ಕೊರೋನಾ ನೆಪದಲ್ಲಿ ಕೇಂದ್ರ ಮಾರುಕಟ್ಟೆ ಎತ್ತಂಗಡಿ; ಅತಂತ್ರಗೊಂಡ ವ್ಯಾಪಾರಸ್ಥರು – ತೀವ್ರ ಹೋರಾಟಕ್ಕೆ ನಿರ್ಧಾರ

Thursday, May 21st, 2020
Sunil-Bajal

ಮಂಗಳೂರು : ಕೊರೋನಾ ವೈರಸ್‌ ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರ ಘೋಷಣೆ ಮಾಡಿರುವ ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ತೀರಾ ಹಾಳಾಗಿದ್ದು, ಮತ್ತೊಂದು ಕಡೆ ಅದನ್ನೇ ನೆಪಮಾಡಿ ಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ನಗರದ ಹೃದಯಭಾಗದಲ್ಲಿದ್ದ ಕೇಂದ್ರ ಮಾರುಕಟ್ಟೆಯನ್ನು ಏಕಾಏಕಿಯಾಗಿ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ತಾತ್ಕಾಲಿಕ ನೆಲೆಯಲ್ಲಿಎತ್ತಂಗಡಿ ಮಾಡಿರುವುದು ಹಾಗೂ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ತೀರಾ ಅವೈಜ್ಞಾನಿಕ ಕ್ರಮ ಹಾಗೂ  ಖಂಡನೀಯವಾಗಿದೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ. ದ.ಕ. ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ […]

ಬೈಕಂಪಾಡಿಗೆ ಸ್ಥಳಾಂತರಗೊಂಡ ಕೇಂದ್ರ ಮಾರುಕಟ್ಟೆಯನ್ನು ನಗರದ ಹ್ರದಯ ಭಾಗದಲ್ಲೇ ಪುನರಾರಂಭಿಸಲು ಒತ್ತಾಯ

Monday, April 20th, 2020
cpim

ಮಂಗಳೂರು  :  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ದ.ಕ.ಜಿಲ್ಲೆಯ ಆರ್ಥಿಕತೆಯ ಜೀವನಾಡಿ ನಗರದ ಹ್ರದಯ ಭಾಗದಲ್ಲಿರುವ ಕೇಂದ್ರ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬೈಕಂಪಾಡಿಯ APMC ಯಾರ್ಡ್ ಗೆ ಸ್ಥಳಾಂತರಿಸಿದ್ದು,ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು,ಕೂಡಲೇ ಕೇಂದ್ರ ಮಾರುಕಟ್ಟೆಯನ್ನು ನಗರದ ಹ್ರದಯ ಭಾಗದಲ್ಲಿ ಹಿಂದೆ ಇದ್ದ ಕಟ್ಟಡದಲ್ಲೇ ಪುನರಾರಂಭಿಸಬೇಕೆಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ(ರಿ)ವು ದ.ಕ.ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಈ ಬಗ್ಗೆ ಸಂಘದ ಉನ್ನತ ಮಟ್ಟದ ನಿಯೋಗವೊಂದು ದ.ಕ.ಜಿಲ್ಲಾಧಿಕಾರಿಗಳನ್ನು ಹಾಗೂ ಮನಪಾ ಆಯುಕ್ತರನ್ನು ಭೇಟಿಯಾಗಿ […]

ಕೊರೋನಾ : ದಕ್ಷಿಣ ಕನ್ನಡದಲ್ಲಿ ಆಹಾರ ಪೂರೈಕೆ ವಿಷಯಕ್ಕೆ ಬೇರೆ ಬೇರೆ ಆದೇಶಗಳಿಂದ ಜನ ಗೊಂದಲದಲ್ಲಿ

Wednesday, March 25th, 2020
DCo

ಮಂಗಳೂರು : ಜನರಿಗೆ ದಿನಸಿಗಳನ್ನು ಪಡೆಯುವ ಗೊಂದಲಗಳು ಒಂದೆಡೆಯಾದರೆ, ಜಿಲ್ಲಾಡಳಿತ ಮತ್ತು ಸಂಸದರು, ಶಾಸಕರು, ಪೊಲೀಸರು ನೀಡುವ ಬೇರೆ ಬೇರೆ ಹೇಳಿಕೆಗಳು ಜನಸಾಮನ್ಯರಿಗೆ ಕೊರೋನಾ ವೈರಸ್ ಗಿಂತ ದೊಡ್ಡ ತಲೆನೋವಾಗಿದೆ. ಬುಧವಾರ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಅಗತ್ಯ ವಸ್ತುಗಳ ಪೂರೈಕೆ ಸಂಬಂಧಿಸಿ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅಕ್ಕಿ, ತರಕಾರಿ, ಹಣ್ಣುಹಂಪಲು ಮತ್ತು ಆಹಾರ ಸಾಮಾಗ್ರಿಗಳ ಪೂರೈಕೆ ನಿರಂತರವಾಗಿರಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಬೆಳಿಗ್ಗೆ ಆರರಿಂದ ಮಧ್ಯಾಹ್ನ ಹನ್ನೆರಡರವರೆಗೆ ಅಂಗಡಿಗಳು ತೆರೆದಿರುತ್ತದೆ ಎಂದಿದ್ದಾರೆ. ಜನ ಭಯಪಡುವ […]

ಶಾಸಕ ವೇದವ್ಯಾಸ ಕಾಮತ್ ಕೇಂದ್ರ ಮಾರುಕಟ್ಟೆಗೆ ಭೇಟಿ: ಬೆಂಕಿಗೆ ತುತ್ತಾದ ಅಂಗಡಿಗಳ ಪರಿಶೀಲನೆ

Saturday, December 8th, 2018
central-market

ಮಂಗಳೂರು: ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಶುಕ್ರವಾರ ಕೇಂದ್ರ ಮಾರುಕಟ್ಟೆಗೆ ಭೇಟಿ ನೀಡಿ ಬೆಂಕಿ ಅವಘಡ ಸಂಭವಿಸಿದ ಮಳಿಗೆಗಳನ್ನು ಪರಿಶೀಲಿಸಿದರು. ನಂತರ ಈ ಬಗ್ಗೆ ಮಾತನಾಡಿದ ಶಾಸಕ ಕಾಮತ್ ಅವರು ಸಬ್ ಮೀಟರ್ ಗಳಿಂದ ಹೊರಡುವ ವಿದ್ಯುತ್ ತಂತಿಗಳಿಂದ ಬೆಂಕಿ ಉಂಟಾಗಿ ಕೆಲವು ಮಳಿಗೆಗಳ ಇಲೆಕ್ಟ್ರಿಕಲ್ ವೈಯರ್ಸ್ ಮತ್ತು ಸಲಕರಣೆಗಳು ಹಾಳಾಗಿ ನಷ್ಟ ಸಂಭವಿಸಿದೆ. ಹಾಗೆ ಅಂಗಡಿಗಳ ಚಾವಣಿಗಳಿಗೆ ಬೆಂಕಿ ತಗುಲಿ ಸೊತ್ತು ನಾಶವಾಗಿವೆ. ತಾನು ಈ ಅಪಘಾತ ಸಂಭವಿಸಿದ ಸಂದರ್ಭದಲ್ಲಿ […]