ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬದ ವಿರುದ್ಧ ಸಿಬಿಐ ಎಫ್ಐಆರ್

Monday, October 5th, 2020
DK-Shivakumar

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬದ ವಿರುದ್ಧ 74.93 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಸಿಬಿಐ ಎಫ್ಐಆರ್ ದಾಖಲಿಸಿದೆ. ಸೋಮವಾರ ಬೆಳ್ಳಂಬೆಳಗ್ಗೆಯೇ 14 ಸ್ಥಳಗಳಲ್ಲಿ ಹುಡಕಾಟ ನಡೆಸಿದಾಗ 57 ಲಕ್ಷ ರೂ ನಗದು ಹಾಗೂ ಆಸ್ತಿ ದಾಖಲೆಗಳು, ಬ್ಯಾಂಕ್ ಗೆ ಸಂಬಂಧಿಸಿದ ಮಾಹಿತಿಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ. 74.93 ಕೋಟಿ ರೂ ಅಸಮರ್ಪಕ ಆಸ್ತಿಗಳನ್ನು ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಹೊಂದಿದ್ದಾರೆ ಎಂಬ […]

ಬಿ.ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್

Friday, July 31st, 2020
dk shivakumar

ಬಂಟ್ವಾಳ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಶುಕ್ರವಾರ ಸಂಜೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರನ್ನು ಬಸ್ತಿಪಡ್ಪುವಿನ ಮನೆಯಲ್ಲಿ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಕೆಪಿಸಿಸಿ ಅಧ್ಯಕ್ಷರಾದ ಬಳಿಕದ ದಕ್ಷಿಣಕನ್ನಡದ ಮೊದಲ ಭೇಟಿಯ ಸಂದರ್ಭದಲ್ಲಿ ಪೂಜಾರಿಯವರನ್ನು ಭೇಟಿ‌ಮಾಡಿರುವ ಅವರು, ರಾಜ್ಯದ ರಾಜಕೀಯ ವಿಚಾರಗಳ ಕುರಿತಾಗಿಯೂ ಪೂಜಾರಿಯವರ ಜೊತೆ ಚರ್ಚಿಸಿದರು ಎನ್ನಲಾಗಿದೆ. ಕೆಪಿಸಿಸಿ ಕಾರ್ಯದರ್ಶಿ ಸಲೀಂ ಆಹಮ್ಮದ್ ಮಾಜಿ ಸಂಸದ ವಿನಯಕುಮಾರ್ ಸೊರಕೆ, ಶಾಸಕ ಯು ಟಿ ಖಾದರ್  , ಜನಾರ್ಧನಪೂಜಾರಿಯವರ ಪುತ್ರ ದೀಪಕ್ ಪೂಜಾರಿ ಈ ಸಂದರ್ಭ […]

ನನಗೆ ಈ ಅಧಿಕಾರ ಸ್ಥಾನ ಮಾನ ಬೇಡ, ನಾನು ಸಾಮಾನ್ಯ ಕಾರ್ಯಕರ್ತನಾಗಿರ ಬಯಸುತ್ತೇನೆ : ಡಿಕೆ ಶಿವಕುಮಾರ್

Friday, July 3rd, 2020
DK shivakumar

ಬೆಂಗಳೂರು: ನನಗೆ ಈ ಅಧಿಕಾರ ಸ್ಥಾನ ಮಾನ ಬೇಡ, ನಾನು ಸಾಮಾನ್ಯ ಕಾರ್ಯಕರ್ತನಾಗಿರ ಬಯಸುತ್ತೇನೆ, ಆದರೆ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ವೇಣುಗೋಪಾಲ್ ಅವರ ಜತೆ ಸುದೀರ್ಘ ಚರ್ಚೆ ಮಾಡಿ, ನನಗೆ ಈ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಎಂದು ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ತಮಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರೆ ಮಾಡಿ ಶಕ್ತಿ ತುಂಬಿದ್ದಾರೆ. […]

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ನೇಮಕ

Wednesday, March 11th, 2020
dkshi

ಬೆಂಗಳೂರು : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜ್ಯದಲ್ಲಿ ಪ್ರಬಲ ಸಮುದಾಯದಲ್ಲೊಂದಾದ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಲಿಂಗಾಯತ ಸಮುದಾಯದ ಹಾಗೂ ಶಾಸಕಾಂಗ ನಾಯಕ ಸಿದ್ದರಾಮಯ್ಯ ಬಣದ ಎಂ.ಬಿ.ಪಾಟೀಲ್ ಆಸೆಗೆ ತಣ್ಣೀರು ಎರಚಿದಂತಾಗಿದೆ. ಈಶ್ವರ್ ಖಂಡ್ರೆ ಜೊತೆಗೆ ಸತೀಶ್ ಜಾರಕಿಹೊಳಿ ಹಾಗೂ ಸಲೀಮ್ ಅಹಮದ್ ಅವರೂ ಸಹ ಕೆಪಿಸಿಸಿಗೆ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ (ಲಿಂಗಾಯತ), ಸತೀಶ್ ಜಾರಕಿಹೊಳಿ (ವಾಲ್ಮೀಕಿ ಸಮುದಾಯ), ಸಲೀಂ ಅಹಮದ್ (ಅಲ್ಪಸಂಖ್ಯಾತ) […]

ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ವಿಳಂಬ ಸರಿಯಲ್ಲ, ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕು : ದಿನೇಶ್ ಗುಂಡೂರಾವ್

Thursday, January 16th, 2020
dinesh-gundu-rao

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನು ವಿಳಂಬ ಸರಿಯಲ್ಲ, ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನೂ ವಿಳಂಬ ಮಾಡಕೂಡದು. ವಿಳಂಬವಾದರೆ ಗೊಂದಲ ಹೆಚ್ಚಾಗುತ್ತದೆ. ಆದಷ್ಟು ಬೇಗ ಈ ಬಗ್ಗೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದು, ಬೇಗ ನೇಮಕ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು. ಕೆಲಸ ಇಲ್ಲದ […]

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಆಯ್ಕೆಯಾದ ದಿನವೇ ಕಾಂಗ್ರೆಸ್ ಪಕ್ಷ ಸತ್ತು ಹೋಯಿತು : ಸುಧಾಕರ್

Saturday, October 19th, 2019
sudaakar

ಚಿಕ್ಕಬಳ್ಳಾಪುರ : ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಪಕ್ಷ ಸತ್ತು ಹೋಯಿತು ಎಂದು ಅನರ್ಹ ಶಾಸಕ ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕು ಮಂಡಿಕಲ್ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅನರ್ಹ ಶಾಸಕ ಸುಧಾಕರ್, ದಿನೇಶ್ ಗುಂಡೂರಾವ್ ಮೊದಲು ಕೆಪಿಸಿಸಿ ಪಕ್ಷದ ಅಧ್ಯಕ್ಷರ ಕೆಲಸ ಮಾಡೋದನ್ನು ಕಲಿತುಕೊಳ್ಳಲಿ. ಲೋಕಸಭಾ ಚುನಾವಣೆಯಲ್ಲಿ 28 ರಿಂದ 1 ಸ್ಥಾನ ಬಂದಾಗ ದಿನೇಶ್ ಗೂಂಡಾರಾವ್ ರಾಜೀನಾಮೆ ಕೊಡಬೇಕಿತ್ತು ಎಂದು ಕಿಡಿಕಾರಿದರು. ಸಿಎಂ ಯಡಿಯೂರಪ್ಪ ಬಗ್ಗೆ ಮಾತನಾಡಲು ಅವರಿಗೇನು ನೈತಿಕತೆ ಇದೆ. ಯಾವ […]

ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂ ರಾವ್ ಆಯ್ಕೆ..!

