ಕಲ್ಲಡ್ಕ ಪ್ರಭಾಕರ್ ಭಟ್ ಮಂಗಳೂರು ವಿಶ್ವ ವಿದ್ಯಾಲಯ ಪ್ರವೇಶ ವಿರೋಧಿಸಿ, ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

Wednesday, March 30th, 2022
Campus-front

ಮಂಗಳೂರು: ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್  ಅವರನ್ನು ಮಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಕಾರ್ಯಕ್ರಮಕ್ಕೆ  ಅಥಿತಿಯಾಗಿ ಆಹ್ವಾನಿಸಿರುವುದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಹಿನ್ನಲೆಯಲ್ಲಿ ಪೋಲೀಸ್ ಭದ್ರತೆ ಹಾಕಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ವಿವಿ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿದ್ದಾರೆ. ಕೋಮು ದ್ವೇಷದ ಭಾಷಣ ಮಾಡುವ ಆರ್ ಎಸ್‍ ಎಸ್ ಮುಖಂಡ ಪ್ರಭಾಕರ್ ಭಟ್ ಅವರನ್ನು ಯಾವುದೇ ಕಾರಣಕ್ಕೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ […]

ಹಿಜಾಬ್ ಹಾಕಲೇಬೇಕೆಂದು ಮುಸ್ಲಿಮರಿಗೆ ಇದ್ದರೆ, ಮುಸ್ಲಿಂ ರಾಷ್ಟ್ರಗಳಿಗೆ ಹೋಗಲಿ : ಕಲ್ಲಡ್ಕ ಪ್ರಭಾಕರ್ ಭಟ್

Sunday, March 20th, 2022
Prabhakara Bhat

ಮಂಗಳೂರು : ಹಿಜಾಬ್ ಬೇಕು ಎನ್ನುವ ಎಸ್‍ಡಿಪಿಐಗೆ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ಹಿಜಾಬ್ ಹಾಕಿಸುವ ತಾಕತ್ತು ಇದೆಯೇ? ಹಿಜಾಬ್ ಹಾಕಲೇಬೇಕೆಂದು ಮುಸ್ಲಿಮರಿಗೆ ಇದ್ದರೆ ಅವರು ಮುಸ್ಲಿಂ ರಾಷ್ಟ್ರಗಳಿಗೆ ಹೋಗಲಿ. ಹೈಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳದ ಬ್ಯಾರಿಗಳೊಂದಿಗೆ ಸ್ನೇಹ ಬೆಳೆಸುವ ಮೊದಲು ಆಲೋಚನೆ ಮಾಡಬೇಕಾಗಿದೆ. ಹಿಜಾಬ್ ವಿಚಾರದಲ್ಲಿ ಮುಸಲ್ಮಾನರು ನ್ಯಾಯಾಲಯ, ಸಂವಿಧಾನ ಕಡೆಗಣಿಸಿ ಅಗತ್ಯ ಸೇವೆಯನ್ನು ಬಂದ್ ಮಾಡಿದರು. ಇವರು ಹಿಂದೂಗಳ ಜತೆ ಮಾಡುವುದು ಡೋಂಗಿ ದೋಸ್ತಿ ಎಂದು ಆರೆಸೆಸ್ಸ್ ಮುಖಂಡ‌ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು. ವಿಶ್ವ ಹಿಂದೂ […]

ಉಳ್ಳಾಲದ ಜನರಿಗೆ ತಾಕತ್ತಿದ್ದರೆ ಮುಸ್ಲಿಮೇತರರನ್ನು ಶಾಸಕರನ್ನಾಗಿ ಮಾಡಿ : ಕಲ್ಲಡ್ಕ‌ ಪ್ರಭಾಕರ್ ಭಟ್‌

Thursday, January 28th, 2021
Kalladka Prabhakara Bhat

ಮಂಗಳೂರು : ಉಳ್ಳಾಲದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ದೇವಸ್ಥಾನ ಮತ್ತು ದೈವಸ್ಥಾನಗಳ ಕಾಣಿಕೆ ಹುಂಡಿಗೆ ಬೇಡದ ವಸ್ತುಗಳನ್ನು ಹಾಕಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುವ ಕಾರ್ಯ ಮಾಡಲಾಗುತ್ತಿದೆ. ಹಾಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಆರ್‌ಎಸ್‌ಎಸ್‌ ಮುಖಂಡ ಡಾ.ಕಲ್ಲಡ್ಕ‌ ಪ್ರಭಾಕರ್ ಭಟ್  ಹೇಳಿದ್ದಾರೆ. ವಿಭಜನೆಯಾಗುವ ಮೊದಲು ಭಾರತೀಯರಾಗಿದ್ದ ಪಾಕಿಸ್ತಾನದ ಜನರ ಮಾನಸಿಕತೆಯೂ ವಿಭಜನೆಯ ಬಳಿಕ ಬದಲಾಯಿತು. ಆ ಭೂಮಿ ಕೆಂಪಾಯಿತು. ಸಿಂಧೂ ನದಿಯಲ್ಲಿ ರಕ್ತ ಹರಿಯಿತು. ಅಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ […]

ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ‘ಕನಕಪುರ ಚಲೋ’ ಪ್ರತಿಭಟನೆ : ಕಲ್ಲಡ್ಕ ಪ್ರಭಾಕರ್ ಭಟ್

Monday, January 13th, 2020
prabhakar-bhat

ರಾಮನಗರ : ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶಗಳು ಕೇಳಿಬಂದ ನಂತರ ಪ್ರತಿಮೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಕನಕಪುರದಲ್ಲಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವ ಯೋಜನೆಯನ್ನು ಇಂದು ‘ಕನಕಪುರ ಚಲೋ’ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಸದ್ಯಕ್ಕೆ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಕಾಮಗಾರಿ ಸ್ಥಗಿತಗೊಂಡಿದ್ದು, ಎಲ್ಲ ಕೆಲಸಗಾರರು ಅಲ್ಲಿಂದ ಬೇರೆಡೆ ಹೋಗಿದ್ದಾರೆ. […]

ಶ್ಯಾಮಶಾಸ್ತ್ರಿ ಆತ್ಮಹತ್ಯೆ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್​ಗೆ ನ್ಯಾಯಾಲಯದಿಂದ ವಾರಂಟ್

Saturday, October 6th, 2018
kalladka

ಪುತ್ತೂರು: 2014 ರಲ್ಲಿ ನಡೆದ ಶ್ಯಾಮಶಾಸ್ತ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಬೋನಂತಾಯ ಶಿವಶಂಕರ ಭಟ್ ಅವರಿಗೆ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಇದೇ ವೇಳೆ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿ, ಅ.31 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ರಾಘವೇಶ್ವರ ಸ್ವಾಮೀಜಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಮಹಿಳೆಯ ಪತಿಯ ಸಹೋದರ ಶ್ಯಾಮ್ ಪ್ರಸಾದ್ ಶಾಸ್ತ್ರಿ 2014 ರ ಆ.31ರಂದು […]

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ನಲಿಕೆ ಸಮಾಜ ಒತ್ತಾಯ

Wednesday, April 11th, 2018
kaladka-prabhakar

ಮಂಗಳೂರು: ಕೈರಂಗಳದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಬೂತ ಕಟ್ಟುವವರ ವಿರುದ್ಧ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದಾರೆ. ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೈಲಿಗಟ್ಟಬೇಕು ಎಂದು ಬೆಳ್ತಂಗಡಿಯ ನಲಿಕೆ ಸಮಾಜ ಸೇವಾ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಒತ್ತಾಯ ಮಾಡಿದ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಎಸ್. ಪ್ರಭಾಕರ್ ಶಾಂತಿಕೋಡಿ, ಚುನಾವಣಾ ನೀತಿ ಸಂಹಿತೆಯನ್ನು ಬಹಿರಂಗವಾಗಿ ಪ್ರಶ್ನಿಸುವ ಮೂಲಕ ಪ್ರಭಾಕರ ಭಟ್ ಚುನಾವಣಾ ಆಯೋಗವನ್ನು ಕೂಡಾ ಕಪಿಮುಷ್ಟಿಯಲ್ಲಿರಿಸಲು ಪ್ರಯತ್ನಿಸಿದ್ದಾರೆ. […]

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಜಾತಿನಿಂದನೆ ದೂರು

Tuesday, April 10th, 2018
prabhakar-bhat

ಮಂಗಳೂರು: ಸಚಿವ ಯು.ಟಿ. ಖಾದರ್ ಅವರ ವಿರುದ್ಧ ಹೇಳಿಕೆ ನೀಡಿದ್ದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ನಲಿಕೆಯವರ ಸಮಾಜ ಸೇವಾ ಸಂಘ ದೂರು ದಾಖಲಿಸಿದೆ. ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್, ಪ್ರಭಾಕರ ಶಾಂತಿಕೋಡಿಯವರು ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಚಿವ ಯು.ಟಿ. ಖಾದರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಭೂತ ಕಟ್ಟುವವನಿಗೆ ತಲೆ ಸರಿ ಇಲ್ಲ […]

