ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

Saturday, February 15th, 2020
navodhaya

ಮಡಿಕೇರಿ : ಗಾಳಿಬೀಡಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 18 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ. ನವೋದಯ ವಿದ್ಯಾಲಯದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಪೋಷಕರು ಸಂಸದ ಪ್ರತಾಪ್ ಸಿಂಹ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದೀಗ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ.18 ಲಕ್ಷ ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭಗೊಂಡಿದೆ. ವಿದ್ಯಾಲಯದ ಪ್ರಾಂಶುಪಾಲ ಐಸಾಕ್, ಶಿಕ್ಷಕರು-ಪೋಷಕರ ಸಮಿತಿ […]

ಬೆಂಗಳೂರು : ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಬಿಬಿಎಂಪಿ ಮೇಯರ್

Wednesday, January 29th, 2020
BBMP

ಬೆಂಗಳೂರು : ವಿವಿಧ ಕಾಮಗಾರಿಗಳನ್ನು ಬಿಬಿಎಂಪಿ ಮೇಯರ್ ಇಂದು ತಪಾಸಣೆ ನಡೆಸಿದರು. ನಗರದ ರಿಚ್ಮಂಡ್ ಸರ್ಕಲ್‍ನ ಜಂಕ್ಷನ್‍ನಲ್ಲಿ ಮೇಯರ್ ಒಂದು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಫುಟ್‍ಪಾತ್, ರೋಡ್ ಕಟಿಂಗ್, ರಸ್ತೆ ಗುಂಡಿ ಸಮಸ್ಯೆ, ಡಾಂಬರೀಕರಣ ಅವ್ಯವಸ್ಥೆ, ರಸ್ತೆ ಹಾಳಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿರುವ ಬಗ್ಗೆ ಪರಿಶೀಲನೆ ಮಾಡಲಾಯಿತು. ಮೇಯರ್ ತಪಾಸಣೆ ವೇಳೆ ಚರಂಡಿ ನೀರು ರಸ್ತೆಗೆ ಹರಿದು ಹೋಗುತ್ತಿತ್ತು. ಇದೇ ವೇಳೆ ಇಡೀ ರಿಚ್ಮಂಡ್ ಫ್ಲೈಓವರ್ ಓಎಫ್‍ಸಿ(ಆಪ್ಟಿಕಲ್ ಫೈಬರ್ ಕೇಬಲ್) ಎಲ್ಲೆಂದರಲ್ಲಿ ನೇತಾಡುತ್ತಿತ್ತು. ಈ ದೃಶ್ಯ […]

ಶಾಸಕ ಅಪ್ಪಚ್ಚು ರಂಜನ್ ನಗರ ಸಂಚಾರ : ಗುಣಮಟ್ಟದ ಕಾಮಗಾರಿಗೆ ಸೂಚನೆ

Saturday, January 4th, 2020
road

ಮಡಿಕೇರಿ : ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ನಗರ ಸಂಚಾರ ನಡೆಸಿ ನಗರ ಸಭೆಯಿಂದ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆ ನಗರಸಭಾ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು. ನಗರದ ಇಂದಿರಾಗಾಂಧಿ ವೃತ್ತದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕಾಗಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು. ಖಾಸಗಿ ಬಸ್ ನಿಲ್ದಾಣದ ಬಳಿ ಪ್ರಯಾಣಿಕರ ತಂಗುದಾಣ ನಿರ್ಮಾಣ, ವಿದ್ಯಾನಗರದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು. ಒಳಚರಂಡಿ […]

ನಿಧಾನ ಗತಿಯ ಕಾಮಗಾರಿ : ಗುತ್ತಿಗೆದಾರರು ಕಪ್ಪುಪಟ್ಟಿಗೆ; ಶಾಸಕ ಅಪ್ಪಚ್ಚು ರಂಜನ್ ಎಚ್ಚರಿಕೆ

Wednesday, December 18th, 2019
appachu

ಮಡಿಕೇರಿ : ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಾಮಗಾರಿಯಲ್ಲಿ ತ್ವರಿತಗತಿ ಮತ್ತು ಗುಣಮಟ್ಟ ಕಾಯ್ದುಕೊಳ್ಳದಿದ್ದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದ್ದಾರೆ. ಶಾಸಕ ಅಪ್ಪಚ್ಚು ರಂಜನ್ ಮತ್ತು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರುಗಳು ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸುವುದರ ಜೊತೆಗೆ ದುರವಸ್ಥೆಯಲ್ಲಿರುವ ರಸ್ತೆಗಳು, ಒಳಚರಂಡಿ, ಮಡಿಕೇರಿ ಸ್ಕ್ವೇರ್ ಯೋಜನೆಗಳನ್ನು ಪರಿಶೀಲನೆ ನಡೆಸಿದರು. ಗುಂಡಿಬಿದ್ದ ರಸ್ತೆಗಳು ಮತ್ತು ಕೆಲ ಬಡಾವಣೆಗಳಲ್ಲಿ […]

ಮಂಗಳೂರು ನಗರ ದಕ್ಷಿಣದಲ್ಲಿ 21 ಲಕ್ಷದ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ

Monday, December 16th, 2019
puje

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯ ಮುಖಂಡರು ಗುದ್ದಲಿಪೂಜೆ ನೆರವೇರಿಸಿದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ಶಾಸಕರು, ಜೆಪ್ಪು ವಾರ್ಡಿನ ರೈಲ್ವೇ ಗೇಟಿನಿಂದ ಕನಕರಬೆಟ್ಟು ರಸ್ತೆಗೆ 7 ಲಕ್ಷದ ಕಾಂಕ್ರೀಟೀಕರಣದ ಕಾಮಗಾರಿ, ಅಳಪೆ ಉತ್ತರ ವಾರ್ಡಿನಲ್ಲಿ ತೋಡು ದುರಸ್ತಿ ಕಾಮಗಾರಿಗೆ 7 ಲಕ್ಷ, ಕೊಡಿಯಾಲ್ ಬೈಲ್ ವಾರ್ಡಿನಲ್ಲಿ 7 ಲಕ್ಷ ರೂ ವೆಚ್ಚದ ತಡೆಗೋಡೆ ದುರಸ್ತಿ ಕಾಮಗಾರಿಗಳಿಗೆ ಸಾರ್ವಜನಿಕರ ಮೂಲಕ ಗುದ್ದಲಿಪೂಜೆ ನೆರವೇರಿಸಿದ್ದೇವೆ. ಶೀಘ್ರವೇ […]

ಅಳಪೆ ದಕ್ಷಿಣದಲ್ಲಿ 15 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ

Friday, December 13th, 2019
Kamath

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಳಪೆ ದಕ್ಷಿಣ ವಾರ್ಡಿನಲ್ಲಿ ನೂತನ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಕುರಿತು ಮಾತನಾಡಿದ ಅವರು, ಅಳಪೆ ಹೇಮಾವತಿ ನಗರದಿಂದ ಪರಂಜ್ಯೋತಿ ಭಜನಾ ಮಂದಿರಕ್ಕೆ ತೆರಳುವ ರಸ್ತೆಗೆ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಇಂದು ಗುದ್ದಲಿಪೂಜೆ ನೆರವೇರಿಸಿದ್ದೇವೆ. ಕೆಲವು ತಿಂಗಳ ಹಿಂದೆ ಈ ಪ್ರದೇಶದ ಸಾರ್ವಜನಿಕರು ರಸ್ತೆ ಕಾಮಗಾರಿ ನಡೆಸಿಕೊಡುವಂತೆ ಮನವಿ ಸಲ್ಲಿಸಿದ್ದರು. ಆ ಪ್ರಕಾರ ಕಾಮಕಾರಿಯನ್ನು ಕೈಗೆತ್ತಿಕೊಂಡಿದ್ದು ಶೀಘ್ರವೇ ಕಾಮಗಾರಿ […]

ತುರ್ತು ಕಾಮಗಾರಿ, ಪರಿಹಾರಕ್ಕಾಗಿ ಹಣ ಬಿಡುಗಡೆ : ಕಂದಾಯ ಸಚಿವ ಆರ್‌.ಅಶೋಕ್‌

Friday, September 6th, 2019
R-Ashok

ಬೆಂಗಳೂರು : ಪ್ರವಾಹ ಹಿನ್ನೆಲೆಯಲ್ಲಿ ಬೆಳಗಾವಿ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ತುರ್ತು ಕಾಮಗಾರಿ ಹಾಗೂ ಪರಿಹಾರಕ್ಕಾಗಿ ಆಗತ್ಯ ಹಣ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ಥಾಪಿಸಿರುವ ಗಂಜಿ ಕೇಂದ್ರಗಳನ್ನು ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 20 ರಿಂದ 30 ಎಕರೆ ಪ್ರದೇಶದಲ್ಲಿ ಸುಸಜ್ಜಿತ […]

