ಪಿಲಿಕುಳದ ಮೃಗಾಲಯದಲ್ಲಿ ಹಾವು ಸೇರಿ ಆರು ಪ್ರಾಣಿ ಪಕ್ಷಿಗಳ ಸಂತಾನಾಭಿವೃದ್ಧಿ

Sunday, June 6th, 2021
Rani Huli

ಮಂಗಳೂರು : ಪಿಲಿಕುಳದ ಮೃಗಾಲಯದಲ್ಲಿ ರಾಣಿ ಹುಲಿ, ಕಾಡುಶ್ವಾನ ‘ದೋಳ್‌’ , ‘ರಿಯಾ’ ಪಕ್ಷಿ, ‘ಲಟಿಕ್ಯುಲೇಟಿಡ್‌’ ಹೆಬ್ಬಾವು, ಕಾಳಿಂಗ ಸರ್ಪ ಇವು ಸಂತಾನಾಭಿವೃದ್ದಿಯನ್ನು ಮಾಡಿದೆ  ಪಿಲಿಕುಳ ಜೈವಿಕ ಉದ್ಯಾವನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿಯವರು ತಿಳಿಸಿದ್ದಾರೆ. ಪಿಲಿಕುಳ ಮೃಗಾಲದಲ್ಲಿರುವ 10 ವರ್ಷ ಪ್ರಾಯದ ‘ರಾಣಿ’ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಹಿಂದೆ 2019ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂಬ 5 ಮರಿಗಳಿಗೆ ಜನ್ಮ ನೀಡಿದ್ದು, ಅದು ಈಗ ಬೆಳೆದು ದೊಡ್ಡದಾಗಿವೆ. ಈಗ ಜನಿಸಿದ ಮರಿಗಳು ಆರೋಗ್ಯವಾಗಿದ್ದು […]

ಮನೆಯ ಹಿತ್ತಲಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ

Monday, July 16th, 2018
kalinga-sarpa

ಮಂಗಳೂರು: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನಲ್ಲಿ ಕಾಳಿಂಗ ಸರ್ಪವೊಂದು ಮನೆ ಹಿತ್ತಲಿಗೆ ಆಗಮಿಸಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮಿತ್ತಬಾಗಿಲು ಗ್ರಾಮದ ಪುನ್ಕೆದಡಿ ಎಂಬಲ್ಲಿ ಇಂದು ಮುಂಜಾನೆ 10 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಬಳಿಕ ಲಾಯಿಲದ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

13 ಅಡಿ ಕಾಳಿಂಗ ಸರ್ಪವನ್ನು ಹಿಡಿದು ಚಾರ್ಮಾಡಿ ಘಾಟ್ ಗೆ ಬಿಟ್ಟ ಉರಗ ತಜ್ಞ ಜಾಯ್ ಮಸ್ಕರೇನಸ್!

Monday, June 18th, 2018
mangaluru

ಮಂಗಳೂರು: ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ರಸ್ತೆ ಪಕ್ಕದ ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ಕಾಳಿಂಗ ಸರ್ಪವು ಸವಣಾಲು- ಅಯಿಲಹದಿಮೆ ರಸ್ತೆಯಲ್ಲಿ ಬೇಲಿಯಿಂದ ಹೊರಬರಲು ಹೆಣಗುತ್ತಿದ್ದ ಕಾಳಿಂಗ ಸರ್ಪವನ್ನು ಗ್ರಾಮಸ್ಥರು ನೋಡಿದ್ದಾರೆ. ಆ ಕೂಡಲೇ ಉರಗ ತಜ್ಞ ಜಾಯ್ ಮಸ್ಕರೇನಸ್ (ಸ್ನೇಕ್ ಜಾಯ್ ಅಂತಲೇ ಹೆಸರುವಾಸಿ)ಗೆ ವಿಷಯ ತಲುಪಿಸಿದ್ದಾರೆ. ಹಾವು ಹಿಡಿಯುವ ಕೋಲು ಹಾಗೂ ಚೀಲದೊಂದಿಗೆ ಜಾಯ್ ಸ್ಥಳಕ್ಕೆ ತಲುಪಿದ್ದಾರೆ. ಅಪಾಯಕಾರಿ ವಿಷಜಂತುವಾದ ಕಾಳಿಂಗ ಸರ್ಪವನ್ನು ಬೇಲಿಯಿಂದ […]

