ನಿಡ್ಡೋಡಿಯಲ್ಲಿ ಕಾಂಗ್ರೆಸ್ ನ ಪ್ರತಿನಿಧಿಗಳನ್ನು ಚಪ್ಪಲಿ ಹಾಗೂ ಹಿಡಿಸೂಡಿ ಹಿಡಿದು ಓಡಿಸಿದ ಸ್ಟಳೀಯರು

Tuesday, July 30th, 2013
Niddodi villagers

ಮಂಗಳೂರು: ನಿಡ್ಡೋಡಿಯಲ್ಲಿ ಬೃಹತ್ ಮಟ್ಟದ ಉಷ್ಣವಿದ್ಯುತ್ ಸ್ಥಾವರದ ಉದ್ದೇಶಿತ  ಪ್ರದೇಶಕ್ಕೆ ಜನಪ್ರತಿನಿಧಿಗಳು ಹಾಗೂ ಮಾಧ್ಯಮದವರು ಸೋಮವಾರ ಬೆಳಿಗ್ಗೆ  ಹೋಗಿದ್ದರು. ಸ್ಥಾವರ ಸ್ಥಾಪನೆಯ ಬಗ್ಗೆ ಜನರಿಗೆ ವಿವರಿಸಲು ಹೋಗಿದ್ದ ಕಾಂಗ್ರೆಸ್ ನ ಪ್ರತಿನಿಧಿಗಳನ್ನು  ಚಪ್ಪಲಿ ಹಾಗೂ ಹಿಡಿಸೂಡಿಯನ್ನು ಹಿಡಿದು ಹಿಂದಕ್ಕೆ ಓಡಿಸಿದ ಘಟನೆ ಸೋಮವಾರ ನಡೆಯಿತು. 500ಕ್ಕೂ ಹೆಚ್ಚು ಸ್ಥಳೀಯರು ಸೇರಿ ಬಂದು ಕಾಂಗ್ರೆಸ್ ಪ್ರತಿನಿಧಿಗಳಿಗೆ ದಿಗ್ಭಂದನ ಹಾಕಿ ಘೇರಾವ್ ಹಾಕಿದರು. ಯಾವುದೇ ಪ್ರತಿನಿಧಿಗಳು ಇಲ್ಲಿಗೆ ಬಂದು ವಿವರಣೆ ನೀಡುವುದನ್ನು ನಾವು ಬಯಸುವುದಿಲ್ಲ. ನಿಮ್ಮ ನಾಯಕ ಅಥವಾ ಶಾಸಕನನ್ನು ಇಲ್ಲಿಗೆ ಕಳುಹಿಸಿ. ಅವರಿಗೆ ನಮ್ಮ ಸಮಸ್ಯೆಗಳನ್ನು […]

ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಗ್ರಾಮಸ್ಥರ ವಿರೋಧ

Wednesday, February 27th, 2013
Niddodi thermal power project

ಮೂಡುಬಿದಿರೆ : ದ.ಕ.ಜಿಲ್ಲೆಯ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ನಿಡ್ಡೋಡಿ ಗ್ರಾಮದಲ್ಲಿ  ನಾಲ್ಕುಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರ ಸ್ಥಾಪಿಸಲುದ್ದೇಶಿಸಿರುವ ವಿಷಯ ಬಹಿರಂಗವಾಗಿದ್ದು, ಕೃಷಿ ಪ್ರಧಾನ ವಾದ ಈ ಪ್ರದೇಶದಲ್ಲಿ  ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಈ ಪರಿಸರದ ಜನ ರಾಜಕೀಯೇತರ ಹೋರಾಟಕ್ಕೆ ಸಜ್ಜಾಗಿದ್ದಾರೆ. ನಿಡ್ಡೋಡಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಗೆ ಸುಮಾರು 4,000 ಎಕ್ರೆ ಜಾಗದ ಅಗತ್ಯತೆ ಇದೆ. ಶೇ. 85ರಷ್ಟು ಕೃಷಿಭೂಮಿಯೇ ಇರುವ ನಿಡ್ಡೋಡಿಯಲ್ಲಿ ಒಂದು ವೇಳೆ ಈ ಯೋಜನೆ ಜಾರಿಗೆ ಬಂದಲ್ಲಿ  ತಲೆತಲಾಂತರಗಳಿಂದ ಕೃಷಿಯನ್ನೇ […]