ರಾಜ್ಯದ ಆರೋಗ್ಯ ಮೂಲಸೌಕರ್ಯ ಅಭಿವೃದ್ದಿಗೆ ಕೇಂದ್ರದಿಂದ ನೆರವು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Saturday, July 31st, 2021
Bommai-meets-Health-minister

ನವದೆಹಲಿ  : ಕೋವಿಡ್ 3 ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆ ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಶ್ರೀ ಮನ್ ಸುಖ್ ಮಾಂಡವೀಯ, ಕೇಂದ್ರ ಆರೋಗ್ಯ ಸಚಿವರು ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. […]

ಮಕ್ಕಳಾಗದವರಿಗೆ ಮಕ್ಕಳು ಮಾಡುವ ಔಷಧಿ ನೀಡುವುದಾಗಿ ನಂಬಿಸಿ ಹಲವರಿಗೆ ಮೋಸ, ಓರ್ವನ ಬಂಧನ

Friday, October 2nd, 2020
manjunatha

ಕಾರವಾರ: ಮಕ್ಕಳಾಗದವರಿಗೆ ಮಕ್ಕಳು ಮಾಡುವ ಔಷಧಿ ನೀಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ,  ಮಕ್ಕಳಾಗದ ಕುಟುಂಬದವರನ್ನು ಸಂಪರ್ಕಿಸಿ ಅವರಿಗೆ ಮಕ್ಕಳಾಗುವ ಗಿಡುಮೂಲಿಕೆ ಔಷಧಿ ಈತ ನೀಡುತ್ತಿದ್ದ. ಬಂಧಿತನನ್ನು ಆಂಧ್ರಪ್ರದೇಶದ ಅನಂತಪುರ ಮೂಲದ ಬಂಡಿ ಮಂಜುನಾಥ ಎಂದು ಗುರುತಿಸಲಾಗಿದೆ. ಶಿರಸಿ ಗ್ರಾಮೀಣ ಪ್ರದೇಶದಲ್ಲಿ ಪರಿಚಯಸ್ಥರಂತೆ ವರ್ತಿಸಿ ಅವರಿಗೆ ಮಕ್ಕಳಾಗುವ ಗಿಡಮೂಲಿಕೆ ಔಷಧಿ ನೀಡುವುದಾಗಿ ಹೇಳಿ ಸಾವಿರಾರು ರೂಪಾಯಿಗಳನ್ನು ಪಡೆದು ವಂಚಿಸುತ್ತಿದ್ದ ಎನ್ನಲಾಗಿದ್ದು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತ ಈಗ ನ್ಯಾಯಾಂಗ ಬಂಧನದಲ್ಲಿ ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮಕ್ಕಳಾಗದ ಕುಟುಂಬಗಳ ಮಾಹಿತಿ ಸಂಗ್ರಹಿಸಿ […]

ವೆನ್ಲಾಕ್ ಆಸ್ಪತ್ರೆಯಲ್ಲಿ ಔಷಧಿಗಳ ಹಾಗೂ ಆಹಾರ ಪದಾರ್ಥಗಳ ಕಳ್ಳ ಸಾಗಾಣಿಕೆ – ಲೈಸನ್ಸ್ ಪಡೆಯದ ಸೆಕ್ಯುರಿಟಿ ಸಂಸ್ಥೆಯಿಂದ ಕಾವಲು

Saturday, November 3rd, 2018
protest-4

ಮಂಗಳೂರು: ಕಳೆದ 6-7 ವರ್ಷಗಳಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಲೈಸನ್ಸ್ ಪಡೆಯದ ಸೆಕ್ಯುರಿಟಿ ಸಂಸ್ಥೆಗೆ  ಗುತ್ತಿಗೆ ನೀಡಿದ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರ ವಿರುದ್ದ ಸಮಗ್ರ ತನಿಖೆಗೆ ಒತ್ತಾಯಿಸಿ  CITU ಮಂಗಳೂರು ನಗರ ಸಮಿತಿಯ ನೇತ್ರತ್ವದಲ್ಲಿ ನವೆಂಬರ್  3 ನಿವಾರ  ನಗರದ ಮಿನಿ ವಿಧಾನಸೌಧದೆದುರು ಪ್ರತಿಭಟನಾ ಪ್ರದರ್ಶನ ಜರುಗಿತು. ಲೈಸನ್ಸ್ ಪಡೆಯದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಅಧೀಕ್ಷಕಿಯಾದ ಡಾ.ರಾಜೇಶ್ವರಿಯವರ ನಡೆಯು ತೀವ್ರ ಸಂಶಯಕ್ಕೆಡೆ ಮಾಡಿದ್ದು,ಇದನ್ನು ಸಮಗ್ರ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ CITU […]

ಮಣಿಪಾಲ್ ಆರೋಗ್ಯ ಕಾರ್ಡ್ ಪಡೆಯಲು ಕೊನೆಯ ದಿನಾಂಕ ಜುಲೈ 31

Wednesday, July 24th, 2013
kmc Health Card

ಮಂಗಳೂರು: ದ.ಕನ್ನಡ ಮತ್ತು ಉತ್ತರ ಕೇರಳದಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆಯ 2013ನೇ ನೊಂದಾವಣೆಯು ಪ್ರಾರಂಭಗೊಂಡಿದೆ. ಇದು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು ಒಳ ಮತ್ತು ಹೊರರೋಗಿಗಳ ವಿಭಾಗದಲ್ಲಿ ಬಹುದೊಡ್ಡ ಮೊತ್ತದ ರಿಯಾಯಿತಿ ಪಡೆಯಬಹುದು. ಕಾರ್ಡ್ ನ ನೊಂದಾವಣೆಯು ಜುಲೈ 31 ಕೊನೆಗೊಳ್ಳುವುದೆಂದು ಕೆ.ಎಂ.ಸಿ. ಆಸ್ಪತ್ರೆಯ ಡೀನ್ ಡಾ.ಎಂ.ವಿ.ಪ್ರಭುರವರು ಮಂಗಳವಾರ ನಗರದಲ್ಲಿ ನಡೆದ ಸುದ್ದಿಘೊಷ್ಠಿಯಲ್ಲಿ ತಿಳಿಸಿದರು. ಕೆ.ಎಂ.ಸಿ. ಆಸ್ಪತ್ರೆಯ ಮಧುಸೂದನ್ ಉಪಾದ್ಯರವರು ಕಾರ್ಡ್ ನ ಪ್ರಯೋಜನಗಳ ಬಗ್ಗೆ ವಿವರಿಸುತ್ತಾ  ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಉಚಿತ ವೈದ್ಯಕೀಯ ಸಮಾಲೋಚನೆ, […]