ಗಾಂಧೀಜಿಗೆ ಅವಮಾನವಾದರೂ ಪ್ರತಿಭಟನೆಯಾಗುತ್ತಿಲ್ಲ: ದಿನೇಶ್‌ ಅಮಿನ್‌ಮಟ್ಟು

Wednesday, January 31st, 2018
gandhiji-1

ಮಂಗಳೂರು: ಮಹಾತ್ಮ ಗಾಂಧೀಜಿಗೆ ಅವಮಾನ, ದೂಷಣೆ ಮಾಡಿದರೂ ಕೂಡಾ ಪ್ರತಿಭಟನೆಯಾಗುತ್ತಿಲ್ಲ. ಅದೇ ಬಸವಣ್ಣ, ಅಂಬೇಡ್ಕರ್‌‌ಗೆ ಅವಮಾನ ಮಾಡಿದರೆ ಪ್ರತಿಭಟನೆಯಾಗುತ್ತಿದೆ. ಇದು ಗಾಂಧೀಜಿಗೆ ಬಂದ ದುಸ್ಥಿತಿ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಹೇಳಿದರು. ನಗರದ ನೆಹರೂ ಮೈದಾನದಲ್ಲಿ ನಡೆದ `ಸೌಹಾರ್ದತೆಗಾಗಿ ಕರ್ನಾಟಕ’ ವತಿಯಿಂದ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿಯವರನ್ನು ವಿವಿಧ ವರ್ಗದವರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿರುವುದರಿಂದ ಗಾಂಧೀಜಿಗೆ ಈ ಸ್ಥಿತಿ ಬಂದಿದೆ. ಗಾಂಧೀಜಿ ಒಂದು ವರ್ಗಕ್ಕೆ ಸೇರಿದವರಲ್ಲ. ಅದು ಅವರ […]

ಬಿಗ್ ಬಾಸ್ ಪ್ರಥಮ್ – ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿಯ ಮರ್ಮವೇನು?

Tuesday, January 23rd, 2018
pratham

ಮಂಗಳೂರು: ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿರುವ ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬಿಗ್ ಬಾಸ್ ವಿಜೇತ ಪ್ರಥಮ್ ಶುಕ್ರವಾರ (ಜ. 19) ಭೇಟಿ ನೀಡಿದ್ದಾರೆ. ಈ ವೇಳೆ ಸುಮಾರು ಎರಡು ಗಂಟೆಗಳ ಕಾಲ ಶಾಲೆಯ ಮಕ್ಕಳೊಂದಿಗೆ ಬೆರೆತ ಪ್ರಥಮ್ ನಂತರ ಪ್ರಭಾಕರ್ ಭಟ್ ಜತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದು ಕುತೂಹಲ ಕೆರಳಿಸಿದೆ. ಇದು ಎಲೆಕ್ಷನ್ ಜ್ವರ, ಸಂದರ್ಶನದಲ್ಲಿ ಬಯಲಾಯ್ತು ಪ್ರಥಮ್ ಬಿಜೆಪಿ ಒಲವು ಶಾಲೆಯ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಅನುದಾನವನ್ನು […]

ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಕುದ್ರೋಳಿಯಲ್ಲಿ ಸ್ವಾಗತಿಸಿದ ಜನಾರ್ದನ ಪೂಜಾರಿ

Friday, September 29th, 2017
ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಕುದ್ರೋಳಿಯಲ್ಲಿ ಸ್ವಾಗತಿಸಿದ ಜನಾರ್ದನ ಪೂಜಾರಿ

ಮಂಗಳೂರು : ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ನವರಾತ್ರಿ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರಕ್ಕೆ ಡಾ ಕಲ್ಲಡ್ಕ ಪ್ರಭಾಕರ ಭಟ್ ಬೇಟಿ ನೀಡುತ್ತಾ ಬಂದಿದ್ದಾರೆ ಅಂತೆಯೇ  ಈ ಬಾರಿಯೂ ಭಾಗಿಯಾಗಿದ್ದರು. ಪ್ರಭಾಕರ್ ಭಟ್ ಅವರನ್ನು ಸ್ವಾಗತಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು, ಕಾಂಗ್ರೆಸ್ ಸರ್ಕಾರದಿಂದ ಆಗಿರುವ ತೊಂದರೆಗೆ ಕ್ಷಮೆಯಾಚಿಸಿದ ಘಟನೆ ನಡೆಯಿತು. ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪತ್ನಿ ಸಮೇತರಾಗಿ ಗುರುವಾರ ಸಂಜೆ ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಭೇಟಿ ನೀಡಿದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು […]