Blog Archive

ಕಾಸರಗೋಡು : ಮಲಯಾಳಿ ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು, ಪೋಷಕರ ತೀವ್ರ ಪ್ರತಿಭಟನೆ

Wednesday, October 30th, 2019
karagagod

ಕಾಸರಗೋಡು : ಮೂಡಂಬೈಲು ಸರಕಾರಿ ಕನ್ನಡ ಪ್ರೌಢಶಾಲೆಗೆ ನೇಮಕಗೊಂಡಿರುವ ಕನ್ನಡೇತರ ಭೌತಶಾಸ್ತ್ರ ಶಿಕ್ಷಕ ಇಂದು ಶಾಲೆಗೆ ಹಾಜರಾಗುತ್ತಿದ್ದಂತೆಯೇ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಪೋಷಕರು ಹಾಗೂ ಉರಿನ ಕನ್ನಡ ಅಭಿಮಾನಿಗಳು ತೀವ್ರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಶಿಕ್ಷಕ ವಾಪಸ್ ತೆರಳಿದ್ದು, ನಿಯಮದಂತೆ ಕರ್ತವ್ಯಕ್ಕೆ ಹಾಜರಾಗಲು ನಾಳೆ ಮತ್ತೆ ಪೊಲೀಸ್‌ ರಕ್ಷಣೆಯೊಂದಿಗೆ ಬರಲಿದ್ದಾರೆ ಎಂಬ ಮಾಹಿತಿಗಳಿವೆ. ಈ ಹಿನ್ನೆಲೆಯಲ್ಲಿ ನಾಳೆ (ಅ.31) ಬೆಳಗ್ಗೆ 9 ಗಂಟೆಯಿಂದಲೇ ಶಾಲೆಯಲ್ಲಿ ಊರವರು, ಕನ್ನಡಾಭಿಮಾನಿಗಳು ಸೇರಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ ಮೂಡಂಬೈಲ್ ಸರಕಾರಿ ಕನ್ನಡ ಪ್ರೌಢಶಾಲೆಗೆ […]

ಚುಟುಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಆಯ್ಕೆ

Tuesday, September 24th, 2019
VB-Kulamarva

ಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮೈಸೂರಿನ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಜಂಟಿ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಕಾರ ದಲ್ಲಿ ಕಾಸರಗೋಡು ಜೆ.ಪಿ. ನಗರ ಕನ್ನಡ ಗ್ರಾಮದಲ್ಲಿ ಸೆ.29ರಂದು ಬೆಳಗ್ಗೆ 9ರಿಂದ ನಡೆಯುವ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಣ ತಜ್ಞ, ಹಿರಿಯ ಸಾಹಿತಿ ವಿ.ಬಿ.ಕುಳಮರ್ವ ಆಯ್ಕೆಯಾಗಿದ್ದಾರೆ. ವಿ.ಬಿ. ಕುಳಮರ್ವ ಅವರು ನಿವೃತ್ತ ಮುಖ್ಯ ಶಿಕ್ಷಕರು. ಕೇರಳ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಬೀದರ್‌ […]

ಫುಟ್ಬಾಲ್ ಆಡುತ್ತಿದ್ದಾಗ ಬಿದ್ದು ಕಾಸರಗೋಡು ಶಾಸಕರಿಗೆ ಗಾಯ

Friday, September 20th, 2019
N.A-Nellikunnu

ಕಾಸರಗೋಡು : ಓಣಂ ಆಚರಣೆ ಹಿನ್ನಲೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ಸೌಹಾರ್ದ ಪಂದ್ಯದ ವೇಳೆ ಫುಟ್ಬಾಲ್ ಆಡುತ್ತಿದ್ದಾಗ ಬಿದ್ದು ಕಾಸರಗೋಡು ಶಾಸಕ ಎನ್ . ಎ ನೆಲ್ಲಿಕುನ್ನು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಳಂಗರೆ ಶಾಲಾ ಮೈದಾನದಲ್ಲಿ ಜಿಲ್ಲಾಧಿಕಾರಿ ಡಾ. ಡಿ . ಸಜಿತ್ ಬಾಬು ನೇತೃತ್ವದ ಹಾಗೂ ಶಾಸಕ ಎನ್ . ಎ ನೆಲ್ಲಿಕುನ್ನು ನೇತೃತ್ವದ ತಂಡದ ನಡುವೆ ನಡೆದ ಪಂದ್ಯಾಟ ಇದಾಗಿತ್ತು. ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಶಾಸನ್ನು […]

