ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮಂಗಳೂರಿನ ದಸರಾ ಶೋಭಾಯಾತ್ರೆ.!

Saturday, October 20th, 2018
Mangaluru-dasara-14

ಮಂಗಳೂರು: ದಸರಾದ ವೈಭವದ ಶೋಭಾಯಾತ್ರೆಗೆ ನಿನ್ನೆ ಸಂಜೆ 4 ಗಂಟೆಗೆ ಚಾಲನೆ ನೀಡುವ ಮೂಲಕ ಮಂಗಳೂರು ದಸರಾದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮೊದಲಿಗೆ ಶ್ರೀ ಮಹಾಗಣಪತಿ ದೇವರಿಗೆ ಪೂಜೆ ಮಾಡಿ, ಗಣಪತಿ ದೇವರ ವಿಗ್ರಹವನ್ನು ಮೆರವಣಿಗೆಯ ವಾಹನದಲ್ಲಿ ಕುಳ್ಳಿರಿಸಲಾಯಿತು. ಬಳಿಕ ನವದುರ್ಗೆಯರಾದ ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಗೌರಿ, ಮಹಾಕಾಳಿ, ಸಿದ್ಧಿದಾತ್ರಿ ಹಾಗೂ ಶಾರದಾ ಮಾತೆಯ ಪೂಜೆಯ ಬಳಿಕ ವಿಗ್ರಹಗಳನ್ನು ಮೆರವಣಿಗೆಯ ವಾಹನದಲ್ಲಿ ಕುಳ್ಳಿರಿಸಿ, ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಸುಮಾರು 75 ಸ್ತಬ್ಧಚಿತ್ರಗಳು, […]

ಪ್ರಹ್ಲಾದ್ ದಾಮೋದರ್ ಮೋದಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ

Wednesday, April 19th, 2017
Prahalad Modi

ಮಂಗಳೂರು:  ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ ಅವರು ಮಂಗಳೂರಿಗೆ ಆಗಮಿಸಿದ್ದು, ಸೋಮವಾರ ಮಂಗಳೂರಿನ ಪ್ರಸಿದ್ದ ಕ್ಷೇತ್ರವಾದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಪ್ರಹ್ಲಾದ್ ದಾಮೋದರ್ ಮೋದಿಯವರನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಹಾಗೂ ಶ್ರೀ ಕ್ಷೇತ್ರದ ಇತರ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಪ್ರಹ್ಲಾದ್ ದಾಮೋದರ್ ಮೋದಿಯವರು ಶ್ರೀ ಕ್ಷೇತ್ರದಲ್ಲಿರುವ ವಿವಿಧ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಿಜೆಪಿ ಮಂಗಳೂರು ದಕ್ಷಿಣ ವಿಧಾನ ಸಭಾ […]

ಶೀಘ್ರವೇ ಹೊರಬರಲಿದೆ ಜನಾರ್ದನ ಪೂಜಾರಿ ಆತ್ಮಕತೆ

Saturday, September 17th, 2016
janardana-poojary

ಮಂಗಳೂರು: ಪಕ್ಷದೊಳಗೆ ಇದ್ದುಕೊಂಡೇ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವ ಜನಾರ್ದನ ಪೂಜಾರಿಯವರ ವೈಖರಿ ಕೆಲವರಲ್ಲಿ ಇರಿಸು ಮುರಿಸು ಉಂಟುಮಾಡಿದರೆ, ಇನ್ನು ಕೆಲವರಲ್ಲಿ ಕುಟುಂಬದಲ್ಲಿ ಹಿರಿಯಣ್ಣನಿಗೆ ನೀಡಿದ ಗೌರವ, ನೇರ ನಡೆ, ಪಾರದರ್ಶಕ ನಿಲುವಿಗೆ ಹೆಸರಾದ ಪೂಜಾರಿ ಪಕ್ಷದ ಶಿಸ್ತಿನ ಸಿಪಾಯಿ. ಆದರೆ ಎಲ್ಲವನ್ನೂ ತನಗೆ ಹೇಳಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಇದೆ ಎಂಬ ಅವರ ಮನದಾಳದ ಭಾವವನ್ನು ಅಕ್ಷರ ರೂಪಕ್ಕಿಳಿಸು ಜನಾರ್ದನ ಪೂಜಾರಿ ಸಿದ್ದರಾಗುತ್ತಿದ್ದಾರೆ. ಹೌದು, ಕೆಲವೇ ದಿನಗಳಲ್ಲಿ ಪೂಜಾರಿಯವರ ಆತ್ಮಚರಿತ್ರೆ ಹೊರಬರಲಿದೆ. ಎಲ್ಲವನ್ನೂ ಕಡ್ಡಿಮುರಿದಂತೆ ಹೇಳುವ ಪೂಜಾರಿಯವರಿಗೆ […]