ಪೊಲೀಸ್ ಠಾಣೆಯ ಮೇಲೆ PFI ಕಾರ್ಯಕರ್ತರ ದಾಳಿ : ಆರೋಪಿಗಳ ಮೇಲೆ ದೇಶದ್ರೋಹದ ಕೇಸು ದಾಖಲಿಸಲು ಆಗ್ರಹ – ವಿಶ್ವ ಹಿಂದೂ ಪರಿಷದ್

Monday, December 20th, 2021
VHP puttur

ಪುತ್ತೂರು  : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಡಿಸೆಂಬರ್ 14ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ PFI – SDPI ನ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನುಗ್ಗಿ, ಪೋಲೀಸರ ಮೇಲೆ ದಾಳಿ ನಡೆಸಿದ್ದು ಬಹಳ ಆತಂಕಕಾರಿ ಘಟನೆಯಾಗಿದ್ದು, ಜನರ ರಕ್ಷಣೆ ಮಾಡುವಂತಹ ಪೊಲೀಸರನ್ನೇ ಕೊಲೆ ಮಾಡಲು ಪ್ರಯತ್ನಿಸಿದ್ದು ಜಿಲ್ಲೆಯ ಸಮಸ್ತ ನಾಗರಿಕ ಸಮಾಜ ಈ ಕೃತ್ಯದಿಂದ ಭಯಭೀತರಾಗಿದ್ದಾರೆ. PFI ಕಾರ್ಯಕರ್ತರು ಅವರದ್ದೇ ಅಂಬುಲೆನ್ಸ್ ನಲ್ಲಿ ತಲುವಾರು, ಸೋಡಾ ಬಾಟಲಿಗಳು, ಕಲ್ಲುಗಳು, ಇನ್ನಿತರ ಮಾರಕ ಆಯುಧಗಳ ಸಹಿತ ಪೋಲೀಸರ ಮೇಲೆ […]

ರಸ್ತೆ ದಾಟುತ್ತಿದ್ದ ತಾಯಿ-ಮಗು ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ್ಯು

Tuesday, October 12th, 2021
ksrtc-accident

ಉಪ್ಪಿನಂಗಡಿ : ರಸ್ತೆ ದಾಟುತ್ತಿದ್ದ ತಾಯಿ-ಮಗು ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉಪ್ಪಿನಂಗಡಿ ಬಸ್‌ ನಿಲ್ದಾಣದ ಬಳಿ ನಡೆದಿದೆ. ಮೃತಪಟ್ಟವರು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಎಂಬಲ್ಲಿನ ಸಿದ್ದೀಕ್ ಎಂಬುವರ ಪತ್ನಿ ಶಾಹಿದಾ (25) ಹಾಗೂ ಅವರ ಒಂದು ವರ್ಷದ ಪುತ್ರ ಶಾಹೀಲ್ ಎಂದು ಗುರುತಿಸಲಾಗಿದೆ. ಶಾಹಿದಾ ಅವರು ಗೇರುಕಟ್ಟೆಯ ತಾಯಿ ಮನೆಯಿಂದ  ಇಂದು ಬೆಳಗ್ಗೆ ಪುತ್ತೂರಿಗೆ ವೈದ್ಯರ ಬಳಿ ತನ್ನ ಮಗುವಿನೊಂದಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ, ಕೆಎಸ್ಆರ್‌ಟಿಸಿ ಬಸ್ಸೊಂದು […]

ಮಂಗಳೂರಿನ ಐವರು ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

Tuesday, March 23rd, 2021
Police officers

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಸೇವೆ ಸಲ್ಲಿಸುತ್ತಿರುವ ನಾಲ್ವರು ಪೊಲೀಸರು ಮತ್ತು ಒಬ್ಬ ಪೊಲೀಸ್ ಮಹಿಳೆ 2020 ರ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯದ 115 ಅಧಿಕಾರಿಗಳಲ್ಲಿ ಪುತ್ತೂರಿನ ಪ್ರವೀಣ್ ರೈ, ಉಪ್ಪಿನಂಗಡಿ ಪೊಲೀಸ್ ಠಾಣೆ, ಬಜ್ಪೆಯ ಸಂಪತ್ ಕುಮಾರ್ ಬಿ, ಜಿಲ್ಲಾ ಪೊಲೀಸ್ ತಾಂತ್ರಿಕ ವಿಭಾಗದ  ನಯನ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ,  ಸುಜನ್ ಶೆಟ್ಟಿ ಮಂಗಳೂರು ಉತ್ತರ ಪೊಲೀಸ್ ಠಾಣೆ ಮತ್ತು ಸಿಸಿಬಿ ಮಂಗಳೂರಿನ ಅಬ್ದುಲ್ ಜಬ್ಬರ್ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಐದು ಪೊಲೀಸರು.

ಟ್ಯಾಂಕರ್ ಪಲ್ಟಿ : ಬಾಟಲ್, ಕ್ಯಾನ್, ಬಕೆಟ್​ಗಳಲ್ಲಿ ಪುಕ್ಸಟ್ಟೆ ಡೀಸೆಲ್ ತುಂಬಿಸಿ ಕೊಂಡ ಜನ

Saturday, March 13th, 2021
Tanker

ಉಪ್ಪಿನಂಗಡಿ:  ಮಂಗಳೂರಿನಿಂದ ಕೋಲಾರ ಕಡೆಗೆ ಹೋಗುತ್ತಿದ್ದ  ಡೀಸೆಲ್ ತುಂಬಿದ್ದ ಟ್ಯಾಂಕರ್ ಮಗುಚಿ ಬಿದ್ದು ಡೀಸೆಲ್ ಸೋರಿಕೆಯಾದ ಘಟನೆ ಶನಿವಾರ  ಉಪ್ಪಿನಂಗಡಿ ಸಮೀಪದ ಬೊಳ್ಳಾರು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಡೀಸೆಲ್ ಟ್ಯಾಂಕರ್ ಚಾಲಕ ಮಹೇಶ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್ ಮಂಗಳೂರಿನಿಂದ ಕೋಲಾರ ಕಡೆಗೆ ಹೋಗುತ್ತಿತ್ತು, ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದ್ದರಿಂದ ಸ್ವಲ್ಪ ಸಮಯ ಸಂಚಾರಕ್ಕೆ ಅಡ್ಡಿಯಾಗಿತ್ತು. ಟ್ಯಾಂಕರ್ ಮಗುಚಿ ಬಿದ್ದ ಸಮಯದಲ್ಲಿ ಸ್ಥಳೀಯರು ಹಾಗೂ ಇತರೆ ವಾಹನ ಚಾಲಕರು ಬಾಟಲ್, ಕ್ಯಾನ್, ಬಕೆಟ್ಗಳಲ್ಲಿ ಡೀಸೆಲ್ ತುಂಬಿಸಲು […]

ಸಚಿವರ ಅಭಿನಂದನಾ ಸಮಾರಂಭಕ್ಕೆ ತೆರಳುತ್ತಿದ್ದ ರಿಟ್ಜ್ ಕಾರು ಢಿಕ್ಕಿ, ಓರ್ವ ಮೃತ್ಯು

Sunday, January 24th, 2021
Naveen Martiz

ಕಡಬ : ಸಚಿವ ಅಂಗಾರರಿಗೆ ಅಭಿನಂದನಾ ಸಮಾರಂಭಕ್ಕೆ ತೆರಳುತ್ತಿದ್ದ  ರಿಟ್ಝ್ ಕಾರು ಹಾಗೂ ಮಹೀಂದ್ರ ಬೊಲೆರೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ಜನವರಿ  24 ರ ಭಾನುವಾರ ನಡೆದಿದೆ. ಮೃತಪಟ್ಟವರನ್ನು ರಿಟ್ಜ್ ಕಾರು ಚಾಲಕ ಅಲಂಗೇರಿ ಹೊಸ್ಮಠದ  ನವೀನ ಮಾರ್ಟಿಜ್ (30) ಎಂದು ಗುರುತಿಸಲಾಗಿದೆ ಉಪ್ಪಿನಂಗಡಿಯಿಂದ ಕಡಬ ಕಡೆಗೆ ಬರುತ್ತಿದ್ದ ರಿಟ್ಝ್ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೊಲೆರೋ ವಾಹನಕ್ಕೆ ಢಿಕ್ಕಿಯಾಗಿ […]

ಸುರಿಯುತ್ತಿರುವ ಭಾರೀ ಮಳೆಗೆ ಒಮ್ನಿ ಕಾರಿನ ಮೇಲೆ ಮುರಿದು ಬಿದ್ದ ಮರ

Saturday, September 12th, 2020
omni car

ಕಡಬ :  ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಯಿಲ ಸಮೀಪದ ನೀರಾಜೆ ಎಂಬಲ್ಲಿ ಚಲಿಸುತ್ತಿದ್ದ ಒಮ್ನಿ ಕಾರಿನ ಮೇಲೆ ಮರ ಮುರಿದು ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡ ಘಟನೆ ನಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕೊಯಿಲ ನೀರಾಜೆ ಸಮೀಪ ರಸ್ತೆ ಬದಿಯಲ್ಲಿದ್ದ ಹಲಸಿನ ಮರವೊಂದು ಮುರಿದುಬಿದ್ದಿದೆ. ಕೊಯಿಲದಿಂದ ಆತೂರಿಗೆ ಯೋಗೀಶ್ ಎಂಬ‌ುವರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಾರಿನ ಮೇಲೆ ಮರ ಮುರಿದು ಬಿದ್ದಿದೆ. ಮರ ರಸ್ತೆಗೆ ಮುರಿದು ಬಿದ್ದ ಪರಿಣಾಮ ಸುಮಾರು ಅರ್ಧತಾಸು […]

ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಮಹಿಳೆಯ ಮೃತದೇಹ

Friday, August 7th, 2020
wonman-deadbody

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬಜತ್ತೂರು ಗ್ರಾಮದ ನೀರಕಟ್ಟೆ ಡ್ಯಾಮ್ ಬಳಿಯ ನೇತ್ರಾವತಿ ನದಿಯಲ್ಲಿ ಆ. 6ರಂದು ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ದೇಹವೂ ನದಿ ನೀರಿನಲ್ಲಿ ತೇಲಿಕೊಂಡು ಬಂದು ನೀರಕಟ್ಟೆ ವಿದ್ಯುತ್ ಸ್ಥಾವರದ ಆಣೆಕಟ್ಟಿನ ಕಸದ ರಾಶಿ ಜೊತೆ ಸೇರಿತ್ತು.ಈ ಬಗ್ಗೆ ವಿದ್ಯುತ್ ಸ್ಥಾವರದ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದು ತನಿಖೆ ಮುಂದುವರೆಸಿದ್ದಾರೆ. ಸುಮಾರು 40 ರಿಂದ 50 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಇದಾಗಿದ್ದು, ಮೃತ […]

ಗುಂಡ್ಯದಲ್ಲಿ ನಿರ್ಮಿಸಿದ ನೂತನ ಚೆಕ್ ‌ಪೋಸ್ಟ್ ​​​ಉದ್ಘಾಟಿಸಿದ ಶಾಸಕ ಎಸ್.ಅಂಗಾರ

Wednesday, July 15th, 2020
s Angara

ಸುಳ್ಯ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗುಂಡ್ಯದಲ್ಲಿ ನಿರ್ಮಿಸಿದ ನೂತನ ಚೆಕ್ ‌ಪೋಸ್ಟ್ ಅನ್ನು ಸುಳ್ಯ ಶಾಸಕ ಎಸ್.ಅಂಗಾರ ಉದ್ಘಾಟಿಸಿದರು. ಇಲ್ಲಿ ಒಂದು ಸುಸಜ್ಜಿತವಾದ ಚೆಕ್ ಪೋಸ್ಟ್ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳು, ಪುತ್ತೂರು ಉಪ ಆಯುಕ್ತರು, ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆಗೆ ಉಪ್ಪಿನಂಗಡಿ ಠಾಣಾಧಿಕಾರಿ ಈರಯ್ಯ ಅವರು ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಉಪ ಆಯುಕ್ತ ಡಾ. ಯತೀಶ್ ಉಳ್ಳಾಲ್, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗ್ಸ್, ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ […]

ತಂದೆಯನ್ನೇ ಕಡಿದು ಕೊಲೆ ಮಾಡಿದ ಇಬ್ಬರು ದುರುಳ ಮಕ್ಕಳು

Friday, June 19th, 2020
murder

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ತಂದೆಯನ್ನೇ ಇಬ್ಬರು ಮಕ್ಕಳು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ. ಧರ್ನಪ್ಪ ಪೂಜಾರಿ (65), ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರ ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬುವವರು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಆರೋಪಿಗಳು. ಮನೆಯ ಹಿತ್ತಲಿನಲ್ಲಿದ್ದ ತೆಂಗಿನ ಮರದ ತೆಂಗಿನಕಾಯಿ, ಬೊಂಡವನ್ನು ತೆಗೆದು ತಂದೆ ಮಾರಾಟ ಮಾಡುತ್ತಿದ್ದರು. ಇದೇ ವಿಚಾರಕ್ಕೆ ತಂದೆ – ಮಕ್ಕಳಿಬ್ಬರ […]

ತಂದೆಯನ್ನೇ ಕಡಿದು ಕೊಲೆ ಮಾಡಿದ ಇಬ್ಬರು ದುರುಳ ಮಕ್ಕಳು

Monday, June 15th, 2020
murder

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ತಂದೆಯನ್ನೇ ಇಬ್ಬರು ಮಕ್ಕಳು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ  ಭಾನುವಾರ  ಮಧ್ಯರಾತ್ರಿ ನಡೆದಿದೆ. ಧರ್ನಪ್ಪ ಪೂಜಾರಿ (65), ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅವರ ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬುವವರು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಆರೋಪಿಗಳು. ಮನೆಯ ಹಿತ್ತಲಿನಲ್ಲಿದ್ದ ತೆಂಗಿನ ಮರದ ತೆಂಗಿನಕಾಯಿ, ಬೊಂಡವನ್ನು ತೆಗೆದು ತಂದೆ ಮಾರಾಟ ಮಾಡುತ್ತಿದ್ದರು. ಇದೇ ವಿಚಾರಕ್ಕೆ ತಂದೆ – ಮಕ್ಕಳಿಬ್ಬರ ಮಧ್ಯೆ ಆಗಾಗ ಜಗಳ […]