ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ವಿಶ್ವ ಹಿಂದೂ ಪರಿಷತ್​ನ ಪ್ರಖಂಡ ಸಂಚಾಲಕ ಬಂಧನ

Monday, March 8th, 2021
Mohan

ಮಂಗಳೂರು : ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ನ ಉಳ್ಳಾಲ ಗ್ರಾಮಾಂತರ ಪ್ರಖಂಡದ ಸಂಚಾಲಕ ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಮಾಡಿದ್ದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಹಿನ್ನೆಲೆ ಸಾರ್ವಜನಿಕರು ಆತನನ್ನು ಹಿಡಿದು ಹತ್ತಿರದ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಾನೀರು ಚಚ್೯ ಬಾಗಿಲು ಮುರಿದು 10 ಕಾಣಿಕೆ ಡಬ್ಬಿಗಳ ಕಳವು

Friday, April 3rd, 2020
church looti

ಮಂಗಳೂರು  :  ಪಾನೀರು ಲೇಡಿ ಆಫ್ ಮರ್ಸಿ ಚರ್ಚಿನಲ್ಲಿ ಚಚ್೯ ಬಾಗಿಲು ಮುರಿದು ಕಾಣಿಕೆ ಡಬ್ಬಿಗಳ ಕಳವು ನಡೆಸಿದ ಕಳ್ಳರು ಲಾಕರ್ ಒಡೆದು, ಕಾಣಿಕೆ ಹಣವನ್ನು ದೋಚಿ 10 ಕ್ಕೂ ಅಧಿಕ ಖಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದಾರೆ . ಕೊಣಾಜೆ ಠಾಣಾ ವ್ಯಾಪ್ತಿಯ ನಿತ್ಯಾನಂದನಗರ ಎಂಎಸ್‌ಐಎಲ್ ವೈನ್ಸ್‌ಗೆ ನುಗ್ಗಿದ ಕಳ್ಳರು, ಪಾನೀರು ಚರ್ಚಿನಲ್ಲಿಯೂ ಕಳವು ನಡೆಸಿರುವ ಶಂಕೆ ವ್ಯಕ್ತವಾಗಿದೆ. ಪಾನೀರು ಅವರ್ ಲೇಡಿ ಆಫ್ ಮರ್ಸಿ ಚರ್ಚಿನ ಎದುರು ಭಾಗದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಪರಮ ಪ್ರಸಾದ ಇರಿಸಿದ ಲಾಕರ್ […]

ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿ ಕಾಂಡಮ್ ಪ್ಯಾಕೇಟು ಹಾಕಿದ ಕಳ್ಳರ ಗತಿ ಏನಾಯ್ತು ನೋಡಿ?

Monday, May 28th, 2018
Katapady

ಉಡುಪಿ : ಉಡುಪಿ ಜಿಲ್ಲೆಯ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಪವಾಡದಿಂದ ಕ್ಷೇತ್ರದ ಕಾಣಿಕೆ ಹುಂಡಿಯ ಹಣವನ್ನು ಕದ್ದ ಮುಸ್ಲಿಂ ಯುವಕರ ಗುಂಪು ಕ್ಷಮೆ ಕೇಳಿದ ಘಟನೆ ಕಟಪಾಡಿಯಲ್ಲಿ ನಡೆದಿದೆ. ಹಣ ಕದ್ದ ನಂತರ ಶಿವಲಿಂಗದ ಮಾದರಿಯಲ್ಲಿರುವ ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೆ, ಕಾಂಡಮ್ ಪ್ಯಾಕೇಟುಗಳನ್ನು ಡಬ್ಬಿಗೆ ತುರುಕಿದ್ದರು. ದೈವ ಏನು ಮಾಡುತ್ತೆ ಅಂತಾ ನೋಡೊಣ ಅನ್ನುತ್ತಲೆ ಈ ವರ್ತನೆಗಳನ್ನ ಯುವಕರ ತಂಡ ಮಾಡಿತ್ತು. ಆದರೆ ದೈವದ ಲೀಲೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಈ ಅನಾಗರಿಕ […]

ಕಾಣಿಕೆ ಡಬ್ಬಿ ಪ್ರಕರಣ : ನೈಜ ಆರೋಪಿಗಳ ಪತ್ತೆಗಾಗಿ ವಿಶೇಷ ಪ್ರಾರ್ಥನೆ

Monday, May 16th, 2016
Temple Hundi

ಪೆರ್ಲ: ಪೆರ್ಲದಿಂದ ಬಜಕ್ಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ತೆರಳುವ ದಾರಿಯಲ್ಲಿರುವ ಕಾಣಿಕೆ ಡಬ್ಬಿ ಸಹಿತವಿರುವ ಶಿವಲಿಂಗಕ್ಕೆ ಕಿಡಿಗೇಡಿಗಳು ಹಸಿರು ಬಣ್ಣ ಬಳಿದಿರುವುದಲ್ಲದೆ ಅದು ಬಿಜೆಪಿ ಕಾರ್ಯಕರ್ತರು ಮಾಡಿದ ಕೃತ್ಯವೆಂದೂ, ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿರುವುದಾಗಿಯೂ ಅಂತರ್ಜಾಲದಲ್ಲಿ ಸುಳ್ಳು ಪ್ರಚಾರ ಹಬ್ಬಿಸಿದವರ ವಿರುಧ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನೈಜ ಆರೋಪಿಗಳ ಪತ್ತೆಗಾಗಿ ಆದಿತ್ಯವಾರ ವಿಶೇಷ ಪ್ರಾರ್ಥನೆ ನಡೆಯಿತು. ಈ ಆರೋಪ ಮತ್ತು ಕಿಡಿಗೇಡಿಗಳ ಕೃತ್ಯವನ್ನು ಜಾಗೃತ ಹಿಂದೂ ಬಾಂಧವರು ಪೆರ್ಲ ಘಟಕ ಖಂಡಿಸಿದೆ. ಪೆರ್ಲ ಪೇಟೆಯಲ್ಲಿ ಬಜಕೂಡ್ಲು ಶ್ರೀ ಮಹಾಲಿಂಶ್ವರ […]

ಹಜ್‌ಯಾತ್ರೆಯ ಮೊದಲ ತಂಡ ಮಂಗಳೂರಿಗೆ ವಪಾಸ್

Tuesday, September 29th, 2015
Haj pilgrims

ಮಂಗಳೂರು : ಹಜ್‌ ನಿರ್ವಹಣಾ ಸಮಿತಿ ಮಂಗಳೂರು ಇದರ ವತಿಯಿಂದ ಪವಿತ್ರ ಹಜ್‌ಯಾತ್ರೆ ಕೈಗೊಂಡಿದ್ದ ಕರ್ನಾಟಕದ ಹಜ್ ಯಾತ್ರಾರ್ಥಿಗಳ ಮೊದಲ ತಂಡ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಸೋಮವಾರ ಆಗಮಿಸಿತು. ದ.ಕನ್ನಡ, ಉಡುಪಿ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 666 ಮಂದಿ ಹಜ್‌ಯಾತ್ರೆ ಕೈಗೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕುಟುಂಬದ ಸದಸ್ಯರು ಯಾತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ವಸತಿ, ಊಟ, ಪ್ರಯಾಣದ ವ್ಯವಸ್ಥೆ ಉತ್ತಮವಾಗಿತ್ತು. ಮಂಗಳೂರು ಹಜ್‌ ನಿರ್ವಹಣಾ ಸಮಿತಿ ನಮ್ಮ ಬಗ್ಗೆ ಹೆಚ್ಚಿನ ಕಾಳಜಿ […]