‘ಆಳ್ವಾಸ್’ ನಲ್ಲಿ ಸ್ನೇಹ ಕೂಟ ಕಾರ್ಯಕ್ರಮ

Wednesday, October 3rd, 2018
alwasclg

ಮೂಡಬಿದಿರೆ: ಕಾಲೇಜಿನ ಬೆಳವಣಿಗೆಯಲ್ಲಿ ಉಪನ್ಯಾಸಕರ ಪಾತ್ರ ಪ್ರಮುಖವಾಗಿದ್ದು, ಹೊಸ ಯೋಜನೆಗಳನ್ನು ನಿಭಾಯಿಸುವಲ್ಲಿ ಜವಾಬ್ದಾರಿಯುತ ನಡೆ ಅಗತ್ಯ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ “ಸ್ನೇಹ ಕೂಟ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯ ವ್ಯಕ್ತಿತ್ವ ತಿಳಿದುಕೊಳ್ಳಲು ಪ್ರತಿಭೆಗಳು ಸಹಕಾರಿಯಾಗಿವೆ. ವರ್ಷವಿಡೀ ವಿದ್ಯಾರ್ಥಿಗಳಿಗೆ ಕಲಿಸುತ್ತಾ, ವೃತ್ತಿನಿರತರಾದ ಉಪನ್ಯಾಸಕರಿಗೆ ತಮ್ಮಲ್ಲಿದ್ದ ಪ್ರತಿಭೆಗಳನ್ನು ಹೊರಹಾಕಲು ಹಾಗೂ ಆತ್ಮೀಯತೆಯಿಂದ ಒಬ್ಬರನ್ನೊಬ್ಬರು ಬೆರೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. […]

ಹುಸೈನಬ್ಬ ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌‌… ಪೊಲೀಸರು ಸೇರಿ 10 ಮಂದಿ ಅರೆಸ್ಟ್‌

Wednesday, June 6th, 2018
husanaib

ಉಡುಪಿ: ಉಡುಪಿಯಲ್ಲಿ ಇತ್ತೀಚೆಗೆ ನಡೆದ ದನದ ವ್ಯಾಪಾರಿಯ ಸಂಶಯಾಸ್ಪದ ಸಾವಿನ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹಿರಿಯಡ್ಕ ಠಾಣಾ ಪೊಲೀಸರು, ಭಜರಂಗ ದಳದ ಕಾರ್ಯಕರ್ತರ ಜೊತೆಗೂಡಿ ದನದ ವ್ಯಾಪಾರಿ ಹುಸೇನಬ್ಬ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪ ಹಿನ್ನಲೆ ಹಿರಿಯಡ್ಕ ಎಸ್‌‌ಐ ಸಹಿತ ಮೂವರು ಪೊಲೀಸರು ಹಾಗೂ ಏಳು ಮಂದಿ ಭಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಹುಸೈನಬ್ಬ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಮೇ. 30ರಂದು ಬೆಳಗ್ಗೆ ದನದ ವ್ಯಾಪಾರಿ ಹುಸೈನಬ್ಬ […]

ಉಮೇಶ್ ಶೆಟ್ಟಿ ಪ್ರಕರಣ : ಕೋಟಿ ಆಸೆಗಾಗಿ ಗೆಳೆಯನನ್ನು ಗೆಳೆಯರೇ ಕೊಂದರು

Wednesday, January 11th, 2017
umesh shetty

ಮಂಗಳೂರು:  ನಿಡ್ಡೋಡಿ ದಡ್ಡು ಚರ್ಚ್‌ ಬಳಿಯ ಗುಡ್ಡ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹೆಣವಾಗಿದ್ದ  ಉಮೇಶ್ ಶೆಟ್ಟಿ(29 ವರ್ಷ) ಯನ್ನು ಕೋಟಿ ಆಸೆಗಾಗಿ ಆತನ ಗೆಳೆಯರೇ  ಕೊಂದಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಗೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳಲ್ಲಿ ನಾಲ್ವರು ಉಮೇಶ್ ಶೆಟ್ಟಿಯ ಸ್ನೇಹಿತರಾಗಿದ್ದು, ಕೊಲೆಯಲ್ಲಿ ರಾಜೇಶ್ ಶೆಟ್ಟಿ ಪ್ರಕರಣದ ಸೂತ್ರದಾರ ಎಂದು ತಿಳಿದು ಬಂದಿದೆ. ರಾಜೇಶ್ ಶೆಟ್ಟಿ ಹಾಗೂ ಉಮೇಶ್ ಶೆಟ್ಟಿ ಆತ್ಮೀಯ ಮಿತ್ರರಾಗಿದ್ದು, ಎಂಆರ್‌ಪಿಲ್‌ನಲ್ಲಿ ಕೆಲಸ ಮಾಡಿಕೊಂಡು ಕಲ್ಲಿನ ಕೋರೆ ಉದ್ಯಮವನ್ನು ಮಾಡಲು ಚಿಂತನೆ ನಡೆಸಿದ್ದರು. ಮೂರು ವರ್ಷದ ಹಿಂದೆ […]