ಗೆಳತಿಯ ಜೊತೆ ತೆರಳಿ ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪತ್ತೆ

Monday, June 15th, 2020
kiran

ವಿಟ್ಲ : ಇತ್ತೀಚೆಗೆ ಪೆರುವಾಯಿ ಗ್ರಾಮದ ಕಂಬಕೋಡಿ ಮನೆಯಿಂದ ತನ್ನ ಸ್ನೇಹಿತೆಯೊಂದಿಗೆ ತೆರಳಿ ನಾಪತ್ತೆಯಾಗಿದ್ದ ಯುವತಿ  ಪ್ರಿಯಕರನ ಜತೆ ಬೆಂಗಳೂರಿನಲ್ಲಿ ಮದುವೆಯಾಗಿದ್ದಾಳೆ ಎಂಬ ಮಾಹಿತಿ ವಿಟ್ಲ ಪೊಲೀಸರಿಗೆ ಲಭ್ಯವಾಗಿದೆ. ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿಯಾಗಿರುವ ಯುವತಿಯನ್ನು ಮೇ 29ರಂದು ಆಕೆಯ ಸ್ನೇಹಿತೆ ಕರೆದುಕೊಂಡು ತೆರಳಿದ್ದಳು. ಬಳಿಕ ಆಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ನಾಪತ್ತೆ ಪ್ರಕರಣದ ಬೆನ್ನು ಬಿದ್ದಿದ್ದರು. ನಿರಂತರ ಸೋಧ ನಡೆಸಿದ ಬಳಿಕ ಇದೀಗ […]

ಉಪ್ಪಿನಂಗಡಿ : ಬೈಕ್ ಅಪಘಾತದಲ್ಲಿ 9ನೇ ತರಗತಿ ವಿದ್ಯಾರ್ಥಿ ಮೃತ್ಯು

Thursday, November 28th, 2019
Kiran

ಉಪ್ಪಿನಂಗಡಿ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪದಲ್ಲಿ ನಡೆದ ಬೈಕೊಂದು ಸ್ಕಿಡ್ ಆಗಿ ರಸ್ತೆಗುರುಳಿದ ಪರಿಣಾಮ ಸಹ ಸವಾರ ಶಾಲಾ ಬಾಲಕ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಕೋಲ್ಪೆ ನಿವಾಸಿ ಗಿರಿಯಪ್ಪ ಎಂಬವರ ಪುತ್ರ ನೆಲ್ಯಾಡಿ ಖಾಸಗಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿ ಕಿರಣ್ (15) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಿರಣ್‍ಗೆ ನೆಲ್ಯಾಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರಗೆ ಕರೆದೊಯ್ಯುತ್ತಿದ್ದ […]

ಸುಳ್ಯ : ಸ್ನಾನ ಮಾಡಲು ಹೊಳೆಗೆ ಇಳಿದ ವಿದ್ಯಾರ್ಥಿ ಮೃತ್ಯು

Monday, October 14th, 2019
yashwith

ಸುಳ್ಯ : ಇಲ್ಲಿನ ಉಬರಡ್ಕದ ಹೊಳೆಯಲ್ಲಿ ಸ್ನಾನ ಮಾಡಲೆಂದು ತೆರಳಿದ್ದ ವಿದ್ಯಾರ್ಥಿಯೋರ್ವ ನೀರು ಪಾಲಾದ ದುರಂತ ಘಟನೆ ಸಂಭವಿಸಿದೆ. ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಯಶ್ವಿತ್ (15) ಮೃತ ದುರ್ದೈವಿ. ವಿದ್ಯಾರ್ಥಿ ಯಶ್ವಿತ್ ಸೇರಿದಂತೆ ಮೂವರು ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಕಿರಣ್ ಎಂಬಾತ ನೀರಲ್ಲಿ ಮುಳುಗುತಿದ್ದ ಸಂದರ್ಭ ಯಶ್ವಿತ್ ಮತ್ತು ಇತರ ಇಬ್ಬರು ಸೇರಿ ಆತನನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಆದರೆ ಈ ವೇಳೆ ಯಶ್ವಿತ್ ನೀರಿನ ಆಳಕ್ಕೆ ಬಿದ್ದ‌ ಎನ್ನಲಾಗಿದೆ. ಪೊಲೀಸರ […]

ಕೊಪ್ಪಳ : ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಬಲಿ

Wednesday, August 28th, 2019
koppala

ಕೊಪ್ಪಳ : ಕನಕಗಿರಿ ತಾಲೂಕಿನ ನವಲಿ ಎಂಬ ಗ್ರಾಮದಲ್ಲಿ ಮರಳಿನ ದಿಬ್ಬವೊಂದು ಮೂವರು ಮಕ್ಕಳನ್ನು ಬಲಿ ಪಡೆದುಕೊಂಡಿದೆ. ಮೃತಪಟ್ಟಿರುವ ಮಕ್ಕಳನ್ನು ಐದು ವರ್ಷದ ಸೋನಂ, ಮೂರು ವರ್ಷದ ಸವಿತಾ ಹಾಗೂ ಎರಡು ವರ್ಷದ ಕವಿತಾ ಎಂದು ಗುರುತಿಸಲಾಗಿದೆ. ಇವರ ಜೊತೆಯಲ್ಲಿ ಆಟವಾಡಿಕೊಂಡಿದ್ದ ರೋಷನ್, ಕಿರಣ್ ಮತ್ತು ಬಾಬು ಎಂಬ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತಪಟ್ಟವರನ್ನು ಮಹಾರಾಷ್ಟ್ರ ಕಡೆಯಿಂದ ಇಟ್ಟಿಗೆ ಫ್ಯಾಕ್ಟರಿ ಕೆಲಸಕ್ಕಾಗಿ ಇಲ್ಲಿಗೆ ಆಗಮಿಸಿದ್ದ ಕುಟುಂಬಕ್ಕೆ ಸೇರಿದ ಮಕ್ಕಳು ಎಂದು ಗುರುತಿಸಲಾಗಿದೆ. ಆಟವಾಡುತ್ತಾ ಮರಳಿನ ಗುಡ್ಡದೊಳಗೆ ಮಕ್ಕಳು […]

ಪ್ರೇಯಸಿ ಜೊತೆ ವಿವಾಹಿತ ಆತ್ಮಹತ್ಯೆ

Tuesday, April 16th, 2019
Kiran-Sangeetha

ಮಂಗಳೂರು: ವಿವಾಹಿತ ಯುವಕನೊಬ್ಬ ಪ್ರೇಯಸಿಯ  ಜೊತೆಗೆ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸುದಮುಗೇರಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಬಾಡಿಗೆ ಮನೆಯಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಣ್ಸೇಕಟ್ಟೆ ನಿವಾಸಿ ಕಿರಣ್ (30), ಲಾಯಿಲ ನಿವಾಸಿ ಸಂಗೀತ (15) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ . ಕಿರಣ್ಗೆ ಎರಡು ಮದುವೆಯಾಗಿದ್ದು, ಪ್ರೇಯಸಿಯನ್ನು ಅಪ್ರಾಪ್ತೆ ಎನ್ನಲಾಗಿದೆ.  ಕಿರಣ್ ಆಕೆಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದೆ.  ಇನ್ನು ಕಿರಣ್ ಪಿಟ್ಟರ್ ಕೆಲಸ ನಿರ್ವಹಿಸುತ್ತಿದ್ದ. ಬಾಲಕಿ ಹತ್ತನೇ ತರಗತಿಯನ್ನು ಅರ್ಧದಲ್ಲಿ ಬಿಟ್ಟಿದ್ದಳು‌. […]

ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದಿದ್ದ ಇಂಜಿನಿಯರ್..ಶವವಾಗಿ ಪತ್ತೆ!

