ಪುರಸಭೆ ಸದಸ್ಯ, ತಾಯಿ, ಸಹೋದರ ಸೇರಿ ಒಂದೇ ಕುಟುಂಬದ ಮೂವರು ಕರೊನಾಗೆ ಬಲಿ

Friday, June 25th, 2021
Vadi-Death

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕರೊನಾಗೆ ಪುರಸಭೆ ಸದಸ್ಯ ಮತ್ತು ಇವರ ತಾಯಿ, ಸಹೋದರ ಸೇರಿ ಒಂದೇ ಕುಟುಂಬದ ಮೂವರು ಬಲಿಯಾಗಿದ್ದು, ಮತ್ತೊಬ್ಬ ಸಹೋದರನ ಸ್ಥಿತಿ ಗಂಭೀರವಾಗಿರುವ ಘಟನೆ ಈ ಘಟನೆ ಸಂಭವಿಸಿದೆ. ಆರ್ಸಿ ತಾಂಡದ ನಿವಾಸಿ ಚಾಂದಿಬಾಯಿ ನಾಯಕ್ (74), ಇವರ ಪುತ್ರ ವಾಡಿ ಪುರಸಭೆ ಸದಸ್ಯ ಪ್ರಕಾಶ್ ನಾಯಕ್(46) ಮತ್ತು ಕಿರಿಯ ಪುತ್ರ ಭಜನ್ ನಾಯಕ್(32) ಮೃತರು. ಕಳೆದ ವಾರ ಪ್ರಕಾಶ್ ನಾಯಕ್ ಕರೊನಾಗೆ ಬಲಿಯಾಗಿದ್ದರು. ಇವರ ಕಿರಿಯ ಸಹೋದರ ಭಜನ್ ಮತ್ತು […]

ಕರೊನಾ ಸಂದರ್ಭದಲ್ಲೇ ಅತಿಥಿಗಳ ಓಡಾಟಕ್ಕೆ 36 ಹೊಸ ವಾಹನಗಳನ್ನು ಖರೀದಿಸಿದ ರಾಜ್ಯ ಸರಕಾರ

Saturday, June 19th, 2021
innova-cresta

ಬೆಂಗಳೂರು:  ರಾಜ್ಯ ಸರಕಾರ ಅತಿಥಿಗಳ ಓಡಾಟಕ್ಕೆ 36 ಐಷಾರಾಮಿ ವಾಹನಗಳನ್ನು ಕೊಂಡಿದ್ದು ಇದಕ್ಕಾಗಿ 8.11 ಕೋಟಿ ರೂ. ವೆಚ್ಚ ಮಾಡಿದೆ. ಕರೊನಾದಂತಹ ಸಂದರ್ಭದಲ್ಲಿ ಕಳೆದೊಂದು ವರ್ಷದಿಂದೀಚೆಗೆ ಸಂಕಷ್ಟಮಯ ಸನ್ನಿವೇಶ ಇರುವಾಗಲೇ ಸರಕಾರ ಈ ನಿರ್ಧಾರ ಕೈಗೊಂಡಿರುವುದು ಆಚಾರಿ ಮೂಡಿಸಿದೆ . 36 ಹೊಸ ವಾಹನಗಳ ಪೈಕಿ 35 ಇನ್ನೋವಾ ಕ್ರಿಸ್ಟಾ ಆಗಿದ್ದು, ಒಂದು ವೋಲ್ವೋ ಸೇರಿದೆ. ರಾಜ್ಯಕ್ಕೆ ಬರುವ ಅತಿಥಿಗಳು, ಕೇಂದ್ರದಿಂದ ಬರುವ ಅಧಿಕಾರಿಗಳು, ರಾಜತಾಂತ್ರಿಕರು ಹಾಗೂ ವಿಶೇಷ ಸಂದರ್ಭಕ್ಕೆ ಈ ದುಬಾರಿ ವಾಹನಗಳನ್ನು  ಬಳಸಿಕೊಳ್ಳಲಾಗುತ್ತದೆಯಂತೆ. ಇನ್ನೊವಾ ಕ್ರಿಸ್ಟಾ ಬೆಂಗಳೂರಲ್ಲಿ […]

ಹೆರಿಗೆಯಾಗಿ 24ನೇ ದಿನಕ್ಕೇ ಮಹಾಮಾರಿ ಕರೊನಾಗೆ ಮಹಿಳೆ ಬಲಿ

Saturday, June 5th, 2021
nirmala

ಕೊಪ್ಪಳ: ತಾಲೂ ಕಿನ  ಗುಳದಳ್ಳಿ ಗ್ರಾಮದ ಮಹಿಳೆಯೊಬ್ಬರು ಹೆರಿಗೆಯಾಗಿ 24ನೇ ದಿನಕ್ಕೇ ಮಹಾಮಾರಿ ಕರೊನಾಗೆ  ಬಲಿಯಾಗಿದ್ದು, ಹಸುಗೂಸು ತಾಯಿ ಇಲ್ಲದೆ ತಬ್ಬಲಿ ಆಗಿದೆ. ನಿರ್ಮಲಾ ವೀರಯ್ಯ  ಮೃತರಾದ ಮಹಿಳೆ. ನಿರ್ಮಲಾಗೆ ಹೆರಿಗೆ ಆದ ಬಳಿಕ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಕರೊನಾ ದಿಂದಾಗಿ ಬ್ರಿಟನ್ ವಿಶ್ವವಿದ್ಯಾಲಯಗಳಿಗೆ ಶೇ.50 ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ

Tuesday, July 7th, 2020
london Education

ಲಂಡನ್: ಬ್ರಿಟನ್ ವಿಶ್ವವಿದ್ಯಾಲಯಗಳೀಗ ಕರೊನಾ ದಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕುವ ಆತಂಕಕ್ಕೀ ಡಾಗಿವೆ. ಕರೊನಾ ಸೋಂಕು ಜಾಗತಿಕವಾಗಿ ಹಬ್ಬಿದ ಬಳಿಕ ವಿದ್ಯಾಭ್ಯಾಸಕ್ಕಾಗಿ ಬ್ರಿಟನ್ಗೆ ಆಗಮಿಸುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಇದಂದಾಗಿ ಸುಮಾರು 13 ವಿಶ್ವವಿದ್ಯಾಲಯಗಳು -13 ಸಾವಿರ ಕೋಟಿಯಿಂದ 40 ಸಾವಿರ ಕೋಟಿ ರೂ. ವರೆಗೆ ನಷ್ಟಕ್ಕೆ ಗುರಿಯಾಗುವ ಅಂದಾಜಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ಸಂಕಷ್ಟದಿಂದ ಪಾರಾಗಲು ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಿರೀಕ್ಷಿಸುತ್ತಿವೆ. ಸೆಪ್ಟೆಂಬರ್ನಲ್ಲಿ ಕಾಲೇಜಿಗೆ ನೋಂದಣಿ ಶುರುವಾಗುವ ವೇಳೆಗೆ ಶೇ.50 ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ […]