ಆಳ್ವಾಸ್‌‌‌ ವಿದ್ಯಾರ್ಥಿಯಿಂದ ಸ್ಯಾನಿಟರಿ ಪ್ಯಾಡ್‌‌‌ ಕಂಪೆನಿ ಸ್ಥಾಪನೆ

Wednesday, February 28th, 2018
alwas-foundation

ಮಂಗಳೂರು: ಮೂಡಬಿದ್ರೆ ಆಳ್ವಾಸ್ ಪದವಿ ಕಾಲೇಜಿನ ತೃತೀಯ ಬಿ.ಕಾಮ್ ವಿದ್ಯಾರ್ಥಿ ಕಿರಣ್ ರೆಡ್ಡಿ ಚೆನ್ನೈನ ಸೂರ್ಯ ಎಂಬುವವರ ಸಹಯೋಗದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಕಂಪನಿಯನ್ನು ಆರಂಭಿಸಿದ್ದು, ಆಳ್ವಾಸ್ ಶಿಕ್ಷಣ ಪ್ರತಿಪ್ಠಾನದ ಕುವೆಂಪು ಸಭಾಂಗಣದಲ್ಲಿ ‘ಬೆಸ್ಟಿ'(ಸ್ಯಾನಿಟರ್ ನ್ಯಾಪ್ಕಿನ್) ಎಂಬ ಹೊಸ ಪ್ರೊಡಕ್ಟ್ ಬಿಡುಗಡೆಯಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಢಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಉತ್ಪನ್ನವನ್ನು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ಸಂಸ್ಥೆಯ ಹೋರಾಟ ಮನೋಭಾವ, ಇಚ್ಛಾಶಕ್ತಿ ಹಾಗೂ ಸೃಜನಾತ್ಮಕ ಚಿಂತನೆಗಳು ಇದ್ದಲ್ಲಿ ಯಾರು ಬೇಕಾದರೂ ಸಾಧಿಸಬಹುದು […]

‘ಲೋಕ’ದ ಕತ್ತಲಲ್ಲಿ ಒಪ್ಪಿಗೆ ಪಡೆದ ತೆಲಂಗಾಣ ಮಸೂದೆ, ಇಂದು ಕಿರಣ್ ರಾಜಿನಾಮೆ?

Wednesday, February 19th, 2014
Kiran-Reddy

ನವದೆಹಲಿ: ಸಂಸತ್ತಿನ ಹೊರಗೆ ಮತ್ತು ಒಳಗೆ ಸೀಮಾಂಧ್ರ ಮುಖಂಡರ ಪ್ರತಿಭಟನೆಯ ನಡುವೆಯೇ ಆಂಧ್ರವನ್ನು ಇಬ್ಭಾಗ ಮಾಡುವ ತೆಲಂಗಾಣ ಮಸೂದೆಗೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕಾರ ನೀಡಲಾಯಿತು. ಸಂಪೂರ್ಣ ನಾಟಕೀಯ ರೀತಿಯಲ್ಲಿ ನಡೆದ ಬೆಳವಣಿಗೆಯಲ್ಲಿ ಲೋಕಸಭೆಯ ನೇರ ಪ್ರಸಾರವನ್ನು ಕಡಿತಗೊಳಿಸಿ, ಮಾರ್ಷಲ್‌ಗಳನ್ನು ಕರೆಸಿ ಮಸೂದೆಗೆ ಕದ್ದುಮುಚ್ಚಿ ಒಪ್ಪಿಗೆ ಪಡೆಯಲಾಯಿತು. ಸ್ವಪಕ್ಷೀಯ ಸಂಸದರು, ಸಚಿವರ ವಿರೋಧದ ಹೊರತಾಗಿಯೂ ಮಂಡನೆಯಾದ ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಆಂಧ್ರಪ್ರದೇಶ ಮರುವಿಂಗಡಣೆ ಮಸೂದೆ- 2014ಕ್ಕೆ ಧ್ವನಿ ಮತದ ಮೂಲಕ ಅಂಗೀಕಾರ ಪಡೆಯಲಾಯಿತು. ಆಂಧ್ರವಿಭಜನೆಯ ಈ ಮಸೂದೆಗೆ […]