ಬೆಂಗಳೂರು: ಭೂಕಬಳಿಕೆ ಆರೋಪಕ್ಕೆ ಬಗ್ಗೆ ಉಪ್ಪಿ ಸ್ಪಷ್ಟನೆ: ಡೌಟಿದ್ರೆ ಬಂದು ಪರಿಶೀಲಿಸಿ

Wednesday, May 26th, 2021
Upendara

ಬೆಂಗಳೂರು: ಲಾಕ್ ಡೌನ್ ವೇಳೆ ಚಲನಚಿತ್ರ ಕಾರ್ಮಿಕರು ಹಾಗೂ ಬಡ ಕಲಾವಿದರ ನೆರವಿಗೆ ನಿಂತಿರುವ ನಟ ಉಪೇಂದ್ರ ಸದ್ಯ ಸುದ್ದಿಯಾಗುತ್ತಿದ್ದಾರೆ. ಈ ನಡುವೆ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿತ್ತು. ನಟ ಉಪೇಂದ್ರ ಕೃಷಿ ಭೂಮಿ ಒತ್ತುವರಿ ಮಾಡಿದ ರುಪ್ಪೀಸ್ ಎಂಬ ಹೆಸರಿನ ರೆಸಾರ್ಟ್ ಮಾಲೀಕರಾಗಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಉಪೇಂದ್ರ, ದಯವಿಟ್ಟು ಆರೋಪ ಮಾಡುವ ಮುನ್ನ ದಾಖಲೆಗಳನ್ನು ಪರಿಶೀಲಿಸಿ ಎಂದಿದ್ದಾರೆ. ಸುಮಾರು 14 ವರ್ಷಗಳ ಹಿಂದೆ ವಿಲೇಜ್ ಎಂಬ […]

ಮಂಗಳೂರಿನಿಂದ ಕೇರಳಕ್ಕೆ ವಿದ್ಯುತ್ ಸರಬರಾಜು, ಹಲವು ಕೃಷಿ ಭೂಮಿಗಳಿಗೆ ಆಪತ್ತು

Thursday, January 14th, 2021
Ramanatha Rai

ಮಂಗಳೂರು: ಯುಪಿಸಿಎಲ್‌ ಕಂಪೆನಿಯು ನಂದಿಕೂರಿನಿಂದ ಕೇರಳಕ್ಕೆ ಅಳವಡಿಸಲಿರುವ ವಿದ್ಯುತ್‌ ಪ್ರಸರಣ ತಂತಿ ಹಾದು ಹೋಗುವ ಪ್ರದೇಶಗಳ ಕುರಿತು ಸರಕಾರ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಭೂಮಿಯ ಮೇಲ್ಭಾಗದಲ್ಲಿ ತಂತಿ ಎಳೆಯುವ ಬದಲು ಭೂಗತ ಕೇಬಲ್‌ ಅಳವಡಿಸುವುದು ಸೂಕ್ತ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ನಂದಿಕೂರಿನಿಂದ ಮೂಡುಬಿದಿರೆ- ಬಂಟ್ವಾಳ-ವಿಟ್ಲ- ಕರೋ ಪಾಡಿ ಮೂಲಕ ಕಾಸರಗೋಡು ಭಾಗಕ್ಕೆ ವಿದ್ಯುತ್‌ ಲೈನ್‌ ಕೊಂಡೊಯ್ಯುವ ಬಗ್ಗೆ ಗೂಗಲ್‌ ಸರ್ವೇ ನಡೆದಿದೆ ಎಂಬ ಮಾಹಿತಿ ಇದೆ. ಆದರೆ ಬಂಟ್ವಾಳ ತಾಲೂಕಿನ […]

ಉತ್ತರಕನ್ನಡ : ನೆರೆಹಾನಿ ವೀಕ್ಷಣೆ ರದ್ದುಗೊಳಿಸಿದ ಸಿಎಂ; ಸಂತ್ರಸ್ತರ ಆಕ್ರೋಶ

Saturday, August 31st, 2019
uttara-kannada

ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ನೆರೆಹಾನಿ ವೀಕ್ಷಣೆಗೆ ಆಗಮಿಸಬೇಕಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಸ‌ ರದ್ದಾಗಿದ್ದು, ಇದೀಗ ರೈತರ ಹಾಗೂ ನೆರೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಎಡಬಿಡದೆ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣವಿದೆ. ಈ ಕಾರಣದಿಂದ ಶಿವಮೊಗ್ಗದಿಂದ ಹೆಲಿಕಾಪ್ಟರ್ ಮೂಲಕ ಕಾರವಾರ ಬಂದು ಹಾವೇರಿಗೆ ತೆರಳಬೇಕಿದ್ದ ಸಿಎಂ ಉತ್ತರಕನ್ನಡ ಪ್ರವಾಸ ರದ್ದಾಗಿ ಕೇವಲ ಹಾವೇರಿಗೆ ಮಾತ್ರ ತೆರಳಲಿದ್ದಾರೆ. ಆದರೆ, ಕಳೆದ 15 ದಿನಗಳ ಹಿಂದೆ ಸುರಿದ ಭಾರಿ […]

ಪಚ್ಚನಾಡಿಯಲ್ಲಿ ಕುಸಿದು ಬೀಳುತ್ತಿರುವ ತ್ಯಾಜ್ಯ ರಾಶಿ

Wednesday, August 14th, 2019
pacchanaadi

ಮಂಗಳೂರು : ಭಾರಿ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್’ನ ತ್ಯಾಜ್ಯ ರಾಶಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯ ರಾಶಿ ಕುಸಿದು ಬೀಳುತ್ತಿರುವುದು ಪ್ರತಿ ದಿನ ಮುಂದುವರಿಯುತ್ತಲೇ ಇದೆ. 15 ಎಕರೆ ವ್ಯಾಪ್ತಿಯಲ್ಲಿ 75 ಮೀಟರ್ ಎತ್ತರದಲ್ಲಿ ಹರಿದು ಬಂದ ತ್ಯಾಜ್ಯ ಮಂದಾರ ಪ್ರದೇಶದಲ್ಲಿದ್ದ ಅಡಕೆ, ತೆಂಗಿನ ತೋಟವನ್ನು ಸಂಪೂರ್ಣ ಆಪೋಶನ ಪಡೆದಿದೆ. ದಿನೇ ದಿನೇ ತ್ಯಾಜ್ಯ ಮುಂದಕ್ಕೆ ಹರಿಯುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಭಾರಿ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್’ನಲ್ಲಿ […]