ಕದ್ರಿ ದೇವಸ್ಥಾನಕ್ಕೆ ಶಾಸಕ ಲೋಬೊ ಭೇಟಿ ಬ್ರಹ್ಮಕಲಶ ಪೂರ್ವ ತಯಾರಿಗೆ ಸೂಚನೆ

Wednesday, November 29th, 2017
kadri-lobo

ಮಂಗಳೂರು: ಕದ್ರಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮ 2019ರಲ್ಲಿ ನಡೆಯಲಿದ್ದು ಅದನ್ನು ಅದ್ದೂರಿಯಾಗಿ ಆಯೋಜಿಸಲು ಪೂರ್ವ ತಯಾರಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ, ಅವಶ್ಯಕ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿ ಅವರು ಮಾತನಾಡಿದರು. ‘ಬ್ರಹ್ಮಕಲಶ ಕಾರ್ಯಕ್ರಮ ಈ ಭಾಗದ ಜನರಿಗೆ ಮಹತ್ವವಾಗಲಿದೆ. ಅದಕ್ಕೆ ಬೇಕಾದ ಕೆಲಸಗಳನ್ನು ಈಗಿನಿಂದಲೇ ಮಾಡಬೇಕು. ಧಾರ್ಮಿಕ ಕೆಲಸವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಬೇಕಾಗುತ್ತದೆ’ ಎಂದರು. ‘ಕದ್ರಿ ದೇವಸ್ಥಾನವೆಂದರೆ ಜನರಿಗೆ ವಿಶೇಷ ಭಾವನೆ ಇದೆ. ಇಲ್ಲಿಗೆ ಬರುವ […]

ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಸಿಎಂ ಗೆ ಮನವಿ

Saturday, October 28th, 2017
JR lobo

ಮಂಗಳೂರು: ಬೆಂಗಳೂರಲ್ಲಿ ಮೀನುಗಾರ ಮುಖಂಡರು ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಂಗಳೂರು 3 ನೇ ಜೆಟ್ಟಿ ನಿರ್ಮಾಣಕ್ಕೆ ಅನುದಾನ ಒದಗಿಸಿ ಕಾಮಗಾರಿಯನ್ನು ಅತ್ಯಂತ ಬೇಗ ಕೈಗೊಳ್ಳುವಂತೆ ಒತ್ತಾಯಿಸಿದರು. ಮುಖ್ಯಮಂತ್ರಿಯವರು ಮೀನುಗಾರ ಅಹವಾಲು ಸ್ವೀಕರಿಸಿ ಶೀಘ್ರ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಕದ್ರಿ ಸ್ಮಶಾನದ ಕಾಮಗಾರಿಯನ್ನು ಮೂರು ತಿಂಗಳ ಒಳಗೆ ಮುಗಿಸಬೇಕು: ಶಾಸಕ ಜೆ.ಆರ್.ಲೋಬೊ

Tuesday, October 24th, 2017
JR lobo

ಮಂಗಳೂರು: ಕದ್ರಿ ಸ್ಮಶಾನವನ್ನು ಮುಂದಿನ ಮೂರು ತಿಂಗಳ ತನಕ ಜೋಗಿ ಸಮಾಜದವರನ್ನು ಹೊರತು ಪಡಿಸಿ ಬೇರೆಯವರು ಬಳಸ ಬಾರದು ಎಂದು ನೋಟಿಫಿಕೇಷನ್ ಹೊರಡಿಸಬೇಕೆಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ತಿಳಿಸಿದರು. ಅವರು ಇಂದು ಕದ್ರಿ ಸ್ಮಶಾನ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮಾಡಿ ಮಾತನಾಡುತ್ತಿದ್ದರು. ಜೋಗಿ ಸಮಾಜದವರೂ ದಫನ್ ಮಾಡಲು ಅವಕಾಶ ಎಂದು ನುಡಿದ ಅವರು ಮೂರು ತಿಂಗಳ ಒಳಗೆ ಕಾಮಗಾರಿ ಪೂರ್ಣವಾಗಬೇಕು ಎಂದರು. ಈಗ ಕಾಮಗಾರಿ ವಿಳಂಭವಾಗುತ್ತಿದೆ. ಆದಷ್ಟು ಬೇಗನೆ ಮುಗಿಸಬೇಕು. ಡಿಸೆಂಬರ್ ತಿಂಗಳ ಒಳಗೆ ಕಾಮಗಾರಿ ಮುಗಿಯಬೇಕು. […]