ಯಕ್ಷಗಾನದ ವೇಳೆ ಕುಸಿದು ಬಿದ್ದ ಕಲಾವಿದ

Tuesday, August 10th, 2021
Mohan Kumar

ಮೂಡುಬಿದಿರೆ :  ಅಲಂಗಾರಿನಲ್ಲಿ ಸೋಮವಾರ ರಾತ್ರಿ ನಡೆದ ಯಕ್ಷಗಾನದ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದಿದ್ದು, ಕೆಲವು ನಿಮಿಷಗಳ ಕಾಲ ಯಕ್ಷಗಾನ ಸ್ಥಗಿತ ಗೊಂಡ ಘಟನೆ ನಡೆಯಿತು. ಅಲಂಗಾರು ಶ್ರೀಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕರ್ಣಪರ್ವ ಪ್ರಸಂಗದಲ್ಲಿ ಖ್ಯಾತ ಕಲಾವಿದ ಮೋಹನ ಕುಮಾರ್ ಅಮ್ಮಂಜೆ ಪಾತ್ರಧಾರಿಯಾಗಿದ್ದರು. ಈ ಸಂದರ್ಭ ಅತೀವ ಬಳಲಿಕೆಯಿಂದ ಅವರು ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದು, 15 ನಿಮಿಷಗಳ ಕಾಲ ಯಕ್ಷಗಾನವನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಅಮ್ಮುಂಜೆ ಅವರು ಸುಧಾರಿಸಿಕೊಂಡ ಬಳಿಕ ಮತ್ತೆ  ಯಕ್ಷಗಾನ ಆರಂಭಗೊಂಡಿತು. ಮೋಹನ ಕುಮಾರ್ ಅವರು ತಲೆಸುತ್ತು ಬಂದು ಬಿದ್ದಿರುವುದಾಗಿ […]

ಕಲಾವಿದರಿಗೆ ಆರ್ಥಿಕ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

Friday, May 28th, 2021
aritist

ಹುಬ್ಬಳ್ಳಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರೋನಾ ವೈರಸ್ನ ಎರಡನೇ ಅಲೆಯ ತೀವ್ರತೆಯನ್ನು ನಿಯಂತ್ರಿಸಲು ರಾಜ್ಯದ ಎಲ್ಲ ರೀತಿಯ ಚಟುವಟಿಕೆಗಳನ್ನು ನಿರ್ಭಂದಿಸಿ ಲಾಕಡೌನ್ ಘೋಷಿಸಲಾಗಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು ಮತ್ತು ಕಲಾತಂಡಗಳ ಪ್ರತಿ ಫಲಾನುಭವಿಗಳಿಗೆ ತಲಾ 3,000 ರೂ.ಗಳಂತೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ. ಅರ್ಜಿದಾರರು ತಮ್ಮ ಹೆಸರು, ವಿಳಾಸ, ಕಲಾ ಪ್ರಕಾರ, ಆಧಾರ್ ಸಂಖ್ಯೆ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ದೂರವಾಣಿ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಸವಿವರಗಳನ್ನೊಳಗೊಂಡ ದಾಖಲೆಗಳನ್ನು ನಾಗರಿಕ ಸೇವಾ ಕೇಂದ್ರಗಳು […]

ಯಕ್ಷಗಾನ ರಂಗದಲ್ಲಿ ‘ಸಾಮಗೆರ್‌’ ಎಂದು ಪ್ರಸಿದ್ಧಿ ಪಡೆದಿದ್ದ ವಾಸುದೇವ ಸಾಮಗ ವಿಧಿವಶ

Saturday, November 7th, 2020
Vasudeva Samaga

ಉಡುಪಿ: ಯಕ್ಷಗಾನ ರಂಗದಲ್ಲಿ ‘ಸಾಮಗೆರ್‌’ ಎಂದು ಪ್ರಸಿದ್ಧಿ ಪಡೆದಿದ್ದ ಯಕ್ಷಗಾನ ರಂಗದ ಹಿರಿಯ ಕಲಾವಿದ ವಾಸುದೇವ ಸಾಮಗ (71) ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ವಾಸುದೇವ ಸಾಮಗ ಕೋಟೇಶ್ವರ ನಿವಾಸಿಯಾಗಿದ್ದು ಧರ್ಮಸ್ಥಳ, ಕದ್ರಿ, ಕರ್ನಾಟಕ ಮೇಳ(ಸುರತ್ಕಲ್), ಸಾಲಿಗ್ರಾಮ ಮೇಳದ ಪ್ರಮುಖ ವೇಷಧಾರಿಯಾಗಿ ಜನ ಮನ ಸೆಳೆದಿದ್ದರು. ಸಂಯಮ ಸಂಸ್ಥೆ ಮೂಲಕ ತಾಳಮದ್ದಳೆಗೆ ಹೊಸ ಆಯಾಮ, ಹೊಸ ಶಿಸ್ತು ನೀಡಿದ್ದ ಇವರು ತಾಳಮದ್ದಲೆಯಲ್ಲಿ ಇದ್ದಾರೆಂದರೆ ಜನರು ಹುಡುಕಿಕೊಂಡು ಕಾರ್ಯಕ್ರಮ ನೋಡಲು ಬರುತ್ತಿದ್ದರು. ಯಕ್ಷಗಾನದ ಅಪೂರ್ವ ಕಲಾವಿದರಾಗಿದ್ದ ಮಲ್ಪೆ ರಾಮದಾಸ […]