ಮಲಗಿದ್ದ ಮಗುವಿಗೆ ಹಾವು ಕಡಿತ : ಮಗು ಸಾವು

Saturday, September 14th, 2019
Deepak

ಕಾಸರಗೋಡು : ಗಾಢ ನಿದ್ರೆಯಲ್ಲಿ ಕನಸು ಕಾಣುತ್ತ ಮಲಗಿದ್ದ ಎಳೆಯ ಕಂದಮ್ಮನಿಗೆ ನಾಗರ ಹಾವು ಕಡಿದು ಸಾವನ್ನಪ್ಪಿರುವ ಘಟನೆ ಪೆರ್ಲ ಸಮೀಪದ ಕಜಂಪಾಡಿಯಲ್ಲಿ ಸೆಪ್ಟೆಂಬರ್ 14 ರ ಶನಿವಾರ ನಡೆದಿದೆ. ವಾಸಿಸಲು ಮನೆಯೂ ಇಲ್ಲದೆ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ಕಾಂತಪ್ಪ, ಕುಸುಮ ದಂಪತಿ ಪುತ್ರ ಮೃತ ದೀಪಕ್ (3). ತಂದೆ ತಾಯಂದಿರ ನಡುವೆ ಮಲಗಿ ಗಾಢವಾಗಿ ನಿದ್ರಿಸುತ್ತಿದ್ದ ಈ ಮಗು, ಒಂದೇ ಸಮನೆ ಅಳುತ್ತಿರುವುದು ಕೇಳಿ ಎಚ್ಚರಗೊಂಡ ದಂಪತಿ, ಗಮನಿಸಿದಾಗ ಕಪಾಟಿನಡಿಯಿಂದ ಹಾವು ಕಂಡುಬಂದಿದೆ. ಕೇರೆ ಹಾವು […]

ಮೀನುಗಾರಿಕೆಗೆ ತೆರಳಿದ್ದ ದೋಣಿ ಮಗುಚಿ ಒಬ್ಬ ನಾಪತ್ತೆ 9 ಮಂದಿ ಪಾರು

Friday, September 13th, 2019
kasaragod

ಕಾಸರಗೋಡು : ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ಓರ್ವ ನಾಪತ್ತೆಯಾಗಿ ಒಂಭತ್ತು ಮಂದಿ ಅಪಾಯದಿಂದ ಪಾರಾದ ಘಟನೆ ಬೇಕಲ ಕೀಯೂರಿನಲ್ಲಿ ಸೆ. 13 ರ ಶುಕ್ರವಾರ ನಡೆದಿದೆ. ಕೀಯೂರಿನ ದಾಸನ್ ನಾಪತ್ತೆಯಾದವರು. ಗಾಯಗೊಂಡ ನಾಲ್ವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ದುರಂತ ನಡೆದಿದ್ದು , ದಾಸನ್ ಸಮುದ್ರಪಾಲಾದರೆ ಉಳಿದವರು ಈಜಿ ದಡ ಸೇರಿದರು. ಈ ಪೈಕಿ ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.  

ಕಾಸರಗೋಡು : ಕಾರು – ಲಾರಿ ನಡುವೆ ಅಪಘಾತ; ನಾಲ್ವರು ವಿದ್ಯಾರ್ಥಿಗಳು ಗಂಭೀರ

Friday, August 23rd, 2019
Kasaragodu

ಕಾಸರಗೋಡು : ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಉಲ್ಲಾಲದ ಖಾಸಗಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಆ. 22 ರ ರಾತ್ರಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಗಳಾದ ಕುಂಬಳೆ ಆರಿಕ್ಕಾಡಿಯ ಮುಹಮ್ಮದ್ ಆಫ್ರಾತ್ (20) , ಬಂಬ್ರಾಣದ ಜಾಫರ್ (21) , ಸುಳ್ಯದ ಅನಾಸ್ (20) ಮತ್ತು ಕಾಜೂರಿನ ಮುಹಮ್ಮದ್ ಅನಾಸ್ (20) ರನ್ನು ಮಂಗಳೂರುನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂದ್ಯೋಡು ಬಳಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಉಳ್ಳಾಲಕ್ಕೆ […]

