ಬಾಬುಗುಡ್ದದಲ್ಲಿರುವ ಕುದ್ಮುಲ್ ರಂಗರಾವ್ ರವರ ಸಮಾಧಿಗೆ ಪುಷ್ಪಾರ್ಚನೆ ಹಾಗೂ ಗೌರವ ನಮನ

Saturday, June 29th, 2024
Kudmal-Ranga-Rao

ಮಂಗಳೂರು : ಪೂಜ್ಯನೀಯ ಕುದ್ಮುಲ್ ರಂಗರಾವ್ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ ಅತ್ತಾವರ ಬಾಬುಗುಡ್ಡ, ಬಿಜೆಪಿ ಎಸ್ಸಿ ಮೋರ್ಚಾ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಕುದ್ಮುಲ್ ರಂಗರಾವ್ ರವರ 165ನೇ ಜನ್ಮದಿನಾಚರಣೆಯ ಪ್ರಯುಕ್ತ ಬಾಬುಗುಡ್ದದಲ್ಲಿರುವ ಸಮಾಧಿಗೆ ಪುಷ್ಪಾರ್ಚನೆ ಹಾಗೂ ಗೌರವ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಈ ದೇಶದಲ್ಲಿ ದಲಿತೋದ್ಧಾರಕ್ಕಾಗಿ ಶ್ರಮಿಸಿದ ಹಲವಾರು ಮಹನೀಯರನ್ನು ಕಾಣಬಹುದು. ಆದರೆ ದಲಿತೋದ್ಧಾರಕ್ಕಾಗಿ ತನ್ನ ಬದುಕನ್ನೇ ಸಮರ್ಪಣೆ ಮಾಡಿದವರು ಎಂದರೆ ನಮ್ಮ ಕುದ್ಮಲ್ […]

ಕಾಂಗ್ರೆಸ್ ಕಚೇರಿಯಲ್ಲಿ ಕುದ್ಮುಲ್ ರಂಗರಾವ್ ಅವರ 162ನೇ ಜನ್ಮದಿನಾಚರಣೆ

Tuesday, June 29th, 2021
KudmalRangaRao

ಮಂಗಳೂರು : ಕುದ್ಮುಲ್ ರಂಗರಾವ್ ಅವರ 162ನೇ ಜನ್ಮದಿನಾಚರಣೆಯನ್ನು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ವರ್ಗದ ಘಟಕದ ವತಿಯಿಂದ ಇಂದು ಕದ್ರಿ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರಗಿತು. ಮಾಜಿ ಶಾಸಕ ಜೆ. ಆರ್.ಲೋಬೊ, ದಿ.ಕುದ್ಮುಲ್ ರಂಗರಾವ್  ಅವರ  ಭಾವಚಿತ್ರಕ್ಕೆ ಮಾಲಾರ್ಪಣೆಗೈದು  ಮಾತನಾಡಿತ್ತಾ ಸಾಮಾಜಿಕ ಬದ್ಧತೆ, ದಲಿತೋದ್ಧಾರದ ಪರಿಕಲ್ಪನೆ, ಸ್ವಾರ್ಥರಹಿತ ಸೇವಾ ಮನೋಭಾವ ಅವರನ್ನು ಸಮಾಜದ ಉನ್ನತ ಸ್ಥಾನಕ್ಕೆ ಏರಿಸಿತ್ತು ಎಂದರು. ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಾಲಿಕೆ ವಿಪಕ್ಷ […]

ಪುರಭವನಕ್ಕೆ `ಕುದ್ಮುಲ್ ರಂಗರಾವ್ ಪುರಭವನ’ ಎಂದು ಮರು ನಾಮಕರಣ

Thursday, August 30th, 2018
Kudmal-Ranga rao

ಮಂಗಳೂರು :  ಮನಪಾ ವತಿಯಿಂದ  472.41 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಪುರಭವನಕ್ಕೆ ಕುದ್ಮುಲ್ ರಂಗರಾವ್ ಪುರಭವನ ಎಂದು ಮರು ನಾಮಕರಣ ವನ್ನು ವಸತಿ ಮತ್ತು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನೆರವೇದಿಸಿದರು. ಕುದ್ಮುಲ್ ರಂಗರಾವ್ ದಲಿತ ವರ್ಗದ ವಿಶೇಷ ಕಾಳಜಿಯೊಂದಿಗೆ ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾದವರು. ಅವರ ಹೆಸರನ್ನು ಪುರಭವನಕ್ಕೆ ನಾಮಕರಣ ಮಾಡುವ ಮೂಲಕ ಉತ್ತಮ ಕಾರ್ಯವನ್ನು ಮನಪಾ ಮಾಡಿದೆ ಎಂದು ಅವರು ಹೇಳಿದರು. ಅತೀ ಶೀಘ್ರದಲ್ಲೇ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಗದ ರಹಿತ, ಅಟೊಮೈಸೇಶನ್ ಹಾಗೂ […]

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಾರಂಭ: ರಾಜ್ಯ ಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆ

Monday, December 7th, 2015
Lakshadeepa

ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿ ಅಲ್ಲಿನ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಭಾನುವಾರ ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಉದ್ಘಾಟಿಸಿದರು. ನಾವೆಲ್ಲರೂ ಜಾತಿ-ಮತ, ಭೇದ ಮರೆತು ಪರಸ್ಪರ ಪ್ರೀತಿ-ವಿಶ್ವಾಸದಿಂದ ದೇಶದ ಪ್ರಗತಿಗಾಗಿ ಸಂಘಟಿತ ಪ್ರಯತ್ನ ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು. ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಅಲ್ಲಿನ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಅವರು […]