ಕುಶಾಲನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎಸ್.ಡಿ.ಪಿ.ಐ ಪ್ರತಿಭಟನೆ

Thursday, February 27th, 2020
SDPI

ಮಡಿಕೇರಿ : ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದಾಳಿಯಲ್ಲಿ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ ಕುಶಾಲನಗರ ಎಸ್.ಡಿ.ಪಿ.ಐ ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಪಟ್ಟಣದ ಕಾರ್ಯಪ್ಪ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹನೀಫ್, ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಎದುರಿಸಲಾಗುವುದು ಎಂದು ಮಾಜಿ ಶಾಸಕ ಮತ್ತು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ಹೇಳಿಕೆಯ ಬೆನ್ನಲ್ಲೇ ಈ ಘರ್ಷಣೆ […]

ಮಂಗಳೂರು : ಎಸ್.ಡಿ.ಪಿ.ಐ ಕಾವೂರು ವತಿಯಿಂದ ರಕ್ತದಾನ ಶಿಬಿರ

Saturday, August 17th, 2019
Kaavuru

ಮಂಗಳೂರು : ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾವೂರು ವಲಯ ಹಾಗೂ ರೆಡ್ ಕ್ರಾಸ್ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯ ಪ್ತಯುಕ್ತ ಶಾಂತಿ ನಗರ  ಕೇಂದ್ರ ಮೈದಾನದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ಕಾವೂರು ವಲಯಾಧ್ಯಕ್ಷ ರಫೀಕ್ ಕೂಳೂರು ವಹಿಸಿದರು. ರಕ್ತದಾನದ ಮಹತ್ವಡಾ ಕುರಿತು ವೈದ್ಯರಾದ ಡಾ. ಅಭಿಲಾಶ್ ಮತ್ತು ಸಂಸ್ಥೆಯ ಕೋ ಆರ್ಡಿನೇಟ್ ಪ್ರವೀಣ್ ಕುಮಾರ್ ಮಾತನಾಡಿದರು. ಶಿಬಿರದಲ್ಲಿ ಒಟ್ಟು 83 ಯುನಿಟ್ ರಕ್ತ ಸಂಗ್ರಹಿಸಲಾಯಿತು.  

ಎಸ್ ಡಿ ಪಿ ಐ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಅಥಾವುಲ್ಲಾ ಜೋಕಟ್ಟೆ ಆಯ್ಕೆ!

Wednesday, June 27th, 2018
sdpi-party

ಮಂಗಳೂರು: ಎಸ್ ಡಿ ಪಿ ಐ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಅಥಾವುಲ್ಲಾ ಜೋಕಟ್ಟೆ ಆಯ್ಕೆಯಾಗಿದ್ದಾರೆ. ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ನಡೆದ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆಯ ಬಳಿಕ ನಡೆದ ಆಂತರಿಕ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರದ ಪ್ರತಿನಿಧಿಗಳು ಮತದಾನದ ಮೂಲಕ ಮುಂದಿನ ಮೂರು ವರ್ಷಗಳ ಅವಧಿಯ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಿದರು. ಉಪಾಧ್ಯಕ್ಷರಾಗಿ ಇಕ್ಬಾಲ್ ಗೂಡಿನಬಳಿ, ಆಂಟನಿ.ಪಿ.ಡಿ, ಪ್ರಧಾನ ಕಾರ್ಯದರ್ಶಿಯಾಗಿ ಶಾಹುಲ್ ಎಸ್. ಎಚ್, ಕಾರ್ಯದರ್ಶಿಯಾಗಿ […]

ಎಸ್.ಡಿ.ಪಿ.ಐ ನಿಂದ ರಾಜಕೀಯ ಅಸ್ಥಿರತೆ ಸರಿದೂಗಿಸಲು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

Friday, October 15th, 2010
ಎಸ್.ಡಿ.ಪಿ.ಐ ನಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಜನತೆ ಹಿಂದೆಂದೂ ಕಂಡಿರದ ನಾಟಕೀಯ ರಾಜಕೀಯ ನಡೆಯುತ್ತಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತಮ್ಮದು ಭ್ರಷ್ಟಾಚಾರ ರಹಿತ, ರೈತರ ಬಡವರ ಪರ ಆಡಳಿತ ನೀಡುತ್ತೇವೆಂದು ಜನತೆಗೆ ಆಶ್ವಾಸನೆ ನೀಡಿ ಈ ಸರಕಾರದಿಂದ ನಿರೀಕ್ಷಿಸಿದ್ದ ಎಲ್ಲಾ ಭರವಸೆಗಳನ್ನು ಹುಸಿಯಾಗಿಸಿದೆ. ಬಿಜೆಪಿ ಸರಕಾರಕ್ಕೆ ಆಡಳಿತ ನಡೆಸಲು ಈ ರಾಜ್ಯದ ಜನತೆ ಸ್ಪಷ್ಟ ಜನಾದೇಶ ನೀಡಿದ್ದರೂ, ಇತರ ಪಕ್ಷಗಳಿಂದ ಚುನಾಯಿತರಾದ ಜನಪ್ರತಿನಿಧಿಗಳನ್ನು ಹಣ ಹಾಗೂ ಮಂತ್ರಿಗಿರಿಯ ಅಮಿಷ ತೋರಿಸಿ ಕುದುರೆ ವ್ಯಾಪಾರ  ನಡೆಸುವ ಮೂಲಕ “ಆಪರೇಶನ್ ಕಮಲ”ದ […]