ಕರ್ನಾಟಕದ ವಿದ್ಯಾರ್ಥಿ ರಷ್ಯಾದ ಪಡೆಗಳ ದಾಳಿಗೆ ಉಕ್ರೇನ್ ನಲ್ಲಿ ಬಲಿ

Tuesday, March 1st, 2022
Naveen-Shekarappa

ಹಾವೇರಿ: ಉಕ್ರೇನ್‌ನಲ್ಲಿ  ಮಂಗಳವಾರ ಬೆಳಗ್ಗೆ ರಷ್ಯಾದ ಪಡೆ ನಡೆಸಿದ ದಾಳಿಯಲ್ಲಿ  ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಆತನ ಜೊತೆಗಿದ್ದ ಸ್ನೇಹಿತರು ಖಚಿತ ಪಡಿಸಿದ್ದಾರೆ. ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವನ್ನು ಪ್ರವೇಶಿಸಿ, ಉಕ್ರೇನ್ ಸರ್ಕಾರದ ಮೇಲೆ ಒತ್ತಡವನ್ನು ಹೇರಲು ಕಳೆದ ಎರಡು ದಿನಗಳಿಂದ ನಾಗರಿಕರ ಮೇಲೂ ದಾಳಿಯನ್ನು ಪ್ರಾರಂಭಿಸಿದೆ. ಮೃತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಜ್ಞಾನಗೌಡರ್ (21) ಎಂದು ಗುರುತಿಸಲಾಗಿದೆ. ಅವರು ಕಳೆದ ನಾಲ್ಕು ವರ್ಷಗಳಿಂದ ಖಾರ್ಕಿವ್ […]

ಕರ್ನಾಟಕದಿಂದ ಹೊಸದಾಗಿ ನೇಮಕಗೊಂಡ 6 ಕೇಂದ್ರ ಸಚಿವರನ್ನು ಬಿಜೆಪಿ ದಕ್ಷಿಣ ಕನ್ನಡ ಸಮಿತಿ ಅಭಿನಂದಿಸಿದೆ

Thursday, July 22nd, 2021
BJP Congratulations

ಕರ್ನಾಟಕದ 19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾ ವಿಧಿ ಸ್ವೀಕಾರ

Sunday, July 11th, 2021
thawar-chand-gehlot

ಬೆಂಗಳೂರು: ತಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಗೆಹ್ಲೋಟ್ ರಾಜ್ಯದ 19ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಅಭಯ್ ಶ್ರೀನಿವಾಸ್ ಓಕಾ ಅವರು ತಾವರ್ ಚಂದ್ ಗೆಹ್ಲೋಟ್‌ಗೆ ಪ್ರಮಾಣವಚನ ಬೋಧಿಸಿದ್ದಾರೆ. ರಾಜಭವನದಲ್ಲಿ ನಡೆದ ಕಾರ್ಯಕ್ರ್ಮದಲ್ಲಿ ನಿರ್ಗಮಿತ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್. ಅಶೋಕ್, ಸಂಸದೆ ಸುಮಲತಾ ಅಂಬರೀಶ್ ಇನ್ನೂ ಹಲವಾರು ಮಂದಿ ಬಾಗವಹಿಸಿದ್ದರು.

ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದ ಕರ್ನಾಟಕದ ನಾಲ್ವರು ಸಂಸದರು

Wednesday, July 7th, 2021
cabinet

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ  ಕೇಂದ್ರ ಸಂಪುಟ ಪುನರ್ ರಚನೆ ಗೊಂಡಿದ್ದು ರಾಷ್ಟ್ರಪತಿ ಭವನದಲ್ಲಿ ಜು.7 ರಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಎ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಭಗವಂತ್ ಖೂಬಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಮೊದಲಿಗರಾಗಿ ರಾಜೀವ್ ಚಂದ್ರಶೇಖರ್ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ರಾಜೀವ್ ಚಂದ್ರಶೇಖರ್ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಅಧಿಕಾರ […]

ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತರರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆ

Sunday, June 20th, 2021
Inter-state-flood

ಬೆಂಗಳೂರು  : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತರರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆ ನಡೆಸಿದರು. ಮಹಾರಾಷ್ಟ್ರ ರಾಜ್ಯದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳ […]

ಕರ್ನಾಟಕ ಮತ್ತು ಕೇರಳದಲ್ಲಿ ತುಳುವನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಘೋಷಿಸಲು ಟ್ವಿಟ್ ಅಭಿಯಾನ

Sunday, June 13th, 2021
Tulu Language

ಮಂಗಳೂರು:  ಕರ್ನಾಟಕ ಮತ್ತು ಕೇರಳ ಸರಕಾರ ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಜೈ ತುಳುನಾಡು ಸೇರಿದಂತೆ ಇತರೇ ಸಂಘಟನೆಗಳು ಮತ್ತು ತುಳು ಭಾಷಿಗರಿಂದ ರವಿವಾರದಂದು ಟ್ವಿಟರ್ ಅಭಿಯಾನ ಆರಂಭಗೊಂಡಿದೆ. ರವಿವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಆಯೋಜಿಸಲಾದ ಟ್ವೀಟ್ ಅಭಿಯಾನಕ್ಕೆ ಸಾವಿರಾರು ಮಂದಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಟ್ವೀಟ್ ಅಭಿಯಾನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 1 ಲಕ್ಷಕ್ಕೂ ಹೆಚ್ಚಿನ ಟ್ವೀಟ್ ಗಳು ದಾಖಲಾಗಿವೆ. ತುಳುಭಾಷೆಯ ಸ್ಥಾನಮಾನಕ್ಕಾಗಿ ಈ ಹಿಂದೆಯೂ ಟ್ವೀಟ್‌ […]

ಇನ್ನು ಮುಂದೆ ಕರ್ನಾಟಕದಲ್ಲಿ ಬಸ್ಸುಗಳ ಮೇಲೆ ಕೆಎಸ್ಆರ್‌ಟಿಸಿ ಇರಲ್ಲ, ಅದು ಕೇರಳದ ಪಾಲಾಗಿದೆ

Thursday, June 3rd, 2021
ksrtcBus.

ಮಂಗಳೂರು  : ಕರ್ನಾಟಕ ಮತ್ತು ಕೇರಳ ಸರ್ಕಾರಿ ಬಸ್ಸುಗಳು ಕೆಎಸ್ಆರ್‌ಟಿಸಿ ಅಂತ ಕಡಿತ ಗೊಳಿಸಿದ ಇಂಗ್ಲಿಷ್ ಪದ ಬಳಸುತ್ತಿತ್ತು. ಆದರೆ ಆ  ಕೆಎಸ್ಆರ್‌ಟಿಸಿ  ಪದವನ್ನು ಕೇರಳ ಮಾತ್ರ ಪದ ಬಳಸಬೇಕು ಎಂದು ಕೇಂದ್ರ ವ್ಯಾಪಾರ ಗುರುತು ನೋಂದಾವಣಿ(ಟ್ರೇಡ್ ಮಾರ್ಕ್ ರಿಜಿಸ್ಟಿ) ಅಂತಿಮ ತೀರ್ಪು ನೀಡಿದೆ. ಕೇರಳ ಮಾತ್ರ ಇನ್ನು ಮುಂದೆ ತನ್ನ ಸಾರಿಗೆ ಸಂಸ್ಧೆಯನ್ನು ಕೆಎಸ್ಆರ್‌ಟಿಸಿ ಅಂತ ಬಳಸಬೇಕು. ಅಲ್ಲದೆ ಕರ್ನಾಟಕ ರಾಜ್ಯದ ಸಾರಿಗೆ ಬಸ್ ಮತ್ತು ಇತರ ಕಡೆ ನೋದಾಯಿಸಿದ್ದ, ಪ್ರಕಟನೆ ಬೋರ್ಡ್ ಎಲ್ಲ ಲೋಗೋ ಮತ್ತು ಚಿತ್ರಗಳನ್ನು […]