ಮಂಗಳೂರು ದಸರಾಕ್ಕೆ ನವದುರ್ಗೆಯರು ಹಾಗೂ ಶಾರದಾಮಾತೆಯ ಮೂರ್ತಿಗಳನ್ನು ತಯಾರು ಮಾಡುವವರು ಯಾರು ಗೊತ್ತಾ ?

Wednesday, October 28th, 2020
Kubera

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಸಂಭ್ರಮಕ್ಕೆ ಪೂಜಿಸಲ್ಪಡುವ 12 ಮೂರ್ತಿಗಳನ್ನು ತಯಾರು ಮಾಡುವ ಕಲೆಗಾರರ ಬಗ್ಗೆ ನೀವು ಕೇಳಿರಲಿಕ್ಕಿಲ್ಲ ಗಣಪತಿ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾಮಾತೆಯ ಮಣ್ಣಿನ ಗಳನ್ನು ತಯಾರಿಸುವವರು ಶಿವಮೊಗ್ಗದ ಕುಬೇರ ಹಾಗೂ ಅವರ ಬಳಗ. ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಆರಂಭದ ದಿನಗಳಲ್ಲಿ ರಾಜಶೇಖರ್ ಹಾಗೂ ಅವರ ತಂಡದವರು ಮೂರ್ತಿ ರಚನೆ ಮಾಡುತ್ತಿದ್ದರು. ಅದೇ ತಂಡದಲ್ಲಿ ಕಲಾವಿದನಾಗಿ ತನ್ನ 13 ವರ್ಷದ ಪ್ರಾಯದಲ್ಲೇ ಕೆಲಸ ಆರಂಭಿಸಿದ್ದ ಅದ್ಭುತ ಕಲಾವಿದ ಶಿವಮೊಗ್ಗದ ಕುಬೇರ ಹಾಗೂ […]

‘ಪುರೋಹಿತರು-ಜ್ಯೋತಿಷಿಗಳಿಗೆ ಅವಮಾನ’ ವಿಎಚ್‌ಪಿ ಕಚೇರಿಯಲ್ಲಿ ಕ್ಷಮೆಯಾಚಿಸಿದ ಅರವಿಂದ ಬೋಳಾರ್

Tuesday, August 11th, 2020
‘ಪುರೋಹಿತರು-ಜ್ಯೋತಿಷಿಗಳಿಗೆ ಅವಮಾನ'  ವಿಎಚ್‌ಪಿ ಕಚೇರಿಯಲ್ಲಿ ಕ್ಷಮೆಯಾಚಿಸಿದ ಅರವಿಂದ ಬೋಳಾರ್

ಮಂಗಳೂರು :  ಕಾವೂರು ಪೊಲೀಸ್ ಠಾಣೆಯಲ್ಲಿ ‘ಪುರೋಹಿತರು-ಜ್ಯೋತಿಷಿಗಳಿಗೆ ಅವಮಾನ ಮಾಡಿದ್ದಾರೆ’ ಎನ್ನುವ ಆರೋಪದಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಕಲಾವಿದ ಅರವಿಂದ ಬೋಳಾರ್ ವಿಶ್ವ ಹಿಂದೂ ಪರಿಷತ್ ಕಚೇರಿಗೆ ತೆರಳಿ ಕ್ಷಮೆಯಾಚಿಸಿದ್ದಾರೆ. ಯೂಟ್ಯೂಬ್ ಚಾನೆಲ್‌ ನಲ್ಲಿ ಆ.9ರಂದು ನಿರೂಪಕ ವಾಲ್ಟರ್  ಮತ್ತು ಕಲಾವಿದ ಅರವಿಂದ ಬೋಳಾರ್ ಅವರು ಪುರೋಹಿತರು-ಜ್ಯೋತಿಷಿಗಳನ್ನು ತಮಾಷೆ ಮಾಡುವ ಉದ್ದೇಶದಿಂದ ಅವಮಾನಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಕುಂಜತ್‌ ಬೈಲ್ ನಿವಾಸಿ ಶಿವರಾಜ್ ಎಂಬವರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ […]