Wednesday, July 4th, 2018
dinesh-gundu-rao

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂ ರಾವ್ ಮತ್ತು ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ ನೇಮಕಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಪಿಸಿಸಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಮಾಡಿದ್ದಾರೆ. ಎಐಸಿಸಿ ಸಂಘಟನಾ ವಿಭಾಗದ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಬುಧವಾರ ಸಂಜೆಯೊಳಗಾಗಿ ಇವರ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಅಂಬಿ ವರ್ತನೆಗೆ ಬೇಸರ… ರವಿಕುಮಾರ್‌‌‌ಗೆ ಬಿ ಫಾರಂ ಕೊಟ್ಟ ಕೈ ಹೈಕಮಾಂಡ್‌…!

Tuesday, April 24th, 2018
ambarish

ಮಂಡ್ಯ: ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದ ನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರ ವರ್ತನೆಗೆ ಬೇಸತ್ತು ಕಾಂಗ್ರೆಸ್‌‌ ಹೈಕಮಾಂಡ್‌ ಇದೀಗ ರವಿ ಕುಮಾರ್‌‌‌ ಗಣಿಗ ಅವರಿಗೆ ಬಿ ಫಾರಂ ಕೊಟ್ಟಿದೆ ಎನ್ನಲಾಗುತ್ತಿದೆ. ನಾನು ಯಾವುದೇ ಕಾರಣಕ್ಕೂ ಸ್ಪರ್ಧಿಸಲ್ಲ. ನಾನು ಸ್ಪರ್ಧಿಸಿದರೂ, ಸೋಲುತ್ತೇನೆ ಎನ್ನುವ ಮಾತನ್ನು ಪಕ್ಷದವರೇ ಆಡಿಕೊಂಡು ತಿರುಗುತ್ತಿದ್ದಾರೆ. ಹೀಗಿರುವಾಗ ನಾನೇಕೆ ಸ್ಪರ್ಧೆ ಮಾಡಲಿ ಎಂದು ಅಂಬಿ ಪ್ರಶ್ನಿಸಿದ್ದರು. ಅವರ ಹೇಳಿಕೆಗೆ ಬೇಸತ್ತು ಕಾಂಗ್ರೆಸ್‌‌ ಹೈಕಮಾಂಡ್‌ ಯೂಟರ್ನ್ […]

ರಾಜಕಾರಣಿಯೊಬ್ಬರ ಪುತ್ರ ಹೆಣ್ಣಾಗಿ ಲಿಂಗ ಪರಿವರ್ತನೆ ಆದ ಕಥೆ

Monday, March 12th, 2018

Mega Media News Print-Digital-Television ವರದಿಯನ್ನು ವಿನಂತಿಯ ಮೇರೆಗೆ  ತಾತ್ಕಾಲಿಕವಾಗಿ ತೆಗೆಯಲಾಗಿದೆ.  

ಡಾ.ಜಿ.ಪರಮೇಶ್ವರ್ ಮರು ಆಯ್ಕೆ- ರಮಾನಾಥ ರೈ ಭೇಟಿ

Thursday, June 8th, 2017
Parameshwara

ಮಂಗಳೂರು :  ಕೆಪಿಸಿಸಿ ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿರುವ ಗೃಹಸಚಿವ ಡಾ,ಜಿ. ಪರಮೇಶ್ವರ್ ಅವರನ್ನು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಗುರುವಾರ ಬೆಂಗಳೂರಿನಲ್ಲಿ ಭೇಟಿ ಮಾಡಿದರು. ರಾಜ್ಯ ಸರಕಾರದ ವಿವಿಧ ಯೋಜನೆಗಳು ದ.ಕ.ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರುವ ಬಗ್ಗೆ ಡಾ.ಜಿ. ಪರಮೇಶ್ವರ್ ಅವರು ಅರಣ್ಯ ಸಚಿವರನ್ನು ಶ್ಲಾಘಿಸಿದರು. ದ.ಕ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಇನ್ನಷ್ಟು ಬಲಪಡಿಸುವ ಬಗ್ಗೆ  ಉಭಯ ನಾಯಕರು ಚರ್ಚೆ ನಡೆಸಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸಾಮಾನ್ಯರಿಗೆ […]