Blog Archive

ಎಂಎಸ್‍ಇಝೆಡ್‍ನಿಂದ ಕುತ್ಲೂರು ಶಾಲೆಗೆ ಕಂಪ್ಯೂಟರ್

Tuesday, August 20th, 2019
Msez

ಮಂಗಳೂರು : ಮಂಗಳೂರು ವಿಶೇಷ ಆರ್ಥಿಕ ವಲಯದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಬೆಳ್ತಂಗಡಿ ತಾಲೂಕಿನ ಕುತ್ಲೂರು ಶಾಲೆಗೆ ಕೊಡುಗೆಯಾಗಿ ನೀಡುವ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ನಗರದ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ನಡೆಯಿತು. ಕಂಪ್ಯೂಟರ್ ಹಸ್ತಾಂತರಿಸಿ ಮಾತನಾಡಿದ ಮಂಗಳೂರು ವಿಶೇಷ ಆರ್ಥಿಕ ವಲಯದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸೂರ್ಯ ನಾರಾಯಣ, ಪತ್ರಕರ್ತರ ಸಂಘ ಗ್ರಾಮ ವಾಸ್ತವ್ಯ ಮಾಡಿದ ಕುತ್ಲೂರು ಸರಕಾರಿ ಶಾಲೆಗೆ ಕಂಪ್ಯೂಟರ್ ಒದಗಿಸಬೇಕು ಎಂದು ಪತ್ರಕರ್ತರ ಸಂಘ ಮನವಿ ಮಾಡಿತ್ತು. ಅದರಂತೆ […]

ನೆಟ್ಟ ಗಿಡಗಳ ರಕ್ಷಣೆಯೂ ನಮ್ಮ ಹೊಣೆ : ಸತ್ಯಾ ಕೆ

Saturday, June 30th, 2018
vanamahotsava

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ಶನಿವಾರ ಪತ್ರಿಕಾಭವನ ಆವರಣದಲ್ಲಿ ನಡೆಯಿತು. ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಪತ್ರಕರ್ತೆ, ವಾರ್ತಾ ಭಾರತಿ ಪತ್ರಿಕೆಯ ವರದಿಗಾರ್ತಿ ಸತ್ಯಾ ಕೆ ಮಾತನಾಡಿ,  ಕೇವಲ ಪರಿಸದ ಬಗ್ಗೆ ಮಾತನಾಡಿದರೆ ಸಾಲದು, ಪರಿಸರ ರಕ್ಷಣೆಯಲ್ಲಿ ಪ್ರತಿಯೊಬ್ಬರ ಹೊಣೆಗಾರಿಯೂ ಇದೆ. ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಬಿತ್ತುವ ಕಾರ್ಯ ಹೆಚ್ಚಾಗಿ ಆಗಬೇಕು. ಭವಿಷ್ಯದ ದೃಷ್ಟಿಯಿಂದ ಜನತೆಯನ್ನು ಎಚ್ಚರಿಸುವ ರೀತಿಯಲ್ಲಿ ಪ ರಿಸರ […]

ಗ್ರಾಮೀಣ ವರದಿಗಾರಿಕೆಗಾಗಿ ಸಂದೀಪ್ ವಾಗ್ಲೆಗೆ 2016ನೆ ಸಾಲಿನ ಪ. ಗೋ. ಪ್ರಶಸ್ತಿ

Saturday, April 15th, 2017
Pago Award

ಮಂಗಳೂರು : ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2016ನೆ ಸಾಲಿನ ಪ. ಗೋ. ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ  ಬೆಳಿಗ್ಗೆ  ನಗರದ ಪತ್ರಿಕಾ ಭವನದಲ್ಲಿ ನಡೆಯಿತು. ಗ್ರಾಮೀಣ ವರದಿಗಾರಿಕೆಗಾಗಿ ‘ಕನ್ನಡ ಪ್ರಭ’ ಪತ್ರಿಕೆಯ ವರದಿಗಾರ ಸಂದೀಪ್ ವಾಗ್ಲೆಯವರಿಗೆ ಪ್ರಶಸ್ತಿಯನ್ನು ಅತಿಥಿಗಳು ಇಂದು ಪ್ರದಾನ ಮಾಡಿದರು. ಇದೇವೇಳೆ ವಾಗ್ಲೆಯವರು ತನಗೆ ದೊರೆತ ಪ್ರಶಸ್ತಿಯ ಮೊತ್ತವನ್ನು ಮಂಜನಾಡಿ ಸಮೀಪದ ಮೊಂಟೆಪದವಿನ ಬಡ ಕೊರಗ ಕುಟುಂಬದ ರೂಪಾ ಎಂಬ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕಾಗಿ ನೀಡಿ ಮಾದರಿಯಾದರು. ಕಾರ್ಯಕ್ರಮದಲ್ಲಿ […]

ಬಾಲಕೃಷ್ಣ ಶಿಬಾರ್ಲ ಪ.ಗೋ.ಪ್ರಶಸ್ತಿಗೆ ಆಯ್ಕೆ

Thursday, April 2nd, 2015
Balakrishna Sibarla

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2014 ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ವಿಜಯಕರ್ನಾಟಕ ಪತ್ರಿಕೆಯ ಉಡುಪಿಯ ವರದಿಗಾರ ಬಾಲಕೃಷ್ಣ ಶಿಬಾರ್ಲ ಆಯ್ಕೆಯಾಗಿದ್ದಾರೆ. 2014 ರ ಜುಲೈ 31 ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ನಕ್ಸಲ್, ಪೊಲೀಸ್ ಮಧ್ಯೆ ನಲುಗಿದವರು ಅವರ ಈ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಎಪ್ರಿಲ್ 7ರಂದು ಮಂಗಳವಾರ ಬೆಳಗ್ಗೆ 10.45 ಕ್ಕೆ ಮಂಗಳೂರು ಪತ್ರಿಕಾ ಭವನದ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಯು ರೂ.10,001/ […]

ಮಾಧ್ಯಮ ಪ್ರತಿನಿಧಿಗಳ ಕುಟುಂಬ ಸದಸ್ಯರಿಗಾಗಿ ‘ಆಧಾರ್‌’ ಗುರುತು ಚೀಟಿ ನೋಂದಣಿ

Wednesday, September 28th, 2011
Adhar Card

ಮಂಗಳೂರು: ದ. ಕ. ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳ ಕುಟುಂಬ ಸದಸ್ಯರಿಗಾಗಿ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ‘ಆಧಾರ್‌’ ಗುರುತು ಚೀಟಿ ನೋಂದಣಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮಸ್ಯೆಗಳ ನಿವಾರಣೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ವಿಶಿಷ್ಟ ಗುರುತು ಚೀಟಿ ‘ಆಧಾರ್‌’ ಪಡೆಯುವುದು ಆವಶ್ಯವಾಗಿದೆ, ಆಧಾರ್‌ ಕುರಿತು ಮಾಧ್ಯಗಳು ಸಾರ್ವಜನಿಕರಲ್ಲಿ ಇನ್ನಷ್ಟು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ್ರು. ದಿನ ನಿತ್ಯದ ಸಮಸ್ಯೆಗಳಾದ […]