುವ ಮೂಲಕ ಭಾರತದಲ್ಲಿ ಈ ಮಾರಣಾಂತಿಕ ಸೋಂಕಿತರ ಪ್ರಕರಣ 40ಕ್ಕೇರಿದೆ.ಶನಿವಾರ ತನ್ನ ಕುಟುಂಬಿಕರ ಜೊತೆಗೆ ಇಟಲಿಯಿಂದ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಈ ಮಗು ಮರಳಿತ್ತು. ಸದ್ಯ ಮಗುವನ್ನು ಐಸಲೋಶನ್ ವಾರ್ಡ್ ನಲ್ಲಿ ಇಡಲಾಗಿದೆ. ಮಗುವಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಅವರ ಕುಟುಂಬಿಕರನ್ನೂ […]

ರೂಪಾಯಿ ಮೌಲ್ಯ ಕುಸಿತ: ರೂಪಾಯಿ ಕುಸಿತಕ್ಕೆ ಷೇರು ಮಾರುಕಟ್ಟೆ ವಿಚಲಿತ

Wednesday, October 3rd, 2018
rupees-rate

ನವದೆಹಲಿ: ಭಾರತದ ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದ್ದು, ಈ ಬಾರಿ ಇದು ದಾಖಲೆಯ ಕುಸಿತವನ್ನು ಕಂಡಿದೆ. ದಿನದ ಆರಂಭದಲ್ಲೇ ರೂಪಾಯಿ ಕುಸಿತಕ್ಕೆ ಷೇರು ಮಾರುಕಟ್ಟೆ ಸಹ ವಿಚಲಿತವಾಗಿದೆ. ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 73ರ ಗಡಿ ತಲುಪಿದ್ದು ಈ ಮೂಲಕ ದಾಖಲೆಯ ಕುಸಿತವಾಗಿದೆ. ದಿನದ ಆರಂಭಕ್ಕೆ 34 ಪೈಸೆ ಇಳಿಕೆಯಾಗುವ ಮೂಲಕ ರೂಪಾಯಿ ಮೌಲ್ಯ 73.33 ರೂ.ಗೆ ಬಂದು ನಿಂತಿದೆ. ಇದರ ಜೊತೆಗೆ ಅತ್ತ ಸೆನ್ಸೆಕ್ಸ್ 200 ಅಂಕ ಇಳಿಕೆಯಾಗಿ ಆರಂಭದಲ್ಲೇ ಹೂಡಿಕೆದಾರರನ್ನು ಕಂಗಾಲು ಮಾಡಿದೆ. […]