Thursday, August 9th, 2018
engineer

ಚಿಕ್ಕಮಗಳೂರು: ಸೆಲ್ಫಿ ತೆಗೆಯಲು ಹೋಗಿ ನದಿಗೆ ಬಿದ್ದಿದ್ದ ಇಂಜಿನಿಯರ್ವೋರ್ವರು 15 ದಿನಗಳ ಬಳಿಕ ಶವವಾಗಿ ಭದ್ರಾ ನದಿಯಲ್ಲಿ ಪತ್ತೆಯಾಗಿದ್ದಾರೆ. ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆಯುವಾಗ ಕಾಲು ಜಾರಿ ಕಿರಣ್ ನದಿಗೆ ಬಿದ್ದಿದ್ದರು. ಇಂದು ಮಾಗುಂಡಿ ಸಮೀಪದಲ್ಲಿರುವ ಭದ್ರಾ ನದಿಯಲ್ಲಿ ಕಿರಣ್ ಮೃತದೇಹ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆ‌ ಸುರಿಯುತ್ತಿರುವ ಹಿನ್ನಲೆ ಭದ್ರಾ ನದಿಯಲ್ಲಿ ‌ಕಿರಣ್ ಮೃತ ದೇಹ ತೇಲಿ ಬಂದಿದೆ. ಭದ್ರಾನದಿಯಲ್ಲಿ ಸೆಲ್ಫಿ ಸಾವು ಪ್ರಕರಣ… ಇನ್ನೂ ಪತ್ತೆಯಾಗದ ಪ್ರವಾಸಿಯ ದೇಹ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ […]

ಯುವಕನ ಕೊಲೆ ಯತ್ನ ಪ್ರಕರಣ..ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್!

Wednesday, July 11th, 2018
police-arrest

ಮಂಗಳೂರು: ಯುವಕನ ಕೊಲೆ ಯತ್ನ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ ನೆತ್ತಿಕಲ್ಲಿ ಮನೆ ನಿವಾಸಿ ಪ್ರಕಾಶ್ ಆಚಾರ್ಯ (23) ಬಂಧಿತ ಆರೋಪಿ. ಜೂನ್ 11ರಂದು ಚೇತನ್ ಎಂಬವರ ಕೊಲೆಗೆ ಯುವಕರ ತಂಡವೊಂದು ಯತ್ನಿಸಿತ್ತು. ಚೇತನ್ಗೆ ಪರಿಚಯಸ್ಥರಾದ ಕಿರಣ್, ಕಿರ್ತನ್, ಯೋಗಿಶ್, ಲೋಕೇಶ್, ಮೋಹನ್, ವಿದ್ಯಾಧರ್ ಹಾಗೂ ಪ್ರಕಾಶ್ ಕೊಲೆಗೆ ಯತ್ನಿಸಿದ್ದರು. ಈ ವೇಳೆ ಚೇತನ್ ಜೊತೆಗಿದ್ದ ರವಿರಾಜ್ ಮತ್ತು ನವೀನ್ ಕೊಲೆ ಯತ್ನ ತಡೆದ ಹಿನ್ನೆಲೆಯಲ್ಲಿ ಆರೋಪಿಗಳು […]

ರಿಕ್ಷಾ – ಲಾರಿ ನಡುವೆ ನಡೆದ ಅಪಘಾತ, ಆಟೊ ಚಾಲಕ ಮೃತ

Saturday, November 11th, 2017
kiran

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಆಟೊ ರಿಕ್ಷಾ – ಲಾರಿ ನಡುವೆ ನಡೆದ ಅಪಘಾತದಲ್ಲಿ ಆಟೊ ಚಾಲಕ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಕುಂಬಳೆ ಶಾಂತಿಪಳ್ಳದ ಕಿರಣ್ ( 29) ಎಂದು ಗುರುತಿಸಲಾಗಿದೆ. ಕಾಸರಗೋಡು ಕಡೆಯಿಂದ ಮಂಗಳೂರು ನತ್ತ ತೆರಳುತ್ತಿದ್ದ ಲಾರಿ ಮತ್ತು ಕುಂಬಳೆ ಕಡೆಗೆ ಹೋಗುತ್ತಿದ್ದ ರಿಕ್ಷಾ ನಡುವೆ ಅಪಘಾತ ನಡೆದಿದೆ. ಅಪಘಾತದಿಂದ ಆಟೊ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಂಭೀರ ಗಾಯಗೊಂಡ ಕಿರಣ್ ರನ್ನು ಕುಂಬಳೆ ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.