ಕನ್ನಡಪರ ಸಂಘಟನೆಗಳು ಬಂದ್ ಮಾಡಲು ಬಂದಲ್ಲಿ ಅವರಿಗೆ ಕಲ್ಲು ಹೊಡೆದು ಕಳುಹಿಸಿ : ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ

Monday, November 23rd, 2020
Rishi Kumara Swamy

ಮಂಗಳೂರು :  ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಬಂದ್ ಮಾಡಲು ಬಂದಲ್ಲಿ ಅವರಿಗೆ ಕಲ್ಲು ಹೊಡೆದು ಕಳುಹಿಸಿ ಎಂದು ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮಂಗಳೂರಿಲ್ಲಿ ಸೋಮವಾರ  ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಕೊರೋನಾದಿಂದ ತತ್ತರಿಸಿದೆ, ಕನ್ನಡಪರ ಸಂಘಟನೆಯವರು ಪ್ರತಿಯೊಂದಕ್ಕೂ ಬಂದ್ ಎಂದು ಹೇಳುತ್ತಾರಲ್ಲಾ, ಕರ್ನಾಟಕ ಏನು ಅವರ ಅಪ್ಪನ ಆಸ್ತಿಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮರಾಠರಿಗೆ ಅಭಿವೃದ್ಧಿ ಪ್ರಾಧಿಕಾರ ಮಾಡಿದರೆ ಕನ್ನಡಪರ ಸಂಘಟನೆಗಳಿಗೆ ಏನು ನಷ್ಟ?. ಕರ್ನಾಟಕದ […]

ಕರ್ನಾಟಕಕ್ಕೆ ತೆರಳಿ ಮರಳುವ ಪ್ರಯಾಣಿಕರಿಗೆ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯವಿಲ್ಲ : ಜಿಲ್ಲಾಧಿಕಾರಿ

Wednesday, August 26th, 2020
sajith-babu

ಕಾಸರಗೋಡು : ಕೊರೋನ ಕೋರ್ ಸಮಿತಿಯ ವೀಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕರ್ನಾಟಕಕ್ಕೆ ತೆರಳಿ ಮರಳುವ ದಿನನಿತ್ಯದ ಪ್ರಯಾಣಕ್ಕೆ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಮುಂದೆ ಆಂಟಿಜೆನ್ ಟೆಸ್ಟ್ ನಡೆಸಿ, ಅಲ್ಲಿ ಲಭಿಸುವ ನೆಗೆಟಿವ್ ಸರ್ಟಿಫಿಕೆಟ್ ಸಹಿತ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿದರೆ ಸಾಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದಕ್ಕಾಗಿ ಜಿಲ್ಲಾ ವೈದ್ಯಾಧಿಕಾರಿ ತಲಪ್ಪಾಡಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಸೌಲಭ್ಯ ಏರ್ಪಡಿಸುವರು. ಪ್ರತಿ ಪ್ರಯಾಣಿರು […]

ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ, ಹುಡುಗಿಯ 77.74%. ಬಾಲಕರು 66.41%

Monday, August 10th, 2020
sslc Result

ಬೆಂಗಳೂರು: ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರಾಜ್ಯಾದ್ಯಂತ 8, 48, 203 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 19, 086 ವಿದ್ಯಾರ್ಥಿಗಳ ಕೊರತೆಯುಂಟಾಗಿತ್ತು. ರಾಜ್ಯಾದ್ಯಂತ 34 ಶೈಕ್ಷಣಿಕ ಜಿಲ್ಲೆಗಳ 22 ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು ಎಂದು ಹೇಳಿದರು. ಕೊರೊನಾ ಸೋಂಕಿನ ಭೀತಿಯಿಂದ 18,067 ವಿದ್ಯಾರ್ಥಿಗಳು ಮೊದಲು ಪರೀಕ್ಷೆ […]