ಕುಕ್ಕೆ ದೇವಳದಿಂದ ನಿರ್ಮಿತವಾದ ವಿದ್ಯಾನಗರ-ಅಗ್ರಹಾರ ಕಾಂಕ್ರಿಟ್ ರಸ್ತೆ ಉದ್ಘಾಟನೆ

Tuesday, July 6th, 2021
s Angara

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಅಭ್ಯುದಯದಲ್ಲಿ ಕುಕ್ಕೆ ದೇವಳದಪಾತ್ರ ಅನನ್ಯ.ಶ್ರೀ ದೇವಳದಿಂದ ಕ್ಷೇತ್ರದ ಅನೇಕ ರಸ್ತೆಗಳು ಕಾಂಕ್ರಿಟೀಕರಣಗೊAಡು ಅಭಿವೃದ್ಧಿಯಾಗಿದೆ.ಅಲ್ಲದೆ ಶ್ರೀ ದೇವಳದಿಂದ ನೆರವೇರುತ್ತಿರುವ ಸಮಗ್ರ ಅಭಿವೃದ್ಧಿಯ ೧೮೦ ಕೋಟಿ ರೂಗಳ ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳು ನಿರ್ಮಿತವಾಗಿದೆ. ದೇ ರೀತಿ ಕೋವಿಡ್-೧೯ ಸಂಕಷ್ಠದ ಸಮಯದಲ್ಲಿ ಕೂಡಾ ಶ್ರೀ ದೇವಳವು ಉತ್ಕೃಷ್ಠವಾದ ಸಹಕಾರ ನೀಡಿದೆ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ […]

ಮಡಿಕೇರಿಗೆ ಕಾಂಕ್ರಿಟ್ ರಸ್ತೆ ಭಾಗ್ಯ : ಮುಖ್ಯ ವೃತ್ತಗಳಲ್ಲಿ ಕಾಮಗಾರಿ ಬಿರುಸು

Friday, February 21st, 2020
muttanna

ಮಡಿಕೇರಿ : ಕೊನೆಗೂ ಮಡಿಕೇರಿ ನಗರದ ರಸ್ತೆಗಳ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ. ಮಹಾಮಳೆಯಿಂದ ಹದಗೆಟ್ಟಿದ್ದ ರಸ್ತೆಗಳ ದುರಸ್ತಿಗಾಗಿ ಸಾರ್ವಜನಿಕರು ಒತ್ತಾಯಿಸುತ್ತಲೇ ಬಂದಿದ್ದರೂ ನಗರಸಭೆ ಮಾತ್ರ ನಿರ್ಲಕ್ಷ್ಯ ವಹಿಸುತ್ತಲೇ ಬಂದಿತ್ತು. ಇದೀಗ ಮತ್ತೊಂದು ಮಳೆಗಾಲ ಸಮೀಪಿಸುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಆರಂಭಿಸಿದ್ದಾರೆ. ನಗರೋತ್ಥಾನದ ೩ನೇ ಹಂತದ ವಿವಿಧ ಕಾಮಗಾರಿಗಳು ನಗರಸಭೆ ವತಿಯಿಂದ ನಡೆಯುತ್ತಿದ್ದು, ನಗರದ ಇಂದಿರಾಗಾಂಧಿ ವೃತ್ತ ಮತ್ತು ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದ ಸುತ್ತಲೂ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈ ಎರಡು ಕಾಮಗಾರಿಗಳಿಗೆ […]

ಶಾಸಕ ಅಪ್ಪಚ್ಚು ರಂಜನ್ ನಗರ ಸಂಚಾರ : ಗುಣಮಟ್ಟದ ಕಾಮಗಾರಿಗೆ ಸೂಚನೆ

Saturday, January 4th, 2020
road

ಮಡಿಕೇರಿ : ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ನಗರ ಸಂಚಾರ ನಡೆಸಿ ನಗರ ಸಭೆಯಿಂದ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆ ನಗರಸಭಾ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು. ನಗರದ ಇಂದಿರಾಗಾಂಧಿ ವೃತ್ತದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕಾಗಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು. ಖಾಸಗಿ ಬಸ್ ನಿಲ್ದಾಣದ ಬಳಿ ಪ್ರಯಾಣಿಕರ ತಂಗುದಾಣ ನಿರ್ಮಾಣ, ವಿದ್ಯಾನಗರದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು. ಒಳಚರಂಡಿ […]