ಕಾಸರಗೋಡಿನಲ್ಲಿ ಆಫ್ರಿಕನ್ ಹುಳಗಳು ಪತ್ತೆ

Saturday, August 17th, 2019
Afrecan

ಕಾಸರಗೋಡು : ಮೀಂಜ, ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೃಹತ್‌ ಗಾತ್ರದ ಆಫ್ರಿಕನ್‌ ಬಸವನ ಹುಳುಗಳು  ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮೀಂಜ ಗ್ರಾಮ ಪಂಚಾಯತ್‌ನಲ್ಲಿ ನಡೆದ ತಿಳಿವಳಿಕೆ ಶಿಬಿರದಲ್ಲಿ ಬಸವನ ಹುಳುಗಳ ಉಪಟಳವನ್ನು ತಪ್ಪಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಮೇರಾ ಗಾಂವ್‌, ಮೇರಾ ಗೌರವ್‌ (ನನ್ನ ಊರು, ನನ್ನ ಹೆಮ್ಮೆ) ಯೋಜನೆಯಡಿ ಐಸಿಎಆರ್‌- ಸಿಪಿಸಿಆರ್‌ಐ ವಿಜ್ಞಾನಿಗಳ ತಂಡವು ಸ್ಥಳೀಯ ಕೃಷಿಕರು ಸಹಿತ ಜನಸಾಮಾನ್ಯರಿಗೆ ಕೃಷಿಗೆ ರೋಗ ಬಾಧೆಯನ್ನು ತಡೆಯುವ ನಿಟ್ಟಿನ ಮಾಹಿತಿಯನ್ನು ನೀಡಿತು. ಆಫ್ರಿಕನ್‌ ಬಸವನ ಹುಳುಗಳು […]

ಕಾಸರಗೋಡು ಮೂಲದ ಐಸಿಸ್ ಉಗ್ರನ ಹತ್ಯೆ

Monday, June 3rd, 2019
Rashid Abdulla

ಕಾಸರಗೋಡು : ಕಾಸರಗೋಡು ಜಿಲ್ಲೆಯಿ೦ದ ಐಸಿಸ್  ಸೇರಿರುವ ರಶೀದ್ ಅಬ್ದುಲ್ಲ ಅಪಘಾನಿಸ್ತಾನದಲ್ಲಿ  ಮೃತಪಟ್ಟಿರುವುದು ಬಹುತೇಕ ಖಚಿತವಾಗಿದೆ . ತ್ರಿಕ್ಕರಿಪುರ ನಿವಾಸಿಯಾದ ರಾಶಿದ್ ಅಬ್ದುಲ್ಲ ಕೆಲ ತಿಂಗಳ ಹಿಂದೆ  ಐಸಿಸ್ ಗೆ ಸೇರ್ಪಡೆಗೊಂಡಿದ್ದ . ಈತ ರಚಿಸಿದನೆನ್ನಲಾದ ಟೆಲಿಗ್ರಾಂ ಗ್ರೂಪ್ ಕಾರ್ಯಾಚರಿಸುತ್ತಿಲ್ಲ. ಮೂರು ತಿಂಗಳಿನಿಂದ ಈತನ ಸಂದೇಶ ಬಂದಿಲ್ಲ. ಇದರಿಂದ ರಾಶಿದ್ ಅಬ್ದುಲ್ಲ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಅಪಘಾನಿಸ್ತಾನದ ಐಸಿಸ್ ಕೇಂದ್ರಕ್ಕೆ ಅಮೆರಿಕದ ವೈಮಾನಿಕ ದಾಳಿಯಿಂದ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಅಫಘಾನಿಸ್ತಾನದ ಕುರಾಸೆಲ್ ಪ್ರದೇಶದ ಐಸಿಸ್ ಕೇಂದ್ರದಲ್ಲಿದ್ದ ರಾಶೀದ್ […]

ಕಾಸರಗೋಡು ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಗೆಲುವು

Thursday, May 23rd, 2019
Rajmohan Unnithan

ಕಾಸರಗೋಡು :  ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ತಮ್ಮ ಪ್ರತಿಸ್ಪರ್ಧಿ ಸಿಪಿಎಂನ ಕೆ.ಪಿ ಸತೀಶ್ಚಂದ್ರನ್ ರನ್ನು40,438 ಮತಗಳ ಅಂತರದಿಂದ ಸೋಲಿಸಿದರು. ಸಿಪಿಎಂನ ಭದ್ರ ಕೋಟೆಯಾದ ಕಾಸರಗೋಡು ಮೂರು ದಶಕದ ಬಳಿಕ ಕಾಸರಗೋಡು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ತಮ್ಮ ಪ್ರತಿಸ್ಪರ್ಧಿ ಸಿಪಿಎಂನ ಕೆ.ಪಿ ಸತೀಶ್ಚಂದ್ರನ್ ರನ್ನು ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿ ತ್ತಾನ್ ಸಿಪಿಎಂನ ಕೆ. ಪಿ ಸತೀಷ್ಚಂದ್ರನ್ ವಿರುದ್ಧ ಸುಮಾರು 41, 648 ಅಂತರದಿಂದ ಗೆಲುವು ಸಾದಿಸಿದರು. […]

ಕೊಲೆ ಯತ್ನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಕೇರಳದಲ್ಲಿ ಬಂಧನ

Wednesday, November 14th, 2018
arret-kerala

ಮಂಗಳೂರು: ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಆರೋಪಿ ಕೇರಳದ ಕಾಸರಗೋಡು ಜಿಲ್ಲೆಯ ಬಿ.ಎ ಸಂಶುದ್ದೀನ್ ಎಂಬಾತ 2013ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದವನು. ಇದೀಗ ಈತನನ್ನು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ.