Blog Archive

ಉಪಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ : ಸಿದ್ದರಾಮಯ್ಯ

Monday, September 30th, 2019
siddaramaiah

ರಾಯಚೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ನಡೆಸುವುದು ತಂತಿ ಮೇಲೆ ನಡೆದಷ್ಟು ಕಷ್ಟವಾಗಿದ್ದರೆ ರಾಜೀನಾಮೆ ನೀಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಇಲ್ಲಿನ ವಿಐಪಿ ಸರ್ಕ್ಯೂಟ್ ಹೌಸ್ ನಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ತಂತಿ ಮೇಲೆ ನಡೆವಾಗ ಬಿದ್ದುಗಿದ್ದಾರು ಎಂದು ಲೇವಡಿ ಮಾಡಿದರು. ಅವರೊಬ್ಬ ವೀಕ್ ಚೀಫ್ ಮಿನಿಸ್ಟರ್. ಪಕ್ಷದಲ್ಲಿ ಅವರ ಆಟ ನಡೆಯುತ್ತಿಲ್ಲ. ರೆಕ್ಕೆ ಪುಕ್ಕ ಕತ್ತರಿಸಿಬಿಟ್ಟಿದ್ದಾರೆ ಎಂದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಆಗ ಸರ್ಕಾರ ವಿಸರ್ಜಿಸಿ ಮಧ್ಯಂತರ […]

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಲ್.ಡಿ.ಎಫ್ ಅಭ್ಯರ್ಥಿ ರೆಡಿ

Thursday, September 26th, 2019
shankara Rai

ಕಾಸರಗೋಡು : ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಲ್.ಡಿ.ಎಫ್  ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಾಜಿ ಶಾಸಕ ಸಿ.ಎಚ್ ಕುಞಂಬು ರವರ ಹೆಸರು ಪಟ್ಟಿಯಲ್ಲಿದ್ದರೂ ಅನಿರೀಕ್ಷಿತವಾಗಿ ಶಂಕರ ರೈ ರವರನ್ನು ಕಣಕ್ಕಿಳಿಸಲು ಪಕ್ಷವು ತೀರ್ಮಾನ ತೆಗೆದುಕೊಂಡಿತು. ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಇಂದು ಬೆಳಗ್ಗೆ ಅಭ್ಯರ್ಥಿಯಾಗಿ ಶಂಕರ ರೈ ಮಾಸ್ಟರ್ ರನ್ನು ಘೋಷಣೆ ಮಾಡಿದರು. ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಶಂಕರ ರೈ, ಪ್ರಸ್ತುತ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾಗಿದ್ದಾರೆ. ಕೇರಳ ತುಳು ಅಕಾಡಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಶಂಕರ […]

ಎರಡು ದಿನಗಳಲ್ಲಿ ಉಪಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಸಿದ್ದರಾಮಯ್ಯ

Tuesday, September 24th, 2019
siddaramayya

ಹುಬ್ಬಳ್ಳಿ : ಉಪಚುನಾವಣೆಗೆ ನಾವು ಸಿದ್ಧರಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಉಪಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಪಕ್ಷಾಂತರಿಗಳನ್ನು ಮತದಾರರು ಯಾವತ್ತೂ ಕ್ಷಮಿಸುವುದಿಲ್ಲ. ಉಪಚುನಾವಣೆಯಲ್ಲಿ ನಾವು 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕುಮಾರಸ್ವಾಮಿ ಏನು ಮಾತನಾಡುತ್ತಾರೆ ಎಂಬುದು ಅವರಿಗೆ ಗೊತ್ತಾಗುತ್ತಿಲ್ಲ. ಅವರು ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ಮೈಸೂರು, ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಗೆ […]

