ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನೂತನ ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟನೆ
Wednesday, October 6th, 2021ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡಿರುವ ನೂತನ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸಚಿವ ಎಸ್.ಅಂಗಾರ ಬುಧವಾರ ಉದ್ಘಾಟನೆಗೊಳಿಸಿದರು. ಕ್ಯಾಂಪ್ಕೋ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಆಕ್ಸಿಜನ್ ಘಟಕ ಸಿದ್ಧಗೊಂಡಿದೆ. ಕಾಂಪ್ಕೋ ಸಂಸ್ಥೆ 78 ಲಕ್ಷರೂ ವೆಚ್ಚ ಭರಿಸಿದೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಆನ್ಲೈನ್ ಮೂಲಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋವಿಡ್ ಪ್ರಥಮ ಮತ್ತು ಎರಡನೇ ಅಲೆಯಲ್ಲಿ ಆಮ್ಲಜಕದ ಬೇಡಿಕೆಯನ್ನು ಗಮನಿಸಿ ಆಮ್ಲಜನಕದ ಬೇಡಿಕೆಗೆ ಶಾಶ್ವತ ಪರಿಹಾರಕ್ಕಾಗಿ ನಮ್ಮ ಸರಕಾರ ನಿರಂತರ ಶ್ರಮ […]