ನಾಯಕಿಗೆ ಕೈಕೊಟ್ಟ ಕಲಾವಿದನ ಬಂಧನ, ಮದುವೆಯಾಗುವುದಾಗಿ ನಂಬಿಸಿ ಮಜಾಮಾಡಿದ

Monday, April 30th, 2018
Purushottama

ಮಂಗಳೂರು: ನಾಟಕ ಕಲಾವಿದ ಮತ್ತು ಆತನಿಗೆ ಸಹಕರಿಸಿದ್ದ ಯುವಕನ ವಿರುದ್ಧ ಯುವತಿವೋರ್ವಳು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತುಳು ನಾಟಕದಲ್ಲಿ ಹೀರೋಯಿನ್ ಆಗಿದ್ದ ಯುವತಿಯನ್ನು ಪುರುಷೋತ್ತಮ ಕೊಯಿಲ ಎಂಬಾತ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮೋಸ ಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 4ರಂದು ಮದುವೆಗೆ ದಿನಾಂಕ ನಿಗದಿಪಡಿಸಲಾಗಿದ್ದರೂ ದಿನಾಂಕ ಹತ್ತಿರಬರುತ್ತಿದ್ದಂತೆ ಮದುವೆಗೆ ನಿರಾಕರಿಸಿದ್ದಲ್ಲದೆ, ಯುವತಿ ವಿರುದ್ಧವೇ ಅಶ್ಲೀಲವಾಗಿ ನಿಂದಿಸಿ ಆಕೆಯೊಂದಿಗಿದ್ದ ಅಶ್ಲೀಲ […]

ಕಲಾ ಪೋಷಕರಿಂದ ಕಲೆ ವಿಸ್ತಾರಗೊಂಡು ಬಹುಮುಖಿ ವ್ಯಾಪ್ತಿ ಪಡೆದಿದೆ : ಚಂಬಲ್ತಿಮಾರ್

Monday, January 16th, 2017
chambaltimar

ಬದಿಯಡ್ಕ: ರಂಗ ಪ್ರಸ್ತುತಿಯ ಪ್ರತಿಭೆಯನ್ನು ಗುರುತಿಸಿ ಕಲಾವಿದನನ್ನು ಅಳೆಯಬೇಕೇ ಹೊರತು ಬೇರೊಂದು ದೃಷ್ಟಿಯಿರಬಾರದು. ಅಂತಹ ವ್ಯಕ್ತಿತ್ವಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದಾರತೆ ಕಲಾಪೋಷಕರಿಗಿರಬೇಕು. ಕಲಾ ಪೋಷಕರಿಂದ ಕಲೆ ವಿಸ್ತಾರಗೊಂಡು ಬಹುಮುಖಿ ವ್ಯಾಪ್ತಿ ಪಡೆಯುತ್ತದೆಯೆಂದು ಕಣಿಪುರ ಯಕ್ಷಗಾನ ಮಾಸಿಕದ ಸಂಪಾದಕ ಎಂ.ನಾ ಚಂಬಲ್ತಿಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ನೀರ್ಚಾಲಿನ ದಿ.ಪರಮೇಶ್ವರ ಆಚಾರ್ಯ ಸ್ಮಾರಕ ಕಲಾ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಭಾನುವಾರ ಅಪರಾಹ್ನ ನೀರ್ಚಾಲು ಶ್ರೀ ಕುಮಾರ ಸ್ವಾಮಿ ಸಭಾಂಗಣದಲ್ಲಿ ನಡೆದ ಪರಮೇಶ್ವರ ಆಚಾರ್ಯರ 14ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ, ಅಭಿನಂದನಾ ಕಾರ್ಯಕ್ರಮದಲ್ಲಿ […]

ನಗರದ ಕದ್ರಿ ಪಾರ್ಕ್ ನಲ್ಲಿ ಎರಡು ದಿನಗಳ ಕುಡ್ಲ ಕಲಾ ಮೇಳಕ್ಕೆ ಚಾಲನೆ

Saturday, December 14th, 2013
Kudla kala Mela

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕರಾವಳಿ ಚಿತ್ರಕಲಾ ಪರಿಷತ್ ಆಶ್ರಯದಲ್ಲಿ ನಗರದ ಕದ್ರಿ ಪಾರ್ಕ್ ನಲ್ಲಿ ಎರಡು ದಿನಗಳ ಕುಡ್ಲ ಕಲಾ ಮೇಳಕ್ಕೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಡಿ14. ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಆಯುಕ್ತ ರು ಕಲಾವಿದ ಮಾತಿನಲ್ಲಿ ವ್ಯಕ್ತ ಪಡಿಸಲು ಸಾಧ್ಯವಾಗದೇ ಇರುವುದನ್ನು ತನ್ನ ಕಲೆಯ ಮೂಲಕ ವ್ಯಕ್ತ ಪಡಿಸುತ್ತಾನೆ. ಮನುಷ್ಯ ನೆಮ್ಮದಿಯನ್ನು ಕಾಣಲು ಕಲಾ ಪ್ರಕಾರಗಳನ್ನು ತಿಳಿಯಬೇಕು. ಇಂದಿನ […]