ಪಿಡಬ್ಲೂಡಿ ಕಂಟ್ರಾಕ್ಟರ್ ಲೈಂಗಿಕ ಹಗರಣ – ದೂರು ಕೊಟ್ಟವರನ್ನೇ ಅರೆಸ್ಟ್ ಮಾಡಿದ ಪೊಲೀಸರು

Wednesday, September 26th, 2018
shashi

ಮಂಗಳೂರು :  ಪಿಡಬ್ಲೂಡಿ  ಕಂಟ್ರಾಕ್ಟರ್ ಒಬ್ಬರ ಲೈಂಗಿಕ ಹಗರಣಗಳನ್ನು ಪೊಲೀಸರಿಗೆ ಸಾಕ್ಷಿ ಸಮೇತ ನೀಡಲು ಹೋದ ಸಾಮಾಜಿಕ ಕಾರ್ಯಕರ್ತೆ ಮತ್ತು ಇನ್ನಿಬ್ಬರನ್ನು ಬಂಧಿಸಿದ ಘಟನೆ ಬರ್ಕೆಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆ, ಬಿಜೆಪಿ ಮಹಿಳಾ ಘಟಕಗಳಲ್ಲಿ ಗುರುತಿಸಿ ಕೊಂಡಿರುವ ಶ್ರೀಲತಾಳ  ಮತ್ತು ಬಿಜೆಪಿ ಕಾರ್ಯಕರ್ತ ರಾಕೇಶ್, ಸುಜಿತ್ ಪೊಲೀಸರಿಂದ ಬಂಧನಕ್ಕೊಳಗಾದವರು. ಮಂಗಳೂರಿನ ಪಿಡಬ್ಲೂಡಿ ಕಂಟ್ರಾಕ್ಟರ್ ಕೇರಳ ಮೂಲದ ವಿ. ಶಶಿ (70)  ವ್ಯಾಸನಗರದ ಪ್ಲಾಟ್‌ನಲ್ಲಿ ತನ್ನ ಮಗನೊಂದಿಗೆ  ವಾಸವಾಗಿದ್ದಾನೆ. ಈತನ ಪತ್ನಿಗೆ ಕ್ಯಾನ್ಸರ್. ಹೀಗಾಗಿ 8 ವರ್ಷಗಳಿಂದ ಎರ್ನಾಕುಲಂನಲ್ಲಿಯೇ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುತ್ತಿಗೆದಾರನಾಗಿ […]

ಕರ್ನಾಟಕ ಬಂದ್: ಮಂಗಳೂರಿನಲ್ಲಿ ‘ಕರವೇ’ ಕಾರ್ಯಕರ್ತರ ಬೆವರಿಳಿಸಿದ ‘ತುರವೇ’

Thursday, January 25th, 2018
strike-mangaluru

ಮಂಗಳೂರು: ಮಹಾದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ಮಂಗಳೂರಿನಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಇಂದಿನ ಬಂದ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಯಾವೊಂದು ಸಂಘಟನೆಗಳೂ ಬೆಂಬಲ ಘೋಷಿಸಿರದ ಹಿನ್ನೆಲೆಯಲ್ಲಿ ಬಂದ್ ಬಿಸಿ ಕರಾವಳಿ ಭಾಗಕ್ಕೆ ತಟ್ಟಿಲ್ಲ. ಜಿಲ್ಲೆಯಲ್ಲಿ ಬಂದ್ ಇಲ್ಲದಿದ್ದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ಮುಂಜಾನೆ ಸಂಚಾರ ಸ್ಥಗಿತಗೊಳಿಸಿದ್ದವು. ಇದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ಜನಿಕರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ […]

ರಾಜ್ಯೋತ್ಸವ ದಿನ ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿ ಅಪಚಾರ

Saturday, November 4th, 2017
rajyothsava

ಮಂಗಳೂರು: ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ದಿನ ಅಪಚಾರವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕನ್ನಡ ಭುವನೇಶ್ವರಿ, ರಾಣಿ ಅಬ್ಬಕ್ಕ ಹಾಗೂ ಒನಕೆ ಓಬವ್ವ ವೇಷಧಾರಿಗಳನ್ನು ಉಳ್ಳಾಲ ಪುರಸಭೆ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಕಸ ವಿಲೇವಾರಿ ಮಾಡುವ ವಾಹನದಲ್ಲಿ ಮೆರವಣಿಗೆ ಮಾಡಿರುವ ಚಿತ್ರ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಚಿತ್ರವನ್ನು ಕಂಡ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕೆಂಡಾಮಂಡಲವಾಗಿದ್ದು, ಇದರ ವಿರುದ್ಧ ನಾಳೆ ಉಳ್ಳಾಲ ಪುರಸಭೆ ಮುಂದೆ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಉಳ್ಳಾಲ ಪುರಸಭೆ ಹಾಗೂ ಕೆಲ […]

ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ

Sunday, September 10th, 2017
KRV

ಮಂಗಳೂರು : ಐಬಿಪಿಎಸ್‌ ಪ್ರವೇಶ ಪರೀಕ್ಷಾ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬೋಂದೆಲ್‌ನ ಬೆಸೆಂಟ್ ಕಾಲೇಜಿನಲ್ಲಿ  ನಡೆಯುತ್ತಿರುವ  ಐಬಿಪಿಎಸ್‌ ಪ್ರವೇಶ ಪರೀಕ್ಷಾ ಕೇಂದ್ರಕ್ಕೆ  ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಕಾವೂರು ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಕರ್ನಾಟಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಸೆ.9ರಿಂದ ಪ್ರವೇಶ ಪರೀಕ್ಷೆ ಆರಂಭಗೊಂಡಿದ್ದು, ಸೆ.24ರವರೆಗೆ […]

ಉಡುಪಿ : ಕನ್ನಡ ಮಾಧ್ಯಮ ಶಾಲೆ ಉಳಿಸಲು ಕರ್ನಾಟಕ ರಕ್ಷಣಾ ವೇದಿಕೆಯಿಂದ ‘ಕಾಸರಗೋಡು ಚಲೋ’ ಗೆ ಚಾಲನೆ

Thursday, June 8th, 2017
Kasaragod Chalo

ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆಯು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿರುವ ಕೇರಳ ಸರಕಾರದ ಕ್ರಮವನ್ನು ವಿರೋಧಿಸಿ  ಗುರುವಾರ ಹಮ್ಮಿಕೊಳ್ಳಲಾದ ಕಾಸರಗೋಡು ಚಲೋ ಕಾರ್ಯಕ್ರಮಕ್ಕೆ ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಯ ಕ್ಲಾಕ್ ಟವರ್ ಎದುರು ಚಾಲನೆ ನೀಡಿದರು. ಕಾಸರಗೋಡು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಗೊಳಿಸಿರುವುದರಿಂದ ಕನ್ನಡ ಭಾಷೆ ನಶಿಸಿ ಹೋಗುತ್ತದೆ. ಆ ರೀತಿ ಆಗದಂತೆ ರಾಜ್ಯ ನಾಯಕರು ಎಚ್ಚರ ವಹಿಸಬೇಕಾಗಿದೆ. ಗಡಿನಾಡಿನಲ್ಲಿ ಕನ್ನಡಗರಿಗೆ ಆಗುತ್ತಿರುವ […]

ಜೂ.8 ರಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ‘ಕಾಸರಗೋಡು ಚಲೋ’

Monday, June 5th, 2017
kannada

ಮಂಗಳೂರು : ಕಾಸರಗೋಡಿನಲ್ಲಿರುವ ಅಲ್ಪಸಂಖ್ಯಾತ  ಕನ್ನಡಿಗರ ಮೇಲೆ  ಮಲಯಾಳಿ ಭಾಷಿಗರ ದಬ್ಬಾಳಿಕೆಯನ್ನು ಖಂಡಿಸಿ ಜೂ.8 ರಂದು ಉಡುಪಿಯಿಂದ ಕಾಸರಗೋಡಿನವರೆಗೆ `ಕಾಸರಗೋಡು ಚಲೋ’ ಮಾಡಲಾಗುವುದು ಹಾಗೂ ಸಂಜೆಯವರೆಗೆ ಗಡಿ ಬಂದ್‌ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಕಾಸರಗೋಡು ಕರ್ನಾಟಕದ ಭಾಗವಾಗಿದ್ದರೂ, ಸರ್ಕಾರದ ಬೇಜವಾಬ್ದಾರಿಯಿಂದ ಅದು ಕೇರಳ ರಾಜ್ಯಕ್ಕೆ ಸೇರಿಹೋಯಿತು. ಆದರೆ, ಗಡಿನಾಡಿನ ಸ್ವಾಭಿಮಾನಿ ಕನ್ನಡಿಗರ ಹೋರಾಟದ ಫಲವಾಗಿ ಅಲ್ಲಿ ಇಂದಿಗೂ ಕನ್ನಡ ಶಾಲೆಗಳು ಉಳಿದಿವೆ. ಇದೀಗ ಮಲಯಾಳಿ ಭಾಷಿಗರಿಂದ ಕನ್ನಡ […]

ಸೆ.27ರಂದು ಮರಳು ಸಾಗಾಟ ಲಾರಿಗಳೊಂದಿಗೆ ಪ್ರತಿಭಟನೆ: ಅನಿಲ್ ದಾಸ್

Monday, September 26th, 2016
sand-mafia

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡದ ಕಾರಣಕ್ಕೆ ಅಕ್ರಮ ಮರಳುಗಾರಿಕೆ ಮಿತಿ ಮೀರುತ್ತಿದೆ. ಮರಳು ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿ ಸೆ.27ರಂದು 12ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮರಳು ಸಾಗಾಟ ಲಾರಿಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ದಾಸ್ ತಿಳಿಸಿದ್ದಾರೆ. ಕಟ್ಟಡ ನಿರ್ಮಿಸಲು ಜನರಿಗೆ ಮರಳು ಸಿಗುತ್ತಿಲ್ಲ. ಇದರಿಂದ ಬಡವರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅತ್ತ ಮರಳು ಮಾಫಿಯಾದ ವಿರುದ್ಧ ಜಿಲ್ಲಾಡಳಿತ ಯಾವುದೇ ಕ್ರಮ […]