ಅಕ್ಟೋಬರ್21ರಂದು 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ

Saturday, September 21st, 2019
shasakaru

ನವದೆಹಲಿ : ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ ಬೆನ್ನಲ್ಲೇ ಕರ್ನಾಟಕದ 15 ಅನರ್ಹ ಶಾಸಕರ ಕ್ಷೇತ್ರಗಳಿಗೂ ಉಪಚುನಾವಣೆಯ ದಿನಾಂಕ ಘೋಷಿಸಿದೆ. ಅಕ್ಟೋಬರ್ 21ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ರಾಜ್ಯದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿಲ್ಲ. ಆರ್ ಆರ್ ನಗರ(ಮುನಿರತ್ನ ಕ್ಷೇತ್ರ) ಮತ್ತು ಮಸ್ಕಿ(ಪ್ರತಾಪ್ ಗೌಡ)ಕ್ಷೇತ್ರಗಳಲ್ಲಿ ಉಪಚುನಾವಣೆ […]

ಸಿದ್ಧರಾಮಯ್ಯ ಅವರು ಪಕ್ಷದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಪಚುನಾವಣೆಗೆ ಸಿದ್ಧರಾಗಬೇಕು: ಪೂಜಾರಿ ಸಲಹೆ

Friday, November 4th, 2016
Janardhan Poojary

ಮಂಗಳೂರು: ಮೈಸೂರಿನಲ್ಲಿ ನಡೆಯುವ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪಕ್ಷದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿದ್ಧರಾಗಬೇಕು. ಪ್ರತಿಪಕ್ಷಗಳು ಒಗ್ಗಟ್ಟಾದರೆ ಸಿಎಂ ಮನೆಗೆ ಹೋಗಬೇಕಾದೀತು ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಸಲಹೆ ಮಾಡಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಚುನಾವಣೆ ಎದುರಿಸಲು ಕಸರತ್ತು ಆರಂಭಿಸಿವೆ. ದೇವೇಗೌಡರು ಈಗಾಗಲೇ ಶ್ರೀನಿವಾಸ್‌ ಪ್ರಸಾದ್‌ ಪಕ್ಷೇತರರಾಗಿ ಸ್ಪರ್ಧಿಸಿದರೆ ಜೆಡಿಎಸ್‌ ಬೆಂಬಲಿಸುವುದಾಗಿ ಹೇಳಿದ್ದಾರೆ. ಈ ಸಂದರ್ಭ […]

ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಉಪಚುನಾವಣೆಯ ಗೆಲುವಿಗೆ ವಿಜಯೋತ್ಸವ

Friday, May 13th, 2011
ದ.ಕ ಜಿಲ್ಲಾ ಬಿಜೆಪಿ ವಿಜಯೋತ್ಸವ

ಮಂಗಳೂರು: ದ.ಕ ಜಿಲ್ಲಾ ಬಿಜೆಪಿ ಇಂದು ಬೆಳಿಗ್ಗೆ ಚನ್ನಪಟ್ಟಣ, ಜಗಳೂರು, ಬಂಗಾರಪೇಟೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಿಜಯೋತ್ಸವ ಆಚರಿಸಿತು. ಜಿಲ್ಲಾ ಬಿಜೆಪಿಯ ನಗರಾಧ್ಯಕ್ಷ ಶ್ರೀಕರ ಪ್ರಭು ಕಾರ್ಯಕರ್ತರಿಗೆ ಹಾಗೂ ಮನಪಾ ಮೇಯರ್ ಪ್ರವೀಣ್ ಅಂಚನ್ರಿಗೆ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಬಳಿಕ ಕಾರ್ಯಕರ್ತರು ಬಿಜೆಪಿ ಪತಾಕೆಗಳನ್ನು ಹಿಡಿದು ನವಭಾರತ ಸರ್ಕಲ್ ವರೆಗೆ ವಿಜಯೋತ್ಸವ ಜಾಥಾ ನಡೆಸಿದರು. ವಿಜಯೋತ್ಸವದಲ್ಲಿ ಶ್ರೀಕರ ಪ್ರಭು ಮಂಗಳೂರು, ಮೇಯರ್ ಪ್ರವೀಣ್ ಅಂಚನ್, ಫಿಶರೀಶ್ ಫೆಡರೇಶನ್ನಿನ […]