ಉಡುಪಿ–ಮಂಗಳೂರು ರಸ್ತೆಗಳಲ್ಲಿ ಇಳಿಯಲಿದೆ 10 ಕೆಎಸ್ಆರ್ ಟಿಸಿ ಯವರ ಎಲೆಕ್ಟ್ರಿಕ್ ಬಸ್
Tuesday, December 17th, 2024ಮಂಗಳೂರು : ಕಾರ್ಕಳ– ಮೂಡುಬಿದಿರೆ– ಮಂಗಳೂರು ಮಾರ್ಗದಲ್ಲಿ ಆರಂಭಿಸಲಾದ ಬಸ್ ಸೇವೆಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗವು ಉಡುಪಿ–ಮಂಗಳೂರು ನಡುವೆ 10 ಎಲೆಕ್ಟ್ರಿಕ್ ಬಸ್ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ. ‘ಉಡುಪಿ– ಮಂಗಳೂರು ಮಾರ್ಗದಲ್ಲಿ ಸದ್ಯಕ್ಕೆ ಎರಡು ಬಸ್ಗಳು ಸೇವೆ ಒದಗಿಸುತ್ತಿವೆ. ಇವುಗಳು ಪ್ರಯಾಣಿಕರಿಂದ ತುಂಬಿರುತ್ತವೆ. ಮಂಗಳೂರು ವಿಭಾಗಕ್ಕೆ ಒಟ್ಟು 45 ಎಲೆಕ್ಟ್ರಿಕ್ ಬಸ್ಗಳು ಮಂಜೂರಾಗಿವೆ. ಅವುಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕ್ರಮವಹಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. […]