ಮನೆಬೆಕ್ಕು ರಕ್ಷಣೆಗೆ ಪ್ರಾಣ ಅರ್ಪಿಸಿದ ಸಾಕು ನಾಯಿ

Saturday, January 27th, 2018
snake

ಮಂಗಳೂರು: ಹಾವು -ಬೆಕ್ಕುಗಳ ಕಾದಾಟ ನಾಯಿಯ ಪ್ರಾಣಕ್ಕೆ ಕುತ್ತು ತಂದ ವಿಲಕ್ಷಣ ಘಟನೆಯಿದು. ಮನೆಯ ಬೆಕ್ಕಿನ ಹಿಂದೆ ಬಿದ್ದ ಕಾಳಿಂಗ ಸರ್ಪದೊಂದಿಗೆ ಹೋರಾಟ ನಡೆಸಿದ ನಾಯಿ ತನ್ನ ಪ್ರಾಣವನ್ನು ಅರ್ಪಿಸಿದರೆ, ಬೆಕ್ಕು ಅಪಾಯದಿಂದ ಪಾರಾಯಿತು. ಈ ಅಪರೂಪದ ಘಟನೆ ನಡೆದಿರುವುದು ಸುಳ್ಯ ತಾಲೂಕಿನ ಬಂಟಮಲೆಯ ತಪ್ಪಲು ಉಬರಡ್ಕ ಸನಿಹ. ಮಂಜಿಕಾನ ನಿವಾಸಿ ವೆಂಕಪ್ಪ ಗೌಡ ಅವರ ಮನೆಯಲ್ಲಿ ಸುಮಾರು ಎರಡು ವಾರ ಹಿಂದೆ ಈ ಘಟನೆ ನಡೆದಿದೆ. ಅಂದು ಸಂಜೆ ಸುಮಾರು 4ರ ಸಮಯ, ಮನೆಮಂದಿ ಮನೆಯೊಳಗೆ […]

ಪಿಲಿಕುಳ 35ಕ್ಕಿಂತಲೂ ಅಧಿಕ ಕಾಳಿಂಗ ಸರ್ಪದ ಮರಿಗಳ ಸಂತಾನೋತ್ಪತ್ತಿ

Tuesday, August 2nd, 2011
Pilikula-Snake/ಪಿಲಿಕುಳ ಕಾಳಿಂಗ ಸರ್ಪದ ಮರಿಗಳ ಸಂತಾನೋತ್ಪತ್ತಿ

ಮಂಗಳೂರು: ಪಿಲಿಕುಳ ನಿಸರ್ಗಧಾಮ ಈಗ ಮತ್ತಷ್ಟು ಆಕರ್ಷಣೀಯವಾಗಿದೆ. ಇಲ್ಲಿನ ಡಾ| ಶಿವರಾಮ ಕಾರಂತ ಜೈವಿಕ ಉದ್ಯಾನವನದ ಕಾಳಿಂಗ ಸರ್ಪ ಸಂತಾನೋತ್ಪತ್ತಿ ಕೇಂದ್ರದಲ್ಲಿ ಎರಡೂವರೆ ತಿಂಗಳ ಹಿಂದೆ ಮೂರು ಕಾಳಿಂಗ ಸರ್ಪಗಳು ಇಟ್ಟಿದ್ದ 82 ಮೊಟ್ಟೆಗಳ ಪೈಕಿ ಇದೀಗ 35ಕ್ಕಿಂತಲೂ ಅಧಿಕ ಮರಿಗಳು ಹೊರ ಬಂದಿದ್ದು ಉದ್ಯಾವವನದ ಸರ್ಪ ಸಂತತಿ ವೃದ್ದಿಸಿದೆ. ಪಿಲಿಕುಳದಲ್ಲಿ ಒಟ್ಟು 14 ಕಾಳಿಂಗ ಸರ್ಪಗಳಲ್ಲಿ 9 ಗಂಡು, 5 ಹೆಣ್ಣು. ನಾಗಮಣಿ, ನಾಗವೇಣಿ, ರಾಣಿ ಇವು ಮೊಟ್ಟೆ ಇಟ್ಟಿರುವ ಸರ್ಪಗಳು. ಈ ಪೈಕಿ ನಾಗಿಣಿ […]